Click here to Download MyLang App

ಇದು ಪ್ರೇಮಿಗಳ ಕಥೆಯಲ್ಲ - ಬರೆದವರು : ಮಹೇಶ್ ಎಸ್ ಎಸ್ | ಸಾಮಾಜಿಕ

"ಅವಲಂಬನೆ ಅನ್ನೋದು ಎಷ್ಟು ಸರಿ?ಅದು ಮಾನಸಿಕವಾಗಿಯಾದರೂ,ದೈಹಿಕವಾಗಿಯಾದರೂ. ಎಲ್ಲಿಯವರೆಗೂ ಸರಿ?ಇದು ಮನಸ್ಸಿನ ದುರ್ಭಲತೆಯಾ? ಇಲ್ಲ ಅವನ ಜೊತೆ ಕಳೆದ ಕ್ಷಣಗಳ ಕಳೆದುಕೊಂಡ ಭಾವದ ಭಯವಾ?ಇದು ಬಿಟ್ಟು ಹೊರಡಲಿಕ್ಕೆ ಆಗದ ವಾಸ್ತವವಾ? what is this?

ಹೌದು ಅರುಣ್ ನ ಜೊತೆ ನನ್ನ ಪ್ರೇಮ ಮೂರು ವರ್ಷ ಸಂಸಾರ ಮಾಡಿಕೊಂಡು ಬಂದಿದೆ.(ನಗು)sorry ಅದು so called ರೇಷ್ಮೆ ಸೀರೆ ಕಚ್ಚೆ ಪಂಚೆ ಉಟ್ಟು ಸಪ್ತಪದಿ ತುಳಿದು so called hundreds of people ಮುಂದೆ ನಡೆದ ದೊಡ್ಡ celebration ಅಲ್ಲ.ಅದು ನಮ್ಮಿಬ್ಬರ ತುಂಟಾಟ, ಅಪ್ಪುಗೆ, ಸಿಟ್ಟು, ಮುತ್ತುಗಳ ವಿನಿಮಯ,ಪರಸ್ಪರ ಸಾಂತ್ವನ ಇವುಗಳ ಸಾಕ್ಷಿಯಾಗಿ ನಡೆದ ಮದುವೆಗಿಂತ ತುಂಬಾ ಹಿತಕೊಟ್ಟ ಮಧುರ ಬಾಂಧವ್ಯ.i really love those days.ಅವನೆಷ್ಟು possessive ಆಗಿರುತ್ತಿದ್ದ ನನ್ನ ಬಗ್ಗೆ ಅಂದರೆ he use to come to my girls hostel when I don't feel well and say for warden"ದೀಪಾನ ಕಳಿಸಿ ಅವರ ಅಪ್ಪ ಹೇಳಿದಾರೆ"ಅಂತ ಸುಳ್ಳು ಹೇಳಿ ತನ್ನ ಕೋಣೆಗೆ ಕರೆದುಕೊಂಡು ಹೋಗಿ ಹಣೆಗೆ ತಣ್ಣೀರ ಬಟ್ಟೆ ಪಟ್ಟೆ ಕಟ್ಟಿ,ಕಾಫಿ ಮಾಡಿ, ಬೊಗಸೆಯಲ್ಲಿ ಬೀಳುತ್ತಿದ್ದ ಎಂಜಲನ್ನ ಕೈಯಲ್ಲಿಡಿದು, ಹುಪ್! ಅವನು ನನ್ನನ್ನ ಎಷ್ಟು ಜೋಪಾನ ಮಾಡತಿದ್ದಯಂದರೆ ಅಮ್ಮನ ತೊಡೆಯ ಮೇಲಿನ ಸೀರೆಯ ಮಡಿಕೆಗಳ ಬಿಗಿದಪ್ಪಿ ಮಲಗಿದ ಬಾಲ್ಯದ ನೆನಪನ್ನೆ ಒತ್ತರಿಸಿ ತರುತ್ತಿದ್ದ.he use to do...."

ದೀಪಾಳ ಪ್ರೇಮದ ಉದ್ವೇಗದ ಸಂಭಾಷಣೆಗೆ ಕಾಫಿ ಕೆಪೆಯಲ್ಲಿ ಅವಳಿಗೆದುರಾಗಿ ಕುಳಿತಿದ್ದ ಹಸಿರು ಸೀರೆಯ ಕೆಂಪು ರವಿಕೆಯ ಹಣೆಗೊಂದು ದುಂಡನೆಯ ಕೆಂಪು ಕುಂಕುಮವಿಟ್ಟುಕೊಂಡು ಚೆಂದೊಂದು ಮೂರು ಮುತ್ತಿನ ಮೂಗುತಿ ಇಟ್ಟುಕೊಂಡಿದ್ದ ಸೈಕಾಲಜಿಸ್ಟ್ ಶೋಭಾ ಹೂಗಾರ "ಕಾಫಿ?"ಯಂದೇಳಿ ಎಚ್ಚರಿಸಿ ಅಡಚಣೆ ಮಾಡಿ ಕಾಫಿ ಲೋಟವನ್ನ ತುಟಿಗೆ ಮುಟ್ಟಿಸಿದಳು.

ಅವಳೆ ಮುಂದುವರೆಸಿದಳು,

"ದೀಪಾ you cannot forget him easily.ನಿಮ್ಮ ಸಂಬಂಧ ಬರಿ ಆರು ತಿಂಗಳದ್ದಲ್ಲ, ಹರೆಯದ ಹಸಿವನ್ನ ತೀರಿಸಿಕೊಂಡು ತೀಟೆ ಮುಗಿಸಿದ ಸೆಕ್ಸೂ ಅಲ್ಲ. it is the emotion which is deeply connected personally to you with him regarding each and every small things and moments.ಅದು ಮುತ್ತಾಗಿರಬಹುದು,ಜಗಳವಾಗಿರಬಹುದು,ಮತ್ತೇನೊ? ನೀನೂ ನಿನಗೆಷ್ಟು ಸಾಧ್ಯ ಆಗುತ್ತೊ ಅಷ್ಟು ಮಾತಾಡಿ ಹಗುರಾಗು.now have the coffee.ಗೊಂದಲ ಮಾಡಕೊ ಬೇಡ.ಅವಸರ ಬೇಡ.ಇವತ್ತು ಆಫೀಸಿಗೆ ನನ್ನ ಜೊತೆ ಮಾತಾಡಬೇಕು ಅಂತಾನೆ ಹಾಫ್ ಡೇ ಲಿವ್ ತೆಗೆದುಕೊಂಡು ಬಂದಿದಿಯಾ be calm. see the environment.

