Click here to Download MyLang App

ಒಂದು ಸಿನೆಮಾದ ಕಥೆ ... - ಬರೆದವರು : ಸಂಭ್ರಮ ಕುಲಕರ್ಣಿ | ಹಾರರ್

ಹಲೋ ಗಾಯ್ಸ್,.... ನಾನ್ ನಿಮ್ಗೆ ಇವತ್ತು ಒಂದ್ ಸಕತ್ ಸ್ಟೋರಿ ಒಂದನ್ನ ಹೇಳ್ತಾಯಿದಿನಿ.. ಈ ಸಿನೆಮಾದಲ್ಲಿ ಒಂದ್ ಟ್ವಿಸ್ಟ್, ಒಂದ್ ಸಸ್ಪೆನ್ಸ್, ಬರೀ ಅಡ್ವೆಂಚರ್ಸ್ಗಳೇ ತುಂಬಿರುವ ಚಿತ್ರ.

“ನಿಮಗೆ ಆತ್ಮವಿಶ್ವಾಸ ಇದ್ದಾಗ, ನಿಮಗೆ ಸಾಕಷ್ಟು ಆನಂದವಿರುತ್ತದೆ. ಮತ್ತು ನೀವು ಆನಂದಿಸಿದಾಗ, ನೀವು ಅದ್ಭುತ ಕೆಲಸಗಳನ್ನು ಮಾಡಬಹುದು.”

ನಾನು ಈ ಮೇಲಿನ ವ್ಯಾಕ್ಯವನ್ನು ಯಾಕೆ ಹೇಳಿದೆನೆಂದರೆ ಈ ಲೇಖನದಲ್ಲಿ ನಮ್ಮಲ್ಲಿನ ಆತ್ಮವಿಶ್ವಾಸವು ಹೇಗೆಲ್ಲಾ ಕೆಲಸ ಮಾಡುತ್ತದೆ ಎಂಬುದನ್ನು ನೀವು ಈ ಕೆಳಗಿನ ಲೇಖನದಿಂದ ತಿಳಿಯಬಹುದು...

ಒಬ್ಬ ಹುಡುಗ ಮನೇಲಿ ಕಾಲಕಳಿತಾಯಿರ್ತಾನೆ. ಅವಂಗೆ ಒಂದು ಸಿನೆಮಾ ನೋದಬೇಕು ಅಂತ ಆಸೆ ಇರತ್ತೆ. ಆ ಸಿನೆಮಾನ ನೋಡಿದವರು ಒಂದು ವಾರದವರೆಗೆ ಮಾತ್ರ ಬದುಕಿರುತ್ತಾರೆ. ಇವನಿಗೆ ಅದೇ ಸಿನೆಮಾನ ನೋಡ್ಬೇಕು ಅಂತ ಆಸೆ ಇರುತ್ತೆ. ಇದನ್ನ ತನ್ನ ‘Friends’ ಹತ್ರ ಹೋಗಿ ಇವತ್ತು ರಾತ್ರಿ ಒಂದು ‘Party’ ಮಾಡೋಣ ಎಂದು ಹೇಳುತ್ತಾನೆ. ಆಗ ಅವನ ಗೆಳೆಯರು ಅದಕ್ಕೊಪ್ಪುತ್ತಾರೆ. ರಾತ್ರಿ ಆಗುತ್ತೆ ಅವರೆಲ್ಲ ‘Party’ ಮಾಡೋಕೆ ಇವನ ಮನೆಗೆ ಬರ್ತಾರೆ. ಆಗ ಆ ಹುಡುಗ ಅವರಿಗೆಲ್ಲ ಈ ಸಿನೆಮಾದ ಬಗ್ಗೆ ಹೇಳುತ್ತಾನೆ. ಅದಕ್ಕೆ ಗೆಳೆಯರು ಒಪ್ಪುವುದಿಲ್ಲ ‘ಬೇಡ ಕಣೋ ಈ ಸಿನೆಮಾನ ನೋಡ್ದವ್ರೆಲ್ಲ ಒಂದೇ ವಾರದ ಒಳಗೆ ಸಾಯ್ತಾರೆ’ ಎಂದು ಮುನ್ಸುಚನೆಯನ್ನು ಕೊಡುತ್ತಾರೆ. ಆದ್ರೆ ಇವ್ನು ಕೇಳೋದೇ ಇಲ್ಲ. ಆತನ ಗೆಳೆಯರೆಲ್ಲ ಸರಿ ಎನ್ನುತ್ತಾರೆ. ಮತ್ತು ಆ ಸಿನೇಮಾನ ನೋಡ್ತಾರೆ. ಆ ಸಿನೆಮಾನ ರಾತ್ರಿ ಹೊತ್ತಲ್ಲೇ ನೋಡ್ಬೇಕು ಇಲ್ಲಾಂದ್ರೆ ಯಾರಿಗೂ ಆ ಸಿನೆಮಾನ ನೋಡೋಕಾಗಲ್ಲ. ಹೀಗಾಗಿ ಅವ್ರೆಲ್ರೂ ರಾತ್ರಿ ಆಗೋವರೆಗೂ ಕಾಯ್ತಾರೆ. ರಾತ್ರಿ ಆಗುತ್ತೆ ಆಗ ಸಿನೆಮಾನ ನೋಡೊಕ್ ಹೋಗ್ತಾರೆ. ಆದ್ರೆ ಅವ್ರು ಸಿನೆಮಾಗೆ ಹೊಗೋ ಮುಂಚೆ ಎಲರಿಗೂ ಆ ಸಿನೆಮಾದ ಒಂದು ಆಕೃತಿ ಬಂದು ಎಲ್ಲರಿಗೂ ಒಂದು ಸಣ್ಣ ಟೆಸ್ಟ್ ಕೊಡುತ್ತೆ. ಅದು ನಿಮ್ಮಲ್ಲಿ ಯಾರಿಗೆ ತುಂಬಾನೆ ‘ಗೊತ್ತಿಲ್ಲ’ದ ಸಿನೆಮಾ ಬಗ್ಗೆ ಗೊತ್ತು ಎಂದು ಕೇಳುತ್ತೆ. ಆಗ ಎಲ್ರೂ ಈ ಹುಡುಗನನ್ನ ನೋಡ್ತಾರೆ. ಆಗ ಆ ಆಕೃತಿ ಈ ಹುಡುಗನಿಗೆ ನೀನು ಏನೂ ಹೇಳಬಾರದು ಈ ಕಥೆಯ ಬಗ್ಗೆ, ಒಂದು ವೇಳೆ ಹೇಳಿದರೆ ನಿನ್ನ ಪ್ರಾಣಕ್ಕೆ ಕುತ್ತು ಬರುತ್ತೆ ಎಂದು ಕಣ್ಸನ್ನೆಯಿಂದ ಹೇಳುತ್ತೆ. ಅದಕ್ಕೆ ಆತ ಸುಮ್ಮನೆ ಇರುತ್ತಾನೆ.

