Click here to Download MyLang App

ಒಲವಿನ ಕಥೆ - ಬರೆದವರು : ಹೇಮಂತ್ ಬಸಪ್ಪನದೊಡ್ಡಿ | ರೋಮ್ಯಾನ್ಸ್

ಹೆಸರು: ಹೇಮಂತ್ ಬಸಪ್ಪನದೊಡ್ಡಿ
ಕಥೆಯ ಹೆಸರು: ಒಲವಿನ ಕಥೆ
ಕಥೆ : ಲವ್ ಬೇಸ್ಡ್
ಕಥೆಯ ಪಾತ್ರ: ವೇದ್ ಖುಷಿ

ಬೆಂಗಳೂರಿನ ಒಂದು ಕಾಲೇಜಿನಲ್ಲಿ 2ನೇPUC ಓದುತ್ತಿದ್ದಾಗ ನಮ್ಮ ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಹದೇವಯ್ಯನವರು ನನ್ನನ ಒಂದು inter-collegeನ ಚರ್ಚಾಸ್ಪರ್ಧೆಗೆ ಆಯ್ಕೆ ಮಾಡಿದರು.ಕಾರಣ ನನ್ನ ಧ್ವನಿ, ಮಾತುಗಾರಿಕೆ, ಸ್ಪಷ್ಟ ಉಚ್ಚಾರಣೆ.ನಾನು ಸ್ಪರ್ಧೆಗೆ ಬೇಕಾದ ಮಾಹಿತಿಗಳನ್ನ ಸಂಗ್ರಹಿಸಿಕೊಂಡು ಯುದ್ದಕ್ಕೆ ಸಿದ್ದನಾದವನಂತೆ ಮಾರನೇ ದಿನ ಬೆಳಿಗ್ಗೆ ಸ್ಪರ್ಧೆ ನೆಡೆಯುವ ಕಾಲೇಜಿಗೆ ಹೊರಟೆ.ಕಾಲೇಜೀನ ಆಡಿಟೋರಿಯಂ ಗೆ ಹೋದಾಗ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿತ್ತು. ಮುಖ್ಯ ಅತಿಥಿಗಳು ಬಂದು ಕಾರ್ಯಕ್ರಮ ಉದ್ಘಾಟಿಸಿ,ಜ್ಯೋತಿ ಬೆಳಗಿಸಿ ಸ್ಪರ್ಧೆಗೆ ಚಾಲನೆ ಕೂಟ್ಟರು. ನಿರೂಪಕರು ಸ್ಪರ್ಧೆಯ ರೂಲ್ಸ್ ಹೇಳಿ ಭಾಗವಹಿಸುವವರ ಹೆಸರಿನ ಜೊತೆಗೆ ಅವರ ಸರದಿಯ ನಂಬರ್ ಹೇಳಿದರು.ನನ್ನ ನಂಬರ್ 6 ಸ್ಪರ್ಧೆಗೆ ಬಂದ್ದದೆ 10-15ಜನ ಇರಬೇಕು.ನಾನು ಆಡಿಟೋರಿಯಂ ನಿಂದ ಹೊರಹೋಗುವಾಗ ಒಂದು ಮುದ್ದಾದ ಹುಡುಗಿ ನವಿಲಿನ ನಡಿಗೆಯಂತೆ ನಡೆಯುತ್ತ ನನ್ನ ಕಡೆಗೆ ಬರುತ್ತಿದ್ದಳು ಅವಳೇ ನಾ ಪ್ರೀತಿಸುವ ಹುಡುಗ.ನೇರವಾಗಿ ಬಂದವಳು ನೀವು ಸಹ ಸ್ಪರ್ಧೆಯಲ್ಲಿ ಭಾಗವಹಿಸುವವರು ಅಲ್ವ ಎಂದಳು ನಾನು ಹೌದು ಎಂದಾಗ ತಗೊಳ್ಳಿ ಈ ಟೋಕನ್ ಎಂದು ಕೊಟ್ಟಳು.ನಾನು ನಿಮ್ಮ ಹೆಸರು ಎಂದು ಕೇಳಿದಾಗ ಆಕೆ ಖುಷಿ ಎಂದು ಹೇಳಿ ನನ್ನ ಹೆಸರು ಕೇಳಿದಳು.ನಾನು ವೇದಾಂತ್ ಅಲಿಯಾಸ್ ವೇದ್ ಅಂತ.
