Click here to Download MyLang App

ಕರಗಿದ ಮನಃ - ಬರೆದವರು : ಅನ್ಸೀರಾ | ಸಾಮಾಜಿಕ

ಮಗಳು ಅರಿದ್ರಾ ನ ಕೂಗುತ್ತಾ.... ಟೇಪ್ರಿಕಾರ್ಡ್ ಲಿ ಹಳೆಯ ಹಾಡು ಕೇಳೊದೆ ತಾಯಿ ಕಾಂತಮ್ಮನಿಗೆ ಬಲು ಇಷ್ಟ .... ಗಂಡ ಕೆಲಸಕ್ಕೆ, ಮಕ್ಕಳು ಶಾಲೆ-ಕಾಲೇಜಿಗೆ ಹೋದ ನಂತರ ಕಾಂತಮ್ಮನಿಗೆ ಆ ಟೇಪ್ರಿಕಾರ್ಡೆ ಗೆಳತಿಯಂತೆ ದಿನಾಲು ಅದರಲ್ಲಿ ಕ್ಯಾಸೇಟ್ ಹಾಕಿ ಹಾಡು ಕೇಳುವುದೆಂದರೆ ಬಲು ಇಷ್ಟ ಅದಕ್ಕೆಂದು ಕೆಲವು ಸಿನಿಮಾ ಹಾಡು ಹಾಗೂ ಭಾವಗೀತೆ ಅಂದರೆ ಕಾಂತಮ್ಮಗೆ ಬಹಳ ಇಷ್ಟ ಅದರ ಕ್ಯಾಸೇಟ್ ಸಹ ಗಂಡ ತಂದುಕೊಟ್ಟಿದ್ದನ್ನು ಜೋಪಾನವಾಗಿ ಇಪ್ಪತ್ತೈದು ವರ್ಷದವರೆಗೆ ಹಾಳಾಗದಂತೆ ಇಟ್ಟುಕೊಂಡಿದ್ದರು....


ತಾಯಿ ಕ್ಯಾಸೇಟ್ ಹಾಕಿ ಟೇಪ್ರಿಕಾರ್ಡ್ ಲಿ ಹಾಡು ಕೇಳುತ್ತಿದ್ದರೆ ಮಗಳು ಅರಿದ್ರಾ ಕೂಗಾಡುತ್ತಿದ್ದಳು, ಮನೆಯಲ್ಲಿ ಇವಳ ಹೊರತು ಯಾರು ಜೋರಿರಲಿಲ್ಲ ಅರಿದ್ರಾ ದೆ ಜೋರು ಹಠಮಾರಿ.... ಪುಟ್ಟ ತಮ್ಮ ಅಕ್ಕ ಎಲ್ಲರು ತಾಯಿಯ ಮಾತಿಗೆ ಎದುರು ಮಾತಾಡುತ್ತಿರಲಿಲ್ಲ.... ಕಾಲೇಜ್ ಹೋಗುತ್ತಿದ್ದ ಅರಿದ್ರಾ ಬಹಳ ಜೋರಿದ್ದಳು ತಾಯಿ ದಿನಾಲು ಹಾಕುವ ಆ ಟೇಪ್ರಿಕಾರ್ಡ್ ಚಿಕ್ಕವಳಿದ್ದಾಗ ಸಂತೋಷದಿಂದ ,ಸುಮ್ಮನೆ ಕೇಳುತ್ತಿದ್ದಳು ದೊಡ್ಡವಳಾದ ಮೇಲೆ ಅವಳಿಗೆ ಹಳೆಯ ಹಾಡು ಭಾವಗೀತೆ ಇಷ್ಟವಾಗುತ್ತಿರಲಿಲ್ಲ ಅದಕ್ಕಾಗಿ ಅಮ್ಮನ ಬಳಿ ಜಗಳವಾಡುತ್ತಿದ್ದಳು ಅದಕ್ಕಾಗಿ ತಾಯಿ ಅವಳಿಲ್ಲದಾಗ ಟೇಪ್ರಿಕಾರ್ಡ್ ಗೆ ಕ್ಯಾಸೆಟ್ ಹಾಕಿ ಹಾಡು ಕೇಳುತ್ತಿದ್ದರು ಅವಳು ಬಂದದ್ದು ತಿಳಿದಾಗ ನಿಲ್ಲಿಸಿ ಬೇರೆ ಕಡೆ ತೆಗೆದಿಡುತ್ತಿದ್ದರು...


