Click here to Download MyLang App

ಆಕೆ ಬರದಿದ್ದರೂ..... - ಬರೆದವರು : ಪೂರ್ಣಿಮಾ ಶಿವಶಂಕರ್ | ಸಾಮಾಜಿಕ


ಏಕೋ! ಇಂದು ಆಕೆ ಬರದಿದ್ದರು ಕಳೆದ ಒಂದು ವರುಷದಿಂದ ಬಿಸಿಯಾಗಿ ಪ್ರಪಂಚವನ್ನೇ ಸುಡುತಿರುವಂತೆ ಭಾಸವಾಗುತಿದ್ದ ಪ್ರಕೃತಿಯ ರೋಮಾಂಚನಕಾರಿಯಾದ ಸಮಯದಲ್ಲಿ ಪ್ರಕೃತಿ ದೇವತೆ ಮುಗುಳ್ನಗುತಿರುವ ಈ ಗಾಳಿಯು ಇಂದು ಈ ಇಡೀ ಜಗತ್ಹು ಯಾವುದೋ ಒಂದು ಪ್ರಕೃತಿ ವಿಕೋಪದಿಂದ ಹೊರಬಂದು ಮತ್ತೇ ತನ್ನ ರೂಪವನ್ನು ಮೊದಲಿನಂತೆ ಹೊಸ ಕಲೆಯನ್ನು ಪಡೆದಿರುವಂತೆ ತಾನು ಜ್ವಾಲಾಮಖಿಯಲ್ಲಿ ಬೇಯುತ್ತ್ತಿರುವಾಗ ಯಾವುದೋ ಒಂದು ನಂಬಿಕೆ ತನ್ನನ್ನು ಹೊರತಂದು ಸಮದಾನಿಸಿ ಮುಂದಿನ ಸುಂದರ ಕ್ಷಣಗಳಿಗೆ ಸಿದ್ಧತೆ ನಡೆಸಿದಂತೆದೆ.
ನಂಬಲಾಗುತಿಲ್ಲ! ತಾನೇ ಈ ಕೆಲ ತಿಂಗಳುಗಳಿಂದ ಜೀವನವೇ ನರಕವೆಂಬಂತೆ ,
ತಂದೆ,ತಾಯಿಯ ಬಂದೀತವ್ವಗಳನ್ನು ತೊರೆದಂತೆ , ಜವಾಬ್ದಾರಿಗಳನ್ನು ಮರೆತಂತೆ, ದೇಹದಲ್ಲಿ ಉಸಿರಿರುವ ಯಾವ ಸೂಚನೆಯೂ ಇಲ್ಲದಂತೆ, ಪ್ರಕೃತಿ ನೀಡಿರುವಂತ ಎಲ್ಲ ಅವಕಾಶಗಳನ್ನು
ತಿರಸ್ಕರಿಸಿದ್ದಂತೆ ಜೀವಂತ ಶವವಾಗಿ ಎಲ್ಲ ಅವಕಾಶಗಲ್ಲನ್ನು ತಿರಸ್ಕರಿಸಿ ಆ ಒಂದು
ಕ್ಷಣಿಕ ಸುಖಕ್ಕಾಗಿ ಉಸಿರಡುತಿದ್ದೇನೆ.
ಆಕೆ ಬರದಿದ್ದರೆ.........ಎಂದು
ಬದುಕುತಿದ್ದೇನೆ.
ಛೇ ! ನಾನೆಂಥ ಸ್ವಾರ್ಥಿಯಾಗಿದ್ದೆ!
ನನ್ನೊಂದಿಗೆ ಕೊನೆಯ ತನಕ ಉಸಿರಾಡಲು ತವಕಿಸುತ್ತಿರುವ ಇ ಉಸಿರಿಗೆ
ಮೊಸಮಾಡಲೆತ್ನಿಸಿದೆನೆ, ಇವನು ಏನಾದರೂ ಸಾದಿಸುತ್ತಾನೆಂದು ಸುಂದರ
ರೂಪವನ್ನು ನೀಡಿದ ದೇವರಿಗೆ ಪ್ರೆಶ್ನೆಯಾಗುತ್ತಿದೆನೆಯೇ ,ತಮ್ಮ ಕೊನೆಯ
ತನಕ ತಮ್ಮ ಕಾಲಾಗಿ ನಿಂತು ,ಉಸಿರಾಗಿದ್ದು ,
ದೇಹವಾಗಿ ಚಲಿಸಿ, ಪ್ರತಿಬಿಂಬದಂತಿರುತಾನೆಂದು ಬದುಕಿರುವ
ಹಿರಿಯ ಜೀವಕ್ಕೆ ಸಾವಾಗುತ್ತಿದ್ದೇನೆ. ಕಾಣದ
ಲೋಕಕ್ಕೆ ಹೋಗಿ ಅತ್ತ ಸಾದಿಸಲಗದೆ, ಇತ್ತ
ಮೋಕ್ಷವಿಲ್ಲದೆ, ಆತ್ಮವಾಗಲ್ಲೆಂದೆ ಎಷ್ಟೋ
ಜನ್ಮದ ನಂತರ ಪ್ರಕೃತಿ ಈ ಮನಜ ಜನ್ಮವನ್ನು ನೀಡಿಹುದೇ?
ಇನ್ನು ಮುಂದೆ ಈ ಸಮಾಜಕ್ಕೆ ಯಾವುದೇ
ಪ್ರೆಶ್ನೆಯಾಗಲಾರೆ!
ಉತ್ತರವಾಗುತ್ತೆನೆ.
ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಿಗೂ ಅದ್ಭುತವಾದ ಉತ್ತರವಾಗಲು ಪ್ರಯಂತಿಸುತ್ತೆನೆ.
ಆಕೆಯ ಮೊದಲ ಭೇಟಿ,ಮೊದಲ ನೆನಪು,ಮೊದಲ ನೋಟ ,ಪ್ರೀತಿ,ಮಗುವಿನಂತ ಅಕ್ಕರೆಯ
ಬಾವ ,ನನಗಾಗಿ ಎಷ್ಟೊಂದು ಬಾರಿ
ಕಾಯುತ್ತಿದ್ದ ದಿನಗಳು,ನನ್ನ ತಂದೆ ತಾಯಿಯನ್ನು ತನ್ನ ಹೆತ್ಹವರಂತೆ ಗೌರವಿಸುತಿದ್ದಳು, ನನಗೆ ಇಂಚು ನೋವಾದರೂ ತನ್ನ ಹೃದಯಕ್ಕೆ ಚಾಕುವಿನಿಂದ ಇರಿದಂತೆ ಕಷ್ಟ ಅನು
ಬಾವಿಸುತ್ತ ನನ್ನ ಬೇಕು ಬೇಡಗಳನ್ನೆಲ್ಲ
ಪೂರೈಸುತಿದ್ದ ತನ್ನ ಬೆಳೆದಿಂಗಳ
ದೇವತೆ!
ಒಂದು ವಸಂತಗಳ ಹಿಂದೆ ಹೆತ್ತವರ
ನಂಬಿಕೆಗೋಸ್ಕರ ನನ್ನ ಮನದ ಮಂದಿರವನ್ನು ಛಿದ್ರವಾಗಿಸಿ ತನ್ನ ಉಸಿರನ್ನು
ತೆಗೆದುಕೊಂಡು ಮರೆಯದಳು. ಅನಾಮಿಕನೊಂದಿಗೆ ಹೊಸ ಬಾಳನ್ನು ಪ್ರೇವೇಶಿಸಿ ಮಗು ಎಂಬ ಹೊಸ ಬಾಂಧವ್ಯ
ದೊಂದಿಗೇ ತನ್ನ ತಾಯ್ಥನದೊಂದಿಗೆ ನನ್ನ
ಪರಿಚಯವೇ ಇಲ್ಲದಂತೆ ಜೀವನದ ಸುಂದರ
ಪುಟಗಳನ್ನು ತಿರುವುತ್ತ ತಮ್ಮ ಪ್ರೀತಿಯ
ನೇನಪಾಗಿರುವ ಆ ಪ್ರಶಾಂತ,ನಿಸರ್ಗದ
ರಮಣೀಯ ,ನಿರ್ಮಲವಾದ ಅದೇ ನಮ್ಮ ಭೇಟಿಯ ಪವಿತ್ರವಾದ ಸ್ಥಳದಲ್ಲಿ ಕುಳಿತು
ಆಕೆ ಬಂದ್ದೆ ಬರುತಾಳೆ ಎಂದು ಕಾಯುತ್ತಿ
ರುವ ತನನ್ನು ನೋಡಲು ಒಮ್ಮೆಯೂ
ಪ್ರಯತ್ನಿಸಲಿಲ್ಲವೇ ಓ ಆಕೆ!
ಹೌದು ನಾನೇ ಮೂರ್ಖ ಅವಳು ಎಂದು ಹೇಳಲಿಲ್ಲ ಕಾಯುತ್ತಿರು ನಿನಗಾಗಿ
ಮತ್ತೇ ಬರುವೇನೆಂದು ,ಹೌದು ನನ್ನ
ದೂರವಾಣಿ ಸಂಖ್ಯೆಗು ಪ್ರಯತ್ನಿಸಲಿಲ್ಲ.
ನಾನೇ ಪ್ರೀತಿಯ ವಾಸ್ತವತೆ ಅರಿಯದ
ಮತಿಹೀನನಾದೆ. ಆಕೆ ನಡೆದುಕೊಂಡಿರುವುದು ಯಾವುದೇ
ದೋಷವಿಲ್ಲದ ಸರಿಯೇ! ಆಕೆ ನನ್ನಂತೆ
ಹೆತ್ತವರಿಗೆ ಎದುರಾಡಲಿಲ್ಲ ,ಬಂದುತ್ವಕ್ಕೆ,ಕಳಂಕವಾಗಲಿಲ್ಲ, ಸ್ನೇಹಿತರಿಗೆ ಸೋಲಗಲಿಲ್ಲ ,ದೇಹಕ್ಕೆ
ಬಾರವಾಗಲಿಲ್ಲ , ಉಸಿರಿಗೆ ತೊಡಕಗಲಿಲ್ಲ,
ಸಮಾಜಕ್ಕೆ ದೂಷಿತನಾಗಲಿಲ್ಲ,
ಹೌದು ಆಕೆ ಮಾಡಿದ್ದು ಸರಿಯೇ .
ಈ ರೀತಿಯ ಗೊಂದಲದಿಂದ ಮನಸ್ಸು
ಚೇತರಿಕೆಯಗಳು ಆಕೆಯ ನೆನಪಿನಂದರದಿಂದ ಸಂಪೂರ್ಣಗೊಳ್ಳಲು
ವರುಷವೇ ಬೇಕಾಯಿತು.
ಮುಂದಿನ ಸುಂದರ ಕ್ಷಣಗಳು ಈ
ಮನಸಿಗಾಗಿ ಸಿದ್ಧತೆ ನಡೆಸಿವೆ.
ಹೌದು ಆಕೆ ಬರದಿದ್ದರೆ ! ನಾನು
ಬದುಕುತ್ತೇನೆ.