ನಂತರ ಆತ ‘ಗೊತ್ತಿಲ್ಲ’ ಎಂದು ಹೇಳುತ್ತಾನೆ.

ಆಗ ಆ ಸಿನೆಮಾನ ನೋಡಲು ‘ಗೊತ್ತಿಲ್ಲ’ ಸಿನೆಮಾದಲ್ಲಿರುವ ಪಾತ್ರ ಇವರೆಲ್ಲರನ್ನು ‘ಗೊತ್ತಿಲ್ಲ’ ಸಿನೆಮಾ ನೋಡಲು ಬಿಡುತ್ತದೆ. ಆಗ ಆ ಸಿನೆಮಾನ ಎಲ್ಲ ಗೆಳೆಯರು ಆ ಸಿನೆಮಾ ನ ನೋಡುತ್ತಾರೆ. ಮತ್ತು ಸಿನೆಮಾ ನೋಡಿ ಮನೆಗೆ ಬರುತ್ತಾರೆ. ಎಲ್ರಿಗೂ ಈಗ ತುಂಬಾ ಭಯ ಯಾಕಂದ್ರೆ ‘ಗೊತ್ತಿಲ್ಲ’ ಸಿನೆಮಾ ನೋಡಿದವರು ಗೊತ್ತಿಲ್ಲದೆಯೇ ನಿಗೂಢವಾಗಿ ಸಾವನ್ನಪ್ಪುತ್ತಿರುತ್ತಾರೆ.

ನಮ್ಮ ಕೌಂಟ್ಡೌನ್ ಯಾವಾಗ ಮುಗಿಯುತ್ತೋ ಎಂದು ಎಲ್ಲ್ರಿಗು ಭಯ ಶುರುವಾಗುತ್ತೆ. ಆದ್ರೆ ಇದರಲ್ಲಿ ಒಂದು ಸಸ್ಪೆನ್ಸ್. ಆ ಸಸ್ಪೆನ್ಸ್ ನಿಮಗೇ ಮುಂದೆ ಓದ್ತಾ ಓದ್ತಾ ಹೋದಂಗೆ ಸಿಕ್ಕತ್ತೆ. ಆ ಸಿನೆಮಾ ನೋಡ್ದವ್ರರಲ್ಲಿ ಒಬ್ಬರಿಗೆ ಹಾರ್ಟ್ ಸಮಸ್ಯೆ ಇರತ್ತೆ. ಅವ್ರು ಭಯದಲ್ಲಿ ನಡುಗಿ ನಡುಗಿ ಸಾಯ್ತಾರೆ,.... . ಅವ್ರ ಹಾಗೇ ಯಾರ್ಯಾರು ಆ ‘ಗೊತಿಲ್ಲ’ ಸಿನೆಮಾವನ್ನು ನೋಡಿರುತ್ತಾರೋ ಅವ್ರಿಗೆಲ್ಲ ಒಂದಲ್ಲ ಒಂದು ಸಮಸ್ಯೆ ಇರುತ್ತೆ. ಆದ್ರೆ ಒಂದು ‘Twist n suspense’ ಅದು ಆ ಸಿನೆಮಾನ ನೋಡ್ಬೇಕು ಅನ್ನೋರು ‘Medical checkup’ನ ಮಾಡಿಸ್ಕೊಳ್ಬೇಕು!!!.. ಯಾಕಂದ್ರೆ ಅದು ಒಂದು ‘Horror Movie’. ಇಲ್ಲಾಂದ್ರೆ ಆ ಸಿನೆಮಾ ನೋಡುಗರಿಗೆ ‘ನಿಜ ಜೀವನ’ ಹಾಗೂ ‘ರಂಗ ಜೀವನ’ದ ವ್ಯತ್ಯಾಸ ಗೊತ್ತಿರಬೇಕು. ಅಂಥವರು ಮಾತ್ರ ನೋಡಬೇಕು ಎಂದು ಒಂದು ನಿಯಮ ಇರತ್ತೆ. ಆ ಹುಡುಗನ ಗೆಳೆಯರಲ್ಲಿ ಕೆಲವರು ಆ ಯಾವ ನಿಯಮಗಳನ್ನೂ ಪಾಲಿಸಿರುವುದಿಲ್ಲ. ಅವರ ಪ್ರಕಾರ ಇದೊಂದು ಸಿನೆಮಾ ಆದರೆ ನಿಜಾನೇ ಬೇರೆ. ಹೀಗೆ ಆ ಸಿನೆಮಾನ ನೋಡಿ ಭಯದಲ್ಲಿ ಒಂದು ರಾತ್ರಿಯನ್ನು ಕಳೆಯುತ್ತಾರೆ. ಆದ್ರೆ ಅವ್ರಿಗೆ ಏನೂ ಆಗುವುದಿಲ್ಲ. ಯಾಕಂದ್ರೆ ಅವ್ರು ‘Medically Fit’ಆಗಿರ್ತಾರೆ. ಮತ್ತು ಅವರಲ್ಲಿ ಎಷ್ಟೋ ಜನರ ತಂದೆನೋ ತಾಯಿನೋ ಇಲ್ಲ ಸಂಬಂಧಿಕರೋ ಸಿನಿ ಜಗತ್ತಿನಲ್ಲಿರುತ್ತಾರೆ. ಹೀಗಾಗಿ ಅವ್ರಿಗೆ ಸಿನಿ ಜಗತ್ತು ಮತ್ತು ನಿಜ ಜಗತ್ತಿನ ಬಗ್ಗೆ ಅರಿವು ಇರುತ್ತೆ. ಹಾಗೂ ಅವರಲ್ಲಿ ‘Self confidence’ ತುಂಬಾನೆ ಇರುತ್ತೆ. ಹಾಗಾಗಿ ಅವ್ರಿಗೆ ಏನೂ ಆಗಲ್ಲ. ಮತ್ತು ಅವ್ರು ಇದೆಲ್ಲ ನಮ್ಮ ‘Luck’ ಎಂದು ಸುಮ್ಮನಾಗುತ್ತಾರೆ. ಆ ಹುಡುಗನಿಗೆ ಮಾತ್ರ ಯಾವ ಕನಸೂ ಬೀಳುವುದಿಲ್ಲ ಆ ಗೊತ್ತಿಲ್ಲದ ಬಗ್ಗೆ, ಹಾಗೇ ಅವನು ಆ ಚಿತ್ರದಲ್ಲಿ ಬರುವ ಪಾತ್ರದ ಬಗ್ಗೆ ಮತ್ತು ಆ ಪಾತ್ರದ ಹೆಸರನ್ನೇ ಮರೆತಿರುತ್ತಾನೆ.

