Click here to Download MyLang App

ಗಾಳಿ ಗುನುಗು - ಬರೆದವರು : ಗುರುರಾಘವೇಂದ್ರ ಎನ್ | ಹಾರರ್


ಸಮಯ ರಾತ್ರಿ 12:30 ವೇಳೆ,

ಸುಮಾರು 40ರ ಆಸುಪಾಸಿನ ವ್ಯಕ್ತಿ ಒಬ್ಬ ಗಡಗಡನೆ ನಡುಗುತ್ತ ಟೇಬಲ್ ಕೆಳಗೆ ಅವಿತು ಕೂತಿದ್ದ. ಸುತ್ತಲೂ ಕತ್ತಲು ತುಂಬಿದೆ, ಆ ಸ್ಥಳ ಮಾಮೂಲಿಗಿಂತ ತಂಪಾದಿಗಿದ್ದು ತಣ್ಣನೆಯ ಗಾಳಿ ಬಿಸುತ್ತ ಚಳಿಯಾಗುವಂತೆ ಮಾಡಿತ್ತು. ಅಂತಹ ಚಳಿಯಲ್ಲಿಯೂ ಭಯದಲ್ಲಿ ಬೆವರುತ್ತಿದ್ದ, ಕಣ್ಣುಗಳಿಂದ ನೀರು ಜಾರುತ್ತಿತ್ತು, ಬಾಯಿ ಒಣಗಿತ್ತು, ಎದೆಬಡಿತ ಎಚ್ಚಾಗಿ ಉಸಿರುಗಟ್ಟಿದಂತ ಅನುಭವ. ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡು, ತನ್ನ ಕತ್ತಲ್ಲಿದಂತ ಆಂಜನೇಯ ಸ್ವಾಮಿಯ ಡಾಲರನ್ನು ಎರೆಡು ಕೈಯಲ್ಲಿ ಹಿಡಿದುಕೊಂಡು "ಶ್ರೀ ಆಂಜನೇಯಂ... ಪ್ರಸನ್ನಾಂಜನೆಯಂ...." ಎಂದು ಎಡಬಿಡದೆ ಮಂತ್ರ ಪಠಿಸುತ್ತಿದ.
10ನಿಮಿಷಗಳ ಹಿಂದೆ,
ರೆಸ್ಟ್ ರೂಮ್ನಲ್ಲಿ ಬಾಗಿಲು ಹಾಕಿಕೊಂಡು ಹಾಡನ್ನು ಗುನುಗುನಿಸುತ್ತಾ ಸಿಗರೇಟಿನ ಹೊಗೆ ಬಿಡುತ್ತಾ ಕೂತಿದ್ದ. "ಲಾಲಾ... ಪರಪ್ಪ... ರಾರಾ... ಪರಪ್ಪ.... ಪಾಪಾ... ಪರಪ್ಪ..ಪಾ....." ಅನ್ನುತ್ತಾ ಹೊಗೆ ಬಿಟ್ಟ. ಮತ್ತೆ ವೀಷಲ್ ಮಾಡುತ್ತ ಅದೇ ರಾಗವನ್ನು ಗುನುಗುನಿಸಿದ.... ಅವನ ಜೊತೆಯೇ ಪಕ್ಕದ ಗೋಡೆಯಿಂದ ಅದೇ ರಾಗ ಗುನುಗುನಿಸಿದ ಸದ್ದು ಕೇಳಿಸಿತ್ತು.
ತಕ್ಷಣವೇ ವೀಷಲ್ ಮಾಡುವುದು ನೀಲಿಸಿಬಿಟ್ಟ.... ಅತ್ತ ಕಡೆ ಬರುತ್ತಿದ ಸದ್ದು ಕೂಡ ನಿಂತು ಹೋಯಿತು. ಆತನಿಗೆ ಬಲವಾಗಿ ಗೊತ್ತು ಅಲ್ಲಿ ಅವನು ಬಿಟ್ಟರೆ ಬೇರೆ ಯಾರು ಇಲ್ಲವೆಂದು.... ಆದರೆ ಈ ಸದ್ದು!