ಇದೇ ರೀತಿ ತಾಯಿ ಮಗಳಿಗೆ ಗೊತ್ತಿಲ್ಲದಂತೆ ಅವಳಿಲ್ಲದಿದ್ದಾಗ ಟೇಪ್ರಿಕಾರ್ಡ್ ಹಾಕಿ ಹಾಡು ಕೇಳುವುದೇ ಸಂತಸ....ಟಿವಿ ಇದ್ದರೆ ಮಕ್ಕಳು ಓದುವುದಿಲ್ಲವೆಂದು ಟಿವಿ ತರವುದು ಬೇಡವೆಂದು ತಂದೆ ತಾಯಿ ನಿರ್ಧರಿಸಿದ್ದರು....ಕೆಲಸ ಮುಗಿದ ಮೇಲೆ ಮನೆಯಲ್ಲಿ ಒಬ್ಬಳೆ ಇರಲು ಬೇಸರವಾಗುತ್ತಿದೆ ಎನ್ನುತ್ತಿದ್ದಾಗ ಪತಿಗೆ ಆಲೋಚನೆ ಬಂದು ಒಂದು ಟೇಪ್ರಿಕಾರ್ಡ್ ತನ್ನ ಪತ್ನಿ ಕಾಂತಮ್ಮನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ತಂದು ಕೊಟ್ಟರು....

ಅಂದಿನಿಂದ ಕಾತಮ್ಮಗೆ ಗೆಳತಿ ಈ ಟೇಪ್ರಿಕಾರ್ಡ್ ಆಗಿತ್ತು....


ಅಂತೂ ಅರಿದ್ರಾ ಯಾರ ಮಾತು‌ಕೇಳುತ್ತಿರಲಿಲ್ಲ ಯಾರ ಭಾವನೆಗೂ ಬೆಲೆ ಕೊಡುತ್ತಿರಲಿಲ್ಲ ಮನೆಯಲ್ಲಿ ಟೇಪ್ರಿಕಾರ್ಡ್ ದೆ ದಿನಂಪ್ರತಿ ಜಗಳವಾಗಿತ್ತು ಅಂತೂ ಕಾಲೇಜು ಓದುತ್ತಿದ್ದ ಅರಿದ್ರಾ ಕಾಲೇಜು ಮುಗಿಯುತ್ತಿದ್ದಂತೆ ಒಮ್ಮೆ ಅವಳ ಗೆಳತಿ-ಗೆಳೆಯರು ಈ ಟೇಪ್ರಿಕಾರ್ಡ್ ಸುದ್ದಿ ಮಾತಾಡಿದ್ದು ಕಿವಿಗೆ ಬಿತ್ತು ಅದರಲ್ಲಿ ಎಫ್. ಎಮ್ ಲ್ಲಿ ಹೊಸ ಹಾಡುಗಳು ಬರುವುದು ತಿಳಿದುಕೊಂಡು ಅದರ ಬಗ್ಗೆ ಅರಿತ ಅರಿದ್ರಾ ಅದು ಹೇಗೆಂದು ಗೆಳತಿ ಬಳಿ ಕೇಳಿ ತಿಳಿದುಕೊಂಡಳು....ನಂತರ ಕಾಲೇಜು ಮುಗಿದ ಮೇಲೆ ಕೆಲಸ ಹುಡುಕಿದರೆ ಸಿಗಲಿಲ್ಲ ಅಕ್ಕ ಹಾಗೂ ಅಪ್ಪ ಕೆಲಸಕ್ಕೆ ಹೋಗುವುದು ತಮ್ಮ ಶಾಲೆಗೆ ಹೋಗುತ್ತಿದ್ದ ಇವಳಿಗೋ ತಾಯಿ ಹಾಕುವ ಹಳೆಯ ಹಾಡು ಕೇಳಲು ಮನಸ್ಸಿರಲಿಲ್ಲ ಅದಕ್ಕೆ ತಾಯಿಯೊಂದಿಗೆ ತಾನು ಹಾಡು ಕೇಳಬೇಕೆಂದು ಹಾಕಿದ್ದ ಕ್ಯಾಸೆಟ್ ತೆಗೆದು ತಾನು ಎಫ್.ಎಮ್. ಹಾಕುತ್ತೇನೆಂದು ತಾಯಿಯ ಬಳಿ ಕಸಿದು ಟೇಪ್ರಿಕಾರ್ಡ್ ಮಹಡಿ ಮೇಲಿಟ್ಟಳು ಟೇಪ್ರಿಕಾರ್ಡ್ ಲಿ ಬರುವ ಉದ್ದನೆಯ ಕಡ್ಡಿ ಎಳೆದು... ಎಫ್.ಎಮ್ ಹಾಕಿ ಅದರಲ್ಲಿ ಆಕಾಶವಾಣಿ,ಹಾಸನ ಎಫ್.ಎಮ್, ಮಂಗಳೂರು ಎಫ್.ಎಮ್ ಕೇಳಲು ಶುರು ಮಾಡಿದಳು....ಇತ್ತ ಟೇಪ್ರಿಕಾರ್ಡ್ ಕಸಿದುಕೊಂಡು ಹೋದ ಮಗಳನ್ನು ನೋಡಿ ತಾಯಿಗೆ ಬಹಳ ಬೇಸರವಾಯಿತು ದುಃಖ ಯಾರಲ್ಲಿ ತೋರಿಸದೆ ಸುಮ್ಮನಾದಳು....
