Click here to Download MyLang App

ನಿಗೂಢ ರಾತ್ರಿ - ಬರೆದವರು : ರಕ್ಷಿತಾ ಹೊಳ್ಳ | ಹಾರರ್

ಸಾಹಿತ್ಯಾ ಆಧುನಿಕ ಕಾಲದ ಹುಡುಗಿ .
ಇವರದ್ದು ಅತ್ಯಂತ ಸಂಪ್ರದಾಯಸ್ಥ ಕುಟುಂಬ ‌.
ಆದರೆ ಈಕೆಗೆ ಯಾವುದೇ ಮೂಢ ಆಚರಣೆ ಗಳಲ್ಲಾಗಲಿ, ಮೂಢ ಸಂಪ್ರದಾಯ ಗಳಲ್ಲಾಗಲಿ ನಂಬಿಕೆ ಇರಲಿಲ್ಲ .
ಇನ್ನು ಈ ದೆವ್ವ ,ಪಿಶಾಚಿ ಎಂದರೆ ಅದೊಂದು ಭ್ರಮೆ ಎಂಬುದಾಗಿ ಹೇಳುತ್ತಿದ್ದಳು .

ಇನ್ನು ಕಾಲೇಜ್ ನಲ್ಲಿ ಈಕೆ ಟಾಮ್ ಬಾಯ್ .
ಇವಳು ನೋಡಲು ಅತ್ಯಂತ ಸೌಂದರ್ಯವತಿ .
ಯಾವುದೇ ವಿಷಯವನ್ನದರು ಕಡ್ಡಿ ತುಂಡರಿಸಿದಂತೆ
ನೇರ ವಾಗಿ ಹೇಳುವ ಗುಣದವಳು .

ಈಕೆಗೆ ಬೈಕ್ ರೈಡ್ ಅಂದ್ರೆ ಎಲ್ಲಿಲ್ಲದ ಹುಚ್ಚು .
ಸಂಡೇ ಬಂದ್ರೆ ಸಾಕು ಸೋಲೋ ರೈಡ್ ಹೊರಟು ಬಿಡುತ್ತಿದ್ದಳು.

ಹೀಗೆ ಒಂದು ದಿನ ಚಿಕ್ಕಮಗಳೂರಿನಲ್ಲಿರುವ ಮುಳ್ಳಯ್ಯನಗಿರಿಗೆ ಸಾಹಿತ್ಯ ತನ್ನ ಗೆಳೆಯ ರೊಂದಿಗೆ ಹೊರಟಳು .

ಆಕೆ ಮತ್ತು ಆಕೆಯ ಗೆಳತಿ ಬೈಕ್ ನಲ್ಲೆ ಹೊಗುತ್ತಾರೆ . ಅಲ್ಲಿಗೆ ಹೋಗಿ ಸುತ್ತ ಮುತ್ತಲಿನ ಸ್ಥಳ ಗಳನ್ನು ನೋಡಿ ಬರುವಾಗ ತಡವಾಗುತ್ತದೆ .

ಅಲ್ಲಿಂದ ಬರುವಾಗ ಆಕೆಯ ಗಾಡಿ ಹಾಳಾಗುತ್ತದೆ . ಉಳಿದೆಲ್ಲಾ ಸ್ನೇಹಿತರು ಮುಂದಕ್ಕೆ ಹೋಗಿರುತ್ತಾರೆ .

ಆಕೆ ಮತ್ತು ಆಕೆಯ ಗೆಳತಿ ಉಷಾ ಮಾತ್ರ ಉಳಿದಿರುತ್ತಾರೆ .

ಅದು ನಿರ್ಜನ ಪ್ರದೇಶ . ಯಾವುದೇ ಗ್ಯರೆಜ್ ಆಗಲಿ ಅಂಗಡಿ ಆಗಲಿ ಅಲ್ಲಿ ಇರಲಿಲ್ಲ . ಗಾಡಿ ಏನ್ ಮಾಡಿದ್ರು ಸ್ಟಾರ್ಟ್ ಆಗ್ತಾ ಇರ್ಲಿಲ್ಲ .

ಉಷಾ ಗೆಳೆಯನಾದ ಸುಧಾಮನಿಗೆ ಕರೆ ಮಾಡುವಂತೆ ಸಾಹಿತ್ಯಾಳಲ್ಲಿ ಹೇಳುತ್ತಾಳೆ .
(ಸುಧಾಮ ಇವರೊಂದಿಗೆ ಬಂದಾತ . ಆತ ಇವರಿಗಿಂತ ಮುಂದಕ್ಕೆ ಹೋಗಿದ್ದನೆ) . ಆದರೆ ಅದು ಅರಣ್ಯ
ಪ್ರದೇಶ ವಾದ್ದರಿಂದ ಅಲ್ಲಿ ನೆಟ್ವರ್ಕ್ ಸಿಗುತ್ತಿರಲಿಲ್ಲ .

