Click here to Download MyLang App

ಕಾಸಿದ್ರೆ ಕೈಲಾಸ - ಬರೆದವರು : ಗಾದಿಲಿಂಗಪ್ಪ ಬಲಕುಂದಿ | ಸಾಮಾಜಿಕ

ಏನಪ್ಪಾ ಇದು ಹೀಗಿದೆ ಅಂಕೊಬೋದು ಆದ್ರೂ ನನಗೆ ಎಲ್ಲೋ ಒಂದು ಕಡೆ ಅನಿಸಿದ್ದು ಹೀಗೇನೇ....,ಮೊದಲು ಕಾಯಕವೇ ಕೈಲಾಸ ಎಂಬ ಮಾತು ಇದೆ...ಆದ್ರೆ ಈಗ ಏನಾಗಿದೆ ಅಂದ್ರೆ ಕಾಯಕ ಸಿಗಬೇಕು ಅಂದ್ರೆ ಕಾಸು ಇರಬೇಕಾಗಿದೆ ಅದ್ಕೆ ನಾನೇ ಸ್ವಲ್ಪ ಚೇಂಜ್ ಮಾಡಿದ್ರು ಹೆಡ್ಡಿಂಗ್ ಕಾಸಿದ್ರೆ ಕೈಲಾಸ ಎಂಬ ಲೈನ್ ಹೇಳಿದ್ದು ನನ್ನ ಅಕ್ಕಾ ಸುಮ...ನೀವ್ ಏನೋ ತಗೊಳ್ಳಿ ಅದಕ್ಕೂ ಕಾಸ್ ಹೋಗುತ್ತೆ ಪರವಾಗಿಲ್ಲ...ಒಂದೊಂದ್ ಕಡೆ ಸಲ್ಪ ಜಾಸ್ತಿ ದುಡ್ಡು ಕೊಟ್ರೆ ಸ್ವಲ್ಪ ಜಾಸ್ತಿ ಸೌಲಭ್ಯಗಳು ಇದೆಂಥಾ ನ್ಯಾಯ ಅಲ್ವಾ... ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ತಾಸುಗಟ್ಟಲೇ ಕಾಯಬೇಕು ಆದ್ರೆ ವಿಶೇಷ ದರ್ಶನ ಟಿಕೆಟ್ ಗೆ ಕಾಸ್ ಕೊಟ್ರೆ...ದೇವರನ್ನೇ ಬೇಗ ದರ್ಶನ ಮಾಡಿಸುತ್ತಾರೆ ನೋಡಿ ದೇವರ ದರ್ಶನಕ್ಕೂ ಬೇಕು ಕಾಸು..ಇದು ಬಿಡಿ ಹೋಟೆಲಿನಲ್ಲಿ ಕೂಡ ಹೀಗೇನೇ ಒಂದು ಪ್ಲೇಟ್ ಇಡ್ಲಿ ಕೊಡಿ ಅಂದ್ರೆ ಅಲ್ಲಿರುವ ಸಪ್ಲೈಯರ್ ಕೊಡೋದು ಅವ್ನಿಗೆ ಯಾರ್ ಟಿಪ್ಸ್ ಕೊಡ್ತಾರೆ ಅವರಿಗೆ ಮಾತ್ರ ಅಲ್ವಾ...ಹಣ್ಣು ಮಾರುವವರ ಹತ್ರನೂ ಕೂಡಾ ಹಾಗೆಯೇ ನೂರು ರೂಪಾಯಿಗಳಿಗೆ ಒಂದು ಕಿಲೋ ಹಣ್ಣು ಬೇರೆ ಇದಕ್ಕೆ ಆದ್ರೆ ನೂರ ಐವತ್ತು ರೂಪಾಯಿ ಅಂತಾರೆ ಸ್ವಲ್ಪ ರುಚಿ ಜಾಸ್ತಿ ಅಂತಾರೆ ಹೆಂಗೆ ಸ್ವಾಮಿ ನಂಬೋದು...,ನಮ್ಮ ಅಪ್ಪನ ಕಾಲದಲ್ಲಿ ಸ್ವಲ್ಪ ಓದಿದರೆ ಸಾಕು ಅಂಥವರಿಗೆ ಸರ್ಕಾರಿ ಕೆಲಸ ಖಾಯಂ...