Click here to Download MyLang App

ಆಟಿಕೆ - ಬರೆದವರು : ಬಸವಣ್ಣೆಪ್ಪ ಕಂಬಾರ | ಸಾಮಾಜಿಕ

"ಕಥೆ
ಆಟಿಕೆ
ಜಾತ್ರೇ ಮುಗಿದ ಮಾರನೇ ದಿನ ಬೆಳಿಗ್ಗೆ, ಚಿನ್ನವ್ವ ತನ್ನ ಕೈಚೀಲಗಳಿಗೆ ಬಟ್ಟೆಗಳನ್ನ ತುಂಬಿಕೊಂಡು ಹೊರಡಲು ಅಂಗಳಕೆ ಸಿದ್ದಳಾಗಿ ಬಂದಳು .ಆದರೆ ಅವಳ ಮಗ ಕಿಟ್ಟಿ ಅಡಿಗೆ ಮನೇಲಿ ಅದೇನೊ ಹುಡುಕುತ್ತಿದ್ದವ ಇಚೇ ಬಂದಿರಲಿಲ್ಲ ""ಏನಾದರಾಗ್ಲಿ ಪೀಪೀ ಹುಡ್ಕಿಕ್ವಂಡೆ ಹೋಗಬೇಕು,ಇಲ್ಲೇ ಬಿಟ್ಟು ಹೋದರೆ ಊರಲ್ಲಿ ಗೆಳೆಯರಿಗೆಲ್ಲ ಜಾತ್ರೇಯಿಂದ ಏನು ತಂದೆ ಅಂತ ಕೇಳಿದರೆ ಏನಂತ ತೋರಿಸೊದು..? ಒಂದೇ ಸವನೇ ಕಿಟ್ಟಿ ತಲೆ ಕೆಟ್ಟವರಂತೆ ಆ ಸಂದಿ, ಈ ಸಂದಿ, ಮೇಲೆ, ಕೆಳಗೆ, ಹಾಸಿಗೆ ಬಿರುವು,ಅಟ್ಟದ ಮೇಲೆ ಮಂಚದ ಕೆಳಗೆ ಎಲ್ಲೆಂದರಲ್ಲಿ ಓಡಾಡುತ ಹುಡುಕುತ್ತಿದ್ದ.ಜಾತ್ರೆಗಂತ ಬಂದ ಇನ್ನಿತರ ಬೀಗರು ಬಿಜ್ಜರು,ಸ್ನೇಹಿತರು ಇದೀಗ ಎದ್ದು ಮುಖ ತೊಳೆಯಲು,ಹಲ್ಲುಜ್ಜಲು ಸಿದ್ದರಾಗುತ್ತಿದ್ದರೆ,ಇನ್ನು ಕೆಲವರು ಇವರೆಡೆ ಗಮನಿಸದೆ ಮುಖದ ಮೇಲೆ ಮುಸುಕೆಳೆದು ನಿದ್ದೆ ಹೊಡೆಯುತ್ತಿದ್ದರು
"" ಲೇ ಕಿಟ್ಟಿ ನೀ ಬರ್ತಿನೊ ಇಲ್ಲೊ........? ಬಸ್ಸ ಹೊಗತೈತಿ, ಅದೇನ ನಿಮ್ಮಜ್ಜಾನ ಗಾಡಿ ನೀ ಬರುತನಕಾ ಕಾಯಕೊಂತ ನಿಲ್ಲಾಕ....? ಚಿನ್ನವ್ವ ಮತ್ತೆ ಕೂಗಿದಳು.ಅದು ಜಾತ್ರೇಯ ಮರುದಿನವಾದ್ದರಿಂದ ಅಕ್ಕ ಪಕ್ಕದ ಮನೇಗೆಲ್ಲ ಬೀಗರು ಬಂದಿದ್ದರು ಇವಳ ಕೂಗು ಎಲ್ಲರಿಗು ಕೇಳಿಸಿತು.ಅಡಿಗೆ ಮನೇಲಿ ಚಿನ್ನವ್ವನ ತಾಯಿ ಎಲ್ಲರಿಗು ದೊಡ್ಡ ಬೊಗುಣಿಯೊಳಗೆ ಚಹಾ ಕುದಿಸುತ್ತಿದ್ದವಳು ಚಿನ್ನವ್ವನ ದನಿ ಕೇಳಿ ಅದನ್ನ ಅಲ್ಲೇ ಬಿಟ್ಟು ಹಾಗೆ ಅಂಗಳಕೆ ಬಂದು "" ಯೇ ಚಿನ್ನವ್ವ ಹಿಂಗ್ಯಾಕ ಹುಚ್ಚರಂಗ್ಮಾಡ್ತಿ...?ಅಂತ ಶರಗ್ನಿಂದ ಮಾರಿ ಒರಿಸಿಕೊಳ್ಳುತ ಸಮೀಪಕ ಬಂದಳು. ಚಿನ್ನವಳಿಗೆ ಅದೇ ಕೋಪ.... ಸಿಟ್ಟು...