ಅದು ಅಮಾವಾಸ್ಯೆಯ ರಾತ್ರಿ . ಅಲ್ಲಿ ಯಾವುದೇ ಬೀದಿ ದೀಪವು ಇರಲಿಲ್ಲ . ಆ ನಿಶ್ಯಬ್ದವಾದ ರಾತ್ರಿ ದೆವ್ವ ಭೂತ ಯಾವುದಕ್ಕೂ ಹೆದರದ ಸಾಹಿತ್ಯಾಳ ಮನಸ್ಸಿ ನಲ್ಲಿ ಏನೋ ಒಂದು ರೀತಿಯ ಭಯ ಕಾಣಿಸಿತು .
ಆದರು ಅದನ್ನು ತೋರಿಸಿ ಕೊಳ್ಳದೆ ತನ್ನ ಗೆಳತಿಯಾದ ಉಷಾಳಿಗೆ ಧೈರ್ಯವನ್ನು ಹೇಳುತ್ತಾಳೆ .

ಮುಂದೆ ಯಾವುದಾದರು ಮನೆ ಇರಬಹುದೇನೋ ಅವರ ಬಳಿ ಸಹಾಯ ಕೇಳೋಣ ವೆಂದುಕೊಂಡು ಮೋಬೈಲ್ ಲೈಟ್ ಹಿಡಿದು ಮುಂದಕ್ಕೆ ಹೋಗುತ್ತಾರೆ .

ಮುಂದೆ ಹೋಗುತ್ತಿದ್ದಂತೆ ಒಬ್ಬ ವೃದ್ಧ ವ್ಯಕ್ತಿ ಬರುತ್ತಿರುವುದನ್ನು ಗಮನಿಸುತ್ತಾರೆ . ಆತ ನೋಡಲು ಅತ್ಯಂತ ಭಯಾನಕವಾಗಿರುತ್ತಾನೆ .
ನಡೆಯಲು ಬಲವಿಲ್ಲದಂತೆ ಕೈಯಲ್ಲಿ ಕೋಲನ್ನು ಹಿಡಿದು ಕೋಲಿನ ಬಲದಲ್ಲಿ ಮುಂದಕ್ಕೆ ಬರುತ್ತಿರುತ್ತಾನೆ

ಬಾಗಿದ ಬೆನ್ನು ,ಕುರುಚಲು ಗಡ್ಡ , ನೋಡಲು ಕಡುಗಪ್ಪು ಬಣ್ಣ, ಅಮಾವಾಸ್ಯೆಯ ರಾತ್ರಿ ಅಷ್ಟೆ ಭಯಾನಕವಾದ ಮುಖ .

ಉಷಾ : ಆತನನ್ನು ನೋಡಿದರೆ ಯಾಕೊ ತುಂಬಾ ಭಯವಾಗುತ್ತಿದೆ.

ಸಾಹಿತ್ಯಾ : ಡೊಂಟ್ವರಿ ಉಷಾ , ಏನು ಆಗುವುದಿಲ್ಲ .
ಆತನಲ್ಲಿ ಸಹಾಯ ಕೇಳಿದರೆ ಏನಾದರು ಸಹಾಯ ಮಾಡಬಹುದೇನೋ ಕೇಳಿ ನೋಡೊಣ.

ಉಷಾ : ಆತ ಮನುಷ್ಯನೆ ಹೌದ ? ಅವನನ್ನ ನೋಡಿದ್ರೆ ನಮ್ಮ ಅಜ್ಜಿ ಹೇಳಿದ ಕಥೆ ಯಲ್ಲಿ ಬರುವ ದೆವ್ವದಹಾಗೆ ಕಾಣುತ್ತಿದ್ದಾನೆ.

ಸಾಹಿತ್ಯಾ : ವಾಟ್ ದೆವ್ವಾನ , ಈ ದೆವ್ವ ಗಿವ್ವ ಅನ್ನೊದೆಲ್ಲ ಒಂದು ಭ್ರಮೆ . ನಂಗೆ ಇದ್ರಲ್ಲೆಲ್ಲ ನಂಬಿಕೆ ಇಲ್ಲ.
ಬಾ ಆತನಲ್ಲಿ ಸಾಹಾಯ ಕೇಳೋಣ ವೆಂದು ಕೊಂಡು ಆತನು ಬರುತ್ತಿದ್ದ ಕಡೆಗೆ ಹೊದರು.

ಸಾಹಿತ್ಯಾಳಿಗೆ ಆತನನ್ನು ಹೇಗೆ ಸಂಬೋಧಿಸ ಬೇಕೆಂದು ತಿಳಿಯಲಿಲ್ಲ .