ಮೋಡಗಳು ತುಂಬಕೊಂಡು ಕಪ್ಪಾಗಿ ಇಡಿ ಊರನ್ನೆ ಮಬ್ಬು ಮಾಡಿದ ಮೋಡಗಳು,ಅವುಗಳ ಹಣೆಯಿಂದ ಜಾರುವ ಬೆಳ್ಳನೆಯ ಮಳೆ ಹನಿಗಳು,ಆ ಲೈಟು ಕಂಬದ ತಲೆಯ ಮೇಲಿಂದ ಬೀಳತಿರೊ ಹಳದಿ ಬೆಳಕು,ಹಸಿರಾದ ಗಾರ್ಡನ್, ಬಣ್ಣ ಬಣ್ಣದ ಬಲ್ಬಿನಿಂದ ಕಂಗೊಳಿಸುತಿರೊ ಅಂಗಡಿಗಳು,ಈ ಬಿಸಿ ಚಹಾ,ವಾವ್! ಯಾವುದನ್ನೂ ಮುಚ್ಚಿಡಬೇಡ ಎಲ್ಲಾ ತೆರೆದಿಡು."

ಶೋಭಾಳ ಮಾತುಗಳಿಂದ ಸ್ಟೇಶನಲ್ಲಿ ನಿಂತ ರೈಲು ಮೆಲ್ಲಗೆ ಶುರುವಾಗಿ ವೇಗವಾಗಿ ಚಲಿಸುವಂತೆ ದೀಪಾ ಮೌನವನ್ನ ಮೆಲ್ಲನೆ ಮುರಿದು ಮಾತುಗಳ ಆಡಲೂ ಅಣಿಯಾದಳು. ಕಾಫಿ ಕಪ್ ಕೈಯಲ್ಲಿಡಿದು ತುಸು ತುಸುವೆ ಸುತ್ತಲ ಪರಿಸರ ನೋಡ್ತಾ ಕಾಫಿಯ ಮೊದಲ ಗುಟಕೇರಿಸಿದಳು.ಅರುಣ್ ಇನ್ನೂ ಅವಳು ಮನಸ್ಸಿಂದ ಮುಳುಗಿರಲಿಲ್ಲ.ಅವನ ಬಗ್ಗೆ ಮಾತಾಡಲೂ ದೀಪಾಳ ಹೃದಯದ ಬೊಗಸೆಯಲ್ಲಿ ಹಲವು ನೆನಪುಗಳಿದ್ದವು.

"ಶೋಭಾ ಅವನ ಬಗ್ಗೆ ಎಷ್ಟು ಹೇಳಲಿ?ಹೇಳಿದಷ್ಟೂ ಮತ್ತೆ ಆವರಿಸಿಕೊಳ್ಳತಾನೆ.ಅರುಣನನ್ನ ನಾನು ಮೊದಲು ನೋಡಿದ್ದು ಅವನು ಸಿಗರೇಟ್ ಸೇದುತ್ತಾ ಒಬ್ಬನೆ ನಮ್ಮ ಹಾಗೆ ಕಾಫಿ ಕುಡಿವಾಗ ನಮ್ಮ ಕಾಲೇಜ್ ಗೇಟ್ ಪಕ್ಕ ಇರೊ ಡಬ್ಬಿ ಅಂಗಡಿ ಪಕ್ಕದಲ್ಲಿ.ಸ್ವಲ್ಪ ದಪ್ಪಾನೆ ಇದ್ದ.ಮುಖದ ಮೇಲೆ ಫ್ರೆಂಚ್ ದಾಡಿ ಇತ್ತು.ಕೆಂಪು ಬ್ಯಾಗು ಈ ಮುದುಕರ ಹಾಕತಾರಲ್ಲ ಖಾದಿ ಭಂಡಾರದಲ್ಲಿ ಸಿಗೊ ಚಪ್ಪಲಿ ಅವುಗಳನ್ನ ಹಾಕಿಕೊಂಡಿದ್ದ.ನೋಡಿದ ಕೂಡಲೆ ನನ್ನೊಳಗೇನೊ ಒಂದು disturbance.ಸಾಹಿತ್ಯ ತುಂಬಾ ಓದತಿದ್ದನಲ್ಲಾ ಅದಕ್ಕಾ? ಇಲ್ಲ ಹಾಗೇನಿಲ್ಲ ಅವನು ಸ್ವಲ್ಪ attractive ಆಗಿನೆ ಇದ್ದ.ಅವತ್ತೇನೂ ಅವನು ನನ್ನ ನೋಡಲಿಲ್ಲ.ಸುಮ್ಮನೆ ಬಸ್ ಹತ್ತಗೊಂಡ ಹೊರಟೋದ.ನಾನಾದರೂ ಏನ್ ಮಾತಾಡೋದು even not knowing his name ಸುಮ್ಮನೆ ಮನೆಗೋದೆ.