."" ಅವ ಪೀಪೀ ಎಲ್ಲಿಟ್ಟಾನ ನೋಡಿದಿ...? ಎಲ್ಲಿ ಒಗದ್ದಾನೊ ಎನೋ ಹೊಗುವ್ಯಾಳೆದಾಗ ಅಡ್ಡಗಾಲ ಹಾಕ್ಕೊಂಡ ಕುಂಡತಾನ ನೋಡ ಎನ ಮಾಡ್ಲಿ....?ಹಾಂಟಕುಡ್ಯಾಂವ ಅಪ್ಪ ಹಿಂಗ ಕಾಡಿ ಕಾಡಿ ಶೆಟಗೊಂಡ ಹ್ವಾದಾ...ಈಗ ಇತರದ ಚಾಲು....... ಬಸ್ಸಗೋಳೆನ ನಮ್ಮನೀವಾ...? ಅಂತ ಸಿಡಿಮಿಡಿಗೊಳ್ಳುತ ಪೀಪೀ ಹುಡುಕಲು ತಾನು ಮುಂದಾದಳು.ಆದರೆ ಚಿನ್ನವ್ವನ ಅವ್ವ ಮಾದೇವಿಗೆ ಮಗಳ ನಡುವಳಿಕಿ ನೋಡಿ ಬಾಳ್ ಕೆಟ್ಟನಿಸಿತು, ಮನಿ ಮಗಳ ಹೀಂಗ ವೈರ ಸಾಧಿಸಿದರ ಮನಿತನಾ ಉದ್ದಾರಾಗತಾವಾ ...,ತಾಯಿ ತಂದಿ ನೆಮ್ಮದಿಯಿಂದ ಬದಕಕಾಗುತ್ತಾ.. ..?""ತೌರಮನಿ ಮ್ಯಾಲ ಹಿಂಗ ಹಗಿ ಸಾದಿಸಬ್ಯಾಡ ಮಗಳ..ಒಂದಿತ್ತ ಒಂದಿಲ್ಲ..ಸರಿದೂಗಿಸ್ಕೊಂಡ ಹೋಗ, ಮುಂದಿನ ಸಲಾ ನಿನಗ ರೂಪಾ ಮಾಡಿ ಕಳಿಸತಿವಿ, ಈ ತಿಂಗಳ ನಮ್ಮ ಕೈ ಕಾಲಿಯಾಗ್ಯಾವ.ಅಂತ ಆಜೂ ಬಾಜು ಮಂದಿಗಿ ಕೇಳದಿರಲಂತ ಸನ್ನದನಿಲಿ ಕೇಳಿಕೊಂಡರೆ, ಮೊದಲೇ ಸಿಟ್ಟುಗೊಂಡಿದ್ದ ಚಿನ್ನವ್ವಳಿಗೆ ಈ ಮಾತಿನಿಂದ ಮತ್ತಷ್ಟು ಪುಷ್ಠಿದೊರಕಿದಂತಾಗಿ ""ಯೆಲ್ಲಾ ಹೆನ್ಮಕ್ಕಳಿಗಿ ಮಾಡಿದಂಗ ನನಗು ಮಾಡಬೇಕವ.....ನನಗ್ಯಾರದಾರ ...ಅತ್ತೋ....ಮಾವೋ......ಗಂಡೋ...? ನನ್ನ ಗಂಡ ಜೀವಂತಿದ್ದಿದರೆ ನಾಯಾಕ ಇನ್ನೊಬ್ಬರ ಬಾಗಲದಾಗಿ ನಾಯಿಯಾಗಿ ಬಂದ ನಿಲ್ಲಬೇಕಾಗತ್ತಿತ್ತು ಹೇಳು...? ಅಂತ ತನ್ನ ಹಳೇ ಶೋಕವನ್ನು ತೋಡಿಕೊಂಡಳು.ಜಾತ್ರೆಗೆಂದು ಬಂದು ಜನ ಬೆಳಿಗ್ಗೆ ಬೆಳಿಗ್ಗೆನೆ ಮನೇಲಿ ಈ ರಂಪಾಟವನ್ನು ನೋಡಿ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ ಎದ್ದವರಲ್ಲಿ,ಕೆಲವರು ಹೊರಗಡೆ ಹೋದರು,ಕೆಲವರು ಮುಖ ತೊಳೆಯಲು ಕುಳಿತರೆ,ಇನ್ನು ಕೆಲವರು ಹಲ್ಲುಜ್ಜುತ ತಮಾಷೆ ನೋಡುತ್ತಿದ್ದರು,ಸೋಜಿಗವೆಂಬಂತೆ ಕಿಟ್ಟಿಯ ಪೀಪೀ ಇನ್ನು ಸಿಕ್ಕಿರಲಿಲ್ಲ ಅದನ್ನು ಹುಡುಕಿಕೊಂಡೆ ಹೊಗಬೇಕೆನ್ನುವ ತವಕ, ಅಲ್ಲಿಯವರೆಗೆ ಅವನಿಗೆ ಸಮಾಧಾನವಿಲ್ಲ.ಅಲ್ಲದೆ ಬೇರೊಂದು ಕೊಳ್ಳಲು ಅವನ ಬಳಿ ದುಡ್ಡು ಇಲ್ಲ.ಇಂತದ್ದನ್ನ ತೆಗೆದುಕೊಳ್ಳಲು-ಯಾ-ಕೊಡಸಿಕೊಡುವ ಯಾವ ಪುಣ್ಯಾತ್ಮರು ಅಲ್ಲಿಲ್ಲದ ಕಾರಣ ಈ ಪೀಪೀಯನ್ನ ಯಾವುದೇ ಕಾರಣಕ್ಕೆ ಸರಿ ಹುಡುಕಿಕೊಂಡೆ ಹೊಗಬೇಕಿತ್ತು.ಆ ಹೊತ್ತಿಗೆ ಅಟ್ಟದ ಮೇಲೆ ಮಲಗಿದ್ದ ಚಿನ್ನವಳ ತಂಗಿ ಅವಳ ಗಂಡ ಅದೇ ತಾನೆ ಎದ್ದಿದ್ದರು ಸುಶೀಲಾ ಅಕ್ಕನ ರಾದ್ಧಾಂತ ಕೇಳಿ ಕೇಳಗಿಳಿದು ಬಂದವಳೆ" " ಅಕ್ಕಾ ಕಿಟ್ಟಿಗೆ ಬ್ಯಾರೇ ಪೀಪೀ ತಗೊಲಿ ನಾ ರೊಕ್ಕಾ ಕೊಡತಿನಂತ ಬೆಳಿಗ್ಗೆ ಬೆಳಿಗೇ ಎಲ್ಲೆಂತ ಹುಡುಕತಾನ ...? ಅದಕ್ಕಾಗಿ ನೀ ಯಾಕ ಸಿಟ್ಟ ಮಾಡ್ಕೋತಿ...?ಕಿಟ್ಟಿಗಿ ಇವತ್ತ ಜಾತ್ರ್ಯಾಗ ಕರಕೊಂದ್ಹೊಗಿ ಪೀಪೀ, ಚಂಡಾ ಕೊಡಿಸಿ ನಾಳಿ ನಾನು ಅವರು ಮನೀಗಿ ತಂದ ಬಿಡ್ತಿವಿ ಹೊಗ್ಲಿ ಬಿಡು...ಅಂದಳು.