ಸಾಹಿತ್ಯಾ : ಹೇ ಮಿಸ್ಟರ್ ಎಂದು ಕರೆದಳು.
ಆತ ಅಲ್ಲಿ ಬೇರೆ ಯಾರು ಇಲ್ಲದ ಕಾರಣ ತನ್ನನ್ನೆ ಕರೆದಿರಬಹುದೆಂದು ಆಕೆಯ ಕಡೆಗೆ ನೋಡುತ್ತಾನೆ.
ಆತನನ್ನು ಹತ್ತಿರದಿಂದ ನೋಡಿ ಭಯವಾಗುತ್ತದೆ ಆದರು ಆತನಲ್ಲಿ ಮಾತನ್ನು ಮುಂದುವರೆಸುತ್ತಾಳೆ.

ವೃದ್ಧ ವ್ಯಕ್ತಿ : ಕರ್ಕಶ ವಾದ ದ್ವನಿಯಲ್ಲಿ ಯಾರಮ್ಮ ನೀವು ಇಲ್ಲೇನು ಮಾಡುತ್ತಿದ್ದೀರಿ ಹಗಲಿನಲ್ಲೇ ಇಲ್ಲಿ ಜನರು ಓಡಾಡಲು ಹೆದರುತ್ತಾರೆ ಅಂತದ್ದರಲ್ಲಿ ಈ ಅಮಾವಾಸ್ಯೆಯ ರಾತ್ರಿಯಲ್ಲಿ ಏನು ಮಾಡುತ್ತಿದ್ದಿರ ಎಂದು ಕೇಳಿದನು .

ಉಷಾಳು ಭಯದಿಂದ ಏನು ಮಾತಾಡಲಿಲ್ಲ.

ಸಾಹಿತ್ಯ : ನಾವು ತೀರ್ಥಹಳ್ಳಿಗೆ ಹೋಗುವವರು,
ಗೆಳೆಯರೆಲ್ಲ ಒಟ್ಟಿಗೆ ಮುಳ್ಳಯ್ಯನಗಿರಿಗೆ ಬಂದಿದ್ದೆವು ನನ್ನ ಬೈಕ್ ಸ್ಟಾರ್ಟ್ಆಕ್ತಾ ಇಲ್ಲ ವೆಂದು ಪರಿಸ್ಥಿತಿಯನ್ನು ವಿವರಿಸಿದಳು.

ವೃದ್ಧ ವ್ಯಕ್ತಿ : ತೀರ್ಥಹಳ್ಳಿಗೆ ಹೋಗುವವರು ಈ ರಸ್ತೆಯಲ್ಲಿ ಯಾಕೆ ಬಂದಿದ್ದಿರಾ? ತೀರ್ಥಹಳ್ಳಿಗೆ ಹೋಗಲು ಇಲ್ಲಿ ಯಾವರಸ್ತೆಯು ಇಲ್ಲವೆಂದು ಹೇಳಿದ.

ಉಷಾ : ಹಾಗಾದರೆ ನಾವು ದಾರಿ ತಪ್ಪಿಸಿಕೊಂಡಿದ್ದೇವಾ.

ಸಾಹಿತ್ಯ : ಹೌದು ಅನಿಸುತ್ತದೆ ಉಷಾ ‌.

ವೃದ್ಧ ವ್ಯಕ್ತಿ : ಇಲ್ಲಿಂದ ಆದಷ್ಟು ಬೇಗ ಹೋಗಿ . ಇದು ದೆವ್ವ ಗಳು ಓಡಾಡುವ ಸ್ಥಳ .

ಸಾಹಿತ್ಯಾ : ಭಯದಿಂದ ಇಲ್ಲಿ ಉಳಿದು ಕೊಳ್ಳಲು ಯಾರದ್ದಾದರು ಮನೆ ಇದ್ಯ ಎಂದು ಕೇಳಿದಳು.

ವೃದ್ಧ ವ್ಯಕ್ತಿ : ಈ ಊರಿನಲ್ಲಿ ಯಾವ ಮನೆಯೂ ಇಲ್ಲ.
ಮನೆ ಹಾಗಿರಲಿ ಜನರೆ ಇಲ್ಲಿ ಓಡಾಡಲು ಹೆದರುತ್ತಾರೆ .
ನೀವು ಇಲ್ಲಿಂದ ಆದಷ್ಟು ಬೇಗನೆ ಹೋಗಿ ಎಂದು ಆತ ಹೊರಟು ಬಿಡುತ್ತಾನೆ .

ಆ ವ್ಯಕ್ತಿ ಯಾರು ಆತ ಇಲ್ಲಿಗೆ ಯಾಕೆ ಬಂದಿದ್ದ . ಆತನ ಊರು ಯಾವುದು ಈ ಯಾವ ಪ್ರಶ್ನೆಗೂ ಆತನಿಂದ ಉತ್ತರ ಸಿಗುವುದಿಲ್ಲ. ಈ ಎಲ್ಲಾ ವಿಷಯಗಳು ನಿಗೂಢ ವಾಗಿಯೇ ಉಳಿಯುತ್ತದೆ .