Yes I should say this.i was not accpected this.ಅವತ್ತು ಸಂಜೆ ನಾನೊಬ್ಬಳೆ ಕಾಲೇಜ್ ಪುಟ್ಟ ಪಾತ್ ಸೈಡಲ್ಲಿರೊ ಸಿಮೆಂಟಿನ ಬೆಂಚ್ ಮೇಲೆ ಕೂತಿದ್ದೆ.ಅವನನ್ನ ನೋಡಿ ಒಂದು ವಾರದ ಮೇಲೆನೆ ಆಗಿತ್ತು.ಹಳದಿ ಬಿಸಿಲು ನನ್ನ ಕಾಲ ಮೇಲೆ ಬಿದ್ದಿತ್ತು.ಅವನ ಬಗ್ಗೆ ಕುತೂಹಲ ಇತ್ತು.i was watching him.ಹುಡುಗ- ಹುಡುಗಿ ಹೊಸಬರು- ಹಳಬರೂ ಅಂತಾನೂ ನೋಡಿದೆ ತುಂಬಾ ಮಾತಾಡತಿದ್ದ ಎಲ್ಲರ ಜೊತೆ.but when lecture ask question in class he was trying to answer the questions, ಆದರೆ ತುಂಬಾ ತೊದಲತಿದ್ದ.leave it.ನಾನೇನೂ ಧೀಡ್ ಪಂಡಿತಳಾ ಅವನ ಜಾಣತನದ ಬಗ್ಗೆ ಮಾತಾಡೋದಿಕ್ಕೆ?

ಅವನವತ್ತು ಬಂದು ನನ್ನ ಬೆಂಚನ ಇನ್ನೊಂದು ತುದಿಗೆ ಬಂದು ಕೂತ.ನೇರಳೆ ಬಣ್ಣದ ಸ್ವೇಟರ್ ತೊಟ್ಟಿದ್ದ.ನನ್ನೊಳಗೇನೊ ಒಂದು ರೀತಿ ಗೊಂದಲ, ಉಸಿರಿನ ಏರಿಳಿತ.ಅವನೆ ಮಾತು ಶುರು ಮಾಡಿದ,

"ಹಲೋ, ದೀಪಾ?"
ಅವನು ನನ್ನ ಹೆಸರನ್ನ ಅಷ್ಟು ಸಲೀಸಾಗಿ ಕರೆದಿದ್ದು ನೋಡಿ ತುಂಬಾ ಅಚ್ಚರಿಯಾಯಿತು.ಅವನೇ ಮುಂದುವರೆಸಿದ,
"ಕಾಲೇಜ್ ಸೇರಿದಾಗಿನಿಂದ ನಿನ್ನ ಜೊತೆ ಮಾತಾಡಬೇಕು ಅಂತ ತುಂಬಾ ಸಲ ಅನಿಸಿತು.but you were always in group.ಈಗ ಒಂಟಿಯಾಗಿ ಸಿಕ್ಕೆ so ಅದಕ್ಕೆ ಮಾತಾಡೋಣ ಅಂತ ಬಂದೆ"ಯಂದ.ನನಗವನು ಏಕವಚನದಲ್ಲಿ ಮಾತಾಡೋದ ನೋಡಿ ಕೋಪ ಬಂತು ಆದರೂ ಏನೊಂದು ವಿರೋಧ ವ್ಯಕ್ತಪಡಿಸದೆ ನಾನೂ ಸಲಿಗೆ ತೆಗೆದುಕೊಂಡು,
ಈಗ ಮಾತಾಡು ಅಂದೆ.ಅವನೂ ತುಟಿಯಗಲಿಸಿ ನಕ್ಕ.ಅವನಲ್ಲಿ ಆತ್ಮವಿಶ್ವಾಸ ಜಾಸ್ತಿ ಆಯಿತು ಅಂತ ನನಗನಸತು.
ಅವನು ಗಂಭೀರನಾದ.
"ದೀಪಾ ಇದನ್ನ ಈಗ ಹೇಳಬೇಕೊ ಬೇಡವೊ ಅಂತ ಒಂದೆರಡು ದಿನಗಳಿಂದ ಒದ್ದಾಡಿ ಇವತ್ತು ನೀನು ಒಬ್ಬಳೆ ಸಿಗತಿಯಾ ಅಂತ ಕಾದೆ ನಿನ್ನ ಹತ್ತಿರ ಬಂದೆ.ಸುತ್ತಿಬಳಸಿ ಮಾತಾಡಲ್ಲ.i like you.i want to spend time with you.ನಾನು ನಿನ್ನ ಪೂರ್ಣವಾಗಿ ಪ್ರೀತಿಸತಿಲ್ಲ ಯಾಕೆಂದರೆ we don't know each other completely.but in some perspective i am attracted you.if you agree we can,"ಅಂದ ತುಂಬಾ ಗಂಭೀರವಾದ ವಿಷಯವನ್ನ ಪ್ರಾಮಾಣಿಕವಾಗಿ.

ನಾನೀದನ್ನ ಅವನ ಕಡೆಯಿಂದ ಊಹಿಸಿರಲಿಲ್ಲ.i was trying to say it ಇವತ್ತಲ್ಲದಿದ್ದರೂ ನಾಳೆ ನಾಡಿದ್ದು ಅಥವಾ ಮುಂದಿನ ವಾರ but with clarity.ನಾನು ಅವನನ್ನ ಪೂರ್ಣ ತಿಳಕೊಬೇಕು ಅಂತ ಬಯಸಿದ್ದೆ.ನಾನು ಮೌನಿಯಾದೆ.ಅವನೇ ಮುಂದುವರೆಸಿದ,
"Don't worry,take time.i am not forcing"ಯಂದೇಳಿ ನಕ್ಕು ಕಿರುನಗೆ ಚೆಲ್ಲತಾ ಹೊರಟು ಹೋದ.ನನ್ನಲ್ಲಿ ಹತ್ತಾರೂ confusion ಶುರುವಾಯಿತು.

ನಾನು ಅವನ ಜೊತೆ ಸುತ್ತಾಡಿದರೆ ಏನರ್ಥ ಬರುತ್ತೆ?ಅವನ ಜೊತೆ time spend ಮಾಡೋದಂದರೇನು?will it be love?ನಾನು ಬಯಸಿದ್ದು ಅದನ್ನೆ ಅಲ್ಲವಾ?ಅದು ಪ್ರೀತಿಯಾದರೂ ಅವನಲ್ಲಿ clarity ಇಲ್ಲ he his saying let's see and engage.ನಾನು ಮುಂದುವರಿಲಾ?ಬೇಡವಾ?ಈಗ ನನಗೆ ಪ್ರೇಮದ ಅವಶ್ಯಕತೆ ಇದೆಯಾ? ಹೀಗೆ ಸಾವಿರ ವಿಚಾರಗಳು ಒಂದರ ಮೇಲೊಂದು ದಾಳಿ ಮಾಡಿ ನನ್ನನ್ನ ಹೈರಾಣ ಮಾಡಿಬಿಟ್ಟವು.