ಮತ್ತೆ ಅರ್ಧ ರಾಗ "ಲಾಲಾ... ಪರಪ್ಪ... ರಾರಾ..." ಎನ್ನುವಂತೆ ವೀಷಲ್ ಮಾಡಿದ. ಅತ್ತಕಡೆಯಿಂದ ಉಳಿದ ರಾಗ "ರಾರಾ... ಪರಪ್ಪ.... ಪಾಪಾ... ಪರಪ್ಪ..ಪಾ....." ವೀಷಲ್ ಬಂತು.
'ಯಾರು?' ಎಂದು ಭಯದಲ್ಲಿ ಕೂಗಿಕೊಂಡ.
ಆದರೆ ಯಾವ ಪ್ರತಿಕ್ರಿಯವು ಬರಲಿಲ್ಲ.... ಆ ವೀಷಲ್ ಸದ್ದಿಗಿಂತ ಈ ಪ್ರಶಾಂತತೆ ಆತನಿಗೆ ಹೆಚ್ಚು ಭಯ ಹುಟ್ಟಿಸಿತು.
ಮತ್ತೆ ಅದೇ ರಾಗವೇ ಹಾಡಿದ, "ಲಾಲಾ... ಪರಪ್ಪ... ರಾರಾ... ಪರಪ್ಪ...." ಅವನು ಹಾಡುತ್ತಿದಂತೆ ಹಿಂದೆಯೇ "ಲಾಲಾ... ಪರಪ್ಪ... ರಾರಾ... ಪರಪ್ಪ.... ಪಾಪಾ... ಪರಪ್ಪ..ಪಾ....." ಎಂಬ ಪ್ರತಿಕ್ರಿಯೆ ಅವನೊಂದಿಗೆ ಹಾಡಿತು.
ಭಯದಲ್ಲಿ, 'ಓಯಿ......' ಎಂದು ಕೂಗಿಕೊಂಡ. ತಕ್ಷಣ ಅಲ್ಲಿನ ಲೈಟ್ ಬುಲ್ಬ್ಗಳು ಮಿಣುಗಲು ಶುರುವಾಯ್ತು.
ಭಯದಲ್ಲಿ ಎರೆಡು ಸಾರಿ ಸಿಗರೇಟ್'ನಿಂದ ದೊಡ್ಡ ದಮ್ ಒಂದು ಎಳೆದು ದೊಡ್ಡ ಪ್ರಮಾಣದ ಹೊಗೆ ಬಿಟ್ಟ. ಆ ಹೊಗೆಯಲ್ಲಿ ವಿಚಿತ್ರವಾದ ವಿಕಾರವಾದ ಮುಖವೊಂದು ಕಾಣಿಸಿತು.
ಎಷ್ಟು ವಿಕಾರವಾಗಿತ್ತು ಎಂದರೆ, ಅರ್ಧದಷ್ಟು ಭಾಗ ಮುಖದ ಚರ್ಮ ಸುಲಿದು ಗಡ್ಡದಿಂದ ಕೆಳ ತನಕ ತರಚಿಕೊಂಡಿರುವ ಹಾಗೆ ಇದ್ದರೆ, ಮತ್ತ್ ಅರ್ಧದಷ್ಟು ಭಾಗ ಸುಟ್ಟು ಚರ್ಮವೇ ಇಲ್ಲದೆ ಒಳಗಿದ್ದ ದವಡೆಯ ಹಲ್ಲುಗಳು ಕಾಣಿಸುವಷ್ಟು ಭಯಂಕರವಾಗಿತ್ತು. ಅದನ್ನು ನೋಡಿದ ತಕ್ಷಣ ಕೂಗಿಕೊಂಡು ಆ ರೂಮ್ನಿಂದ ಓಡಿ ಹೊರಗೆ ಬಂದ.