ಉಷಾ : ಈಗಾ ಎಲ್ಲಿಗೆ ಹೋಗುವುದು ,ಆ ಮುದುಕ ಬೇರೆ ದೆವ್ವಗಳು ಓಡಾಡುವ ಸ್ಥಳ ಎಂದೆಲ್ಲಾ ಹೇಳುತ್ತಿದ್ದ .
ಇಲ್ಲಿ ಯಾವ ಮನೆಯೂ ಇಲ್ಲವಂತೆ .
ಇಲ್ಲಿಂದ ಹೇಗೆ ಹೋಗುವುದು .ಎಂದು ಹೇಳುತ್ತಿದ್ದಂತೆ .
ನಿಶ್ಯಬ್ದವಾದ ರಾತ್ರಿ ಯಲ್ಲಿ ಗೆಜ್ಜೆಯ ನಾದ ಕೇಳುತ್ತದೆ .
ಎಲ್ಲಿಂದ ಗೆಜ್ಜೆಯ ಸದ್ದು ಕೇಳುತ್ತಿದೆ ಎಂದು ನೋಡುತ್ತಿದ್ದಂತೆ. ಬಿಳಿ ಸೀರೆಯನ್ನು ಉಟ್ಟು ನೀಳವಾದ ಕೂದಲು ವಿಕಾರವಾದಮುಖವುಳ್ಳ ಮಹಿಳೆ ಇವರು ಇರುವ ಕಡೆಯೇ ಬರುತ್ತಿರುವುದನ್ನು ಉಷಾ ಮತ್ತು ಸಾಹಿತ್ಯಾ ಗಮನಿಸುತ್ತಾರೆ.
ಆಕೆಯನ್ನು ನೋಡಿ ಭಯದಿಂದ ಓಡುತ್ತಾರೆ .ಅವರನ್ನೆ ಹಿಂಬಾಲಿಸಿ ಕೊಂಡು ಬರುತ್ತದೆ .
ಹೀಗೆ ಓಡಿಹೋಗಿ ಸ್ವಲ್ಪ ದೂರದಲ್ಲೇ ದಣಿದು ನಿಲ್ಲುತ್ತಾರೆ . ಹಿಂದಿರುಗಿ ನೋಡಿದಾಗ ಯಾರು ಇರುವುದಿಲ್ಲ.ಇಬ್ಬರು ನಿಟ್ಟುಸಿರು ಬಿಟ್ಟರು.

ಅಲ್ಲೆ ಮುಂದೆ ಉಷಾಳಿಗೆ ಒಂದು ಮನೆ ಕಾಣಿಸುತ್ತದೆ.

ಉಷಾ : ಸಾಹಿತ್ಯಾ ನೋಡಲ್ಲಿ ಯಾವುದೋಮನೆ ಕಾಣಿಸುತ್ತಿದೆ .

ಸಾಹಿತ್ಯಾ : ಬಾ ಅಲ್ಲಿಗೆ ಹೋಗಿ ಇದೊಂದು ರಾತ್ರಿ ನಿಮ್ಮ ಮನೆಯಲ್ಲಿರಲು ಅವಕಾಶ ಕೊಡಿ ಎಂದು ಕೇಳೋಣ. ವೆಂದು ಮನೆಯತ್ತ ತೆರಳಿದರು.

ಮನೆಯ ಮುಂದೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಾರೆ.
ಮನೆಯ ಒಳಗಿಂದ ಮುದ್ದಾದ ಮಗು ಮತ್ತು ಆಕೆಯ ತಾಯಿ ಬಂದು ಬಾಗಿಲನ್ನು ತೆಗೆಯುತ್ತಾರೆ ‌.
ಮಗುವನ್ನು ನೊಡುತ್ತಿದ್ದಂತೆ ಸಾಹಿತ್ಯಾಳಿಗೆ ಆ ಮಗುವನ್ನು ಈ ಮೊದಲು ಎಲ್ಲೊ ನೊಡಿದಂತೆ ಅನಿಸುತ್ತದೆ ಆದರೆ ಎಲ್ಲಿ ಎಂದು ನೆನಪಾಗುವುದಿಲ್ಲ .

ಮಗುವಿನ ತಾಯಿ : ನಿಮಗಾಗೆ ಕಾಯುತ್ತಿದ್ದೆ . ಎಂದು ಇವರ ಆಗಮನಕ್ಕೆ ಕಾಯುತ್ತಿದ್ದಂತೆ ಹೇಳಿದಳು. ಅವರನ್ನು ಮನೆಯ ಒಳಕ್ಕೆ ಆಹ್ವಾನಿಸುತ್ತಾಳೆ.

ಆಕೆಯ ಮಾತು ಉಷಾ ಮತ್ತು ಸಾಹಿತ್ಯಾರಿಗೆ ಅತ್ಯಂತ ಆಶ್ಚರ್ಯ ಮತ್ತು ಭಯ ಎರಡು ಆಗುತ್ತದೆ .