ನಾನು ಅವನ ಗುಂಗು ಬಿಟ್ಟು ಹೊರಗೆ ಬಂದಾಗ ಕತ್ತಲು ನನ್ನ ಮುಂದಿನ ಇಡಿ ವಾತಾವರಣವನ್ನೆ ನುಂಗಿಬಿಟ್ಟಿತು.ಮೇಲೆದ್ದೆ,ಹೆಜ್ಜೆ ಭಾರವಾದವು.ಆಕಾಶದಲ್ಲಿನ ಚಂದ್ರನನ್ನೆ ನೋಡಿದೆ he was playing hide and seek with clouds.

ಅದು ಮಧ್ಯರಾತ್ರಿ ಹನ್ನೇರಡಿರಬಹುದು.ನಿದ್ದೆ ಬಂದಿರಲಿಲ್ಲ.ರೂಮ್ ಬಿಟ್ಟು ಬಾಲ್ಕನಿಗೆ ಬಂದೆ.ಆಕಾಶದಲ್ಲಿನ ಚಂದ್ರ ಇನ್ನೂ ಕಣ್ಣಾಮುಚ್ಚಾಲೆ ಆಡತಾನೆ ಇದ್ದ.ಮನಸ್ಸಿನಲ್ಲಿ ನೂರೆಂಟು ಗಣಿತದ ಸೂತ್ರಗಳು ತಾಳೆ ಹಾಕತಿದ್ದವು.At one time i decided let have some days with him.ನಾನಂತೂ ಅವನನ್ನ ಇಷ್ಟಪಡತಿದಿನಿ ಅದಂತೂ ನಿಜ.ಅದರಲ್ಲೂ he his saying ಒಬ್ಬರಿಗೊಬ್ಬರು ಅರ್ಥ ಮಾಡಕೊಂಡು ಆಮೇಲೆ ಮುಂದುವರಿಯೋಣ ಅಂತ.ಅವನ ಮೇಲೆ ಅಭಿಮಾನ ಉಂಟಾಯಿತು ಅವನ ಪ್ರಾಮಾಣಿಕತೆನ ಮನಸ್ಸು ನೆನೆಸಿತು.ಅವನು direct ಆಗಿ ನಾನೀನ್ನ ಪ್ರೀತಸತಿದಿನಿ ನೀ ನನ್ನ ಪ್ರೀತಸು ಅಂತ ಎಲ್ಲ ಹುಡುಗರ ತರಹ ಒತ್ತಾಯ ಮಾಡಿ ಹೇಳಲಿಲ್ಲ.he was clear in what he want.ಅಪ್ಪ ಅಮ್ಮ ಯಾರೂ ನೆನಪಾಗಲಿಲ್ಲ.because ಅವರಿಲ್ಲದೆ ನಾನು ನನ್ನ ಅಕ್ಕ ಇಲ್ಲಿಯವರೆಗೂ ಬಂದಿದ್ದವಿ.ನಾನು ನಿರ್ಧಾರ ಮಾಡಿದೆ let me have relationship experiment ಅವನ ಜೊತೆ ಅಂತ.

ಬಾನಲ್ಲಿ ಚಂದ್ರ ನಿಚ್ಚಳವಾದ.ತಂಗಾಳಿಗೆ ಮುಂಗುರುಳು ಬಂದು ಕಣ್ಣ ಮೇಲೆ ಕೂತಿತು.i was happy.