ಮರುದಿನ ಆ ಹುಡುಗನ ಗೆಳೆಯರೆಲ್ಲ ಬೆಳಗ್ಗೆ ಬೇಗನೆ ಏಳುತ್ತಾರೆ ಮತ್ತು ಅವರಲ್ಲಿ ಕಲವರು ನಿಧಾನವಾಗಿ ಸೂರ್ಯ ಹುಟ್ಟಿದನಂತರ ಏಳುತ್ತಾರೆ, ಆದ್ರೆ ಅವರಲ್ಲಿ ಕೆಲವರು ಏಳುವುದೇ ಇಲ್ಲ. ತದನಂತರ ಆ ಗೆಳೆಯರಿಗೆ ಗೊತ್ತಾಗುತ್ತದೆ ಅದೇನೆಂದರೆ ಅಲ್ಲಿ ಮಲಗಿರುವ ಯಾರೂ ಕೂಡ ಉಸಿರಾಡುತ್ತಿಲ್ಲ! ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಆದ್ರೆ ಆ ಮಲಗಿರುವವರಿಗೆಲ್ಲ ಒಂದು ವಿಚಿತ್ರ ಖಾಯಿಲೆ ಬಂದು ಅವರೆಲ್ಲ ಅಲ್ಲೇ ಸತ್ತುಹೋಗುತ್ತಾರೆ. ಈ ವಿಷಯ ಆಸ್ಪತ್ರೆಗೆ ಹೋದ ನಂತರ ತಿಳಿಯುತ್ತದೆ.

ಆ ಸಿನೆಮಾ ನೋಡಿದವರು ತಮ್ಮ ಕುಟುಂಬದಿಂದಲೇ ಬೇರೆಯಾಗುತ್ತಾರೆ ಇಲ್ಲವೇ ಒಂದು ತಂಪಾದ ಸುಸಜ್ಜಿತವಾದ ಒಂದು ರೂಂ ಒಳಗಡೆ ಬಂಧಿಯಾಗುತ್ತಾರೆ ಮತ್ತು ಅಲ್ಲಿ ತುಂಬಾ ತಂಪು ಇರುವುದರಿಂದ ಅವರೆಲ್ಲ ಅಲ್ಲಿಯೇ ಸಾವನ್ನಪ್ಪುತ್ತಾರೆ. ಅದು ಹೇಗೆಂದರೆ ಆ ಸಿನೆಮಾನ ಯಾರು ನೋಡಬೇಕೆಂದುಕೊಳ್ಳುತ್ತಾರೋ ಮತ್ತು ನೋಡುವುದಿಲ್ಲವೋ ಅವರಿಗೂ ಸಹ ಇಂತಹ ಕೆಲ ಸಮಸ್ಯೆಗಳು ಎದುರಾಗುತ್ತವೆ.

ಒಂದು ‘ಕಾಲ್ಪನಿ’ಕ ದೇಶದ ಕಥೆ.

ಭಾಗ-01.