ಆ ವೃದ್ದ ವ್ಯಕ್ತಿ ಈ ಊರಿನಲ್ಲಿ ಯಾವ ಮನೆಯೂ ಇಲ್ಲ ಎಂದು ಹೇಳಿದ್ದ ‌ . ಹಾಗಾದರೆ ಇದು ಯಾರ ಮನೆ,
ಅಲ್ಲದೆ ಆ ಮನೆಯವರಿಗೆ ಇವರು ಬರುವುದು ಮೊದಲೇ ಹೇಗೆತಿಳಿದಿತ್ತು , ಸಾಹಿತ್ಯಾಳು ಆ ಮಗುವನ್ನು ಮೋದಲೆ ನೋಡಿದ್ದಳಾ , ಆ ಮಗುವಿಗು ಸಾಹಿತ್ಯಾಳಿಗು ಏನು ಸಂಬಂಧ .
ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಮುಂದಿನ ಭಾಗದಲ್ಲಿ.
ಮುಂದೆ ಹೋಗುತ್ತಿದ್ದಂತೆ ಒಬ್ಬ ವೃದ್ಧ ವ್ಯಕ್ತಿ ಬರುತ್ತಿರುವುದನ್ನು ಗಮನಿಸುತ್ತಾರೆ . ಆತ ನೋಡಲು ಅತ್ಯಂತ ಭಯಾನಕ ವಾಗಿರುತ್ತಾನೆ . ನಡೆಯಲು ಬಲವಿಲ್ಲದೆ ಕೋಲನ್ನು ಹಿಡಿದುಕೊಂಡು ಕೋಲಿನ ಸಹಾಯದಿಂದ ಮುಂದಕ್ಕೆ ಬರುತ್ತಿರುತ್ತಾನೆ .

ಮಹಿಳೆ : ಬಹಳ ದಣಿದಿದ್ದಿರಾ ಅನಿಸುತ್ತದೆ ಎಂದು ಸಾಹಿತ್ಯಾ ಮತ್ತು ಉಷಾರಿಗೆ ಹಾಲು ಮತ್ತು
ಹಣ್ಣನ್ನು ತಿನ್ನಲು ನೀಡಿದಳು. ಮತ್ತು ಮಲಗಲು ಸ್ಥಳವನ್ನು ನೀಡಿದಳು.

ಸಾಹಿತ್ಯಾ ಹೋಗಿ ಆ ಮಗುವನ್ನು ಮಾತನಾಡಿಸುತ್ತಾಳೆ.

ಸಾಹಿತ್ಯ : ಪುಟ್ಟ ನಿನ್ನ ಹೆಸರು ಏನು ಎಂದು ಕೇಳುತ್ತಾಳೆ
ಮಗು : ನನ್ನ ಹೆಸರು ಉನ್ನತಿ

ಸಾಹಿತ್ಯಾ : ನನಗೆ ನಿನ್ನನ್ನ ನೋಡಿದ್ರೆ ಎಲ್ಲೋ ನೋಡಿದ ಹಾಗೆ ಅನಿಸುತ್ತಿದೆ. ನೀನು ಈ ಮೊದಲು ನನ್ನನ್ನು
ಎಲ್ಲಾದ್ರು ನೋಡಿದ್ದಿಯಾ?

ಉನ್ನತಿ : ನಾನು ನಿಮ್ಮನ್ನು ನೋಡಿಲ್ಲ . ಎಂದು ಮಗುವು ಹೇಳಿತು.

ಮಗುವಿನ ಮುದ್ದಾದ ಮಾತು ಸಾಹಿತ್ಯಾ ಮತ್ತು ಉಷಾರಿಗೆ
ಸಂತೋಷವನ್ನು ನೀಡುತ್ತದೆ.

ಆದರು ಸಾಹಿತ್ಯಾಳ ಮುಖದಲ್ಲಿ ಏನೋ ಒಂದು ರೀತಿಯ ಗೊಂದಲ ಕಾಣಿಸುತ್ತದೆ.

ಉಷಾ : ಏನು ಯೋಚನೆ ಮಾಡುತ್ತಿದ್ದೆಯಾ ಸಾಹಿತ್ಯಾ ! ಏನಾಯಿತು?

ಸಾಹಿತ್ಯಾ : ನಾನು ಎಲ್ಲೋ ಆ ಮಗುವನ್ನು ನೋಡಿದ್ದಿನಿ ಅನಿಸುತ್ತಿದೆ.

ಉಷಾ : ಅಯ್ಯೋ ನಿನಗೆಲ್ಲೋ ಭ್ರಮೆ ಇರಬೇಕು .
ನೀನು ಹೇಗೆ ಆ ಮಗುವನ್ನು ನೋಡಲು ಸಾಧ್ಯ.
ಮೊದಲೇ ಲೇಟ್ ಆಗಿದೆ ಮಲಗು ಈ ಊರು ಬೇರೆ ಸರಿಯಿಲ್ಲ ಬೆಳಿಗ್ಗೆ ಆದಷ್ಟು ಬೇಗ ಇಲ್ಲಿಂದ ಹೋಗಬೇಕು.

