Click here to Download MyLang App

‘ಅವನಿ’ ಗಾಗಿ ಕಾಯುತ್ತಾ – 02 - ಬರೆದವರು : ಸಂಭ್ರಮ ಕುಲಕರ್ಣಿ | ಹಾರರ್

ಮದುವೆಯ ನಂತರವಂತೂ ಕೇಳಬೇಕೆ, ಅವರಿಬ್ಬರ ಪ್ರೀತಿ ಇಮ್ಮಡಿ ಆಯಿತು. ಆದ್ರೆ ಓದುಗರೇ, ನಿಮಗಿಲ್ಲಿ ಒಂದು ಟ್ವಿಸ್ಟ್ ಕಾಯ್ತಿದೆ. ನನಗೆ ಈ ವಿಚಾರ ಮೊದಲಿನಿಂದಲೂ ನಿಮ್ಮ ಮುಂದಿಡಬೇಕು ಅಂತ ತುಂಬಾ ಸಲ ಅನಿಸಿತ್ತು, ಆದ್ರೆ ಅದ್ಯಾಕೋ ಗೊತ್ತಿಲ್ಲ, ನನಗೆ ಬೇಡ ಅಂತ ಅನ್ನಿಸ್ತು.ಅದೆಂದರೆ, ಪೂರ್ವ ಜನ್ಮದ ಅವನಿ-ಕೇಸರಿಧನ(ಅವನಿ ಹಾಗೂ ರಾಖಿ) ಇವರಿಬ್ಬರ ತಂದೆ ಹಿಂದಿನ ಜನ್ಮದಲ್ಲಿ ಒಬ್ಬ ಮಾಂತ್ರಿಕ!!... ಮತ್ತು ಪೂರ್ವ ಜನ್ಮದಲ್ಲಿ ಅವನಿಯ ತಾಯಿ ಅಂದ್ರೆ ‘ಕುಜ-ಕೇಸರಿ ಪತಾಕೆ’ಯ ಸಾಮ್ರಾಜ್ಯದ ರಾಜನ ಅರಸಿ, ಅವನಿ ಸೇನಾ ಈ ಜನ್ಮದಲ್ಲಿ ಇವರಿಬ್ಬರ ತಾಯಿಯಾಗಿರುತ್ತಾಳೆ. ಇಅದಕ್ಕೆ ಅಲ್ವಾ ವಿಧಿ ಆಟ ಅನ್ನೋದು. ಯಾರ ಹಣೆಯಲ್ಲಿ ಏನು ಬರೆದಿದೆಯೋ ಅದೇ ಆಗ್ಬೇಕಲ್ವಾ!!...ಇವರಿಬ್ಬರ ಮುದ್ದಾದ ಮಗುವೇ ‘ಪೂರ್ವ ಜನ್ಮದ ‘ಕುಜಕೇಸರಿ ಪತಾಕೆ’ ಸಾಮ್ರಾಜ್ಯದ ಚಕ್ರವರ್ತಿಯಾದಂತಹ ‘ಕುಜ ಸೇನ’ ಈ ಜನ್ಮದಲ್ಲಿ ‘ಅವನಿ ಮತ್ತು ರಾಖಿ(ಅವನಿ ಮತ್ತು ಕೇಸರಿ ಧನ) ರ ಮಗನೇ ನಮ್ಮ ಕಥೆಯ ನಾಯಕ ಅಖೀರ.ಈತ ತಾ ಚಿಕ್ಕವನಿದ್ದಾಗಿನಿಂದಲೂ ತುಂಬಾ ಚಾಲೂ. ಯಾರು ಏನೇ ಕೆಲಸ ಹೇಳಲಿ ತುಂಬಾ ಬೇಗನೇ ಒಂದೇ ಕ್ಷಣದಲ್ಲೇ ಮುಗಿಸಿಬಿಡುತ್ತಿದ್ದ!!!... ಈತನ ಚತುರತೆಗೆ ಒಮ್ಮೆ ಈತನ ಗುರುಗಳೇ ತಬ್ಬಿಬ್ಬಾಗಿದ್ದರು!!!...