ಒಮ್ಮೆ ಒಬ್ಬ ಹುಡುಗ ಒಂದು ‘Tour’ ನ ಮುಗೊಸ್ಕೊಂಡು ತನ್ನ ಗೆಳೆಯರ ಜೊತೆ ಬರ್ತಿರ್ತಾನೆ. ಅಂಥ ಸಮಯದಲ್ಲಿ ಅವನ ‘Bike’ ಅಚಾನಕ್ಕಾಗಿ ನಿಂತುಬಿಡುತ್ತದೆ. ಅದಕ್ಕೆ ಅವನು ‘ನಾನು ನಾಳೆ ಊರಿಗೆ ಬರುತ್ತೇನೆ ಇವತ್ತು ಇಲ್ಲೇ ಯಾರಾದರು ‘Mechanic’ ಗಳಿರಬಹುದೇ ಎಂದು ನೋಡುತ್ತೇನೆ ನೀವು ಹೋಗಿಬಿಡಿ ಎಂದು ಸಲಹೆ ಕೊಡುತ್ತಾನೆ ಆದ್ರೆ ಅವರಲ್ಲಿ ಒಬ್ಬ ನಾನು ನಿನ್ನ ಜೊತೆಗೆ ಬರುತ್ತೇನೆ ಎಂದು ಹೇಳಿ ಉಳಿದವರನ್ನು ಕಳಿಸಿಬಿಡುತ್ತಾನೆ. ನಂತರ ಅಲ್ಲಿಯೇ ಒಂದು ‘Mechanic shop’ ಇರುವುದನ್ನು ನೋಡಿ ಆ ಇಬ್ಬರು ಗೆಳೆಯರಿಗೆತುಂಬಾ ಸಂತೋಷವಾಗುತ್ತದೆ. ಅವರಿಬ್ಬರೂ ಆ ‘mechanic shop’ ಗೆ ಹೋಗಿ ‘Bike’ ನ ರಿಪೇರಿ ಮಾಡಿಸಿಕೊಂಡು ಬರಬೇಕಾದರೆ ತುಂಬಾ ಕತ್ತಲಾಗುತ್ತದೆ ಆದ್ದರಿಂದ ಅವರು ಅಲ್ಲಿಯೇ ಒಂದು ಮನೆಯಲ್ಲಿ ಉಳಿದುಕೊಂಡುಬಿಡುತ್ತಾರೆ. ಮತ್ತು ಅವರು ಬೆಳಗ್ಗೆ ಬೇಗ ಹೋದರಾಯಿತೆಂದು ವಿಚಾರ ಮಾಡಿ ಅವರಿಬ್ಬರೂ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ನಂತರ ಬೆಳಗಾಗುತ್ತದೆ, ಅವರಿಬ್ಬಾರೂ ತಮ್ಮ ಪ್ರಯಾಣವನ್ನು ಮುಂದುವರೆಸುತ್ತಾರೆ. ಹೀಗೆ ಹೋಗುವಾಗ ಆ ಹುಡುಗ ತನ್ನ ‘Smart watch’ನ ನೋಡುತ್ತಾನೆ. ಆದ್ರೆ ಅದು ಇನ್ನೂ ಬೆಳಕೇ ಆಗಿಲ್ಲವೆಂದು ತೋರಿಸುತ್ತದೆ. ಹೀಗಾಗಿ ಆತ ತನ್ನ ‘Smart watch’ ಕೆಟ್ಟಿರಬಹುದೆಂದು ಭಾವಿಸಿ ತನ್ನ ಗೆಳೆಯನಿಗೆ ‘Time’ ಎಷ್ಟು? ಎಂದು ಕೇಳುತ್ತಾನೆ. ಆಗ ಆತನ ಸ್ನೇಹಿತ ತನ್ನ ‘watch’ನ ತೆಗೆದು ನೋಡುತ್ತಾನೆ ಅದರಲ್ಲೂ ಸಹ ಇನ್ನೂ 11:00 ಗಂಟೆ ರಾತ್ರಿ ಎಂದು ತೋರಿಸುತ್ತದೆ. ಆದ್ರೆ ಹೊರಗೆ ನೋಡಿದರೆ ಆಗಲೇ ಬೆಳಕಾಗಿರುತ್ತದೆ. ಆಗ ಇವರಿಬ್ಬರಿಗೂ ಅರ್ಥವಾಗುತ್ತದೆ ಅದೇನೆಂದರೆ ನಾವಿಬ್ಬರೂ ‘ಟೈಮ್ ಟ್ರಾವೆಲ್’ ಮಾಡಿದ್ದೇವೆ ಎಂದು. ಆಗ ಅವನು ಒಬ್ಬ ದಾರಿ ಹೋಕನನ್ನು ಈ ಮೊದಲೇ ನೋಡಿರ್ತಾನೆ. ಆದ್ರೆ ಏನ್ಮಾಡೋದು ಸೋ ಆ ಗೆಳೆಯರು ಅವನ ಹತ್ತಿರ ತಮ್ಮ ಪರಿಚಯವನ್ನು ಮಾಡ್ಕೋಳ್ತಾರೆ ಮತ್ತು ಅವನ ಮನೆಗೆ ಬಂದು ಅಲ್ಲಿಯೇ ಇವತ್ತೊಂದು ದಿನ ಇರೋಣ ಎಂದು ಒಂದು ನಿರ್ಣಯವನ್ನು ತೆಗೋತಾರೆ. ಆದರೆ ಇವ್ನಿಗೆ ಅನ್ಸುತ್ತೆ ‘ನಾವು ಸಮಯದಲ್ಲಿ ಸಂಚರಿಸುತ್ತಿದ್ದೇವೆ ಎಂದು’ ಇದನ್ನು ಅವನು ತನ್ನ ಗೆಳೆಯನ ಹತ್ತಿರ ಹೇಳುತ್ತಾನೆ ಆದ್ರೆ ಅವನ ಗೆಳೆಯ ನಂಬೋದೇ ಇಲ್ಲ ಅದಕ್ಕೆ ‘ನೀನು ಸುಮ್ನೆ ತಮಾಷೆ ಮಾಡ್ಬೇಡ ಕಣೋ’ ಎಂದು ಹೇಳುತ್ತಾನೆ. ಹೀಗೆ ತನ್ನ ಗೆಳೆಯನಿಗೆ ಒಂದು ‘Call’ಮಾಡ್ತಾನೆ. ಆದ್ರೆ ಆತ ‘Call’ನ ‘Receive’ ಮಾಡೋದಿಲ್ಲ ಹಾಗಾಗಿ ಆತ ತನ್ನ ಅಪ್ಪನಿಗೆ ‘Call’ ಮಾಡ್ತಾನೆ ಆದ್ರೆ ಅದು ಬೇರೆ ಯಾರಿಗೋ ಹೋಗುತ್ತೆ ಮತ್ತು ಅವರು ‘Wrong number’ ಎಂದು ‘Cut’ ಮಾಡಿಬಿಡುತ್ತಾರೆ.