ಸಾಹಿತ್ಯಾ ಮತ್ತು ಉಷಾ ಇಬ್ಬರು ಮಲಗುತ್ತಾರೆ .
ಆದರೆ ಕಣ್ಮುಚ್ಚಿದರೆ ದಾರಿಯಲ್ಲಿ ಬರುವಾಗ ನೋಡಿದ ಆ ವಿಕಾರವಾದ ಆಕೃತಿಯೇ ನೆನಪಿಗೆ ಬರುತ್ತಿರುತ್ತದೆ.
ಸಾಹಿತ್ಯಾ ಒಮ್ಮೆ ಕಣ್ತೆರೆಯುತ್ತಿದ್ದಂತೆ ಅದೇ ಆಕೃತಿ ಆಕೆಯ ಕಣ್ಮುಂದೆ ಬರುತ್ತದೆ.

ಸಾಹಿತ್ಯಾ ಜೋರಾಗಿ ದೆವ್ವ ದೆವ್ವ ಎಂದು ಕಿರುಚುತ್ತಾಳೆ.
ಉಷಾ ಎದ್ದು ನೋಡಿದಾಗ ಅಲ್ಲಿ ಯಾರು ಇರುವುದಿಲ್ಲ.

ಸಾಹಿತ್ಯಾ : ಇಲ್ಲಿ ದೆವ್ವ ಇದೆ ನಾನು ನೋಡಿದೆ
ಎಂದು ಹೇಳುತ್ತಾಳೆ.

ಉಷಾ : ಇಲ್ಲಿ ಏನು ಇಲ್ಲ ನೀನು ಅದರ ಬಗ್ಗೆನೆ ಯೋಚನೆ ಮಾಡುತ್ತಿದ್ದುದ್ದರಿಂದ ನಿನಗೆ ಹಾಗೆ ಅನಿಸಿದೆ ಅಷ್ಟೆ.

ಸಾಹಿತ್ಯಾ : ಇಲ್ಲಾ ಉಷಾ ನಾನು ನಿಜವಾಗಿಯೂ
ನೋಡಿದೆ. ನನಗ್ಯಾಕೋ ತುಂಬಾ ಭಯವಾಗುತ್ತಿದೆ.

ಉಷಾ : ಏನು ನಿನ್ಗೆ ಭಯಾನಾ ? ದೆವ್ವ ಪಿಶಾಚಿ ಯಾವುದನ್ನು ನಂಬದ ನೀನು ಇಂದು ಅದಕ್ಕೆ ಭಯ ಪಡುತ್ತಿದ್ದೀಯಾ ?

ಸಾಹಿತ್ಯಾ ಭಯ ಮತ್ತು ಅಸಹಾಯಕತೆ ಇಂದ ಏನೂ ಮಾತನಾಡಲಿಲ್ಲ.

ಅಷ್ಟರಲ್ಲಿ ಮಗು ಜೋರಾಗಿ ಅಳುವ ಸದ್ದು ಕೇಳಿತು.
ಯಾರೆಂದು ನೋಡಲು ಇಬ್ಬರು ಹೊರಗೆ ಹೋಗಿ ನೋಡುತ್ತಾರೆ .
ಅಲ್ಲಿ ಉನ್ನತಿ ಅಳುತ್ತಾ ಕುಳಿತಿರುವುದು ಕಾಣುತ್ತದೆ.

ಯಾಕೆ ಅಳುತ್ತಿದೆ ಎಂದು ಕೇಳೋಣ ವೆಂದು ಮಗುವಿನ ಬಳಿ ಹೋಗಿ ಮಗುವನ್ನು ಕರೆಯುತ್ತಾರೆ
ಮಗುವು(ಉನ್ನತಿ) ಇವರತ್ತ ತಿರುಗುತ್ತದೆ .ಆದರೆ ಮುದ್ದಾದ ಮಗುವು ಭಯಾನಕ ರೂಪದಲ್ಲಿ ಕಾಣುತ್ತದೆ.
ಇಬ್ಬರು ಒಂದೇ ಉಸಿರಿನಲ್ಲಿ ದೆವ್ವ ದೆವ್ವ ಎಂದು ಕಿರುಚುತ್ತಾ.

ಆ ಮಗುವಿನ ತಾಯಿ ಬಳಿ ಹೋಗುತ್ತಾರೆ . ಆದರೆ ಮನುಷ್ಯ ರೂಪದಲ್ಲಿದ್ದ ಆಕೆ ಕೂಡ ರಾಕ್ಷಸ ರೂಪದಲ್ಲಿ ಬದಲಾಗಿರುತ್ತಾಳೆ.
ಸಾಹಿತ್ಯಾಮತ್ತು ಉಷಾರಿಗೆ ಎಲ್ಲಿಹೊಗಬೇಕೆಂದು ತಿಳಿಯಲಿಲ್ಲ .
ಸಾಹಿತ್ಯಾ ಆಕೆಯ ಬಳಿ ಹೋಗಿ ಯಾರು ನೀನು ನಮ್ಮನ್ನೆಕೆ
ಹಿಂಬಾಲಿಸುತ್ತಿದ್ದಿಯಾ ಎಂದು ಕೇಳುತ್ತಾಳೆ.