ಹೊರಗಡೆಯ ಬುಲ್ಬ್ಗಳು ಸಹಾ ಮಿಣುಗಲು ಶುರುವಾಯಿತು. ಓಡಿದ... ಓಡಿದ... ಎಷ್ಟು ಓಡಿದರು ಆತನಿಗೆ ದಾರಿ ತಿಳಿಯುತ್ತಿಲ್ಲ. ಸುತ್ತಲೂ ಕತ್ತಲು, ವಿಚಿತ್ರವಾದ ಶಬ್ದಗಳು ಕೇಳಿಸುತ್ತಿತ್ತು, ಓಡುತ್ತಲೇ ಇದ್ದ.... ಅವನ ಹಿಂದೆಯೇ ಯಾರೋ ಬೆನ್ನಟ್ಟುತ್ತ ಬಂದಂತೇ ಅನಿಸುತ್ತಿತ್ತು.
ಒಂದು ಕಡೆ ಕಾಲೆಡವಿ ಕೆಳ ಬಿದ್ದ, ಮಣ್ಣಾದ ಬಟ್ಟೆ ಕೆಡವುತ್ತ ಮೆಲ್ಲಗೆ ಮೇಲೆದ್ದು ಎಲ್ಲಿ ತನಕ ಬಂದೆ ಎಂದು ಸುತ್ತಲೂ ದಿಟ್ಟಿಸಿ ನೋಡಿದರೇ, ಆ ರೆಸ್ಟ್ ರೂಮ್ ಪಕ್ಕದಲ್ಲೆ ಇದಂತ ಆತನ ಸೆಕ್ಯೂರಿಟಿ ರೂಮ್ ಮುಂದೆಯೇ ಇದ್ದಾನೆ. ಇಷ್ಟೋತು ನಿಂತಲ್ಲೇ ಓಡುತ್ತಿದ. ಮತಷ್ಟು ಭಯವೆನ್ನಿಸಿತು ಆ ಸೆಕ್ಯೂರಿಟಿಗೆ. ತಕ್ಷಣವೇ ತನ್ನ ರೂಮ್ನ ಒಳಕ್ಕೆ ನುಗ್ಗಿ ಟೇಬಲ್ ಕೆಳಗೆ ಅವಿತು ಕೂತ.
ಟೇಬಲ್ ಕೆಳಗೆ ಕೂತು ಮಂತ್ರ ಪಠಿಸುತ್ತ ಭಯದಲ್ಲಿ ಬೆವರುತ್ತಿದ್ದ. ಆತನ ಉಸಿರಿನ ಸದ್ದು ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ.
10ನಿಮಿಷಗಳ ನಂತರ,
ಧೈರ್ಯ ಮಾಡಿ ಕಣ್ಣು ಬಿಟ್ಟು ನೋಡಿದ, ಎಲ್ಲವೂ ಮಾಮೂಲಿಯಂತೆ ಇದ್ದವು. ಎಲ್ಲೆಡೆಯೂ ಬುಲ್ಬ್ಗಳು ಪ್ರಕಾಶಮಾನವಾಗಿ ಬೆಳಕು ಚೆಲ್ಲುತ್ತಿದ್ದವು. ಟೇಬಲ್ ಪಕ್ಕ ಇದ್ದ ರೇಡಿಯೋನಿಂದ ಹಾಡು ಬರುತ್ತಿತ್ತು, ಅದು ಅವನು ಗುನುಗುನಿಸುತ್ತಿದ ಹಾಡೆ. ಒಂದು ಕ್ಷಣ ಇದೆಲವು ಆತನ ಭ್ರಮೆ ಎಂಬಂತೆ ಅನ್ನಿಸಲು ಶುರುವಾಯಿತು.
