Click here to Download MyLang App

ಕೆಂಪು ಡಬ್ಬಲ್ ಡೆಕ್ಕರ್ ಬಸ್ಸು - ಬರೆದವರು : ಜಲಜಾ ಮೋಹನ್ | ಸಾಮಾಜಿಕಅಡುಗೆ ಕೊಣೆಯಲ್ಲಿ...ನಲ್ಲಿ ಇಂದ ತೊಟ್ಟಿಡುತ್ತಿದ್ದ ನೀರಿನ ಶಬ್ದಕ್ಕೆ ಜಾನಕಿಗೆ, ಘಂಟೆ ಹನ್ನೊಂದಾದರೂ ನಿದ್ದೆ ಬಂದಿರಲಿಲ್ಲ. ಜಾನಕಿ ಏಳನೇ ತರಗತಿಯಲ್ಲಿ ಓಡುತಿದ್ದಳು. ಅವಳ ತಮ್ಮಂದಿರು ಅವಳಿಗಿಂತ ೫ ಮತ್ತು ೭ ವರ್ಷ ಸಣ್ಣವರು. ಪುಟ್ಟ ಚೊಕ್ಕ ಕುಟುಂಬ . ಅಪ್ಪ ಒಂದು ಕಾರ್ಖಾನೆಯಲ್ಲಿ ದುಡಿಯುತಿದ್ದರು, ಅಮ್ಮ ಅಚ್ಚುಕಟ್ಟಾಗಿ ಸೋಂಸಾರ ತೂಗಿಸುತಿದ್ದರು. ತಿಂಗಳ ಸಂಬಳ ಬಂದ ಮೇಲೆ ಒಂದು ಭಾನುವಾರ ಕುಟುಂಬದವರೆಲ್ಲರನ್ನು ಅಪ್ಪ ಒಂದು ಕನ್ನಡ ಸಿನಿಮಾಗೆ ಕರೆದೊಯ್ಯ್ಯುತ್ತಿದ್ದರು . ನಂತರ ಒಳ್ಳೆ ಹೋಟೆಲಿನಲ್ಲಿ ಮಸಾಲೆ ದೋಸೆ ... ಕಾಪಿ ಕೊಡಿಸುತಿದ್ದರು . ಆ ದಿನಗಳಲ್ಲಿ ...ಅಂದರೆ ೧೯೮೦ಸ್ ರಲ್ಲಿ ಒಮ್ಮೆ ಕುಟುಂಬದವರು ಹೊರಗೆ ಹೋಗಿಬಂದರೆ ೫೦ ರೂಪಾಯಿ ಕರ್ಚಾಗುತಿತ್ತು . ಅಂದಿನ ಕಾಲಕ್ಕೆ ಮಾಧ್ಯಮ ಕುಟುಂಬದವರಿಗೆ ಅದು ಹೆಚ್ಚಿನ ಕರ್ಚೆ ಆಗುತಿತ್ತು . ಆದರೂ ಅಪ್ಪ ಅದನ್ನು ಲೆಕ್ಕಿಸದೆ ... ಎಲ್ಲರ ಖುಷಿಗೋಸ್ಕರ ಇದನ್ನು ತಪ್ಪಿಸುತಿರಲಿಲ್ಲ .
ಜಾನಕಿ ಪುಟ್ಟ ಅಲಾರಾಂ ಗಡಿಯಾರದ ಕಡೆಗೆ ನೋಡಿದಳು.... ರೇಡಿಯಂ ಬೆಳಕಿಂದ ಗಡಿಯಾರದ ಮುಳ್ಳುಗಳು ಕಾಣಿಸುತಿತ್ತು. ಅಡುಗೆ ಕೋಣೆಯಲ್ಲಿ ತೊಟ್ಟಿಡುತ್ತಿದ್ದ ನಲ್ಲಿಯ ಲೆಕ್ಕಿಸದೆ ಮಲಗಲು ಪ್ರಯತಿನಿಸಿದಳು . ಮರು ದಿನ ತಿಂಗಳಿಗೊಮ್ಮೆ ಬರುವ ಸಿನಿಮಾಗೆ ಹೋಗುವ ದಿನ. ಇದರ ಜೊತೆಗೆ ಜಾನಕೀ ಮತ್ತು ತಮ್ಮಂದಿರಿಗೆ ...ಇನ್ನು ಮಜಾ ಖುಷಿ ಕೊಡುವ ವಿಷಯವೆಂದರೆ ಕೆಂಪು ಡಬ್ಬಲ್ ಡೆಕ್ಕ್ರ್ ಬಸ್ಸಿನ ಮಹಡಿಯೇರಿ ...ಮೊದಲನೆಯ ಸೀಟಿನಲ್ಲಿ ಕುಳಿತುಕೊಳ್ಳುವುದು . ಹಿಂದಿನ ಬಾರಿ ಹೋಗಿದನ್ನ ನೆನೆಸಿಕೊಳ್ಳುತ್ತಾ ಹಾಗೆ ನಿದ್ರಾ ದೇವತೆ ಜಾನಕಿಯನ್ನು ಆವರಿಸಿತ್ತು .