ಮಗಳ ಸಂತೋಷಕ್ಕೆ ಅಡ್ಡಿ ಪಡಿಸುವುದೇಕೆ ಎಂದು...


ಹೀಗೆ ದಿನಾಲು ಸಮಯ ನೋಡಿ ಎಫ್.ಎಮ್ ಹಾಕುತ್ತಿದ್ದಳು ಅವಳ ಮತ್ತು ಟೇಪ್ರಿಕಾರ್ಡ್ ನ ಎಫ್.ಎಮ್ ಜೊತೆ ಇವಳಿಗೆ ಏನೋ ನಂಟು ಅನಿಸಿತು .... ಅವಳ ಹೊರತು ಇನ್ನಾರು ಮುಟ್ಟುತ್ತಿರಲಿಲ್ಲ.... ತಮ್ಮ ಚಿಕ್ಕವನು ಅವನಿಗೆ ಎಟಕುತ್ತಿರಲಿಲ್ಲ.... ತಾಯಿ‌ ಕುಳ್ಳಗಿದ್ದರು ಹಾಗೂ ದಪ್ಪ ಇದ್ದರು ಹಾಗಾಗಿ ಎಟಕುತ್ತಿರಲಿಲ್ಲ ಇನ್ನು ತಂದೆ-ಅಕ್ಕ ಆ ಗೋಜಿಗೆ ಹೋಗುತ್ತಿರಲಿಲ್ಲ....


ತಾಯಿ ‌ಟೇಪ್ರಿಕಾರ್ಡ್ ಗೆ ಕ್ಯಾಸೇಟ್ ಹಾಕಿ‌ ಕೇಳಿದರೆ ಕೂಗಾಡಿ ಬಿಡುತ್ತಿದ್ದಳು ತನಗೆ ಹಕ್ಕು ಇರುವಂತೆ ಆದರೆ ಅದು ತಂದೆ ತಾಯಿಗೆ ಕೊಟ್ಟ ಉಡುಗೊರೆ ಅದನ್ನ ಜೋಪಾನವಾಗಿಟ್ಟ ತಾಯಿಗೆ ಅದರ ಮೇಲೆ ಹಕ್ಕಿಲ್ಲವೆಂದು ಅವಳ ಅಭಿಪ್ರಾಯ ಅವಳು ಯಾರ ಭಾವನೆಗೂ ಬೆಲೆ ಕೊಡುತ್ತಿರಲಿಲ್ಲ....ಒಮ್ಮೆ ಅವರ ವಠಾರದ ಒಬ್ಬ ಅಜ್ಜಿ ಅವರ ಮನೆಗೆ ಬಂದಿತ್ತು ಯಾವಾಗಲು ಬರುತ್ತಿದ್ದ ಆ ಮನೆಯೊಳಗೆ ಬರುತ್ತಿದ್ದಂತೆ ಅಜ್ಜಿ ಹಾಡು ಕೇಳಿ ಸಂತಸವಾಯಿತು ನಮ್ಮ ಮನೆಯಲ್ಲಿಯೂ ಇತ್ತು ಟೇಪ್ರಿಕಾರ್ಡ್ ಅದು ಹಾಳಾಗಿದೆ ಎಂದು ಕಾಂತಮ್ಮನ ಬಳಿ ಹೇಳಿ ಬೇಸರ ಪಡುತ್ತಿತ್ತು ಅದನ್ನು ರಿಪೇರಿ ಮಾಡಿಸಬೇಕು ಹಣ ಕೊಡುವೆ , ಅಂಗಡಿ ನನಗೆ ಎಲ್ಲಿದೆ ಎಂದು ತಿಳಿದಿಲ್ಲ ಅರಿದ್ರಾ ಅಂಗಡಿಗೆ ಹೋಗುತ್ತಾಳ ಕೇಳು ಎಂದಳು ಆಗ ತಾಯಿ ಅರಿದ್ರಾಳನ್ನು ಕರೆದು ಕೇಳಿದರು ಅಜ್ಜಿಯ ಬಳಿ ಇರುವ ಟೇಪ್ರಿಕಾರ್ಡ್ ಹಾಳಾಗಿದೆ ಏನಾಗಿದೆ ಎಂದು ನೋಡಿ ಬಾ ಅಥವಾ ರಿಪೇರಿ ಮಾಡಿಸು ಎಂದಾಗ ಜೋರಾಗಿ ಕೂಗಿದಳು ತಾನು ಹಾಕಿದ ಟೇಪ್ರಿಕಾರ್ಡ್ ನಲ್ಲಿ ಎಫ್.ಎಮ್ ಅನ್ನು ನಿಲ್ಲಿಸಿ.....