ನಾನವನಿಗೆ ಮರುದಿನ ನನ್ನ ಒಪ್ಪಿಗೆ ತಿಳಿಸಿದೆ.ಅವನು ಖುಷಿಯಿಂದ ಅಪ್ಪಿಕೊಂಡು ಹಣೆಗೆ ಮುತ್ತು ಕೊಟ್ಟ.ಅವನು ನನ್ನ ಮುಟ್ಟಿದ್ದಕ್ಕೆ ಮೊದಲು ಮುಜುಗರ ಆಯಿತು ಆದರೆ ಮರುಕ್ಷಣವೆ he his mine ಅನ್ನೊ ಆತ್ಮವಿಶ್ವಾಸ ಉಂಟಾಗಿ ಅವನನ್ನ ಗಟ್ಟಿಯಾಗಿ ತಬ್ಬಿಕೊಂಡೆ.ಅವತ್ತಿನಿಂದ ಶುರುವಾದವು ನನ್ನ ಸುಂದರ ಗಳಿಗೆಗಳು.ಅವನಂತೂ ಎಲ್ಲಿ ಕರಕೊಂಡ ಹೋದರು ತುಂಬಾ ಮಾತಾಡತಿದ್ದ.but ಆ ಭರದಲ್ಲಿ he was not neglecting me.ನಿನಗೇಳಲಾ ಇಬ್ಬರೂ ಕೂಡಿ ಕವಿತೆ ಬರಿತಿದ್ದವಿ.it seems odd ಅಲ್ಲವಾ?but ಅದೂ ಇಬ್ಬರಿಗೂ ಇಷ್ಟವಾದ ಹವ್ಯಾಸ ಆಗಿತ್ತು.i was not accpected that ಅವನಿಗೆ ಸಾಹಿತ್ಯದ ಮೇಲೆ ಗಾಢವಾದ ಆಸಕ್ತಿಯಿದೆ ಅಂತ.ನಾನಿನ್ನೂ ಯಂಡಮೂರಿ,ರವಿ ಬೆಳಗೆರೆಯವರ ಪುಸ್ತಕ ಹಿಡಿದಿದ್ದರೆ he was already reading ಕುವೆಂಪು,ಕಾರಂತರು, ಬೇಂದ್ರೆ many more.ನಾವಿಬ್ಬರೂ ಒಂದೊಂದ ಸಲ ಇಬ್ಬರೆ ಬೈಕ್ ಮೇಲೆ ರೈಡ್ ಹೋಗತಿದ್ದವಿ.you know ನಾನವನ ಹೆಸರನ್ನ ಒಂದು ಸಲ ಬಸ್ ಸ್ಟ್ಯಾಂಡ್ men's toilet boy sticker ಕೆಳಗೆ ಅರುಣ್ ಹುಬ್ಬಳ್ಳಿ ಅಂತ ಬರೆದಿದ್ದೆ ಅವನು ಸಿಟ್ಟಾಗತಾನೆ ಅನಕೊಂಡೆ but he was calm.ಇದೆ ನನಗೆ ಅವನಲ್ಲಿ ಇಷ್ಟ ಆಗಿದ್ದು.we went for many trips on bike.ದೂರದ ಊರುಗಳಿಗೆ ಹೋದಾಗ ಇಬ್ಬರೂ ಒಂದೆ ಟೆಂಟಲ್ಲಿ ಮಲಗತಿದ್ದವಿ.we were sharing kisses ಅದು ತುಟಿಗಳ ಅಂಚಲ್ಲಿ ಗಾಢವಾಗಿ.ದೇಹದ ವಾಂಛೆಗಳು ಇಬ್ಬರನ್ನೂ ಕಾಡತ್ತಿದ್ದವು.even i express them he was not.ಅವನು"ಈಗ ಬೇಡ ಕಣೆ"ಅಂತ ಹಣೆಗೊಂದು ಮುತ್ತುಕೊಟ್ಟು ನನ್ನ ಮೇಲೆ ಕೈಯಾಕಿ ಮಲಗಿ ಬಿಡತ್ತಿದ್ದ.ಅವನಿಗೆ ನನ್ನ ಮೇಲೆ ಇದ್ದ ಕಾಳಜಿ ನೋಡಿ my love towards him got stronger.ಹೀಗೆ ಮೂರು ವರ್ಷ ಕಳದವು.ಬಿ.ಎಸ್ಸಿ ಲಾಸ್ಟ್ ಸೆಮ್ ಗೆ ಬಂದವಿ.ಈ ನಡುವೆ ಅಕ್ಕನಿಗೂ ಅವನನ್ನ ಪರಿಚಯ ಮಾಡಿಸಿದ್ದೆ ಅವನ humbleness ನೋಡಿ ಅಕ್ಕಾ ಅವನನ್ನ ತುಂಬಾ ಹೊಗಳಿದ್ದಳು.ಅವನೂ ತನ್ನ ಅಪ್ಪ ಅಮ್ಮ ಅಕ್ಕನಿಗೆ ನನ್ನನ್ನ friend ಅಂತ ಪರಿಚಯ ಮಾಡಿಸಿದ್ದ.They were sweet.ಬಿ.ಎಸ್ಸಿ ಮುಗಿದು ಅವನು ಸಿವಿಲ್ ಸರ್ವೀಸ್ ಮಾಡ್ತಿನಿ ಅಂದ, ನಾನು ಟೀಚಿಂಗ್ ಫೀಲ್ಡ್ ಮಾಡತಿನಿ ಅಂದೆ.ನನಗಿನ್ನೂ ಚೆನ್ನಾಗಿ ನೆನಪಿದೆ ಆ ದಿನ when we both got seperated.we both were hearing ಮುಂಗಾರು ಮಳೆ songs both on our first love spot.ಮಳೆಯೇನೂ ಬರತಿರಲಿಲ್ಲ but he was crazy.ಅವನು ಹಣೆಗೆ ಕೊಟ್ಟ ಮುತ್ತು,ನಾನವನ ಕೆನ್ನೆಗೆ ಮೆದುವಾಗಿ ಬೇಗ ಬಾರೊ ಅಂತ ಹೇಳಿ ಹೊಡೆದ ಏಟು ನಮ್ಮ ಭೇಟಿಯ ಕೊನೆಯ ನೆನಪುಗಳಾದವು.i was not even accpected he will leave me completely from that day"

ದೀಪಾ ದೀರ್ಘವಾಗಿ ಮಾತಾಡಿ ಒಮ್ಮೇಲೆ ಮೌನಿಯಾದಳು.ತಲೆಯನ್ನ ನೆಲಕ್ಕೆ ಚೆಲ್ಲಿ ಕುಳಿತುಬಿಟ್ಟಳು‌.ಒಂದೆರಡು ಗಳಿಗೆ ಮಳೆಯ ಶಬ್ದ ಬಿಟ್ಟರೆ ಬೇರೆನೂ ವಾತಾವರಣದಲ್ಲಿ ಕೇಳಿಸಲಿಲ್ಲ.

"ಹೇ...., ದೀಪಾ!ಏನಿದು surprise? "
ವಿಚಲಿತಳಾಗಿ ಕುಳಿತ ದೀಪಾಳ ಎದೆಯಲ್ಲಿ ಒಮ್ಮೇಲೆ ಹೊಸ ಅಚ್ಚರಿ ಧ್ವನಿ ಕೇಳಿ ಆಶ್ಚರ್ಯ! ಮುಖ ಮೇಲೆತ್ತಿ ಶೋಭಾ ಮುಖ ನೋಡಿದಳು.ಅವಳ ಮುಖದಲ್ಲೂ ಪ್ರಶ್ನೆನೇನೆ ಇತ್ತು. ದೀಪಾಳ ಭುಜಕ್ಕೆ ಒಂದು ಪೆಟ್ಟು ಬಿತ್ತು.ತಿರುಗಿ ನೋಡಿದರೆ ಮಧುಮತಿ.