ರಾಕ್ಷಸ ಮಹಿಳೆ : ಸೇಡನ್ನು ತೀರಿಸಿಕೊಳ್ಳಲು

ಸಾಹಿತ್ಯಾ : ಸೇಡು ಯಾರಮೇಲೆ ನಾವೇನು ಮಾಡಿದ್ದೇವೆ ನಿನಗೆ.

ರಾಕ್ಷಸ ರೂಪದಲ್ಲಿರುವ ಮಹಿಳೆ ಜೋರಾಗಿ ಅಳುತ್ತಾ.
ನನ್ನ ಮಗಳನ್ನ ಸಾಯಿಸಿದ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಾಹಿತ್ಯಾಳಲ್ಲಿ ಹೇಳುತ್ತಾಳೆ.

ಸಾಹಿತ್ಯಾಳಿಗೆ ಒಮ್ಮೆ ಶಾಕ್ ಆಗುತ್ತದೆ.

ಸಾಹಿತ್ಯಾ : ನಾನು ಯಾರನ್ನು ಸಾಯಿಸೇ ಇಲ್ಲವೆಂದು
ಹೇಳುತ್ತಾಳೆ.

ಅಂದು ಜನವರಿ ಫಸ್ಟ್
ಎಲ್ಲಾರು ನ್ಯೂಯರ್ ಸೆಲಬ್ರೆಷನ್ ಅಲ್ಲಿ ಇದ್ರು .
ಸಾಹಿತ್ಯಾಳು ನ್ಯೂಯರ್ ಪಾರ್ಟಿ ಮುಗಿಸಿ ಬೈಕ್ ಹತ್ತಿ ಬರುವಾಗ ಕುಡಿದ ಅಮಲಿನಲ್ಲಿ ಇದ್ದ
ಸಾಹಿತ್ಯಾ ಉನ್ನತಿಯ ಮೇಲೆ ಗಾಡಿ ಹತ್ತಿಸಿಯೇ ಬಿಟ್ಟಿರುತ್ತಾಳೆ.
ಆದರೆ ಮಗುವಿಗೆ ಏನಾಗಿದೆ ಎಂದೂ ಕೂಡ ನೋಡದೆ ಹಾಗೆ ಹೋಗಿರುತ್ತಾಳೆ.

ಅಂದು ಆಮಗು(ಉನ್ನತಿ) ಸ್ಥಳದಲ್ಲೇ ಮೃತಪಟ್ಟಿತ್ತು.
ಅದನ್ನು ನೋಡಿದ ಆಕೆಯ ತಾಯಿಯೂ ಮಗಳ ಸಾವಿನ ನೋವನ್ನು ತಾಳಲಾರದೆ ಆಲ್ಲೇ ಸಾವನ್ನಪ್ಪಿರುತ್ತಾಳೆ.
ಇನ್ನು ಅಲ್ಲಿದ್ದ ಜನಗಳು ಸತ್ತ ಹೆಣದ ಜೋತೆಯೆ ಸೆಲ್ಫಿ ಕ್ಲಿಕ್ಕಿಸಿ ಕೊಂಡಿರುತ್ತಾರೆ ಹೊರತು. ಅವರ ಸಾವಿಗೆ ಕಾರಣ ಯಾರು ಯೆಂದು ಯಾರು ವಿಚಾರಿಸುವುದೇ ಇಲ್ಲ.
ಸಾಹಿತ್ಯಾಳಿಗೆ ಯಾವ ಶಿಕ್ಷೆಯು ಆಗಿರುವುದಿಲ್ಲ.
ಶಿಕ್ಷೆ ಹಾಗಿರಲಿ ತಾನು ಎಂತಹ ತಪ್ಪು ಮಾಡಿದ್ದೆನೆಂದೆ
ಸಾಹಿತ್ಯಾಳಿಗೆ ಅರಿವಿರುವುದಿಲ್ಲ.

ಮಗುವಿನ ತಾಯಿ :ನಡೆದ ಈ ಎಲ್ಲಾ ಘಟನೆಗಳನ್ನು
ಸಾಹಿತ್ಯಾಳಿಗೆ ವಿವರಿಸುತ್ತಾಳೆ.

ಇದನ್ನೆಲ್ಲ ಕೇಳಿದ ಸಾಹಿತ್ಯಾಳಿಗೆ ತಾನು ಮಾಡಿದ ತಪ್ಪಿನ ಅರಿವಾಗುತ್ತದೆ.