ಆಗುವುದಿಲ್ಲ ಎಂದು ಕೂಗಿ ಹೊರ ಹೋದಳು ಅದನ್ನು ಕಂಡ ಅಜ್ಜಿಗೆ ದುಃಖವಾಯಿತು ನಂತರ ಏನೂ ಮಾತಾಡದೆ ಸುಮ್ಮನಾಯಿತು.... ಅದನ್ನು ಕಂಡ ಕಾಂತಮ್ಮ ಇರಲಿ ನಾನು ನನ್ನ ಗಂಡನ ಬಳಿ ಹೇಳುವೆ ಸರಿ ಮಾಡಿಸಿ ತರಲೆಂದು ಎಂದರು....ಒಂದು ಕಡೆ ಟೇಪ್ರಿಕಾರ್ಡ್ ಅಲ್ಲಿ ಬರುವ ಎಫ್.ಎಮ್ ಸಲುವಾಗಿ ಸಂಬಂಧಗಳಿಗೆ ಬೆಲೆ ಕೊಡದೆ ಎಲ್ಲರಿಂದ ಒಂಟಿಯಾಗುತ್ತಾ ಹೋಗುತ್ತಿರುವುದು ಅರಿದ್ರಾಗೆ ಅದು ತಿಳಿಯಲೇ ಇಲ್ಲ..ಒಂದು ದಿನ ಕಾಂತಮ್ಮ ಮಗಳಿಲ್ಲದ ಸಮಯ ನೋಡಿ ತನಗೆ ಒಬ್ಬಳೆ ಕೂತು ಬೇಸರ ಬಂತೆಂದು ಮಹಡಿ ಮೇಲಿದ್ದ ಟೇಪ್ರಿಕಾರ್ಡ್ ಕೆಳಗಿಳಿಸಲು ಪಕ್ಕದ ಮನೆಯ ಹುಡುಗನನ್ನು ಕರೆದರು ನಂತರ ಕೆಳಗಿಳಿಸಿ ಅದಕ್ಕೆ ಹಾಕಬೇಕಾದ ಕ್ಯಾಸೇಟ್ ಹುಡುಕಿದರೆ ಎಲ್ಲೂ ಇಲ್ಲ ತನಗಿಷ್ಟದ ಕ್ಯಾಸೇಟ್ ಹಳೆಯ ಚಿತ್ರ ಗೀತೆಗಳು ಮತ್ತು ಭಾವಗೀತೆ ಕ್ಯಾಸೇಟ್ ಮನೆಯಲ್ಲೆಲ್ಲೂ ಸಿಗಲೇ ಇಲ್ಲ ಹುಡುಕಿ-ಹುಡುಕಿ ಸಿಗದಿದ್ದದ್ದನ್ನು‌ ನೋಡಿ ಬಹಳ ಬೇಸರ ಮಾಡಿಕೊಂಡ ಕಾಂತಮ್ಮ ದುಃಖ ಬಂದಂತಾಯಿತು ನಂತರ ಮಗಳ ಬಳಿ ಕೇಳಿದರೆ ಗೊತ್ತಿಲ್ಲ ಎಂದಳು.... ಪತಿಯ ಬಳಿ ಕೇಳಿದರೂ ಗೊತ್ತಿಲ್ಲ, ನಂತರ ಅರಿದ್ರಾಳ ಬಳಿ ಕೇಳಿದರೆ ಗೊತ್ತಿಲ್ಲ ಎಂದಳು ತಾಯಿಗೆ ಅರಿದ್ರಾಳ ಮೇಲೆ ಅನುಮಾನವಿತ್ತು..