ಮರುದಿನ ಬೆಳಿಗ್ಗೆ ಅಲಾರಾಂ ಹೊಡಿತಿದ್ದಂತೆಯೇ .... ಥಟ್ಟನೆ ಎದ್ದ ಜಾನಕಿ ..... ಗಣೇಶನ ಫೋಟೋಗೆ ನಮಸ್ಕರಿಸಿ ...ಕರಗಳನ್ನ ನೋಡಿ ..."ಅಮ್ಮಾ" .... ಎಂದು ಕೂಗಿದಳು. "ನಾನು ಬೇಗ ಎಲ್ಲಾ ಕೆಲಸ ಮುಗಿಸಿ ಬಿಡ್ತೀನಮ್ಮ " ಎಂದಳು . ಸಣ್ಣ ಮನೆ ಆದರಿಂದ ... ಬೇಗನೆ ಎಲ್ಲಾ ಕೆಲಸ ಮುಗಿಸಿಬಿಡಬಹುದೆಂದು ..... ಜಾನಕೀ ನೀರಿನ ಕೊಣೆಯ ಕಡೆಗೆ ಹೊರಟಳು . ದಿನಚರಿಯನಂತರ ... ಮನೆ ಅಂಗಳವ ಗುಡಿಸಿ...ನೀರಾಕಿ ... ಹೊಸಲು ತೊಳೆದು.... ಎಳೆ ರಂಗೋಲಿ ಎಳೆದು ... ಹೊಸಳಿಗೆ ಹೂವಿಟ್ಟಳು . ಪೂಜೆಗೆ ಕಣಿಗಲೆ ಮತ್ತು ನಜ್ಬಟ್ಟಲು ಹೂವು ...ಎದರು ಮನೆ ಆಂಟಿ ಮನೆ ಇಂದ ಕಿತ್ತು ತರುತ್ತಿದ್ಲು ಜಾನಕಿ.

ಅಮ್ಮ ತಿಂಡಿಗೆ ಬಿಸಿ ಬಿಸಿ ಉಪ್ಪಿಟ್ಟು ತಯಾರಿಸಿದರು. ಸಿನಿಮಾ ಮ್ಯಾಟನಿ ಶೋ ಆದ್ದರಿಂದ ಸ್ವಲ್ಪ ಊಟ ಮನೆಯಲ್ಲಿ ಮಾಡಿಯೇ ಹೋಗೋದು ಅಂತ ಘಮ ಘಮಿಸುವ ಬಸ್ ಸಾರು ಮಾಡಿದ್ರು .
ಮನೆಯಲ್ಲಿ ಎಲ್ಲರ ಸ್ನಾನ್ನ ಪೂಜೆ ಮುಗಿದಮೇಲೆ ಒಟ್ಟಿಗೆ ಕೆಳಗೆ ಕುಳಿತು ರುಚಿಯಾದ ಉಪ್ಪಿಟ್ಟು ತಿಂದ್ರು . ಜಾನಕಿಗೆ ಉಪ್ಪಿಟ್ಟಿನ ಜೊತೆಗೆ ಬಾಳೆಹಣ್ಣು ಅಥವಾ ಸಕ್ಕರೆ ಬೇಕು . ತಿಂಡಿಯ ನಂತರ ಲಘುನೆ ಇನ್ನುಳಿದ ಕೆಲಸ ಮುಗಿಸಿ ಅಪ್ಪನಿಗೆ ಕಾಪಿ ಕೊಟ್ಟು ಜಾನಕಿ ಇರುವ ಅವಳ ನಾಲಕ್ಕು ಅಂಗಿಗಳಲ್ಲಿ ಯಾವುದನ್ನು ಹಾಕಿಕೊಳ್ಳಲಿ ಎಂದು ನೋಡಲು ಕಪಾಟಿನ ಕಡೆಗೆ ಹೋದಳು . ಜಾನಕಿ ಅವಳ ನೆಚ್ಚಿನ ನೀಲಿ ಫ್ರೊಕ್ ಅನ್ನು ಎತ್ತಿಟ್ಟಳು .