ಈಗ ಅವನು ಮತ್ತು ಅವನ ಗೆಳೆಯ ಇಬ್ಬರೂ ‘ಸಮಯದಲ್ಲಿ ಬಂಧಿ’ ಅಥವಾ ‘Time Loop’ನಲ್ಲಿ ಬಂಧಿಯಾಗಿದ್ದಾರೆ. ಈಗ ಅವ್ನು ಅದೇ ಊರಿನ ಯಜಮಾನನ ಹತ್ತಿರ ಹೋಗಿ ನಡೆದದ್ದೆಲ್ಲಾ ಹೇಳ್ತಾರೆ ಮತ್ತು ಯಜಮಾನನಿಗೆ ತಮ್ಮ ಪರಿಚಯವನ್ನು ಮಾಡಿಕೊಳ್ತಾರೆ ಮತ್ತು ಅವನ ಮನೆಯಲ್ಲಿಯೇ ವಿಶ್ರಾಂತಿ ಮಾಡುತ್ತಿರುತ್ತಾರೆ.ಭಾಗ-02.

ಆಗ ಆ ಹುಡುಗ ತನ್ನ ಮನೆಗೆ ವಾಪಸಾಗಿರುತ್ತಾನೆ ಮತ್ತು ಆತ ತನ್ನ ಮನೆಯವರಿಗೆ ‘ತನ್ನ ಗೆಳೆಯರಿಗೆ’ ತಾನು ‘Time Travel’ ಮಾಡಿದ್ದಾಗಿ ಹೇಳುತ್ತಿರುತ್ತಾನೆ. ಆದ್ರೆ ಅವ್ರ್ಯಾರೂ ಈತನ ಮಾತನ್ನು ನಂಬುವುದೇಇಲ್ಲ. ಹೀಗಾಗಿ ಆತ ತಾನು ‘Time Travel’ ಮಾಡಿದ್ದಾಗಿ ಯಾರಿಗೂ ಹೇಳಿಯೇ ಇಲ್ಲ’ ಎಂದು ತನ್ನ ಸ್ನೇಹಿತರಿಗೆ ಹೇಳುತ್ತಾನೆ ಅಷ್ಟರಲ್ಲೇ ಆತನ ಇನ್ನೊಬ್ಬ ಸ್ನೇಹಿತಕೂಡ ‘Time Travel’ ಮಾಡಿದ್ದಾಗಿ ಕೆಲವು ‘Evidence’ ಗಳನ್ನು ತೋರಿಸುತ್ತಾನೆ. ಆಗ ಈ ಹುಡುಗನ ತಮ್ಮ ತನ್ನ ಅಣ್ಣನ ಹತ್ತಿರ ಬಂದು “ಅಣ್ಣ ನೀನು ನಿಜವಾಗ್ಲೂ ‘Time Travel’ ಮಾಡಿದ್ದಿಯಾ?” ಎಂದು ಕೇಳುತ್ತಾನೆ ಆಗ ಅವನ ಅಣ್ಣ ಹೌದು ಎಂದು ಹೇಳುತ್ತಾನೆ. ಆಗ ಆತನ ಗೆಳೆಯರು ‘Tour’ ಗೆ ಎಲ್ಲಿ ಹೋಗೋಣ? ಎಂದು ಮಾತನಾಡಿಕೊಳ್ತಿರ್ತಾರೆ. ಆಗ ಆ ಹುಡುಗನಿಗೆ ‘What’s app’ ನಲ್ಲಿ ‘Message’ ಬರುತ್ತೆ ಅದೇನೆಂದರೆ ‘ನೀನು ನಿನ್ನ ಗೆಳೆಯರೊಂದಿಗೆ ಹೋಗಬೇಡ ಒಂದು ವೇಳೆ ಹೋದರೆ ನಿನ್ನ ಪ್ರಾಣಕ್ಕೇ ಅಪಾಯ’ ಎಂದಿರುತ್ತದೆ. ಅದನ್ನು ನೋಡಿದ ನಂತರ ಅವನಿಗೆ ತುಂಬಾ ಹೆದರಿಕೆಯಾಗಿ ಆತ ಅಲ್ಲಿಯೇ ಇದ್ದ ಒಂದು ‘Police station’ ಗೆ ಹೋಗಿ ಅಲ್ಲಿರುವ ಪೋಲಿಸರಿಗೆ ಈ ‘Message’ ಅನ್ನು ತೋರಿಸಿ ದಯವಿಟ್ಟು ನನ್ನನ್ನು ಕಾಪಾಡಿ ಎಂದು ಹೇಳುತ್ತಾನೆ. ಆಗ ಆ ಪೋಲಿಸರು ಆ ‘Message’ ಯಾರದ್ದೆಂದು ಆ ‘Message’ ನ ನಂಬರಿಗೆ ಒಂದು ‘Call’ ಮಾಡುತ್ತಾರೆ. ಆದ್ರೆ ಆ ನಂಬರ್ ಈಗ ‘Switch off’ ಎಂದು ಗೊತ್ತಾಗುತ್ತದೆ ಪೋಲಿಸರಿಗೆ. ಆಗ ಅವರು ತಮ್ಮ ಊರಿನ ಎಲ್ಲ ‘Police station’ ಗೆ ಆ ಮೆಸ್ಸೆಜನ್ನು ‘Forward’ ಮಾಡುತ್ತಾರೆ. ಆಗ ಅವರಿಗೊಂದು ‘Unknown’ ಕರೆ ಬರುತ್ತದೆ ಮತ್ತು ಆ ಕರೆಯಲ್ಲಿರುವ ವ್ಯಕ್ತಿ ಒಂದು ರೋಬೋ ಥರ ಮಾತನಾಡ್ತಿರ್ತಾನೆ. ಮತ್ತು ಅವನು ನೀವು ಹುಡುಕುತ್ತಿರುವ ವ್ಯಕ್ತಿಯು ನನ್ನ ಹತ್ತಿರ ಇದ್ದಾನೆ ಮತ್ತು ನೀವು ಅವನಿಗಾಗಿ ಹುಡುಕಬೇಡಿ ಒಂದು ವೇಳೆ ನೀವು ಹುಡುಕಲು ಪ್ರಯತ್ನಿಸಿದರೆ ಅವನು ಬದಕುವುದಿಲ್ಲ’ ಎಂದು ಹೇಳಿ ‘Call Cut’ ಮಾಡ್ತಾನೆ. ಆಗ ಆ ‘Unknown’ ವ್ಯಕ್ತಿ ಯಾರೆಂದು ತಿಳಿದುಕೊಳ್ಳುತ್ತಾರೆ ಅವನೊಬ್ಬ ರೊಬೊ ಆ ರೋಬೊನನ್ನು ‘Create’ ಮಾಡಿದವ ಒಬ್ಬ Psychopath’ ಎಂದು. ಈ ವಿಷಯ ಇಡೀ ವಿಶ್ವದಲ್ಲೇ ದೊಡ್ಡ ಸಂಚಲನ ಸೃಷ್ಟಿಸುತ್ತದೆ.ಭಾಗ-03.