ಮನೇಲಿ ಮಲಗಿದವರ ಪೈಕಿ ಎಲ್ಲರು ಇಷ್ಟೊತ್ತಿಗಾಗಲೆ ಎದ್ದಿದ್ದರು,ಮನೇ ಬೀಗರಿಂದ ತುಂಬಿ ಹೋಗಿತ್ತು.ಹಳೇಯ ಮುದುಕರೆಲ್ಲ ಜಾತ್ರೇ ಕಟ್ಟೆ ಕೆಳಗೆ ಕುಳಿತು ಹರಟೆ ಹೊಡೆಯುತ್ತಿದ್ದರೆ ಊರಿಗೆ ಹೊರಟವರು ಸ್ನಾನಕೆ ಗಡಿಬಿಡಿ ಮಾಡುತ್ತಿದ್ದರು,ಚಹಾ ಉಪ್ಪಿಟ್ಟಿನ ಸರಬರಾಜು, ಯುವಕ ಯುವತಿಯರ ತಲೆಬಾಚಿಕೊಳ್ಳುತ ಸಿದ್ದರಾಗುತ್ತಿದ್ದರೆ,ಮನೇ ಕಡೇ ಕೆಲ ಬೀಗರು ಚಿನ್ನವ್ವನ ಹಾಗೆ ಬೇಗ ಬೇಗನೆ ಬೆಳಗಿನ ಬಸ್ಸು ಹಿಡಿಯಲು ತಯ್ಯಾರಾಗುತ್ತಿದ್ದರು,ಅವರವರ ಬಟ್ಟೆಗಳು, ತಂದ ಸಾಮಾನು ಮನೇಲಿ ಕೊಟ್ಟ ಸೀರೆ, ರವಿಕೆ ಇತ್ಯಾದಿ ಉಡುಗೊರೆಗಳನ್ನು ತಮ್ಮ, ತಮ್ಮಲ್ಲಿಯೆ ಇವೆಯೊ ಇಲ್ಲವೊ ಎಂಬುದನ್ನು ಕಾತ್ರಿ ಮಾಡಿಕೊಂಡು ಚೀಲ ತುಂಬಿಕೊಳ್ಳೂತ್ತಿದ್ದಾರೆ,ಇನ್ನು ಕೆಲವರು ಜಾತ್ರೇಲಿ ತಂದ ಚುರುಮುರಿ,ಬತ್ತಾಸು,ಉಂಡಿ ಇತ್ಯಾದಿ ಸಿಹಿ ಪದಾರ್ಥಗಳ ಹಾಗು ಖರ್ಚು ಮಾಡಿದರ ಲೆಕ್ಕ ಮಾಡಿಕೊಳ್ಳೂತಿದ್ದರು. ಚಿನ್ನವ್ವ ಕಿಟ್ಟಿಯ ಪೀಪೀಯ ಹುಡುಕುತ ಹಿತ್ತಲಕಡೆ ಬಂದಾಗ ,ಅಲ್ಲಿ ದೊಡ್ಡ ಹಂಡೆಗೆ ಉರಿ ಹಚ್ಚಿ ನೀರುಕಾಯಿಸುತ ಕುಳಿತಿದ್ದ ಹುಡುಗರ ಬಳಿ ಬಂದು "" ಏ ಶಂಕ್ರಾ ನಮ್ಮ ಕಿಟ್ಟಿಯ ಪೀಪೀ ತಗೊಂಡಿಯೇನೋ ...? ಎಂದು ಗದರಿಸುವ ರೀತಿಲಿ ಕೇಳಿದಳು,ಅಲ್ಲೇ ಕುಳಿತಿದ್ದ ಆ ಹುಡುಗನ ತಾಯಿ ತಲೇ ಬಾಚಿಕೊಳ್ಳುವುದನ್ನ ನಿಲ್ಲಿಸಿ"" ಇಲ್ಲ ಚಿನ್ನವ್ವ ನಮ್ಮ ಹುಡುಗ ದೊಡ್ಡವಾಗ್ಯಾನ ...ಪೀಪಿ ಚಂಡಾ ಆಡಾಕ ಅಂವೇನ ನಿನ್ನ ಮಗನ ವಯಸ್ಸಿನಾವ...? ಮತ್ಯಾರರೇ ಹುಡುಗರು ಆಡಾಕ ತಗಂಡಿರತಾವ ಕೇಳಿ ನೋಡರಿ....ಅಂದಳು ಚಿನ್ನವಗ ಮಾರಿಮ್ಯಾಲ ರಪ್ಪಂತ ಹೊಡೆದಂಗಾತು ,ಸಿಡಿಮಿಡಿಗೊಳ್ಳುತ ಅಲ್ಲಿಂದ ಕಾಲತೆಗೆದಳು. ಬೆಳಿಗ್ಗೆ ಹತ್ತ. ಹತ್ತುವರೆ ಗಂಟೆ ಸಮಯ, ಊರಿಗೆ ಹೊರಡುವರೆಲ್ಲ ಅದಾಗಲೆ ಬೆಳಗಿನ ಬಸ್ಸು ಹಿಡಿದು ಹೊರಟೊದರೆ ಚಿನ್ನವ್ವ ಮಾತ್ರ ಕಿಟ್ಟಿಯ ಪೀಪೀಯನ್ನ ಹುಡುಕುತ್ತಲೆ ಇನ್ನು ಇದ್ದಳು. ಲೇಟಾಗಿ ಎದ್ದ ಮಕ್ಕಳು ಸಾಮಾನು ಹಿಡಿದು ಅಂಗಳದಲ್ಲಿ ಒಂದಕ್ಕೊಂದು ಸೇರಿಕೊಂಡು ಆಡುತಿದ್ದರೆ ಮನೇಲಿ ಪಾತ್ರೆ ತಿಕ್ಕುವವರು,ನೀರು ತುಂಬುವವರು , ಹೀಗೆ ಉಳಿದ ಹೆಂಗಸರು , ಹುಡುಗಿಯರು ಒಂದೊಂದು ಕೆಲಸದಲ್ಲಿ ನಿರತರಾಗಿ ಬಿಟ್ಟಿದ್ದರು.ಅಷ್ಟರಲ್ಲಿ ಮಾದೇವಿ ಬುಟ್ಟಿತುಂಬಾ ರೊಟ್ಟಿ ಬಡೆದು ಬೆವರು ಒರೆಸಿಕೊಳ್ಳುತ ಅಂಗಳಕ ಬಂದಾಗ ಚಿನ್ನವ್ವ ಅಲ್ಲೇ ಸುಳಿದಾಡುತ್ತಿದ್ದಳು ಮಾದೇವಿ ಚಿನ್ನವ್ವನ ಬಳಿ ಬಂದು ,
""ಚಿನ್ನವ್ವ ಆ ಪೀಪೀ ಸಿಗದಿರ ಇನ್ನೊಂದ ಪೀಪೀ ತಗೊಳೊನು ಕೈಚೀಲ ಹಿಡಕೊಂಡ ಅಂಗಳದಾಗ ಹಿಂಗ್ಯಾಕ ನಿದರತಿ ..?ಊರಿಗಿ ಹೊಗೊದಾದರ ಸಂಜಿಮುಂದ ಹೋಗುವಂತಿ , ಮಧ್ಯಾನ ನಾನ, ನೀನ ಇಬ್ರೂ ದೇವರಿಗೆ ಹೋಗಿ ಬರುವಾಗ ಇನ್ನೊಂದ ಪೀಪೀ ಕೊ0ಡ ತರೋಣ ಈಗ ಒಳಗ ನಡಿ.ಅಂತ ಅಂದಳು. .