ಅರುಣನ ಅಕ್ಕ!ಅವಳೆ ಮುಂದುವರೆಸಿದಳು,

"ಹೇ ದೀಪಾ ಮದುವೆ ಮುಗಿದ ಮೇಲಿಂದ ಕಾಣತಾನೆ ಇಲ್ಲ.even ಅರುಣ್ ಸೌಮ್ಯಾಳ ಕೊರಳಿಗೆ ತಾಳಿ ಕಟ್ಟೊ ಸಮಯದಲ್ಲೂ, ಎಲ್ಲೊ ಓಡಿ ಹೋಗಿ ಬಿಟ್ಟಿದ್ದೆ.ನೀನೆ ಹೆಣ್ಣು ಹುಡುಕಿ ಕೊಟ್ಟು ಪರಾರಿಯಾಗಿ ನಮ್ಮನ್ನೆಲ್ಲ ತುಂಬಾ ನೋಯಿಸಿ ಬಿಟ್ಟೆ.particularly ಸೌಮ್ಯಾನ.ಇವತ್ತಾದರೂ ನೀನು ನಮ್ಮ ಜೊತೆ ಬರಲೆ ಬೇಕು ಸೌಮ್ಯಾಳ ಸೀಮಂತದ ಸೀರೆ ತರೋಕೆ.ಅಮ್ಮ ನಿನ್ನ ಅಭಿರುಚಿಯನ್ನ ತುಂಬಾ ಹೊಗಳತಾರೆ."

ಮಧು ಸಂಭ್ರಮದಿಂದ ನುಡಿದು ತನ್ನ ಗಂಡ ಶ್ರೀಧರನ ಕಡೆ ನೋಡಿದಳು.ಅವನು ದೀಪಾ ಬರಲೇ ಬೇಕು ಎಂಬ ಭಾವದಲ್ಲಿ ಮುಗುಳನಕ್ಕು ಮುಖದಲ್ಲೆ ದೈನ್ಯ ಭಾವ ವ್ಯಕ್ತಪಡಿಸಿದ.ದೀಪಾ ಈಗ ನಿಜಕ್ಕೂ ಧರ್ಮಸಂಕಟಕ್ಕೆ ಬಿದ್ದಳು.ಶೋಭಾಳ ಕಡೆ ನೋಡಿದಳು.ಅವಳ ಮುಖದಲ್ಲಿ ಯಾವ ಭಾವ ಇರಲಿಲ್ಲ.

"ಇಲ್ಲ ನೀವು ತುಗೋಳಿ.ನನಗೆ ಬೇರೆ ಕೆಲಸ ಇದೆ ಅಕ್ಕನಿಗೆ ಹುಷಾರಿಲ್ಲ ಆಸ್ಪತ್ರೆಗೆ ಸೇರಿಸಿದಿನಿ medicine ತುಗೊಂಡ ಹೋಗಬೇಕು"
ಅವಸರದಲ್ಲಿ ಸುಳ್ಳೊಂದ ನುಡಿದು ಮುಗಳನಕ್ಕಳು.

ಮಧುಮತಿ ಬಿಡಲಿಲ್ಲ ಅನುಕಂಪದಿಂದ "ಹೌದಾ! ನಾವು ಭೇಟಿಯಾಗತಿವಿ ಯಾವ ಆಸ್ಪತ್ರೆಲಿ ಇದಾರೆ?"ಯಂದಳು.ಈಗ ನಿಜಕ್ಕೂ ದೀಪಾ ಬಲೆಗೆ ಬಿದ್ದಳು.ಇವಳ ಅಸಹಾಯಕತೆ ನೋಡಿ ಕುರ್ಚಿಯಿಂದ ಮೇಲೆದ್ದು ಶೋಭಾ ಮಧುಮತಿಯ ಜೊತೆಗೆ ಮಾತನಾಡತೊಡಗಿದಳು.

"ಯಾವ ಶಾಪ್ ಗೆ ಹೋಗತಿದಿರಿ?"
"ಅದೇ ನಾವು usually buy ಮಾಡೊ ಶಾಂತಲಾ ಸ್ಯಾರೀಸ್ ಅಲ್ಲಿ"
"ನಾನು ನೋಡಿದಿನಿ,ದೀಪಾನೂ ನೋಡಿದ್ದಾಳೆ ನಾವಿಬ್ಬರೂ ದೂರದ ಸಂಬಂಧಿಕರು but ನಾನಿಲ್ಲೆ psychologist ಆಗಿ work ಮಾಡತಿದಿನಿ.ನನ್ನ ಒಬ್ಬರೂ client ಇಲ್ಲಿಗೆ ಬರತಿನಿ ಅಂದಿದಾರೆ and she his friend to deepa.half an hour ಅಲ್ಲಿ ಬಂದ ಬಿಡತಿವಿ.ನೀವು ನಿಮ್ಮ usband wait ಮಾಡೋದ ಬೇಡ ಹೋಗಿ ಬೇರೆ ಬಟ್ಟೆ ಬೇರೆ ಖರೀದಿ ಮಾಡಿ ನಾವು ಅಷ್ಟರಲ್ಲಿ ಬರತಿವಿ"

ಸ್ಪಷ್ಟವಾಗಿ ಸುಳ್ಳೊಂದನ್ನ ಸತ್ಯದಂತೆ ಹೇಳಿದಳು ಶೋಭಾ.ಮಧುಮತಿ ಮುಖ ಸಣ್ಣದಾಯಿತು.

"ಏನೊಪಾ ನಮಗೆ ದೀಪಾ ಹೊರಗಿನವಳಲ್ಲ ನಮ್ಮ ಕುಟುಂಬದವಳು ಅಂತ ಭಾವಿಸಿದಿವಿ.ಬರಿ ಇದೆ ಆಯಿತು ಇವಳದು, ಇವತ್ತು ನೀವು ಬೇರೆ ಇವಳಿಗೆ ಸಾಥ್ ಕೊಟ್ಟರಿ. ok ಬೇಗ ಬನ್ನಿ ಕಾಯತಿರತಿವಿ"

ಮಧುಮತಿ ಮತ್ತು ಶ್ರೀಧರ್ ಇಬ್ಬರೂ ಕಾರ್ ಹತ್ತಿ ಹೊರಟು ಹೋಗುವವರೆಗೂ ದೀಪಾ ಮತ್ತು ಶೋಭಾ ಅವರನ್ನೆ ನೋಡುತ್ತಿದ್ದರು.