ಆ! ಇದು ನನ್ನ ಭ್ರಮೆ ಅಷ್ಟೇ ಎಂದುಕೊಳ್ಳುತ್ತ ಟೇಬಲ್ ಕೆಳಗಿನಿಂದ ಹೊರಬಂದು ಚೇರ್ ಮೇಲೆ ಕೂತ. ಇದೆಲ್ಲ ನನ್ನ ಕನಸಿರಬಹುದು ಬಿಡು ಎಂದು ಅಲೋಚಿಸುತ್ತ ಎಡಗೈಯಲ್ಲಿ ತಲೆಗೆ ಒಮ್ಮೆ ಜೋರಾಗಿ ಬಡಿದುಕೊಂಡ.
ರೇಡಿಯೋದಲ್ಲಿ ಬರುತ್ತಿದ್ದ ಹಾಡು ಬದಲಾಯಿತು, ಚೇರ್'ಗೆ ಬೆನ್ನು ಒರಗಿಸಿ ಕಣ್ಣು ಮುಚ್ಚಿಕೊಂಡ ಆ ಹಾಡು ಕೇಳುತ್ತಾ ಸ್ವಲ್ಪ ಹೊತ್ತು ಚೇತರಿಸಿಕೊಂಡ. ತಕ್ಷಣ ಯಾರೋ ಅವನ ತಲೆಗೆ ಹೊಡೆದಂತೆ "ರಾಪ್..." ಎಂಬ ಸದ್ದು ಕೇಳಿಸಿತು. ಹಾಗಲೇ ಅವನು ತನ್ನ ತಲೆಗೆ ಬಡಿದುಕೊಂಡ ಜಾಗಕ್ಕೆ ಸರಿಯಾಗಿ "ರಾಪ್..." ಎಂದು ಮತ್ತೆ ಒಂದು ಏಟು ಬಿತ್ತು, ಈ ಬಾರಿ ಬಿದ್ದ ಏಟಿಗೆ ತಲೆ ತಿರುಗಿದಂತ ಅನುಭವವಾಯಿತು.
ರೇಡಿಯೋ ತಕ್ಷಣ ಕರ್ಕಶದ "ಪರ್...." ಎಂದು ಸದ್ದು ಮಾಡಿತು, ಯಾರೋ ಚಾನ್ನೆಲ್ ಬದಲಿಸಿದ ಹಾಗೆ. ಕೆಲವು ಕ್ಷಣಗಳ ಬಳಿಕ ಅದರಲ್ಲಿ ಹಾಡು ಕೇಳಿತು. ಅದೇ ಅವನು ರೆಸ್ಟ್ ರೂಮ್ನಲ್ಲಿ ಗುನುಗುನಿಸುತ್ತಿದ ಹಾಡು ಪ್ರಾರಂಭವಾಯಿತು, "ಲಾಲಾ... ಪರಪ್ಪ... ರಾರಾ... ಪರಪ್ಪ.... ಪಾಪಾ... ಪರಪ್ಪ..ಪಾ....."
ಭಯದಲ್ಲಿ ಅವನ ಕೈ ಕಾಲುಗಳು ನಡುಗಳು ಶುರುವಾಯಿತು, ಎಡೆಯಬಡಿತವೇ ನಿಂತಂತೇ ಹಾಗಿ ಉಸಿರಾಡಲು ಕಷ್ಟವಾಯ್ತು. ಕಷ್ಟಪಟ್ಟು ಆ ಚೇರ್ ನಿಂದ ಮೇಲೆದ್ದ ಆದರೆ ಆತನಿಗೆ ಒಂದು ಹೆಜ್ಜೆಯೂ ಮುಂದಕ್ಕೆ ಹೋಗಲು ಹಾಗಲಿಲ್ಲ. ಆ ಅಜಾನುಬಾಹು ಶರೀರ "ದಪ್..." ಎಂದು ಅಲ್ಲೇ ಕೆಳಗೆ ಬಿತ್ತು.
ಆತ ಪ್ರಜ್ಞೆ ತಪ್ಪಿದ್ದ.