ಖುಷಿ:ವೇದ್ sounds good
ವೇದ್:thank you.ನಿಮ್ನ ನೋಡಿದ ತಕ್ಷಣ ನನ್ನ friend ನೆನಪಾದಳು.
ಖುಷಿ:ಯಾರಾದು
ವೇದ್: ಅಯ್ಯೋ! ಈಗ ಅವಳ ಹೆಸರು ಹೇಳಿ ಏನು use ಇಲ್ಲ because she is no more with us.
ಖುಷಿ: oh I'm really sorry.
ವೇದ್: It's k
ಖುಷಿ: ಮತ್ತೆ ಏನ್ ಸಮಾಚಾರ
ವೇದ್: ಸಮಾಚಾರ ಇದೆ ಅದ್ರೆ ನೀವು free ಇದೀರಾ
ಖುಷಿ:Oh yes full free
ವೇದ್: ಮತ್ತೆ ಬನ್ನಿ ಹೊರಗಡೆ ನಿಂತು ಮಾತಾಡೋಣ.
ಖುಷಿ: ya offcourse ನಿಮ್ಮ ಬಗ್ಗೆ ತುಂಬಾ ಕೇಳಿದ್ದೇನೆ.
ವೇದ್: ಹೌದ
ಖುಷಿ: ಮ್ಮ್ ನನ್ನ friends ಹೇಳ್ತಿದ್ರು ನೀವು ಕವನ ಚೆನ್ನಾಗಿ ಬರೀತೀರಾ ಅಂತ.
ವೇದ್: ಕವನ ಬರೀತೀನಿ ಆದರೆ ಚೆನ್ನಾಗಿ ಬರಿತಿನ್ನೋ ಇಲ್ವೋ ಗೊತ್ತಿಲ್ಲ
ಖುಷಿ: ಚೆನ್ನಾಗಿ ಬರುತ್ತಿರಿ ಬಿಡಿ
ವೇದ್:ಇದೇನಿದು ಎಲ್ಲಾ ಬರುತ್ತಿದ್ದಾರೆ I think break ಅನ್ಸುತ್ತೆ
ಖುಷಿ: ಹೇ ಬ್ರೇಕ್ ಇಲ್ಲ mostly ಕಾರ್ಯಕ್ರಮ end ಆಗಿರಬೇಕು
ವೇದ್: ಮತ್ತೆ ನಾನು ಇಲ್ಲೇ ಇದೀನಿ
ಖುಷಿ: ಅಯ್ಯೋ ವೇದ್ ಯಾಕೆ ಹೀಗೆ ಮಾಡಿಕೊಂಡ್ರಿ attend ಮಾಡಬೇಕಿತ್ತು ತಾನೇ ನೀವು ಬಂದದ್ದು ಅದಕ್ಕೆ ಅಲ್ವಾ
ವೇದ್: ಪರವಾಗಿಲ್ಲ ನನಗೂ prize ಗೆದ್ದು ಗೆದ್ದು ಬೇಜಾರಾಗಿ ಬಿಟ್ಟಿದೆ atlest ಈಗಾದರೂ ಬೇರೆಯವರು ತಗೊಳ್ಳಿ
ಖುಷಿ: ಆದ್ರೂ ನೀವು ಮಾಡಿದ್ದು ತಪ್ಪು ಅಲ್ವಾ.atlest ನನಗೆ ಮಾತಾಡಬೇಕು ನಿಮ್ಮತ್ರ ಅಂದಿದ್ದರೆ ನಾನು ಆ ಮೇಲೆ ಸಿಗುತ್ತಿದ್ದೆ .ಸುಮ್ಮನೆ ನೀವು waste ಮಾಡಿಕೊಂಡ್ರಿ