""ಅಂದರ ...ಪೀಪೀ ನೆವ ಮಾಡಿ ಊರಿಗಿ ಹೊಗೊದ ಬಿಟ್ಟಳು ಅಂತ ಊರ ಮ0ದಿಯೆಲ್ಲ ನನ್ನ ತಿವಿದ ಮತಾಡಬೇಕೆನ..?ಮನಿ ತುಂಬ ಇಷ್ಟ ಜನಾ ಅದಾರ ಮನ್ಯಾಗಿನ ಸಾಮಾನ ಮನಿಬಿಟ್ಟ ಬ್ಯಾರೆ ಯಾವಕಡೆ ಹೊಗತೈತಿ ಹೇಳವಾ....?ನಾನು ಬಡವತಿ ಇರವಲ್ಲನ್ಯಾಕ.ಖರೇ, ತುಡುಗಿಯೆನಲ್ಲ....ಆ ಪೀಪೀ ಕಳಿತು ಅಂತ ಈ ಮನ್ಯಾಗೆನ ಇರತಿನ0ತಳಿಬ್ಯಾಡ....ತಿಳ್ಕೊ...ನೀ ಸಾಪ ಎಳಿದ ನನ್ನ ಸಮಾಧಾನ ಮಾಡಾಕ ಬ0ದದಿ ನನಗು ತಿಳದೈತಿ ಮಕ್ಕಳ0ದರ ಎಲ್ಲಾರು ಅಷ್ಟ ನಿಮಗ...ತಾಯಿ ತಂದಿಯಾಗಿ ನೀವ ಬೇಧಬಾವ ಮಾಡಿದರ ಕಿಮ್ಮತ ಬರು ಮಾತಲ್ಲಿದು...ಗಂಡಿದ್ದವರ ಹೆಂಗೊ ನಿಭಾಯಿಸಿಕೊ0ಡ ಹೊದಾರ, ಗಂಡಿಲ್ಲದಾಕಿ ನಾನ ಯಾಕ ಬರತಾಳಿಕಿ ಮನೀಗಿ ಅನ್ನವರ0ಗ ಮಾಡತಿರಿ......ಅಂತ ಅತೀ ಕೋಪ ಬೆರೆತ ದನಿಯಲ್ಲಿ ಹೇಳಿದಳು.ಆ ಮಾತು ಮಾದೇವಿಯ ಎದಿಗಿ ತಿವಿದ0ಗಾಯ್ತು, ಈಕೀ ತಾ ಹೆತ್ತ ಮಗಳಾ....? ಅಂತ ಅನುಮಾನ ಬ0ತು,ತನ್ನ ಮೇಲೆ ಮತ್ತು ಮನೆತನದ ಮ್ಯಾಲೆ ಹಿಗೆ ಹಟ ಸಾದಿಸುವುದನ್ನ ಕ0ಡು ಮನಸ್ಸಿಗಿ ಬಾಳ ಬೆಸರವೆನಿಸಿತು. ""ಹರ್ಯಾಗಳೆದ್ದ ಇದೇನವ್ವ ನಿನ್ನ ರೀತಿ...? ಮ0ದಿ ಮಕ್ಕಳೆಲ್ಲ ಹೊಗಲಿ ಸುಮ್ಮನಿರು ಎನಿದ್ದರು ಆಮ್ಯಾಲ ಮಾತಾಡೊಣ0ತ ನನ್ನ ಮಾತ ಕೇಳ....ಎ0ದು ಮು0ದೆ ಬ0ದು ತಿಳಿಸಿ ಹೇಳಿದಷ್ಟು ಚಿನ್ನವಳಿಗೆ ಸಿಟ್ಟು ತಾರಕ್ಕೇರಿತು, ವ್ಯರ್ಥವಾಗಿ ಪೀಪೀ ಹುಡುಕುತ್ತಿದ್ದ ಕಿಟ್ಟಿಯ ಅಸಹಾಯಕ ಸ್ಥಿತಿಗೆ ಕೋಪ ಇನ್ನು ಹೈ ರೇ0ಜಲ್ಲೇರಿ"" ಈ ಹಾ0ಟ್ಯನಿಂದ ಯಾರ್ಯಾರ ಕೈಲಿ ಇನ್ನು ಎನೇನ ಅನಿಸಿಕೊಳ್ಳಬೇಕಾಗೆದೊ ಎನೋ.. ಅವನ ಮಾರಿಗಿ ತಿವಿದು ಕೈಹಿಡಿದು ದರದರ ಎಳೆಯುತ ಅಂಗಳಕ ಬ0ದಳು.ಕಿಟ್ಟಿ ನನಗ ಪೀಪೀ ಸಿಗೊವರೆಗು ಬರಲ್ಲ0ತ ಹಟಮಾಡುತ ಮಾಡುತ ಕೈಕೊಸರಿಕೊ0ಡ ಓಡಿ ಹೋದನು. ಹೊರಗಡೆ ಹೊಗಿದ್ದ ಚಿನ್ನವಳ ಹಿರಿಯಣ್ಣ ಗುರುಸಿದ್ದ ಇವರಾಟವ ನೋಡಿ ತಲಿ ಗಿರ್ರ್ ಅಂದು ""ಯಾವ ಜನ್ಮದ ಪಾಪಾನೊ ..ಎನೋ ನೀ ನಮಗ ತಂಗಿಯಾಗಿ ಹುಟ್ಟಿ ಕಾಡಾತದಿ ನೋಡು.. ಯಾವದಕ್ಕು ಒ0ದ ಮಿತಿಬ್ಯಾಡೆನು....? ಮಾವ ಸತ್ತದ್ದ ಎಷ್ಟ ಬೇಷಾತ ಅಲ್ಲಾ...?, ಯಾರ ತಾಳತಾರ ನಿನ್ನ ಈ ಹಿ0ಸೆಗೆ...? ಗಂಡ ಸತ್ತ ರ0ಡಿಮು0ಡಿ ತಲಿಮ್ಯಾಲ ಸೆರಗ ಹೊತ್ತಗೊ0ಡ ಗಂಡಸರ ಮರಿಯಾಗಿ ಹೆಂ ಗಿರಬೇಕ...?ಏನ ದೊಡ್ಡ ಪೀಪೀಗಾಗಿ ಇಡಿ ನಮ್ಮ ಜನ್ಮಾನೆಲ್ಲ ಜಾಲಾಡಿ ಬಿಡ್ತದ್ದಿಯೆಲ್ಲಾ ಮನುಷ್ಯಳಾ...ನೀ...? ಅಂತ ಕೂಗಿದ ಸಿಟ್ಟಿನಿಂದ ಅವನ ಮೈ ಕುದಿಯುತಿತ್ತು ಅಷ್ಟರಲ್ಲಿ ಮಾದೇವಿ ಮದ್ಯ ಬಾಯಿ ಹಾಕಿ