"ದೀಪಾ it is shocking!ಅರುಣ್ ಮದುವೆ ಆಗಿದಾನೆ ಅಂತ ನೀನೆ ಹೇಳಿದ್ದೆ but ನೀನೆ ಆ ಹುಡುಗಿನ ಹುಡುಕಿ ಕೊಟ್ಟೆ ಅಂತ ಮಧುಮತಿ ಹೇಳಿದರಲ್ಲಾ?is it true? ಹಾಗಾದರೆ why you hide it?

ಶೋಭಾ ಕುರ್ಚಿ ಮೇಲೆ ಕುಳಿತು ಪ್ರಶ್ನಾರ್ಥಕ ದೃಷ್ಟಿಯಿಂದ ದೀಪಾಳ ಕಡೆ ನೋಡಿದಳು.

ದೀಪಾ ನಿಟ್ಟುಸಿರೊಂದನ್ನ ಬಿಟ್ಟು ಮುಖ ಸಣ್ಣ ಮಾಡಿ ತನ್ನ ಕುರ್ಚಿಯಲ್ಲಿ ಕುಳಿತು ಅರುಣ್ ನ ಜೊತೆಗಿದ್ದ ಅವಳ ಭಾವದ ಸೆಳೆತದ ಉತ್ತರಾರ್ಧವನ್ನ ಹೇಳತೊಡಗಿದಳು.

"ಶೋಭಾ ನಾನು ಎರಡು ವರ್ಷ ಬಿ.ಎಡ್ ಮಾಡಿ ಒಂದು ಸ್ಕೂಲಲ್ಲಿ ಕೆಲಸಕ್ಕೆ ಸೇರಿಕೊಂಡೆ ಅಂದರೆ ಜೊತೆ ಒಂದು NGO ಕೂಡ ಸೇರಕೊಂಡೆ.satisfaction ಇರಲಿ ಅಂತ. ನನ್ನೊಳಗೆ ತುಂಬಾ ಬದಲಾವಣೆ ಆದವು ಈ ಸಮಯದಲ್ಲಿ.ಪಾಪ ಎಷ್ಟು ಮುದ್ದಾದ ಜೀವಗಳವು ಅವು ಸ್ಕೂಲಲ್ಲಿ.ಒಂದು ಹುಡುಗಿಯಂತು ನನ್ನನ್ನ ಎಷ್ಟು ಹಚ್ಚಿಕೊಂಡು ಬಿಟ್ಟಿದ್ದಳು ಅಂದರೆ when her mother was telling"ನಮ್ಮ ಯಜಮಾನರು ನಿನ್ನ ಅಮ್ಮ ಯಾರೂ ಅಂತ ಕೇಳಿದರೆ that kid was saying my name ಅಂತೆ.ಶೋಭಾ ಒಂದೇಳಲಾ ಮಕ್ಕಳು ತೋರಸೊ ಆ innocent love ಇದೆಯಲ್ಲ it is only enough.ಆ ಹುಡುಗಿ ಅಷ್ಟೇ ಅಲ್ಲ,there were many.ಪಾಪ ಒಂದಕ್ಕೆ ಕಣ್ಣಿಲ್ಲ, ಒಂದಕ್ಕೆ ಮಾತು ಬಾರದು,ಒಂದು mentally illness etc....They see me like beautiful caring angel.ngo ಅಲ್ಲಿ ವಯಸ್ಸಾದ ಅಜ್ಜ ಅಜ್ಜಿ.see if you sit with them, life ಅಂದರೆ ಏನು ಅಂತ PhD ಮಾಡಿದವರಿಗಿಂತ ಹೆಚ್ಚು ತಿಳಿಬಹುದು.but they Need people to talk.ಅದನ್ನ ಅವರ ಮಕ್ಕಳು ಕೊಡಲ್ಲ.i am not saying they are bad ಆದರೆ This life is not just to eat,get education, work ,die ಅಷ್ಟೇ ಅಲ್ಲವಲ್ಲ.There is something different purpose.ಅದು ನನಗೆ ಇವರ ಮೇಲೆ ಪ್ರೀತಿ ತೋರಸೋದಾಗಿದೆ.i said this to ಅರುಣ್ ಆದರೆ ಅವನಿಗೆ ಬೇರೆ ಕನಸುಗಳೆ ಇದ್ದವು.he convinced me lot ನಾನೆ force ಮಾಡಿ the same profession which he does ಸೌಮ್ಯ ಕೂಡ ಅದನ್ನೆ ಮಾಡತಾಳೆ.They both are now IAS couple.ಪದವಿ,ಹಣ, ಪ್ರಶಂಸೆ ಎಲ್ಲಿಯವರೆಗೆ ಶೋಭಾ?i don't know how my ancestors lived and what were there characters? ಇಲ್ಲಿ ಎಲ್ಲಾ ಸಾಧನೆಯನ್ನೂ ಪ್ರಶ್ನೆ ಮಾಡ್ತಾರೆ?ಯಾವುದನ್ನ ಉಳಿಸಿದಾರೇಳು?so this life is just ಮಾಯಾಲೋಕ. there is nothing to make new.ಇರೋದನ್ನೆ ಪ್ರೀತಸಬೇಕು‌.i want to love this life ಆ ಮಕ್ಕಳ ಜೊತೆ,ಆ ಹಿರಿಯರ ಜೊತೆ,ಈ ನಿಸರ್ಗದ ಜೊತೆ,ಈ ಬದುಕಿನ ಜೊತೆ.ಆದರೆ ಪ್ರತಿ ಸಲ ಹೀಗೆ ಯೋಚಿಸಿದಾಗ ಅವನು ನೆನಪಾಗತಾನೆ,ಅವನ ಜೊತೆ ಕಳೆದ ಕ್ಷಣಗಳು ನೆನಪಾಗತವೆ.ಈ ನೆನಪುಗಳ ಆಕ್ರಮಣಕ್ಕೆ ನನ್ನ ಬಯಕೆಯ ಹಡಗು ಮುಳುಗಿ ಹೋದಂತೆ ಅನಿಸುತ್ತೆ, ತುಂಬಾ ಭಯ ಆಗುತ್ತೆ,ಗೊಂದಲ ಆಗುತ್ತೆ,i will not come to know what to do.....,"