ವೇದ್: ನನ್ ಪ್ರಕಾರ ನನಗೆ ಏನು waste ಆಗಿಲ್ಲ more over ನನಗೆ ಒಳ್ಳೆ ಫ್ರೆಂಡ್ ಸಿಕ್ಕಿದ್ರು
ಖುಷಿ: ನನಗೂ ಅಷ್ಟೇ ಒಳ್ಳೆ ಸಾಹಿತ್ಯದ ಒಲವು ಇರೋ ಫ್ರೆಂಡ್ಸ್ ಸಿಕ್ಕಿದ್ರು. ನಿಮ್ ನಂಬರ್ ಸಿಗುತ್ತಾ
ವೇದ್: ಸರಿ ತಗೊಳ್ಳಿ
ಖುಷಿ: ಏನ್ ಅಂತ save ಮಾಡ್ಕೊಳ್ಳಿ. ನೀವು ಕವನ ಬರೆಯೋದ್ರಿಂದ ಸಾಹಿತಿ ಅಂತ ಮಾಡ್ಕೋತೀನಿ
ವೇದ್: ನಾನು ನಮ್ ಹುಡುಗಿ ಅಂತ ಮಾಡ್ಕೋತೀನಿ
ಖುಷಿ: ಸರಿ ನಿಮ್ಮ ಇಷ್ಟ
ವೇದ್:ನನಗೆ ಇವಾಗ ಒಂದು ಸಾಂಗ್ ನೆನಪಾಗ್ತಾ ಇದೆ
ಖುಷಿ: ಯಾವುದು
ವೇದ್: ನನ್ನ ಪ್ರೀತಿಯ ದೇವತೆಯು ಬಳಿ ಬಂದಳು ನನ್ನ ಹೃದಯದ ಬಾಗಿಲಿಗೆ ಬೆಳಕಾದಳು ಬೆಳ್ಳಿ ಬೆಳದಿಂಗಳಿನ ನಗೆಯಂತೆ ಇಂದ್ರನ ಕುಲದ ದೊರೆ ಮಗಳಂತೆ
ಖುಷಿ: ಓ ಅಷ್ಟೊಂದು ಇಷ್ಟ ಆದ್ನ ನಾನು ನಿಮಗೆ
ವೇದ್: ರೀ ಇಷ್ಟ ಆಗಿದ್ದಕ್ಕೆ ಅಲ್ವಾ ಬಂದು ಮಾತಾಡ್ತಿರೋದು
ಖುಷಿ: ಸರಿ ನೀವು ಕವನ ಬರೀತೀರ ಅಲ್ವಾ if u don't mind ಇವಾಗ ನನಗೂ ಒಂದು ಬರೆದು ಕೊಡಬಹುದೇ
ವೇದ್:ಸರಿ ಆಯ್ತು I just try but ಚೆನ್ನಾಗಿ ಬರ್ಲ್ಲ ಅಂದ್ರೆ ಬೈಕೋಬೇಡಿ
ಖುಷಿ: ಏ ಇಲ್ಲ ನೀವು ಬರೆದ್ರೆ ಚೆನ್ನಾಗಿರುತ್ತೆ
ವೇದ್: ಸರಿ ಆಯ್ತು
ತಗೋಳಿ ಸಿಂಪಲ್ಲಾಗ್ ಇದೆ ನೋಡಿ ಇಸ್ಟ ಆಗುತ್ತಾ

ನನ್ನ ಕಲ್ಪನಾ ಲೋಕದ ಸುಂದರಿಯೆ
ನಿನ್ನ ಗುಳಿಕೆನ್ನೆಗೆ ನಾ ಸೋತಿರುವೇನು
ನಿನಗಾಗಿ ಸಜ್ಜಾಗಿದೆ ನನ್ನ ಪ್ರೇಮ ವೇದಿಕೆ
ನನ್ನ ಹೃದಯದ ಅರಮನೆಯಲ್ಲಿ
ಆದಷ್ಟು ಬೇಗ ಬಂದು ಸೇರು ನೀ
ನಿನಗಾಗಿ ಕಾಯತ್ತಿರುವೆ ನಾ ಅಲ್ಲಿ.