ಒಮ್ಮೆ ಇವನಿಗೆ ಗುರುಗಳು ಒಂದು ಪರೀಕ್ಷೆಯನ್ನು ಏರ್ಪಡಿಸುತ್ತಾರೆ. ಆ ಪರೀಕ್ಷೆ ತುಂಬಾ ಕಠಿಣವಾಗಿರುತ್ತದೆ. ಆ ಪರೀಕ್ಷೆ ಎಲ್ಲ ವಿದ್ಯಾರ್ಥಿಗಳಿಗೆ ತುಂಬಾ ಕಠಿಣ ವಾಗಿರುತ್ತದೆ. ಅಂದರೆ ಆ ಪರೀಕ್ಷೆ ಆ ಹುಡುಗರ, ವಿದ್ಯಾರ್ಥಿಗಳ I.Q ಲೆವೆಲ್ ಅನ್ನು ಗುರುತಿಸುವ ಪರೀಕ್ಷೆ. ಅದರಲ್ಲಿ ಅವರ ಗುರುಗಳಿಗೆ ಅಖೀರನ I.Q ಲೆವೆಲ್ ತುಂಬಾ ಜಾಸ್ತಿ ಇದೆ ಎಂದು ಅವನ ಗುರುಗಳಿಗೆ ತಿಳಿಯುತ್ತದೆ.ಹೀಗೆ ಅಖೀರನ ಪರೀಕ್ಷೆ ಇಲ್ಲಿಂದ ಶುರುವಾಗುತ್ವೆ. ಅವನಿ ಅಖೀರನನ್ನು ತುಂಬಾ ಪ್ರೀತಿಯಿಂದ ಸಲಹುತ್ತಾಳೆ. ಎಷ್ಟೆಂದರೂ ತಾಯಿಯ ಕರುಳು. ತಾಯಿಯ ಮಮತೆ, ಪ್ರೀತಿ. ತಾಯಿ ತನ್ನ ಮಗ ಅಥವಾ ಮಗಳು ದೊಡ್ಡ ವ್ಯಕ್ತಿಯಾಗಿ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಬೇಕು ಎಂದಾಗಿರುತ್ತದೆ. ಹಾಗೇ ‘ಅವನಿ’ ಗೂ ಆಸೆ.ಆ ಆಸೆಯನ್ನ ಮಗ ಅಖೀರ ಈಡೇರಿಸಿದ್ದ. ಆತ ಈಗ ತುಂಬಾ ದೊಡ್ಡ ಕಲಾವಿದನಾಗಿದ್ದಾನೆ. ಆತ ಸಮಾಜದಲ್ಲಿ ತುಂಬಾ ಒಳ್ಳೆಯ ಹೆಸರು ಮಾಡಿದ್ದಾನೆ. ಅವನ ಪೂರ್ವ ಜನ್ಮದಲ್ಲಿ ತನ್ನ ಪತ್ನಿಯಾದ ಅವನಿ-ಸೇನಾ ಈ ಜನ್ಮದಲ್ಲಿ ‘ಅವನಿ’ ಯ ತಾಯಿ ಅಂದರೆ ಅಖೀರನ ಅಜ್ಜಿ. ಆಗ ಅಖೀರನಿಗೆ, ತನ್ನ ತಾಯಿಗೆ ಅಕಸ್ಮಾತ್ ಆಗಿ ಸಿಕ್ಕ ಆ ಬಂಗಲೆ ಸಿಗುತ್ತದೆ.