ಆದ್ರೆ ಈಗ ಯಾರಿಗಾದ್ರೂ ಸರ್ಕಾರಿ ಕೆಲಸ ಸಿಕ್ರೆ ಸಾಕು ಪಸ್ಟ್ ಕೇಳೋದು ಎಷ್ಟು ಓದೀರಿ ಅಂತ ಅಲ್ಲ ...ಎಷ್ಟು ಲಂಚ ಕೊಟ್ರಿ ಅಂತ...!!ಈಗಿನ ಕಾಲೇಜುಗಳು ಕೂಡ ಅಲ್ಲೂ ಕೂಡ ಅದೇ ಚಾಳಿ ದಿನ ಕಾಲೇಜಿಗೆ ಹೋದವನಿಗೆ ಅದೇ ಶೇಖಡಾ ಹಾಜರಾತಿ ..ಹಾಗೇನೇ ಸೀದಾ ಪರೀಕ್ಷೆಗೆ ಹಾಜರಾಗಿ ಕಾಸು ಕೊಟ್ರೆ ಸಾಕು ಅವ್ನಿಗೆ ಅದೇ ಹಾಜರಾತಿ... ನೋಡ್ರಿಪ ಎಂಥ ಕಾಲದಲ್ಲಿ ಬದುಕುತ್ತಾ ಇದ್ದೀವಿ ನಾವೆಲ್ಲರು...ಮೊದಲೆಲ್ಲ ಕುಡಿಯುವ ನೀರಿಗೆ ಬಾವಿ ಅಥವಾ ಕೆರೆಯಲ್ಲಿ ತರುತ್ತ ಇದ್ವಿ...ಹೀಗ ನೋಡ್ರಿ ಎಲ್ಲೋ ಶುದ್ಧೀಕರಣ ಅದ ನೀರನ್ನು ಕಾಸಿಗೆ ನೀಡುತ್ತಾರೆ...ಅಂತಹ ನೀರನ್ನು ಕೂಡ ನಮ್ಮ ಜನ ಮತ್ತೊಮ್ಮೆ ತಮ್ಮ ಮನೆಯಲ್ಲಿ ಶುದ್ಧೀಕರಣ ಮಾಡ್ತಾರೆ ನಿಜ ಅಲ್ವಾ...!!ಹೇಳೋದೇ ಮರೆತುಬಿಟ್ಟಿದ್ದೆ ಮೊನ್ನೆ ದೇವಸ್ಥಾನಕ್ಕೆ ಹೋದಾಗ ಅಲ್ಲಿರುವ ಪೂಜಾರಿ ಮಂಗಳಾರತಿ ಕೊಟ್ರು ನಂಗೂ ಆರತಿ ತಗೊಂಡ್ ದೇವರಿಗೆ ಕೈ ಮುಕ್ಕೊಂಡು ಎಲ್ಲರನ್ನು ಚೆನ್ನಾಗಿ ನೋಡ್ಕೋ ದೇವ್ರೆ ಅನ್ಕೊಂಡು ಬಂದೆ...!!ಆವಾಗ ಪೂಜಾರಿ ಮಂಗಳಾರತಿ ಕೊಡುವಾಗ ನೋಡೋ ಲುಕ್ ಬೇರೇನೇ ಇತ್ತು ...ಈಗ ನಂಗೆ ಗೊತ್ತು ಆಯ್ತು ಅದು ಕಾಣಿಕೆಯ ಲುಕ್ ಅಂಥ...ಈಗ ಕಾಸಿದ್ರೆ ಕೈಲಾಸ ಅನ್ನೋ ಮಾತಲ್ಲಿ ಸಂಶಯ ಇಲ್ಲ ಅಂತ ನನಗೆ ಅನಿಸಿತು ....ಇದಕ್ಕೆ ನೀವ್ ಏನಂತೀರಾ...!!