ನಾನೀಗ ‘ಭಾಗ 3’ ಬರೆಯಬೇಕೆಂದಿದ್ದೇನೆ. ನಾನು ‘ಭಾಗ-3’ ಬರೆದರೆ ‘Mostly’ ನಿಮಗೆ ‘Confuse’ ಆಗಬಹುದು. ಯಾಕಂದರೆ ‘ಭಾಗ-3’ ಅಂದರೆ ‘ಭಾಗ-01’ ಮತ್ತು ‘ಭಾಗ-02’ ರ ಮಿಶ್ರಣ. ಮತ್ತು ನೀವು ಈ ಮೊದಲೇ ಓದಿರುವಂಥ ಕಥೆಯ ಮಿಶ್ರಣನೂ ಹೌದು.

ಒಮ್ಮೆ ಒಬ್ಬ ಹುಡುಗ ಒಂದು ‘Tour’ಗೆ ತನ್ನ ಗೆಳೆಯರ ಜೊತೆ ಹೋಗಿರ್ತಾನೆ. ಅಲ್ಲಿಯೇ ಒಂದು ‘Contest’ ನಡೆದಿರುತ್ತೆ. ಅದು ಸಿನೆಮಾ ಗೆ ಕಥೆ ಬರೆಯೊ ಒಂದು ಕಥೆಗಾರರ ಸ್ಪರ್ಧೆ.

ಆಗ ಇವನ ಗೆಳೆಯರು ಈ ಹುಡುಗನಿಗೆ ನೀನು ಒಂದು ಸ್ಟೋರಿ ಬರೆ ಎಂದು ಅಡ್ವೈಸ್ ಮಾಡ್ತಾರೆ. ಆಗ ಹುಟ್ಕೊಂಡಿದ್ದೇ ‘ಗೊತ್ತಿಲ್ಲ’. ಈ ಸಿನೆಮಾ ಬರಿ ಅಡ್ವೆಂಚರ್ಸ್ ಹಾಗೂ ಬರೀ ಥ್ರಿಲ್ಲ್ ಗಳೇ ತುಂಬಿರುವ ಒಂದು ಸಿನೆಮಾ. ಹಾಗೆ ಆ ಹುಡುಗ ಈ ಸಿನೆಮಾಕ್ಕೆ ಸ್ಟೋರಿ ಬರೆದ ಮೇಲೆ ಅಲ್ಲಿರುವ ‘Director’ ಹಾಗೂ ‘Producer’ ಗಳಿಗೆ ಕಥೆ ತುಂಬಾನೆ ಹಿಡಿಸುತ್ತೆ ಮತ್ತು ಅವರು ಈ ಸಿನೆಮಾನ ‘Shoot’ ಮಾಡ್ತಾರೆ.