ಆಹಾ! ಅದೆಷ್ಟು ವರ್ಷಗಳಿಂದ ‘ಕುಜ-ಸೇನ’ನನ್ನು ನೋಡಲು ಹಾತೊರೆಯುತ್ತಿತ್ತೋ ಆ ಬಂಗಲೆ. ಕುಜ ಸೇನನಿಗೋ ಆ ಬಂಗಲೆಯೆಂದರೆ ಒಂಥರಾ ಪ್ರೀತಿ. ಅವತ್ತು ಆತ ಆ ಬಂಗಲೆಯಿಂದ ಹೊರ ಹೋಗಬೇಕಾದರೆ ಅದೆಷ್ಟು ಭಾರವಾದ ಹೃದಯದಿಂದ ಹೋಗಿದ್ದ, ಆತ ಆ ಬಂಗಲೆಯಿಂದ ಹೋಗಬೇಕಾದರೆ ಆ ಬಂಗಲೆ ಆತನಿಗೆ ಒಂದು ಬಾರಿ ನೀನು ನನ್ನ ಬಿಟ್ಟು ಹೋಗ್ಬೇಡ.. ನಿಲ್ಲು, ಬಿಟ್ಟೋಗ್ಬೇಡ, ನಿಲ್ಲು ಅಂತ ಅದೆಷ್ಟು ಆಲ್ಪರಿದಿತ್ತು ಆ ಬಂಗಲೆ. ಆದರೂ ಆತ ತನ್ನ ಮನಸ್ಸಿಗೆ ತಿಳಿದಿದ್ದನ್ನೇ ಮಾಡಿದ.‘ಕುಜ ಸೇನ’ನಿಗೆ ತನ್ನ ಹಿಂದಿನ ಜನ್ಮದ ನೆನಪೇ ಇರ್ಲಿಲ್ಲ. ಹಾಗೇ ಆತನೇನು ಈ ಬಂಗಲೆಗೆ ಬೇಕು ಅಂತ ಬಂದವ್ನೇನಲ್ಲ. ನಾನಾಗ್ಲೇ ಹೇಳಿದ್ನಲ್ಲ ‘ದೇವರ ಆಟ ಬಲ್ಲೋರ್ಯಾರು?’ .ಆತ ತನ್ನ ವ್ಯಾಸಂಗ ಮುಗಿಸಿ, ತನ್ನ ಗೆಳೆಯರೊಂದಿಗೆ, ತಾನು ಎಲ್ಲಿಯಾದರೂ ಒಂದು ದೂರದ ‘Tour’ ಗೆ ಹೋಗ್ಬೇಕು ಅಂತ ಅನ್ಕೊಂಡಿರ್ತಾನೆ, ಅವರ ಫ್ರೆಂಡ್ಸ್ ಸಹ ಅವನ ಉದ್ದೇಶಕ್ಕೆ ಅಸ್ತು ಅಂದಿರ್ತಾರೆ. ಹಾಗೆ ಅವತ್ತು ಬೆಳಿಗ್ಗೆನೇ ಕೊಡಗಿಗೆ ಗೆ ಹೊರಡ್ತಾರೆ.ಆದ್ರೆ ದಾರಿ ಮದ್ಯೆ, ತುಂಬಾ ಜೋರಾಗಿ ಮಳೆ, ಮತ್ತೆ ಜೋರಾಗಿ ಗಾಳಿ ಬೀಸೋಕೆ ಶುರುವಾಗುತ್ತೆ. ಆಗ ಅವರಿಗೆ ಹೊರಗೆ ಏನೂ ಕಾಣಲೊಲ್ಲದು. ಆಗ ಅವರ ಒಬ್ಬ ಗೆಳೆಯ ಇಲ್ಲೆಲ್ಲಾದರು ಒಂದು ಮನೆ ಸಿಕ್ಕರೆ ಇವತ್ತು ಇಲ್ಲೇ ಇದ್ದು ನಾಳೆ ಮತ್ತೆ ನಾವು ಹೊರಡ್ಬಹುದು. ಅಂತ ‘Suggest’ ಮಾಡ್ತಾನೆ. ಆಗ ಅಲ್ಲಿರುವ ಗೆಳೆಯರೆಲ್ಲಾ ಅಲ್ಲೆಲ್ಲಾದರು ಹತ್ತಿರದಲ್ಲಿ ಒಂದು ಮನೆ ಇದೆಯಾ ಅಂತ ಹುಡುಕುತ್ತಿರುತ್ತಾರೆ.