ಖುಷಿ: ವೇದ್ really I like this lines so heart touching ಯಾರನ್ನು ನೆನಪಿಸಿಕೊಂಡು ಬರೆದದ್ದು
ವೇದ್: ಯಾರನ್ನ ಯಾಕೆ ನೆನಪಿಸಿಕೊಬೇಕು ನೀವೇ ಇದ್ದೀರಲ್ಲ ನಮ್ಮುಡುಗಿ ನಿಮ್ನ ನೆನಪಿಸಿಕೊಂಡೆ ಬರೆದದ್ದು
ಖುಷಿ: thank you it's mean a lot
ವೇದ್: ಸರಿ ಖುಷಿ time ಆಯ್ತು ನೋಡ್ತೀನಿ ಆದ್ರೆ ಸಂಜೆ ಕಾಲ್ ಮಾಡ್ತೀನಿ
ಖುಷಿ: ಸರಿ ವೇದ್ bye ಹುಷಾರು
ಎರಡು ದಿನದ ನಂತರ
ಖುಷಿ: ಏನ್ ಸಾಹಿತಿಗಳೇ ಫುಲ್ ಬ್ಯುಸಿ ಆಗಿದ್ದಿರ.
ವೇದ್: ಸ್ವಲ್ಪ ಕೆಲ್ಸ ಇತ್ತು.
ಖುಷಿ: ಏನೋ ಇದೆ ನೀನು ಈ ರೀತಿ ಡಲ್ ವಾಯ್ಸ್. ಏನಾಯ್ತು ಹೇಳು
ವೇದ್: ಏನಿಲ್ಲ ಖುಷಿ ನೆನ್ನೆ ಸ್ಪರ್ಧೆಯಲ್ಲಿ ಅಟೆಂಡ್ ಮಾಡದೆ ಸೋತು ಬಂದಿದ್ದಕ್ಕೆ ನಮ್ಮ ಸರ್ ಬೈದ್ರು ಲೈಕ್ ಒಂದು ನಂಬಿಕೆ ಇತ್ತು ನನ್ ಮೇಲೆ. ಆದರೆ ನಾನು ಉಳಿಸಿಕೊಂಡಿಲ್ಲ ಸ್ವಲ್ಪ ಬೇಜಾರು.
ಖುಷಿ: ನೋಡು ವೇದ್ ಆಗಿದ್ದು ಆಯ್ತು ಅದನ್ನ ಮತ್ತೆ ಸರಿ ಮಾಡೋಕೆ ಆಗಲ್ಲ ಅಲ್ವಾ. ಹಾಗಂತ ನೀನು ಸುಮ್ನೆ ಕೂತ್ಕೋ ಬೇಡ ನೀನು ಏನು ಅಚೀವ್ಮೆಂಟ್ ಮಾಡಬೇಕು ಅಂದುಕೊಂಡಿದ್ದೀಯಾ ಅದನ್ನು ಮಾಡಿ ತೋರಿಸು ಆದರೆ ಅವರು ನೋಡ್ಲಿ ಇವ್ರ್ ನೋಡ್ಲಿ ಅಂತ ಮಾಡಬೇಡ ನಿನ್ನ ಸಾಧನೆನೇ ಅವರು ನೋಡೋ ಹಾಗೆ ಮಾಡು don't worry be cool man.