ಶೋಭಾ ಕುಳಿತಿದ್ದ ಕುರ್ಚಿಯಿಂದ ಮೇಲೆದ್ದು ಬಂದು ಎರಡು ಕೈಗಳನ್ನ ಚಾಚಿ ದೀಪಾಳನ್ನ ಅಪ್ಪಿಕೊಂಡಳು.ದೀಪಾಳಿಗೆ ಅಳು ತಡೆಯಲಾಗಲಿಲ್ಲ ಶೋಭಾಳನ್ನ ಗಟ್ಟಿಯಾಗಿ ತಬ್ಬಿಕೊಂಡು ಅತ್ತಳು.ಶೋಭಾ ಅವಳನ್ನ ಅವಳ ಪಾಡಿಗೆ ಒಂದೆರಡು ಗಳಿಗೆ ಬಿಟ್ಟಳು.ನಂತರ ಅವಳ ಮುಂದೆ ಕುರ್ಚಿಯನ್ನ ಎಳೆದು ಕೂತು,

"ದೀಪು,you are beautiful soul ಕಣೆ.you have good heart, great purpose.ಒಂದಂತೂ ಹೇಳ್ತಿನಿ ನೀನು ಅವನ ಮರಿಯೋದಿಕ್ಕೆ forcefully ಪ್ರಯತ್ನಪಟ್ಟರೆ you will not achieve anything.you will revolve around in this regularly.ಅವನನ್ನು ಆ ಮಕ್ಕಳಂತೆ ಹಿರಿಯರಿಗೆ ಪ್ರೀತಸು, don't worry ಎಲ್ಲಿ ನಿನ್ನ ಕನಸು ಹಾಳಾಗುತ್ತೊ ಅಂತ.he his already married ಇನ್ನೊಂದು ವರ್ಷಕ್ಕೆ ಮಗು ಆಗುತ್ತೆ ಅವನಿಗೆ.ಆಗ ಆ ಮಗು ಪ್ರೀತಿಸು.you are thinking about love in particulary in single meaning.every love his not boy and girl sexual relationship. sorry ಚಿನ್ನ it has many dimensions.be casual."

ಶೋಭಾಳ ಮಾತುಗಳನ್ನ ಕೇಳಿ ದೀಪಾಳಿಗೆ ಒಮ್ಮೇಲೆ ಅವಳೇಳೋದು ಹೌದಲ್ಲವಾ ಅನಿಸಿತು. ನಿರಾಳದಳು.ಭಾರವಾದ ವಸ್ತುವನ್ನ ಕೆಳಗಿಳಿಸಿದ ಹಗುರ ಭಾವ ಅವಳ ಎದೆಯಾಳದಲ್ಲಿ ನರನಾಡಿಗಳಲ್ಲಿ ಉಂಟಾಯಿತು.ಅವಳು ಶೋಭಾಳನ್ನೆ ಪ್ರೀತಿಯಿಂದ ನೋಡಿದಳು.

ಶೋಭಾ ಮೇಲೆದ್ದು"get up girl ನೀನು ಪ್ರೀತಸೊ ಜೀವದ,ನಿನ್ನನ್ನ ಪ್ರೀತಸೊ ಅರುಣನ ಹೆಂಡತಿ ಸೌಮ್ಯಾಳಿಗೆ ಸ್ಯಾರಿ choice ಮಾಡೋಕ ಹೋಗೋಣ.ಲೇಟಾಯಿತು."ಯಂದು ಮೇಲೆದ್ದು ಕೆಫೆ ಮುಂದೆ ನಿಲ್ಲಿಸಿದ್ದ ಕಾರಿನ ಕಡೆ ನಡೆದಳು.ದೀಪಾ ಅವಳನ್ನ ಹಿಂಬಾಲಿಸಿ ಕಾರ್ ಹತ್ತಿ ಕೂತಳು.

ಶೋಭಾ ಸಂಭ್ರಮದಿಂದ i love songs ಅಂತ ಹೇಳಿ ಕಾರಿನ ಟೇಪ್ ರೆಕಾರ್ಡರ್ ಅಲ್ಲಿ ಹಾಡು ಶುರು ಮಾಡಿದಳು.coincidentally it was ಮುಂಗಾರು ಮಳೆ song.

ಶೋಭಾ ದೀಪಾಳ ಮುಖ ನೋಡಿದಳು.
ದೀಪಾ ಮೊದಲು ಮುಗಳನಕ್ಕು ಮರುಗಳಿಗೆಯೆ ಮನಸ್ಸು ಬಿಚ್ಚಿ ಜೋರಾಗಿ ನಗತೊಡಗಿದಳು.

ಮುಂಗಾರುಮಳೆ ಹಾಡು ತನ್ನ ಪಾಡಿಗೆ ತಾನು ಗುನುಗ ತೊಡಗಿತು.

"ಅರಳುತಿರು ಜೀವದ ಗೆಳೆಯ ,
ಸ್ನೇಹದಾ ಸಿಂಚನದಲ್ಲಿ.
ಬಾಡದಿರು ಸ್ನೇಹದ ಹೂವೇ ,
ಪ್ರೇಮದಾ ಬಂಧನದಲ್ಲಿ.
ಮನಸಲ್ಲೇ ಇರಲಿ ಭಾವನೆ.
ಮಿಡಿಯುತಿರಲಿ ಮೌನ ವೀಣೆ ಹೀಗೇ ಸುಮ್ಮನೆ."