"" ಇರ್ಲಿ ಬಿಡೆಪಾ..ಗುರಸಿದ್ದ..ಇದನ ದೊಡ್ಡದ ಮಾಡಬ್ಯಾಡ,ಕೈಗಿ ಕಾಲಿಗಿ ಕೈ ಹಚ್ಚತಿವ0ದರ ಹಣಿಬರಹಕ ಯಾರ ಕೈಹಚ್ಚಾಕ ಬರತದ...? ಅಕಿ ನಸೀಬ ಕೊಟ್ಟೈತಿ ಯಾರೇನ ಮಾಡೊದ....ನೀ ಹಿ0ದಿನದೆಲ್ಲ ಕೆದಕಿ ತೆಗೆದು ಮನಸ ನೊಯಿಸಬ್ಯಾಡ, ಅಕೀಗಿ ನಾ ತಿಳಿಸಿ ಹೇಳತಿನಿ ನೀ ನಡಿ ಒಳಗ ನೀರ ಕಾದಾವ ಜಳಕಾ ಮಾಡನಡಿ.ಎ0ದು ಎಲ್ಲವನ್ನು ಶಾ0ತಗೊಳಿಸಲು ಮಾದೇವಿ ಮು0ದಾದಳು
."" ಏ ಶಾಲು ನಿನ್ನ ಪೀಪೀ ಕೊಡೆವ್ವ ಅಣ್ಣಾಗ ..ನಾವ ಆಮ್ಯಾಲ ಜಾತ್ರ್ಯಾಗ ಹೊಗೊಣ ಹೊಸಾ ಪೀಪೀ ಚ0ಡಾ ತರೋಣ0ತ ಮಾದೆವಿ ಮೊಮ್ಮಗನಿಂದ ಅಂತದೆ ಮತ್ತೊ0ದು ಪೀಪೀ ಇಸಿದು ಕೊಡಲು ಮು0ದಾದಾಗ,ಆ
ಹುಡುಗ ನಿರಾಕರಿಸುತ""ಆಯೀ ಜಾತ್ರೆಲ್ಲ ನಿನ್ನ ಮುಗೆದೈತಿ ಗುಡಿ ಮು0ದ ಯಾವ ಅಂಗಡಿ ಇಲ್ಲ, ನಿನ್ನಿ ನಮ್ಮಪ್ಪ ನಾನ ಸ0ಜಿಮು0ದ ಗುಡಿ ಕಡೆ ಹೊದಾಗ ನೋಡಿದೇವ ಯಾರು ಇಲ್ಲಲ್ಲಿ ನಾ ಕೊಡಾ0ಗಿಲ್ಲವಾ...ಅಂತ ಮುನಿಸಿಕೊ0ಡು ಅಲ್ಲಿ0ದ ಓಡಿಹೊಯಿತು.ಕ್ಷಣಕ್ಷಣಕು ಚಿನ್ನವನಿಗೆ ಹಿ0ಸೆಯ ಜೊತೆ ಅವಮಾನವು ಮಾಮುಲಾಗತೊಡಗಿತು ತನ್ನನ್ನು ತಾನೆ ಸಮಾದಾನ ಮಾಡಿಕೊಳ್ಳುವ ಪರಿಸ್ಥಿತಿಗೆ ಒಗ್ಗಬೇಕಾಗಿ ಬ0ತು ವಿಷಾದದಿ0ದ ""ಬ್ಯಾಡಬಿಡವ್ವಾ ಇನ್ನೊಬರ ಪೀಪೀ ನಮಗ್ಯಾಕ ಬೇಕು...ನನ್ನ ಹಾ0ಟ್ಯಾನ ಮಗ ಎಲ್ಲಿ ಆಡಾಕೊಗಿ ಕಳದೈತಿ ಯಾರಿಗ್ಗೊತ್ತು...?ಅಪ್ಪನ ಶೆಡಗರ ಮುಗಿತನಗುಡದ ಮಗನದ ಶುರುವಾಗಬೇಕಲ್ಲ.ಹಾ0ಟ್ಯಾನ ಸಾವು ನನಗ್ಯಾಕ ಬರವಲ್ಲದೊ ಎನೋ..ಅಂತ ಚಿನ್ನವ ಕಣ್ಣಿರ ತಂದಳು.ಕಿಟ್ಟಿ ಎಲ್ಲವನ್ನು ದೂರದಿ0ದಲೆ ಚೌಕಟ್ಟಿಗೆ ಮೈಯಾನಿಸಿ ನಿಂತಕೊ0ಡು ಕೇಳುತಿದ್ದ.ಚಿನ್ನವನ ಗಂಡ ಹನಮ0ತು ಹಾವು ಕಡಿದು ಸತ್ತನು ಆಗ ಕಿಟ್ಟಿಗೆ ಒ0ದು ವಷ9 ವಯಸ್ಸು ಚಿನ್ನವ ಹೊಸದಾಗಿ ಮದುವೆಯಾಗಿ ಗಂಡನ
ಮನೆಗೆ ನಡೆಯಲು ಬ0ದಾಗೆಲ್ಲವು ಸ್ವರ್ಗವನ್ನ ಮೀರಿಸುವ0ತಿತ್ತು, ಹನುಮ0ತ ಸ್ವಭಾವತ ಒಳ್ಳೇ ಐನಾತಿ ಮನುಷ್ಯ,ಅಷ್ಟೇ ಬಾಯಿಬಡಕ,ಶ್ರಮವಹಿಸಿ ದುಡಿಯುವ ರೈತ,ಮನೇಗೆ ಎಲ್ಲ ಅನುಕೂಲ ಮಾಡಿಕೊ0ಡಿದ್ದ
ಸದ್ದಗೃಹಸ್ತ ಅವನ ವಿನಾಶದ ಕಾಲಕೆ ರಾತ್ರಿ ಕಬ್ಬಿನ ಗದ್ದೆಗೆ ನೀರು ಬಿಡಲು ಹೋದಾಗ ಹಾವು ತುಳಿದು ಕಡಿಸಿಕೊ0ಡುಹೆಣವಾಗಿ ಮನೆಗೆ ಬ0ದಿದ್ದ,ಅಂದಿನಿಂದಲೆ ಚಿನ್ನವಳ ಬಾಳು ದುಗ9ಮವಾಗುತ ಬ0ತು, ತುತ್ತು ಕೂಳಿಗು ವ್ಯಥೆಪಡುವ ಸ್ಥಿತಿಗೆ ಬ0ದಳು ಒ0ದ ದಿನ ಹೊಲದ ಕಡೇ ಹೊಗಲಿಲ್ಲ ಬೆಳೆ ಎನು..ಎತ್ತ..ನೋಡಲಿಲ್ಲ ಹೀಗಾಗಿ ಎಲ್ಲ ಹಾಳಾಗುತಲೆ ಬ0ದಿತ್ತು.
ಕಿಟ್ಟಿ ಎಷ್ಟು ಹುಡುಕಿದರು ಪೀಪೀ ಸಿಗದೆ ಹೊಯ್ತು,ಜೊತೆಗೆ ಆತಂಕ,ದುಗುಡು,ಸಿಟ್ಟು,ಆವೇಶ ತನ್ನವ್ವನ ಸಿಡಿಮಿಡಿಎಲ್ಲವು ಅವನ್ನ ವಿರೂಪಗೊಳಿಸಿದವು ಅವಮಾನ ಮನಸ್ಸನ್ನು ಮುತ್ತಿಕ್ಕಿಕೊಳ್ಳುತಿದ್ದ0ತೆ ತನ್ನತನ ಎನ್ನುವ ಪ್ರಜೆ ಮರೆಯಾಗತೊಡಗಿತು.ಇದರ ಎರಡರಷ್ಟು ಅನುಭವ ಚಿನ್ನವಳ ಎದೆಯಲ್ಲಿ ಕುದಿಯುತಿತ್ತು ಅಟ್ಟದ ಕೋಣೆಯೊ0ದರಲ್ಲಿ ಹಳೇಯ ವಸ್ತುಗಳ ಮದ್ಯ ಹುಡುಕುತ್ತಿದ್ದ ಕಿಟ್ಟಿಯನ್ನು ಕ0ಡು ಚಿನ್ನವ ಕೊಪದಿ0ದ ಚ0ಡಿಯಾದಳು ಸಿಟ್ಟು ಅವಳ ಹದ್ದುಮೀರಿಹೊಯ್ತು
""ಕಿಟ್ಟಿ ಕೆಳಗಿಳದ ಬರ್ತಿಯಿಲ್ಲೊ...ಹಾ0ಟ ಕುಡ್ಯಾ0ವನ ಯೆಷ್ಟರ ಜೀ0ವಾ ತಿ0ತೀನೊ ಬಾಡ್ಯಾ...ನಿನ್ನ ಹಲ್ಲಿಗಿ ನನ್ನ ಹಾ0ಟ ಹನಿಸ್ಲಿ...ಬಿಕನಸಿ ಬಾವಾ...ಕೊ0ದ ಒಗಿತಿನಿ ನಿನ್ನ...ಎ0ದು ಕೂಗಿದಳು ಕಿಟ್ಟಿಗು ತಲಿಕೆಟ್ಟ ಹೊಗಿತ್ತು ಮು0ಜಾನೆಯಿ0ದ ಇವಳಾಟವೆಲ್ಲ ನೋಡಿ ರೋಷಿಹೊಗಿದ್ದವನು
""ನಾ ಬರುದುಲ್ಲ ನೀ ಒಬ್ಬಾಕಿನ ಹೊಗೊದಿದ್ದರ ಹೊಗು..ನಾ ಯಿಲ್ಲೇ ಇರ್ತಿನಿ..ಹಟಹಿಡಿದು ಹೇಳಿದ.ಚಿನ್ನವಗ ಅವಮಾನವಾಯ್ತು ತನ್ನ ಮಗ ತನ್ನ ಮಾತ ಕೇಳದಿರ ನನ್ನ ಮಾತಿಗಿ ಇನ್ನ್ಯಾರ ಬೆಲಿ ಕೊಡತಾರ...? ಬೇಡಿದರು ಸಿಗದಿದ್ದಾಗ ಜಗಳಾಡಿಯಾದರು ತಗೋಳೊಣ0ದುಕೊ0ಡಳು""ಬರಾ0ಗಿಲ್ಲ0ತಿಯೆನೊ ಬಾವಾ ನನಗ ಹೊಳ್ಳಿ ವಾದ ಹಾಕತಿ... ಇಳಿ ಕೆಳಗ ಮೊದಲ... ಇಲ್ಲಿ ನೋಡ...ಎ0ದು ತನ್ನ ಕಾಲಾಗಿನ ಚಪ್ಪಲಿ ಹಿಡಿದು ಬೀಸಿ ಒಗೆಯಲು
ಮು0ದಾದಳು"" ಕೆಳಗಿಳಿದ ¨0ದಿ..ಪಾಡಾತ...ಇಲ್ಲದಿರ ನೋಡ... ? ಎ0ದು ಮಗದೊಮ್ಮಿ ಹೆದರಿಸಿದಳು,ಕಿಟ್ಟಿ ಅವಳ ಯಾವ ಮಾತನ್ನು ಲೆಕ್ಕಿಸದೆ ಮತ್ತೇ ಹುಡುಕುವ ಕಾಯಕದಲ್ಲಿ ನಿರತನಾದ,ಚಿನ್ನವ ಈಗ ದುಗಿ9ಯಾದಳು ಕಾ¯ಲ್ಲಿರುವ ಚಪ್ಪಲಿಯನ್ನ ಕೈಯಲ್ಲಿ ಹಿಡಿದು ಬೀಸಿ ಕಿಟ್ಟಿಯೆಡೆಗ ಒಗೆದಳು, ಅದು ಕಿಟ್ಟಿಗೆ ತಗಲದೆ ಮೇಲಿನ ತೊಲೆಗೆ ಬಡೆದು ಆ ಕಡೆಯಿ0ದ ಕೆಳಗಿಳಿದು ಬರುತ್ತಿದ್ದ ಸುಶೀಲಾಳ ಗಂಡನ ಮಾರಿಗೆ ರಪ್ಪ0ತ ಹೊಡೆಯಿತು ಜಳಕಮಾಡಿ ಅದೆ ಹೊರಬರುತ್ತಿದ್ದ ಗುರುಸಿದ್ದ ಅದನ್ನು ನೋಡಿದ, ಮೈಯೆಲ್ಲ ಕೋಪದಿ0ದ ಬುಗಿಲೆದ್ದಿತು, ಬೆಳಗಿನಿಂದ ಒ0ದಲ್ಲಾ ಒ0ದರೀತಿಲಿ ಕಾಡುತ್ತಿದ್ದ. ಚಿನ್ನವಳ ಮ್ಯಾಲೆ ಪಿತ್ತ ನೆತ್ತಿಗೆರಿತು "" ಥೂ ಹಾದ್ರಗಿತ್ತೆ..ದೆವ್ವ ಗಿವ್ವ ಹಿಡ್ಕೊ0ಡೈತೆ ಹೆಂ ಗ...?ಹೊ¸ದಾಗಿ ಮನಿ ಅಳಿಯಾ ಮನೀಗಿ ಬ0ದರ ಚಪ್ಪಲಿಲೆ ಒಗಿತಿಯಲ್ಲೆ.... ಮನಿಶೆರಿಗಿ ಹುಟ್ಟಿದ್ಯೊ....ದನಿಗಿ ಹುಟ್ಟಿದ್ಯೊ.......ಎ0ದು ರೇಗಿದ. ಅಷ್ಟರಲ್ಲಿ ಹೊರಗಡೆ ಹೊಗಿದ್ದ ಚಿನ್ನವಳ ಅಪ್ಪ. ಶಿವಶ0ಕರ ಮನೇಯಿ0ದ ಬರಿತ್ತಿರುವ ಸದ್ದು ಕೇಳಿ...