ಅರಿದ್ರಾ ತಾಯಿ ಇಲ್ಲದಿದ್ದಾಗ ಎಲ್ಲಾ ಕ್ಯಾಸೇಟ್ ಅಡಗಿಸಿಟ್ಟಿರುವ ವಿಷಯ ಯಾರಿಗೂ ತಿಳಿದಿರಲಿಲ್ಲ ತಾಯಿಯ ಭಾವನೆ ಜೊತೆ ಆಟವಾಡುತ್ತಿರುವ ಅರಿದ್ರಾ ಮೊಂಡುತನ ಹಠಕ್ಕೆ ಎಲ್ಲೋ ಒಂದು ಕಡೆ ಭಾವನಾತ್ಮಕವಾಗಿ ತಾಯಿಯ ಮನಸ್ಸಿಗೆ ಪೆಟ್ಟು ಮಾಡಿಬಿಟ್ಟಳು ತಾಯಿಗೆ ಟೇಪ್ರಿಕಾರ್ಡ್, ಕ್ಯಾಸೇಟ್ ಹಾಡುಗಳೆಂದರೆ ಏನೋ ಅದರ ನಡುವೆ ಬಂಧವಿತ್ತು ಅದನ್ನರಿಯದ ಅರಿದ್ರಾ ಏಕೇ ಹೀಗೆ ಮಾಡುತ್ತಾಳೆ ಎನ್ನುವುದೆ ತಾಯಿಯ ಚಿಂತೆ ಆಯಿತು....ಅದಕ್ಕಾಗಿ ಸುಮ್ಮನೇಕೆ ಮಗಳ ಮೇಲೆ ಕೋಪವಾಗಲಿ ಎಂದು ಅವಳ ಸಂತೋಷದಲ್ಲಿ ತನ್ನ ಸಂತಸ ನೋಡುತ್ತಿದ್ದ ತಾಯಿಗೆ ಬಹಳ ಬೇಸರ ಅನಿಸಿತು....


ಒಂದು ದಿನ ಅರಿದ್ರಾ ಹಾಗೂ ಕಾಂತಮ್ಮ ಮನೆಗೆ ಬರುತ್ತಿದ್ದ ಆ ಅಜ್ಜಿ ಮನೆಗೆ ಅಜ್ಜಿ ನೋಡಲೆಂದು ಹೋಗಿದ್ದರು ಮನಸ್ಸಿಲ್ಲದ ಮನಸ್ಸಿನಲ್ಲಿ ಹೋಗಿದ್ದ ಅರಿದ್ರಾ.............
ಆ ಅಜ್ಜಿ ಟೇಪ್ರಿಕಾರ್ಡ್ ಅನ್ನು ಹಾಕಿ ವಾರ್ತೆ ಕೇಳುತ್ತಿರುವ ಆ ಕ್ಷಣ , ಆ ಅಜ್ಜಿ ಕಿವಿಯ ಪಕ್ಕಕ್ಕೆ ಇಟ್ಟು ಕೇಳುತ್ತಿರುವ ಆ ಒಂದು ಸನ್ನಿವೇಶ ಅರಿದ್ರಾಗೆ ಏನೋ ಮನಸ್ಸಿನಲ್ಲಿ ಬೇಸರ ಮೂಡಿತು ಅಂದು ಅಜ್ಜಿ ಟೇಪ್ರಿಕಾರ್ಡ್ ಹಾಳಾಗಿದೆ ರಿಪೇರಿ ಮಾಡಿಸು ಎಂದಾಗ ತಾನು ಕೂಗಾಡಿದ ಆ ಸಂದರ್ಭ ನೆನಪಿಸಿಕೊಂಡಳು ಮತ್ತು ತಾನು ಮಾಡಿದ್ದು ತಪ್ಪು ಅನಿಸಿ ಮನದಲ್ಲೆ ದುಃಖಿತಳಾದಳು ಅಲ್ಲಿ ಏನು ಮಾತನಾಡದೆ ಸುಮ್ಮನಾದಳು....