ಸಾಹಿತ್ಯಾ : ನನ್ನಿಂದ ದೊಡ್ಡ ತಪ್ಪಾಗಿದೆ . ಇದು ಕ್ಷಮಿಸಲು ಸಾಧ್ಯವಿಲ್ಲದ ತಪ್ಪು ಎಂದು ತಿಳಿದಿದೆ. ಆದರೆ ನಾನು ಬೇಕೆಂದು ಮಾಡಿದ್ದಲ್ಲ ಎಂದು ಹೇಳುವಷ್ಟರಲ್ಲಿ ಉಷಾ ಸಾಹಿತ್ಯಾಳ ಹೊಟ್ಟೆಗೆ ಚೂರಿ ಯನ್ನು ಚುಚ್ಚುತ್ತಾಳೆ.

ಅಷ್ಟರಲ್ಲಿ ಸುಧಾಮ ಅಲ್ಲಿಗೆ ಬರುತ್ತಾನೆ.ಮತ್ತು
ಸತ್ತುಬಿದ್ದಿದ್ದ ಸಾಹಿತ್ಯಾಳನ್ನ ನೋಡಿ ಸುಧಾಮ ಉಷಾಳಲ್ಲಿ ನಮ್ಮ ಪ್ಲಾನ್ ವರ್ಕ್ ಆಯ್ತು ಎಂದು ಸ್ಮೈಲ್ ಮಾಡುತ್ತಾನೆ.

ಅಂದು ಸಾಹಿತ್ಯಾ ಆಕ್ಸಿಡೆಂಟ್ ಮಾಡಿದ್ದು ಉಷಾಳ ಅಕ್ಕನ ಮಗುವಿಗೆ.ಮತ್ತು ಮಗುವಿನ ಸಾವನ್ನು ನೋಡಿ ಉಷಾಳ
ಅಕ್ಕನು ಸಾವನ್ನಪ್ಪಿರುತ್ತಾಳೆ. ಇದಕ್ಕೆ ಸೇಡನ್ನು ತೀರಿಸಿಕೊಳ್ಳಲು ಉಷಾ ಕಾಯುತ್ತಿರುತ್ತಾಳೆ. ಆಗ ಆಕೆಯ ಸಹಾಯಕ್ಕೆ ಬಂದವನು ಉಷಾಳ ಗೆಳೆಯ ಸುಧಾಮ.
ಉಷಾ ಮತ್ತು ಸುಧಾಮ ಸೇರಿ ಟ್ರಿಪ್ ಪ್ಲಾನ್ ಮಾಡ್ತಾರೆ. ಮತ್ತು ಅಲ್ಲಿ ದೆವ್ವ ಇದೆ ಎಂದು ಆಕೆಯನ್ನು ನಂಬಿಸುತ್ತಾರೆ.
ಮತ್ತು ಆಕೆಯನ್ನು ಸಾಯಿಸಲು ಪ್ರಿಪ್ಲಾನ್ ಮಡುತ್ತಾರೆ.

ಮತ್ತು ಅಲ್ಲಿದ್ದ ತಾಯಿ ಮತ್ತು ಮಗಳು ದೆವ್ವಗಳಲ್ಲ.
ಬದಲಿಗೆ ಅವರು ಮನುಷ್ಯರೆ. ಇನ್ನು ಅವರನ್ನು ಸುಧಾಮನೆ ದೆವ್ವಗಳಂತೆ ನಟಿಸಲು ಕಳಿಸಿರುತ್ತಾನೆ.ಆ ವೃದ್ಧ ವ್ಯಕ್ತಿ ಯನ್ನು ಕೂಡ ಅವನೆ ಕಳಿಸಿದ್ದು.
ಇನ್ನು ಸಾಹಿತ್ಯಾಳ ಬೈಕ್ ಅನ್ನು ಉಷಾಳೆ ಆಕೆಗೆ ತಿಳಿಯದಂತೆ ಪಂಕ್ಚರ್ ಮಾಡಿರುತ್ತಾಳೆ .
ಆ ಮಗುವು ನೋಡಲು ಉಷಾಳ ಅಕ್ಕನ ಮಗುವಿನಂತೆ ಇದ್ದಿದ್ದರಿಂದ ಸಾಹಿತ್ಯಾಳಿಗೆ ಅಲ್ಲಿದ್ದ ಮಗುವನ್ನು ನೋಡಿದಾಗ ಮೊದಲು ಎಲ್ಲೋ ನೋಡಿದಂತೆ ಅನಿಸಿತು.

ಉಷಾಳು ತನ್ನ ಅಕ್ಕ ಮತ್ತವಳ ಮಗಳ ಆತ್ಮಕ್ಕೆ ಶಾಂತಿ ಸಿಕ್ಕಿತೆಂದು ಮತ್ತು ಸುಧಾಮನು ತಪ್ಪಿತಸ್ಥಳಿಗೆ
ಸರಿಯಾದ ಶಿಕ್ಷೆ ಆಯಿತು ಎಂಬ ತೃಪ್ತಿಯಲ್ಲಿ ಬರುತ್ತಾರೆ.