ಆಗ ಮೊದಲಿನ ಹಾಗೆ, ಅಲ್ಲಿರುವ ಒಬ್ಬ ಹುಡುಗಿ, ಅಂದ್ರೆ ಅಖೀರನ ಗೆಳತಿಗೆ ದೂರದಲ್ಲಿ ಯಾರೋ ಇಅವರನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದಾರೆಂದು ಅನ್ನಿಸುತ್ತದೆ. ಅಲ್ಲಿ ಒಂದು ಆಕೃತಿ ನಿಂತಿರುತ್ತದೆ. ಅದು ಕೈಯಲ್ಲೊಂದು ಖಡ್ಗ, ತಲೆಯ ಮೇಲೊಂದು ಕಿರೀಟ, ಒಂದು ಕಪ್ಪು ಕುದುರೆಯೇರಿ ಕುಳಿತಿರುವ ಹಾಗೆ ಮತ್ತು ಅದರ ಕಣ್ಣುಗಳು ಮಿಂಚಿನಲ್ಲಿ ತುಂಬಾ ನಿರಾಳವಾಗಿ ಕಾಣಿಸುತ್ತವೆ ಆಕೆಗೆ. ಕೆಂಪು ಕಣ್ಣು, ಬೂದಿ ಬಣ್ಣದ ದೇಹ, ಕೆಂಪು ಹಲ್ಲುಗಳು, ಕಪ್ಪು ಕುದುರೆ, ಕಂದು ಬಣ್ಣದ ಕಿರೀಟ, ಕೈಯಲ್ಲಿ ಯಾರದೋ ತಲೆಯನ್ನು ಹಿಡಿದುಕೊಂಡು ಇವರನ್ನೇ ದಿಟ್ಟಿಸಿ ನೋಡುತ್ತಿದೆ... ನೋಡುತ್ತಾ ಇವರತ್ತ ಬರಲು ಪ್ರಯತ್ನಿಸುತ್ತಿದೆ, ಆದರೆ ಬರಲು ಸಾಧ್ಯವಿಲ್ಲ ಕಾರಣ ನಿಮಗೆ ಗೊತ್ತೇಇದೆ. (‘ಅವನಿ’ ದೇವಾಂಷ ಸಂಭೂತೆ).ಈ ಎಲ್ಲ ದೃಶ್ಯಗಳನ್ನು ನೋಡಿ ‘ಅಖೀರ’ ನ ಗೆಳತಿ ‘ದಿಯಾ’ ಗೆ ತುಂಬಾ ಹೆದರಿಕೆಯಾಗುತ್ತದೆ. ಆದರೆ, ಆಕೆ, ಇದು ತನ್ನ ‘ಹ್ಯಾಲೂಸಿನೇಷನ್’ ಅಂತ ತಿಳಿದು ಸುಮ್ಮನಾಗುತ್ತಾಳೆ. ಆದರೆ, ಆ ಆಕೃತಿ ಮತ್ತೇ ಇವರನ್ನೇ ಸಿಟ್ಟಿನಿಂದ ನೋಡುತ್ತಿರುವುದನ್ನು ಗಮನಿಸಿದ ಆಕೆ, ತನ್ನ ಗೆಳೆಯ ಅಖೀರನಿಗೆ ಹೇಳುತ್ತಾಳೆ. ಹಾಗೆ ಹೇಳುವಾಗ ಆ ಆಕೃತಿ ಅಲ್ಲಿರುವುದಿಲ್ಲ ಬದಲಿಗೆ ಅಲ್ಲಿ ಒಂದು ಭವ್ಯ ಬಂಗಲೆ ಇರುತ್ತದೆ.