‘Shoot’ ಮಾಡಿದ ನಂತರ ಮೊದಲು ಆ ಸಿನೆಮಾದ ಹೀರೋಗೆ ಮೊದಮೊದಲು ತುಂಬಾನೇ ‘Loss’ ಆಗುತ್ತೆ ನಂತ್ರ ಒಂದು ವಿಚಿತ್ರ ಖಾಯಿಲೆ ಬರುತ್ತೆ. ಆದ್ದರಿಂದ ಹೀರೋ ಮರಣಿಸುತ್ತಾನೆ. ಆದ್ರೆ ಲೇಖಕ(ಹುಡುಗ)ನಿಗೆ ಏನೂ ಆಗುವುದಿಲ್ಲ. ಯಾಕಂದ್ರೆ ಲೇಖಕನಿಗೆ ನಿಜ ಜೀವನ ಹಾಗೂ ರಂಗ ಜೀವನದ ಬಗ್ಗೆ ತುಂಬಾನೆ ತಿಳಿದಿರುತ್ತೆ. ಮತ್ತು ಅವನು ಈ ಮೊದಲೇ ಕೆಲವು ಯಶಸ್ವಿ ಚಿತ್ರಗಳಿಗೆ ಕಥೆಯನ್ನು ಬರೆದಿರುತ್ತಾನೆ ಮತ್ತು ಆ ಚಿತ್ರಗಳನ್ನು ನೋಡಿರುತ್ತಾನೆ. ಆದ್ರೆ ಹೀರೋ ಗೆ ಈ ಸಿನೆಮಾ ತುಂಬಾನೇ ಹೊಸದು.. ಮತ್ತು ತನ್ನ ‘Popularity’ ಯನ್ನು ಹೆಚ್ಚಿಸಿಕೊಳ್ಳಲು ಆತ ಸಿನೆಮಾಕ್ಕೆ ಒಪ್ಪಿಕೊಂಡಿರುತ್ತಾನೆ. ಮತ್ತು ಹೀರೋ ಇದೇ ನಿಜವಾದ ಜೀವನ ಎಂದು ತಿಳಿದಿರುತ್ತಾನೆ. ಆದ್ದರಿಂದಲೇ ಸರ್ಕಾರ ಈ ಸಿನೆಮಾ ನ ನೋಡಲು ಯಾರಿಗೂ ಬಿಡುವುದಿಲ್ಲ. ಮತ್ತು ಒಂದು ನಿಯಮವನ್ನು ಜಾರಿಗೆ ತರತ್ತೆ ಅದು ಯಾರೂ ಕೂಡ ‘ಗೊತ್ತಿಲ್ಲ’ ಸಿನೆಮಾನ ನೋಡಬಾರ್ದು ಒಂದು ವೇಳೆ ನೋಡಿದ್ರೆ ಅವರಿಗೆ ನಿಜ ಜೀವನ ಮತ್ತು ಸಿನಿ ಜಗತ್ತಿನ ಬಗ್ಗೆ ಗೊತ್ತಿರ್ಬೇಕು ಮತ್ತು ಅವ್ರಿಗೆ ಆತ್ಮ ವಿಶ್ವಾಸ ತುಂಬಾನೇ ಇರ್ಬೇಕು. ಆದ್ರೆ ಜನ ಕೇಳ್ತಾರ...

ಅದ್ರಲ್ಲೂ ನಮ್ಮ ದೇಶದ ಜನದ ಬಗ್ಗೆ ನಿಮ್ಗೆ ಗೊತ್ತೇ ಇದೆ. ಸರ್ಕಾರ ಯಾವುದರ ಬಗ್ಗೆ ಬೇಡ ಎಂದು ಹೇಳುತ್ತೋ ಅದನ್ನೇ ಮಾಡ್ತಾರೆ.

ಹೀಗಾಗಿ ತುಂಬಾ ಜನ ಆ ಸಿನೇಮಾನ ನೋಡೋಕೆ ಹೋಗ್ತಾರೆ. ಆದ್ರೆ ಅವ್ರೆಲ್ರೂ ಒಂದಿಲ್ಲಾ ಒಂದು ಖಾಯಿಲೆಗೆ ತುತ್ತಾದವರೇ ಮತ್ತು ಅವ್ರಿಗೆ ನಿಜ ಜೀವನ ಮತ್ತು ಸಿನಿ ಜೀವನದ ಬಗ್ಗೆ ಗೊತ್ತಿರುವುದಿಲ್ಲ. ಹಾಗಾಗೇ ಅವ್ರೆಲ್ರೂ ಒಂದೇ ವಾರ್ದಲ್ಲೇ ಸಾವನ್ನಪ್ಪುತ್ತಾರೆ. ಈ ಎಲ್ಲ ‘Incident’ಗಳು ನಡೆದ ಮೇಲೆ ಎಲ್ರಿಗೂ ‘ಭಯ’ ಶುರುವಾಗುತ್ತೆ.

ನಮ್ಮ ಭಾರತೀಯರು ಸುಮ್ನೆ ಯಾವ್ದಕ್ಕೂ ಭಯ ಪಡಲ್ಲ. ಆದ್ರೆ ಒಮ್ಮೆ ಭಯ ಪಟ್ಟರೆ ಎಲ್ಲ್ರನ್ನೂ ಭಯ ಪಡಿಸ್ತಾರೆ. ಹೀಗಾಗಿ ಎಲ್ರಿಗೂ ತುಂಬಾನೇ ‘ಭಯ’ವಾಯಿತು. ಮತ್ತು ಎಲ್ಲ್ರಿಗೂ ‘Tension’ ಆಯಿತು. ‘ಗೊತ್ತಿಲ್ಲ’ ಸಿನೆಮಾ ನೋಡಿದವರು ‘ಗೊತ್ತಿಲ್ಲ’ದೇ ‘ಗೊಟಕ್’ ಅನ್ನುತ್ತಾರೆ’ ಎನ್ನುವ ವದಂತಿ ಎಲ್ಲೆಡೆ ಹಬ್ಬಿತು.

ಆದ್ರೆ ಆಸಿನೆಮಾ ಮಾತ್ರ ಒಂದು ಶತಮಾನಕ್ಕೂ ಹೆಚ್ಚು ಕಾಲ ಎಲ್ಲ ‘Movie house’ ಗಳಲ್ಲಿ ಓಡಿತು. ಕನ್ನಡದಲ್ಲಿ ಒಂದು ಮಾತಿದೆ ‘ಹೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗಬಹುದು’ ಎಂದು. ಈ ಮಾತನ್ನು ನಮ್ಮ ಭಾರತೀಯ ಜನ ತುಂಬಾನೇ ಉಪಯೋಗಿಸ್ತಾರೆ.