ಮನೆಗೆ ಬಂದ ಅರಿದ್ರಾ ಅಂದು ತಾನು ಮಾಡಿದ್ದು ‌ತನಗೆ ಬೇಸರ ಅನಿಸಿತು.... ತಾನು ‌ಕಾಲೇಜು‌ ಮುಗಿದು ಮನೆಯಲ್ಲಿರಬೇಕಾದರೆ ಒಬ್ಬಳೆ ಇರಲು ಕಿರಿಕಿರಿ ಅನಿಸಿದಾಗ ಟೇಪ್ರಿಕಾರ್ಡ್ ನಲ್ಲಿ ಎಫ್ .ಎಮ್ ಲಿ ಹೊಸ ಹೊಸ ಹಾಡು ಕೇಳಿದಾಗ ಮನಸ್ಸು ತಿಳಿ ಅನಿಸಿತು ಆದರೆ ....
ಪಾಪಾ ಒಂಟಿ ಅಜ್ಜಿ ಟೇಪ್ರಿಕಾರ್ಡ್ ಹಾಳಾದಾಗ ಯಾರು ರಿಪೇರಿ‌ ಮಾಡಿಸಿರಲಿಲ್ಲ ಎರಡು‌ ಮೂರು ದಿನ ಹೇಗೆ ಬೇಸರ ಕಳಿಯಿತೋ ಎಂದು ಏನೋ ಆ ಸಂದರ್ಭ ಬಹಳ ಮನಸ್ಸಿನ ಮೇಲೆ ಪ್ರಭಾವ ಬೀರಿತು.... ಅಂದಿನಿಂದ ಸ್ವಲ್ಪ ಸಪ್ಪೆಯಾದಳು ತದನಂತರ ತನ್ನ ತಾಯಿಗೆ ಅಂದು ಮಾಡಿದ ಬೇಸರವೂ ಸಹ ನೆನಪಿಸಿ ಅಳು ಬಂದಿತು ತನ್ನಲ್ಲೆ ಎಲ್ಲಾ ದುಃಖ ಅಡಗಿಸಿದಳು ಎಲ್ಲೋ‌ ಒಂದು ಕಡೆ ನಾನು ‌ನನ್ನ ತಾಯಿ ಮನೆಯವರಿಂದ ಒಂಟಿ ಆದೆನೇನೊ ಎಂದನಿಸಿಬಿಟ್ಟಿತು.... ಆ ಹಿರಿ ಜೀವ ತನ್ನನ್ನು ಎಚ್ಚರಗೊಳಿಸಿತು ಅಂದಿನಿಂದ ಅರಿದ್ರಾ ತಾಯಿ ಟೇಪ್ರಿಕಾರ್ಡ್ ಹಾಕಿದರೆ ಸುಮ್ಮನೆ ಕೇಳುತ್ತಿದ್ದಳು ಈ ಬದಲಾವಣೆ ಅರಿದ್ರಾಳಲ್ಲಿ ನೋಡಿದ ತಾಯಿ ಗೆ ಅನಿಸಿತು ಏಕೋ ಇವಳ ಮನಸ್ಸು‌ಮೊದಲಿನಂತಿಲ್ಲ ಎಂದು ನಂತರ ಬೇಕಂದಾಗ ತಾಯಿಯ ಬಳಿ ಟೇಪ್ರಿಕಾರ್ಡ್ ಲ್ಲಿ ಹಾಡು ಕೇಳುತ್ತೀನಿ ಅಮ್ಮ ಎಂದು ಹೇಳಿ ತಾಯಿ ಕೇಳಿದ ನಂತರ ಇವಳು ಅದರಲ್ಲಿ ಹೊಸ ಹೊಸ ಹಾಡು‌ಕೇಳ ತೊಡಗಿದಳು ಹಾಗೂ ತಾಯಿ ಹಳೆ ಹಾಡು, ಭಾವಗೀತೆಗಳನ್ನು ಹಾಕಿದಾಗ ಮತ್ತೆ ತನ್ನ ಬಾಲ್ಯದಲ್ಲಿದ್ದಾಗ ತಾಯಿಯೊಂದಿಗೆ ಕುಳಿತು‌ಕೇಳುತ್ತಿದ್ದ ಆ ಸಂದರ್ಭ ನೆನೆದು ಕರಗಿತು ಮನಃ....