ಹೌಹಾರಿ ದೌಡಾಸಿದ .... ಒಳ ಬ0ದು "" ಯಾಕೊ ಗುರುಸಿದ್ದ ಮ0ಗ್ಯಾನ0ಗ ಒದರ್ಯಾಡಾತಿ... ಹಬ್ಬ ಹುಣ್ವಿದಿನಾರೇ ಜಗಳಿಲ್ಲದ ಮನಿಯೊಳಗ ನೆಮ್ಮದಿನ ಇಲ್ಲ, ಶನಿ ಹುಟ್ಟಿದ0ಗ ಹುಟ್ಟಿದಿರಲ್ಲೊ ಕಾಡೊದಕ್ಕ.....? ಮನೀಗಿ ಮ0ದಿ ಮಕ್ಕಳ ಬ0ದಿರತಾರ ಎನ ತಿಳಕೊ0ಡಾರನ್ನು ಅಂಜೀಕಿ ಬ್ಯಾಡಾ...? ಅದ್ಯಾರ ತಲಿ ಹೊ0ಟೈತೆ0ತ ಹಿ0ಗ ಕೂಗ್ಯಾಡಾತಿ......ಹೆಂ ಡತಿಯತ್ತ ತಿರಿಗಿ....:
“ನೀ ಇಲ್ಲೆಕ0ಬ ನಿಂತಂಗ ನಿಂತಿದಿಯಲ್ಲೆ ಹುಚ್ಚಬೋಸಡೆ ಹೇಳಬಾರದೇನ...?ಎ0ದು ಹೆಂ ಡತಿ ಮ್ಯಾಲ ಹರಿಹಾಯ್ದ. ಅವಳು ದುಕ್ಕದಿ0ದ ಮುಖ ಒರಿಸಿಕೊಳ್ಳುತ "" ಆ ಯಾ0ವ ನನ್ನ ಹಾ0ಟ್ಯಾನ ಪೀಪೀ ಇಷ್ಟೆಲ್ಲ ರಾಡಿ ಮಾಡೆತಿ ನೋಡ, ಅಕಿ ಬೆಳಿಗಿ ಬೆಳಿಗ್ಗಿನ ಹೋಗತಿನ0ತ ಕೈಚೀಲ ಹಿಡಕೊ0ಡ ರಸ್ತಾದಾಗ ನಿಂತಾಳ, ನಿನ್ನಿ ಜಾತ್ರ್ಯಾಗ ಪೀಪೀತಗೊ0ಡಿದ್ದ0ತ ಕಳದೈತಿ ಸಿಗವಲ್ದು,ಇಕೀ ಬಾರೊ ಹೊಗೊಣ ಅಂತಾಳ ಅವ ಪೀಪೀ ಸಿಗೊತಾನ ಬರಾ0ಗಿಲ್ಲ0ತಾನ ಇಕೀ ಕರಿಯೊದ ಬಿಡತಿಲ್ಲ, ಅವ ಹೊರಗ ಬರಾನಿಲ್ಲ...ಇದ ಜಗಳ......ವಾದಿಗಿ ವಾದ ಬೆಳದು ಗುರುಸಿದ್ದ ಚಿನ್ನವನ ಎರಡ ಬೈದ,ಇಕೀ ಅದ ಸಿಟ್ಟಿನಾಗ ಚಪ್ಪಲಿಲೆ ಒಗೆದಳು ಅದು ಹೋಗಿ ಸುಶಿಲವ್ವನ ಗಂಡಗ ಕು0ತಿತು,ಮೊದಲ ಅವನ ಸಮಾದಾನ ಮಾಡ ನಡಿ...ತಪ್ಪಾಗೆತಂತ ಕಾಲ ಹಿಡಿಯೊಣ....ಅಂದಳು,ಮಾದೇವಿ,ಶಿವಶ0ಕರ,ಗುರುಸಿದ್ದಚಿನ್ನವ್ವ ಮನೀಗಿ ಬ0ದಿದ್ದ ಕೆಲ ಹಿರಿಯರು,ಹುಡುಗರು
ಅಟ್ಟದ ಮ್ಯಾಲಿನ ಕೋಣಿಯತ್ತ ದಾವಿಸಿದರು ಸುಶೀಲಾಳ ತನ್ನ ಮನೇಲಿ ತನ್ನ ಗಂಡನಿಗೆ ತನ್ನೇದುರಲ್ಲೆ ಆದ ಅವಮಾನ ನೋಡಿ ಬೇಹೊಶ ಆಗಿ ಗಂಡನ ಒಳಕರೆದು ಕೊ0ಡು ಬಾಗಲು ಹಾಕಿದಳು ಎಲ್ಲ ದುಬು ದುಬು ಓಡಿಬ0ದು ಅಮ್ಮಯ್ಯ,ದಮ್ಮಯ್ಯ ಎ0ದು ಬೇಡಿಕೊ0ಡರು,ಕೂಗಿದರು,ಪರಿಪರಿಯಾಗಿ ಕರೆದರು ಅವಳು ಬಾಗಿಲ ತೆರೆಯಲಿಲ್ಲ,ಪಿಟ್ಟ0ತ ಉಸಿರು ಬಿಡಲಿಲ್ಲ. ಹತಾಶನಾಗಿ ಅಲ್ಲೇ ಕುಸಿದು ಕುಳಿತ ಶಿವಶ0ಕರ""ಇನ್ನು ಎನೇನ ನೋಡಬೇಕೊ ಎನೋ ಈ ಮನಿಯೋಳಗ..ಎ0ದು ಮರುಗಿದ.""ನೀ ಊರಿಗಿ ಬ0ದಾಗೊಮ್ಮಿ ನಗನಗತ ಎ0ದಾರ ಹೊಗಿದಿ ಹೇಳು....?ತಾಯಿತಂದಿನ,ಅಣ್ಣತಮ್ಮ0ದಿರನ ಬ0ದುಬಳಗದವರ ಜಲ್ಮಾನೆಲ್ಲ ಜಾಲಾಡಿ ಹಿಡಿಶಾಪ ಹಾಕಿ,ಸರಾಪಿಸಿಯೆ ಹೊಗ್ತಿಯಲ್ಲ....ಮನುಶ್ಯಳಾ ನೀ...?ನಿನ್ನ ಹಡೆದ್ದ ತಪ್ಪಾತಲ್ಲ....ನೀ ಹುಟ್ಟುಕಾಲಕ ನಾ ಷ0ಡಾದರು ಯಾಕಾಗಲಿಲ್ಲೊ ಪರಮಾತ್ಮಾ.....ಎ0ದು ಗೊಳೊ0ತ ಅತ್ತುಬಿಟ್ಟ. ಜಾತ್ರಿಗಂತ ಬ0ದ