ಈಗ ಆ ಹುಡುಗರು ಈ ಲೇಖಕನ ಮಿತ್ರರು. ಮತ್ತು ನಮ್ಮ ಲೇಖಕರೇ ನಮ್ಮ ಹುಡುಗ. ಆತನಿಗೆ ಈ ಸಿನೆಮಾವನ್ನು ನೋಡಬೇಕೆಂಬ ಹುಚ್ಚು ಆಸೆ ಶುರುವಾಯಿತು. ಆದರೆ ಆತನ ಗೆಳೆಯರು ಒಪ್ಪಿಕೊಳ್ಳಲ್ಲ. ಆದ್ದರಿಂದಲೇ ಅವತ್ತು ರಾತ್ರಿ ಒಂದು ‘Party’ಯನ್ನು ‘Arrange’ ಮಾಡಿರುತ್ತಾನೆ. ಮತ್ತು ಆ ಪಾರ್ಟಿಯಲ್ಲಿ ಅವನು ‘ಗೊತ್ತಿಲ್ಲ’ದ ಬಗ್ಗೆ ಹೇಳುತ್ತಾನೆ. ಮತ್ತು ತನ್ನ ಗೆಳೆಯರಿಗೆ ‘Convince’ ಮಾಡುತ್ತಾನೆ. ಮರುದಿನ ರಾತ್ರಿ ಅವರೆಲ್ಲ ಆ ಸಿನೆಮಾನ ನೋಡಲು ಹೋಗುತ್ತಾರೆ. ಈಗ ಮೊದಲಿನ ‘Twist’ ನಾನು ಮೊದಲೇ ಹೇಳಿದ್ದೆನಲ್ಲ ಹಾಗೆ ಆಗತ್ತೆ. ಆ ಹುಡುಗರಲ್ಲಿ ತುಂಬಾ ಜನರಿಗೆ ಏನಾದರೊಂದು ಸಮಸ್ಯೆ ಇರತ್ತೆ. ಅದೆಂದರೆ ಕೆಲವರಿಗೆ ‘Heart’ ನ ಸಮಸ್ಯೆ ಇರತ್ತೆ ಇನ್ನೂ ಕೆಲವರಿಗೆ ತಲೆನೋವು ಶುರುವಾಗಿರತ್ತೆ ಮತ್ತು ಕೆಲವರಿಗೆ ನಿಜ ಜೀವನ ಮತ್ತು ಸಿನಿ ಜಗತ್ತಿನ ಬಗ್ಗೆ ತಿಳಿದಿರಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳಿರುತ್ತವೆ. ಮತ್ತೆ ಇವರು ಸರ್ಕಾರದ ಅನುಮತಿಯನ್ನು ಪಡೆದಿರುವುದಿಲ್ಲ ಹಾಗೆ ‘ಸಿನೆಮಾ’ ನೋಡಲು ತೆರಳುತ್ತಾರೆ ಮತ್ತೆ ಆ ಸಿನೆಮಾನ ನೋಡಿ ತುಂಬಾ ಭಯ ಪಟ್ಟುಕೊಂಡು ಬರುತ್ತಾರೆ ಅವತ್ತು ರಾತ್ರಿ ಅವ್ರ್ಯಾರಿಗೂ ನಿದ್ದೆನೇ ಬರಲ್ಲ. ಹಾಗೆ ಅವರಲ್ಲಿ ಕೆಲವರು ಈ ಸರ್ಕಾರಿ ನಿಯಮವನ್ನು ಪಾಲಿಸಿರುವುದಿಲ್ಲ ಯಾಕಂದ್ರೆ ಅವರಿಗೆಲ್ಲ ಇದೊಂದು ಬರೀ ಸಿನೆಮಾ. ಹಾಗೇ ಎಲ್ಲ ಈ ಮೊದಲೇ ನೀವು ಓದಿದಂತೆ ಆಗತ್ತೆ. ಅಂದರೆ ಆ ಗೆಳೆಯರು ಹಾಗೆ ಹೆದರಿಕೆಯಿಂದ ಆ ರಾತ್ರಿ ಮಲಗುತ್ತಾರೆ ಮತ್ತು ಬೆಳಗ್ಗೆ ಏಳುತ್ತಾರೆ ಆದ್ರೆ ಇನ್ನೂ ಕೆಲ ಜನ(ಗೆಳೆಯರು) ಏಳುವುದೇ ಇಲ್ಲ. ಅಂದರೆ ಅವರೆಲ್ಲ ತಮ್ಮ ಉಸಿರನ್ನು ನಿಲ್ಲಿಸಿದ್ದಾರೆ!!!...

ಈ ಸಿನೆಮಾ ಒಂದು ‘ನಿಜ’ ಜೀವನದಲ್ಲೂ ತುಂಬಾ ‘ಅಡ್ವೆಂಚರ್’. ಅಂದರೆ ಆ ಸಿನೆಮಾ ನ ಯಾರು ನೋಡಬೇಕೆಂದುಕೊಳ್ಳುತ್ತಾರೋ ಮತ್ತು ನೋಡಿರುವುದಿಲ್ಲವೋ ಅಥವಾ ನೋಡೋಕೆ ಆಗುವುದಿಲ್ಲವೋ ಅಂಥವರು ಮರಣಿಸುತ್ತಾರೆ ಅಥವಾ ಒಂದು ಸುಸಜ್ಜಿತವಾದಂತಹ ಗಾಳಿ ಬೆಳಕಿಗೆ ಅವಕಾಶಾನೆ ಇಲ್ಲದಿರುವ ಒಂದು ರೂಂ ನಲ್ಲಿ ಬಂಧಿಯಾಗುತ್ತಾರೆ ಮತ್ತು ಅವರು ಅಲ್ಲಿಯೇ ಮೃತಪಡುತ್ತಾರೆ. ಅಂದರೆ ನೆಗಡಿ, ಕೆಮ್ಮುಗಳಿಂದ ಬಳಲಿ ಬಳಲಿ ‘Treatment’ ಇಲ್ಲದೆಯೇ ಸಾವನ್ನಪ್ಪುತ್ತಾರೆ. ಹೀಗೆ ಈ ಕಥೆ ಮುಕ್ತಾಯಗೊಳ್ಳುತ್ತದೆ.‘ಕಥೆಯನ್ನು ತಾಳ್ಮೆಯಿಂದ ಓದಿದ್ದಕ್ಕೆ ತುಂಬಾ ಧನ್ಯವಾದಗಳು’