ನಂತರ ಅಮ್ಮನಿಗೆ ಮನೆ ಕೆಲಸ ಹಾಗು ಅಡುಗೆಯಲ್ಲಿ ಸಹಾಯ ಮಾಡಿದಳು . ಜಾನಕಿಯ ತಮ್ಮಂದಿರು ಕೊಂಚ ಆಟ ಮುಗಿಸಿ ಬಂದರು. ಅಪ್ಪಂದು ದಿನ ಪತ್ರಿಕೆ ಕೊಂಚ ಬಿಡದೆ ಓದಿದಾಗಿತ್ತು . ಮದ್ಯಾಹ್ನದ ವೇಳೆಗೆ ಎಲ್ಲರು ಊಟ ಮುಗಿಸಿದರು . ಬೇಗನೆ ತಯಾರಾಗಿ ಜಾನಕೀ ಕಾತರದಿಂದ ನಿಂತೇ ಬಿಟ್ಟಳು. ಎಲ್ಲರೂ ಹೊರಟು ... ಮನೆಯ ಬಾಗಿಲ ಚಿಲಕ ಬೀಗ ಹಾಕಿದ್ದಾಯಿತು . ಮಕ್ಕಳ ಖುಷಿಯನ್ನ ನೋಡಿ ಜಾನಕಿಯ ಪೋಷಕರಿಗೆ ಆನಂದ . ಬಸ್ ನಿಲುಗಡೆಯಾಥಾ ಹೊರಟು ನಿಂತರು . ಬಸ್ಸ್ ನಿಲುಗಡೆಯ ರಸ್ತೆ ಮೂಲೆಯ ತಿರುವಿನಲ್ಲಿ ಕೆಂಪು ಬಸ್ ಮೂತಿ ಕಂಡರೆ ಎಲ್ಲರಿಗೆ ಡಬಲ್ ಡೆಕ್ಕ್ರ್ ಬಸ್ ಬಂತೇನೋ ಅಂತ ಖುಷಿ . ಆದರೆ ಡಬಲ್ ಡೆಕ್ ಬಸ್ ಆಗಿರ್ತಿರಲಿಲ್ಲ . ಸುಮಾರು ಹೊತ್ತು ಕಾದ ನಂತರ ಕಡೆಗೆ ಬಂಧೇ ಬಂತು ಆ ಕೆಂಪು ಡಬಲ್ ಡೆಕ್ ಬಸ್ಸು . ಹೀರಿ ಹಿಗ್ಗಿದರು ಮಕ್ಕಳು . ಬಸ್ಸು ನಿಲ್ಲುವುದೇ ತಡ ....ಜಾನಕಿ ಮತ್ತು ತಮ್ಮಂದಿರು ದ್ಬದ್ಬನೆ ಮೆಟ್ಟಿಲೇರಿ ಒಡಿ ಅತಿ ಮುಂದಿನ ಸೀಟುಗಳನ್ನ ಹಿಡಿದರು . ಆ ಮುಂದಿನ ಸೀಟಿಗೆ ದೊಡ್ಡದಾದ ಗಾಜಿನ ಕಿಟಕಿಗಳು.... ಅದು ಮೇಲಕ್ಕೆ ಸ್ವಲ್ಪ ತೆರೆದಿರುತ್ತೆ ..... ಆ ಸೀಟಿನಲ್ಲಿ ಕುಳಿತರೆ ರಸ್ತೆಯ ಕಡೆಯವರೆಗೂ ನೋಡಬಹುದು . ತಣ್ಣಗೆ ಗಾಳಿ ಬೇರೆ ಬೀಸುತ್ತೆ . ಗಾಳಿಗೆ ಜಾನಕಿಯ ಬಾಬ್ ಕಟ್ ಕೂದಲು ಹಾರುತಿತ್ತು . ಕಂಬಿಯನ್ನ ಗಟ್ಟಿಯಾಗಿ ಹಿಡಿದು ಬೀಸುವ ಗಾಳಿಯ ತಂಪಿಗೆ .... ಚಲಿಸುವ ಗಾಡಿಯಲ್ಲಿ ....