ವೇದ್: ಸರಿ ಖುಷಿ ಪಕ್ಕಾ ಸಾಧನೆ ಮಾಡೇ ಮಾಡ್ತೀನಿ ಅದು ಸಾಹಿತ್ಯದಲ್ಲೆ
ಖುಷಿ: that's my boy
ವೇದ್: ನಿನ್ನ ನೋಡಬೇಕು ಯಾವಾಗ ಸಿಕ್ತಿಯಾ
ಖುಷಿ: ಅಷ್ಟೇ ತಾನೇ ನಾಳೆ ಸಿಗೋಣ ಬಿಡು ಆದರೆ ನಾನು ಮೊದಲು ಮೀಟ್ ಆಗಿದ್ದ ಸಾಹಿತ್ಯ ಆಗಿದ್ದರೆ ಮಾತ್ರ
ವೇದ್: ಸರಿ ನಮ್ಮ ಆಯ್ತು
ಖುಷಿ: ನಾಳೆ ಸಿಗೋಣ ಬೈ
ಮರು ದಿನ ಖುಷಿ ವೇದ್ ಹೇಳಿದ ಜಾಗದಲ್ಲಿ ಕಾಯುತ್ತಿದ್ದಳು.
ವೇದ್: ಹಾಯ್ ಖುಷಿ ಸಾರಿ ತುಂಬ ಲೇಟಾಗಿ ಬಂದೆ.
ಖುಷಿ: ಏನ್ ಇಲ್ಲ ವೇದ್ ನಾನು ಈಗ ಜಸ್ಟ್ ಬಂದೆ ಐದು ನಿಮಿಷ ಆಯ್ತು ಅಷ್ಟೇ. ಸರಿ ಆಯ್ತು ಈಗ ಎಲ್ಲಿಗ್ ಹೋಗೋಣ.
ವೇದ್: ಇಲ್ಲೇ ಒಂದು ಟೆಂಪಲ್ ಇದೆ ಹೋಗೋಣ
ಖುಷಿ: ಅಲ್ಲ ವೇದ್ ಏನೋ ಹೇಳ್ಬೇಕು ಅಂದು ಈಗ ಟೆಂಪಲ್ ಅಂತಿದ್ಯ
ವೇದ್: ಹೌದು ಆ ಪವಿತ್ರ ಜಾಗದಲ್ಲಿ ಹೇಳೋಣ ಅಂತ
ಖುಷಿ:ಸರಿ ಬಾ ( ಇಬ್ಬರು ಹೋಗುವರು)
ವೇದ್:ಕಣ್ಣು ಮುಚ್ಚು
ಖುಷಿ: ಸರಿ ಆಯ್ತು
ವೇದ್: (ನಮ್ಮ ಸಂಸ್ಕೃತಿಯ ರೀತಿ ಮಂಡಿ ಊರಿ ಸೀರೆ ಬಲೆ ಹೂ ಕೊಟ್ಟು) ನಾನು ನಿನ್ನ ಪ್ರೀತಿಸ್ತೀನಿ ಮುಂದೆ ಮದುವೆ ಆಗ್ಬೇಕು ಅಂಕೊಂಡಿದಿನಿ ಹಾಗೆ ನನ್ನ ಮಕ್ಳಿಗೆ ನೀನೇ ತಾಯಿ ಆಗ್ಬೇಕು.
ಖುಷಿಗೆ:ಆಶ್ಚರ್ಯದಿಂದ ಖುಷಿಯೂ ಸೇರಿ ಇಸ್ಟ ಇದ್ದರೂ ಬೇಕು ಅಂತಲೇ .ವೇದ್ ಸ್ವಲ್ಪ ಸಮಯ ಬೇಕು
ವೇದ್: ಸರಿ ಸಂಜೆ ಹೇಳು ಎಂದು ಹೊರಟ
ಕೆಲ ದಿನಗಳ ಕಾಲ ಖುಷಿ ವೇದ್ ಗೆ ತುಂಬ ಸತಾಯಿಸಿದಾಗ ವೇದ್ ಸಹಿಸಲಾಗದೆ. ಖುಷಿಗೆ ಕಾಲ್ ಮಾಡಿ
ವೇದ್: ನೋಡು ಖುಷಿ ನೀನು ಏನೇ ಉತ್ತರ ಕೊಟ್ಟರು ಒಪ್ಕೊಳ್ತೀನಿ. ನಿನಗೆ ಇಷ್ಟ ಇದ್ರೆ ಇದೇ ಅನ್ನು ಇಲ್ಲ ಅಂದ್ರೆ ಪರವಾಗಿಲ್ಲ. ಇದೇ ಒಂದು ಕಾರಣದಿಂದ ಇಬ್ಬರ ಸಮಯ ವ್ಯರ್ಥ ಆಗಬಾರದು.