ಬೀಗರು,ಬಿಜ್ಜರೆಲ್ಲ ಅಚಾನಕಾಗಿ ಘಟಸಿದ ಈ ಘಟಣೆಗೆ ಹೇಗೆ ಪ್ರತಿಕ್ರಿಯಿಸ ಬೇಕೊ ತಿಳಿಯದೆ ಒದ್ದಾಡಿದರು,ಈ ಕ್ಷಣದಲಿ ತಾವಿನ್ನು ಊರಿಗಿ ಹೊರಡಿತಿವಿ ಅನ್ನೊನವೇ, ಅಥವಾ ಇದರಲಿ ಭಾಗಿಯಾಗಿ ಬೆರೆತಿದಿವಿ ಇರ್ಲಿ ಮುಗಿಸಿಬಿಡಿ...ಅಂತ ಸಮಾದಾನ ಹೇಳಬೇಕೊ ತಿಳಿಯದೆ ಗೊ0ದಲಕೆ ಸಿಕ್ಕು ಅತಂತ್ರರಾದರು.ಶಿವಶ0ಕರ ಗುರುಸಿದ್ದನ ಕರೆದು, "" ಗುರಸಿದ್ದ ಮನಿಯೊಳಗ ಯಾರ್ಯಾರ ಅದಾರ,ಎನ ಕೆಲಸಾ ಮಾಡಾತಾರ ಅದನ ಅಲ್ಲೆ ಬಿಟ್ಟು ಉಟ್ಟ ಅರಿವಿಯ ಮ್ಯಾಲ ಹಾ0ಗ ಅಂಗಳಕ ಬರಾಕ ಹೇಳು..., ಮತ್ತಹೆಂ ಡತಿಯತ್ತ ತಿರಿಗಿ ""ಏ ಚಿನಾಲಿ
ಆ ಬೊಸಡಿನ ಒಳಗ ಕಳಿಸು ಅಕೀ ಮಗನ ಪೀಪೀ ಎಲ್ಲೇತಿ ಹುಡಿಕಿಕೊ0ಡ ಬರ್ಲಿ, ಹ0ಗ
ಬ0ದಳು ಬಿಡೊದಿಲ್ಲ ಹೋಗು ಕಳಿಸಕೀನ ಎ0ದು ಹೆಂ ಡತಿಗೆ ದಬಾಯಿಸಿದ,ಚಿನ್ನವನ ಹಟಮಾರಿ ಕೆಲಸಕ ಈಪರಿ ಸಿಟ್ಟು ಬ0ದುದರಲ್ಲಿ ತಪ್ಪಿರಲಿಲ್ಲ. ಮಾದೇವಿ ಚಿನ್ನವಳ ಬಳಿ ಬ0ದು "" ಈಟಿದದ್ದ ಎಷ್ಟುದ್ದ ಮಾಡಿದಿವಾ.... ಸ0ಜಿಮು0ದ ತರೋನ0ದರ ಕೇಳಲಿಲ್ಲ.ಮನೀಗಿ,ಆಜೂಬಾಜೂ ಮನೀಗಿ ಮ0ದಿ ಬ0ದಾರ ಒ0ದಿಟಾದರು ಅರವಾ ಆಚಾರಾದರು ಬೇಡವಾ...ಎ0ದು ಅಳುತ ಕಣ್ಣಿರ ಹಾಕಿದಳು.ನಿನ್ನ ಸ0ಶೆ ನಮಗ ಬ್ಯಾಡಾ, ಒಳಗ ಹೋಗಿ ನೋಡಕೊ0ಡ ಬಾ ಹೋಗ..ಎ0ದು ಚಿನ್ನವಳನು ಒಳಗೆ ಕಳಿಸಿದಳು ಗುರುಸಿದ್ದ ಬಾಗಿಲತನಕ ಹೋದವನೆ ಚಿಲಕಾ ಹಾಕಿದ. ಓಣ್ಯಾಗಿನ ಮ0ದಿ ಹಿ0ಗ್ಯಾಕ ...ಹಿ0ಗ್ಯಾಕ...ಅಂತ ಕೇಳಿದರು ಯಾರೊಬ್ಬರು ಬಾಯಿಬಿಟ್ಟು ಹೇಳುವ ಸ್ಥಿತಿಯಲ್ಲಿರಲಿಲ್ಲ,ಕೇಳಿದ ಜನ ತಮ್ಮಷ್ಟಕ ತಾವೆ ಗೊಣಗಿಕೊ0ಡು ಸುಮ್ಮನೆ ಹೊದರು.ಪರಿಸ್ಥಿತಿ ಕೈಮೀರತೊಡಗಿತು ಇತ್ತ ಸುಶೀಲಾ ಮತ್ತವಳ ಗಂಡ ಮನಸ್ಸು ಬದಲಿಸಲಾಗದೆ,ಆದ ಅವಮಾನ ಸಹಿಸಲಾಗದೆ ಸ0ಕಷ್ಟಕಿಡಾಗಿ ಒಳಗೊಳಗೆ ಮರುಗಿದರು,ಹೊರಗಡೆಯಿ0ದ ಇವರ ಮನಸ್ಸನ್ನು ಒಲಿಸಲು ಮತ್ತು ಬಾಗಿಲ ತೆರೆಸಲು ಹಿರಿಯರ ಗು0ಪೊ0ದ ಸತತವಾಗಿ ಪ್ರಯತ್ನಸುತ್ತಲೆ ಇತ್ತು ಹತ್ತು ಹದಿನೈದು ನಿಮಿಷ ಕಳೆದವು,...ಒಳಗಿನಿಂದ ಯಾವ ಪ್ರತಿಕ್ರಯೆ ಬರಲಿಲ್ಲ.......ಅಧ9ಗಂಟೆ ಕಳೆಯಿತು...ಈಗಲೂ ಯಾವ ದನಿ ಬರಲಿಲ್ಲ ಗುರುಸಿದ್ದ ಬಾಗಿಲ ಚಿಲಕತೆರೆದು ಒಳಹೊದ ಜೊತೆಗೆ ಮಾದೇವಿ,ಅವಳಗಂಡ, ಬೀಗರು,ಹುಡುಗರು, ನೆರೆಮನೆಯ ಜನರು ಕೂಡಾ ಕೂತುಹಲದಿ0ದ ಒಳಹೋದರು ಅಲ್ಲಿ ಆಶ್ಚಯ9..ಆಘಾತ ಎರಡು ಕಾದಿದ್ದವು....ಕಿಟ್ಟಿಯ ಕೊರಳಿಗೆ ಸೀರೆ ಬಿಗಿದು ಬಾಯಿಗೆ ಬಟ್ಟೆತುರುಕಿ ನೇಣು ಹಾಕಲಾಗಿತ್ತು.ಅವನ ಜೊತೆ ಚಿನ್ನವಳು ಕೂಡಾ ಇನ್ನೊ0ದು ಸೀರೆಯಿ0ದ ನೇಣು ಬಿಗಿದು ಕೊ0ಡಿದ್ದಳು........ಅಷ್ಟೊತ್ತಿನಿಂದ ಹುಡುಕುತ್ತಿದ್ದ ಕಿಟ್ಟಿಯ ಪೀಪೀ ಚಿನ್ನವಳ ಕೈಚೀಲನಲ್ಲಿ ಇತರೆ ಬಟ್ಟೆಗಳೊ0ದಿಗೆ ಅನಾಥವಾಗಿ ನೆಲದ ಮೇಲೆ ಬಿದ್ದಿತ್ತು..........ಒಳ ಬ0ದ ಎಲ್ಲರು ಆ ದೃಶ್ಯ ಕ0ಡು ಎನೊ0ದು ಮಾತಾಡದೆ ಸುಮ್ಮನೆ ನಿಂತಿದ್ದರು..........