೧೦೦ % ರೆಸ್ಟು ಉಲ್ಲಾಸಮವಾಗಿರುತಿತ್ತು ಆ ಅರ್ಧ ಘಂಟೆಯ ಪ್ರಯಾಣ . ಜಾನಕಿಯ ಮನೆಯಿಂದ ಸಿನಿಮಾ ಟಾಕೀಸಿಗೆ ೩೦ - ೪೦ ನಿಮಿಷಕ್ಕೆ ತಲುಪಬಹುದು . ಬಸ್ಸಿನಲ್ಲಿ ತಮ್ಮಂದಿರು ಒಂದು ಸೀಟಿನಲ್ಲಿ ಕುಳಿತರೆ ಜಾನಕೀ ಅಮ್ಮನ ಜೊತೆ ಒಂದು ಸೀಟು ಹಂಚಿಕೊಂಡಳು . ಅಪ್ಪ ಹಿಂದಿನ ಸೀಟಿನಲ್ಲಿ ಕುಳಿತರು. ಪ್ರತಿ ನಿಲುಗಡೆಯಲ್ಲಿ ಯಾರು ಹಾತುತ್ತಾರೆ ... ಯಾರು ಇಳಿಯುತಾರೆ ... ಎಂಬುದರಿವಿಲ್ಲದೆ ..... ಬಸ್ಸಿನ ಪ್ರಯಾಣವನ್ನು ಎಲ್ಲರೂ ಖುಷಿ ಇಂದ ಅನುಭವಿಸುತಿದ್ದರು. ಕಡೆಗೆ ಜಾನಕೀ " ನಾ ಇಳಿಯುವ ನಿಲ್ದಾಣ ಬಂದೆ ಬಿಡ್ತು " ಅಂದುಕೊಂಡಳು . ಆದರೂ ಪರವಾಗಿಲ್ಲ .... ಇನ್ನು ಸಿನಿಮಾ .... ಹೋಟೆಲ್ ತಿಂಡಿ... ಕಾಪಿ ಬೇರೆ ಇದೆಯಲ್ಲ (ಹಾಹಾ) . ಬಸ್ಸಿನಿಂದ ಇಳಿಯುವಾಗ ಮಕ್ಕಳ ಮುಖದಲ್ಲಿನ ಖುಷಿ ಹಾಗೆ ಕಡಿಮೆಯಾಯಿತು. ಎಲ್ಲರೂ ಸರಸರನೆ ಕೆಳಗಿಳಿದು ಕೆಂಪು ಬಸ್ಸು ಹೊರಡುವವರೆಗೂ ಅಲ್ಲೇ ನಿಂತು ನೋಡತೊಡಗಿದರು . ಟಾಟಾ ಡಬ್ಬಲ್ ಡೆಕ್ ಬಸ್ ಮತ್ತೆ ನಿನ್ನ ನೋಡುವ ತನಕ. ಹೂ0….

ಬಿರಬಿರನೆ ಸಿನಿಮಾ ಟಾಕೀಸಿನತಾ ಹೆಜ್ಜೆ ಹಾಕ ತೊಡಗಿದರು. ಮ್ಯಾಟನಿ ಶೋ ಗೆ ಟಿಕೆಟ್ ಕೊಂಡುಕೊಳ್ಳಲು Q ನಲ್ಲಿ ನಿಂತರು . Q ಏನೋ ಸುಮಾರಾಗಿ ಉದ್ದ ಇತ್ತು .... ಅದು Dr ರಾಜಕುಮಾರ್ ಅವರ ಸಿನಿಮಾ ನೋಡಲು ಕೇಳಬೇಕೆ? ಟಿಕೆಟ್ ಸಿಗಲಪ್ಪ ಎಂದು ದೇವರಲ್ಲಿ ಬೇಡುತಿದ್ದಳು . .... ಇಲ್ಲವಾದರೆ ಬ್ಲಾಕ್ ನಲ್ಲಿ ಟಿಕೆಟ್ ತೆಗೆಯಲು ಬಲು ದುಬಾರಿ . ೮೦ರ ದಶಕದಲ್ಲಿ ಆನ್ಲೈನ್ ಬುಕಿಂಗ್ ಇರಲಿಲ್ಲವಲ್ಲ . ಹಾಗಾಗಿ ಟಾಕೀಸಿಗೆ ಬೇಗನೆ ಹೋಗಿ ಟಿಕೆಟ್ ಕೊಳ್ಳಬೇಕಿತ್ತು . "ಅಬ್ಬಾ ಮುಂದೆ ಸಾಗುತ... ಟಿಕೆಟ್ ಕೌಂಟರ್ ಹತ್ತಿರ ಬಂದೆವು.... ಎಲ್ಲರಿಗೂ ಟಿಕೆಟ್ ದೊರೆಯಿತು ..... ಹಿಗ್ಗಿದೆವು" . ಟಾಕಿಸಿನೊಳಗೆ ಹೋಗಿ ... ನಮ್ಮ ನಮ್ಮ ಕುರ್ಚಿಯಲ್ಲಿ ಕುಳಿತು ಸಿನಿಮಾ ನೋಡಿ ಹೊರಬಂದೆವು . ಏನೋ ನಿಟ್ಟುಸಿರಿನ ಸಮಾಧಾನ .