ಖುಷಿ :(ವೇದ್ ನ ಮಾತು ಕೇಳಿ ಒಳಗೆ ನಗುತ್ತ) ನೋಡು ವೇದ್ ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಕ್ತಾಳೆ ಡೋಂಟ್ ವರಿ
ವೇದ್: ನೀನೆ ಇಲ್ಲದ ಮೇಲೆ ಒಳ್ಳೆ ಹುಡುಗಿ ಯಾಕ್ ಬೇಕು (ಕಾಲ್ ಕಟ್ ಮಾಡಿದ)
ಮತ್ತೆ ಖುಷಿ ಕಾಲ್ ಮಾಡಿದ ಕಟ್ ಮಾಡಿ ಕೊನೆಗೆ ಪಿಕ್ ಮಾಡಿದ
ಖುಷಿ: ಯಾಕ್ ವೇದ್ ನನ್ ಮೇಲೆ ಕೋಪನ
ವೇದ್: ಕೋಪ ಗೀಪಾ ಏನು ಇಲ್ಲ ಇವಾಗ ಕಾಲ್ ಮಾಡಿದ ವಿಷಯ ಏನು
ಖುಷಿ: ಅದೆ ಹೇಳಲು ಕಾಲ್ ಮಾಡಿದ್ರೆ ಯಾಕೋ ಸಾಹೇಬ್ರು ಕಟ್ ಮಾಡ್ತಿದ್ರಿ
ವೇದ್: ಸರಿ ಹೇಳು
ಖುಷಿ:ಅದೆ ಎರಡು ದಿನದ ಹಿಂದೆ ನೀನು ಏನು ಕೇಳಿದೆ ನನ್ನತ್ರ
ವೇದ್: ಅದೆಲ್ಲ ಯಾಕೆ ಇವಾಗ
ಖುಷಿ: ಹೇಳು ಅಂದ್ರೆ ಹೇಳಬೇಕಪ್ಪ ಸುಮ್ನೆ
ವೇದ್:ಖುಷಿ ಪ್ಲೀಸ್ ಯಾಕ್ ಈಗ ಅದು
ಖುಷಿ: ಸರಿ ನಾನೇ ಕೇಳ್ತೀನಿ ನಿನ್ ಹೇಳು
ವೇದ್: ಏನು
ಖುಷಿ: ನನ್ನ ಮದುವೆ ಆಗ್ತೀಯಾ ನಿನ್ ಮಕ್ಳಿಗೆ ತಾಯಿ ಆಗ್ತೀನಿ
ವೇದ್: ನಿಜಾನಾ ಖುಷಿ
ಖುಷಿ: ಹೌದು ಸಾಹಿತಿಗಳೇ ಈಗ ಏನ್ ಒಪ್ಕೋತೀರಾ ಇಲ್ವಾ
ವೇದ್: ಆಯ್ತು i love you ಖುಷಿ
ಖುಷಿ: ಅಪ್ಪ ಕೊನೆಗೂ ಹೇಳ್ದ i love u too ವೇದ್
ವೇದ್ ತನ್ನ ಗೆಳೆಯರಿಗೆ ಇದೆನಪ್ಪ ನನ್ನ ಖುಷಿಯ ಒಲವಿನ ಕಥೆ ಎಂದು ಹೇಳಿದ.