ಅಲ್ಲಿಂದ ಹೋಟೆಲ್ ಕಡೆಗೆ ಹೊರೆಟವು .... ಎಂದಿನಂದೆ ನಾವೆಲ್ಲರೂ ಗೋಡೆ ಪಕ್ಕದ ಜಾಗಕ್ಕಾಗಿ ಹುಡುಕಿ ಕುಳಿತೆವು . ಮಸಾಲೆ ದೋಸೆ .... ಕಾಪಿ ... ಎಲ್ಲರಿಗೂ ಆರ್ಡರ್ ಮಾಡಿದೆವು . ಆರ್ಡರ್ ಮಾಡಿ ೫ ನಿಮಿಷದ ನಂತರ ... ಎಷ್ಟುಹೊತ್ತಿಗೆ ತಿಂಡಿ ತರುವರು ಎಂಬ ಕಾತರ . ಸರ್ವರ್ ಅವನ ಕೈಚಳಕದಿಂದ ೫ ತಟ್ಟೆ ಮಸಾಲೆ ದೋಸೆ ಹಿಡಿದು ತಂದು ಕೊಟ್ಟ . ತಿಂಡಿ ಕಾಪಿ ಸೇವಿಸಿ .... ಅಪ್ಪನಿಗೆ ಕಣ್ಣಲ್ಲೇ ಧನ್ಯವಾದ ತಿಳಿಸಿ ...ಅಲ್ಲಿಂದ ಬಸ್ಸ ಸ್ಟಾಂಡ್ ಕಡೆಗೆ ಹೊರೆಟವು. ಮತ್ತೆ ನಮಗೆ ಕೆಂಪು ಡಬಲ್ ಡೆಕ್ ಬಸ್ ಸಿಗುವುದೇ ಎಂದು ಕುತೂಹಲ ? ನಮ್ಮ ಅದೃಷ್ಟಕ್ಕೆ ಅಂದು ಡಬ್ಬಲ್ ಡೆಕ್ ಕೆಂಪು ಬಸ್ ಸಿಕ್ಕಿತು . ಮತ್ತೆ ನಾವೆಲ್ಲ ಮೆಟ್ಟಿಲೇರಿ ಮುಂದಿನ ಸೀಟಿಗಾಗಿ ಓಡಿದೆವು. ಅಂದು ನಮಗೆ ಅದೃಷ್ಟವೋ ಅದೃಷ್ಟ .... ಸೀಟು ಖಾಲಿ ಇತ್ತು.... ಮತ್ತೆ ಮುಂದಿನ ಸೀಟಿನ ಕಿಟಕಿಯ ಮುಂದೆ ಕುಳಿತು .... ಬೀಸುವ ತಂಪು ಗಾಳಿಯಾ ಅನುಭಸಿಕೊಂಡು..... ದೀಪಾಂಲಂಕೃತ ಗೊಂಡಿರುವ ಬೆಂಗಳೂರು ಸಿಟಿಯಾ ಕಣ್ತುಂಬಿಸಿಕೊಂಡು ... ಪ್ರಯಾಣ ಮಾಡಿದೆವು. ಆ ಕೆಂಪು ಡಬ್ಬಲ್ ಡೆಕ್ ಬಸ್ಸಿಗೆ ಅತಿ ಪ್ರೀತಿ ಇಂದ ಬೈ ಬೈ ಹೇಳುತಾ ಬಸ್ಸಿನಿಂದ ಕೆಳಗಿಳಿದು ಮನೆಯಾತ ನಡೆದೆವು.

ಈ ದಿನಗಳಲ್ಲಿ ಮತ್ತೆ ಆ ಕೆಂಪು ಡಬ್ಬಲ್ ಡೆಕ್ ಬಸ್ಸನ್ನು ನಾವು ಕಾಣಬಹುದೇ ?