ವ್ಹಾ! ಆ ಬಂಗಲೆಯಂತೂ ಅದ್ಭುತ. ಆ ಬಂಗಲೆಯಂತೂ ಒಂದು ಅರಮನೆಯಂತಿದೆ. ಗೆಳೆಯರೆಲ್ಲಾ, ಇವತ್ತೊಂದು ದಿನ ಇಲ್ಲೇ ಇರೋಣ ಅಂತ ಡಿಸೈಡ್ ಮಾಡ್ಕೊಳ್ತಾರೆ. ಆ ಬಂಗಲೆಯ ಬಳಿ ಹೋದಾಗ, ಯಾವಾಗ ಅಖೀರ, ಆ ಬಂಗಲೆಗೆ ಕಾಲಿಡುತ್ತಾನೋ ಆಗ ಅಲ್ಲೊಂದು ವಿಸ್ಮಯ ನಡೆಯುತ್ತದೆ.ಅದೆಂದರೆ, ಅಲ್ಲಿರುವ ಗೇಟು ತನ್ನಿಂತಾನೇ ತೆರೆದುಕೊಳ್ಳುತ್ತದೆ. ಆ ಬಂಗಲೆಯ ಬಾಗಿಲೂ ಸಹ ತನ್ನಿಂತಾನೇ ತೆರೆದುಕೊಳ್ಳುತ್ತದೆ. ನಂತ್ರ ಅವ್ರೆಲ್ಲಾ ಆ ಬಂಗಲೆಯೊಳಗೆ ಪ್ರವೇಶಿಸುತ್ತಾರೆ. ಆಗ ‘ದಿಯಾ’ಳಿಗೆ ಒಂದು ಮೋಬೈಲ್ ತರಹದ ಒಂದು ವಸ್ತು ಕಾಣಿಸುತ್ತದೆ. ಅದು ಯಾರೋ ಮೊದಲು ಇಲ್ಲಿಗೆ ಬಂದವರು ಮರೆತಿರಬಹುದು ಅಂತ ಅದನ್ನು ಎಲ್ಲಿ ಇಡಲು ಪ್ರಯತ್ನಿಸುತ್ತಾಳೆ. ಅಷ್ಟರಲ್ಲಿ ಆ ವಸ್ತು ಒಂದು ಮಾಯಾ ಪುಸ್ತಕದ ರೂಪ ಪಡೆದು, ಅದರಲ್ಲಿರುವ ಪುಟಗಳು ಒಂದೊಂದಾಗಿ ತೆರೆದುಕೊಳ್ಳಲು, ದಿಯಾಳಿಗೆ ತುಂಬಾ ಗಾಬರಿಯಾಗಲು ಆಕೆ ಮೂರ್ಛೆ ತಪ್ಪುತ್ತಾಳೆ.ನಂತರ ಅಲ್ಲಿಗೆ ಬಂದ ಅಖೀರನಿಗೆ ತನ್ನ ಗೆಳತಿ ದಿಯಾ ಮೂರ್ಛೆ ಹೋಗಿರುವುದನ್ನು ನೋಡುತ್ತಾನೆ. ಆಗ ಅವನಿಗೆ ಒಂದು ಪುಸ್ತಕದ ಆಕಾರದ ಒಂದು ವಸ್ತು ಕಾಣಿಸುತ್ತದೆ. ಆ ಪುಸ್ತಕ ನೋಡಿದ ತಕ್ಷಣ ತಂತಾನೇ ಅದರ ಪುಟಗಳು ತೆರೆದುಕೊಳ್ಳುತ್ತವೆ. ಆಗ ಅಖೀರನಿಗೆ ತನ್ನ ಪೂರ್ವ ಜನ್ಮದ ಬಗ್ಗೆ ತಿಳಿಯುತ್ತದೆ. ಮತ್ತು ಆ ಪುಸ್ತಕದಲ್ಲಿ ಸುವರ್ಣಾಕ್ಷರದಲ್ಲಿ ತನ್ನ ತಾಯಿ ಅವನಿ, ತನ್ನ ಪೂರ್ವ ಜನ್ಮದಲ್ಲಿ ತನ್ನ ಮಗಳು, ತನ್ನ ತಂದೆ (ರಾಖಿ) ಪೂರ್ವ ಜನ್ಮದಲ್ಲಿ ತನ್ನ ಅಳಿಯ, ಹಾಗೂ ತನ್ನ ಅಜ್ಜಿ ತನ್ನ ಪೂರ್ವ ಜನ್ಮದಲ್ಲಿ ತನ್ನ ಮಡದಿ ಎಂದೂ, ಅವನಿ ಒಬ್ಬ ದೇವಾಂಷ ಸಂಭೂತೆ ಎಂದು ಬರೆದಿರುತ್ತದೆ.ನಮ್ಮ ಕಥೆ ಶುರುವಾಗುದು ಇಲ್ಲಿಂದಲೇ, ಈ ಹಿಂದೆ, ಅವನಿ(ಅಖೀರನ ತಾಯಿ), ಆಕೆಗೂ ಇದೇ ತರಹದ ಬಂಗಲೆಸಿಕ್ಕಿತ್ತು, ಅಕ್ಕೆಗೂ ಇದೇ ರೀತಿ ಒಂದು ಪುಸ್ತಕ ಸಿಕ್ಕಿತ್ತು, ಆದರೆ ಆ ಪುಸ್ತಕವನ್ನು ಆಕೆಯ ಗೆಳತಿ ಓದಿದ್ದಳು. ಈ ಕಥೆಯಲ್ಲಿ ನಾಕ್ಯಕನಿಗೆ ತನ್ನ ನಿಜವಾದ ಅಸ್ತಿತ್ವದ ಬಗ್ಗೆ ಪರಿಅಯವಾದರೆ, ಏನೆಲ್ಲಾ ಒಳ್ಳೆಯ ಕೆಲಸಗಳು ನೆರವೇರುತ್ತವೆ ಎಂದು ಹೇಳುತ್ತೇನೆ.ಅಖೀರ ‘ಕುಜ ಕೇಸರಿ ಪತಾಕೆ’ ಯ ಸಾಮ್ರಾಜ್ಯ ಚಕ್ರವರ್ತಿ. ಆತನ ಗುರುವೇ ಅಗ್ರ ಸೇನ.ಪ್ರಿಯ ಓದುಗರೇ, ನಿಮಗೆ ‘ಅಗ್ರ ಸೇನ’ನ ಬಗ್ಗೆ ಹೇಳಲೇಬೇಕು. ಈತ ಒಮ್ಮೆ ಒಂದು ಪಂದ್ಯವನ್ನು ಕಟ್ತಾನೆ. ಈ ಪಂದ್ಯದಲ್ಲಿ ಗೆದ್ದವರು ಅವರಿಗೆ ಒಂದು ಪಟ್ಟ ಬರುವ ಹಾಗೆ ಕೆಲಸ ಮಾಡ್ಬೇಕು, ಇಲ್ಲವೇ ಆ ರಾಜ್ಯದಲ್ಲಿ ಒಬ್ಬ ಒಳ್ಳೆಯ ಶಿಲ್ಪಿಯನ್ನು ಕರೆಯಿಸಿ, ಅವರಿಗೆ ತಮ್ಮದೇ ಆದ ಒಂದು ಬೃಹತ್ ಮೂರ್ತಿಯನ್ನು ಕಟ್ಟಿಸಿಕೊಳ್ಳಬೇಕು. ಸೋತವರು ಗೆದ್ದವರಿಗೆ ಒಂದೋ ತಾವು ವಾಸಿಸುವ ಜಾಗದಲ್ಲಿ ಸ್ವಲ್ಪ ಜಾಗವನ್ನು ಕೊಡಬೇಕು ಇಲ್ಲವೇ ಗೆದ್ದವರಿಗೆ ಸೋತವರು ತಮ್ಮ ಬಳಿ ಇರುವ ಯಾವುದಾದರೊಂದು ವಸ್ತುವನ್ನು ಕೊಡಬೇಕು.ಅಗ್ರ ಸೇನ ತುಂಬಾ ಜ್ಞಾನಿ, ಎಂತಹ ಕೆಟ್ಟವರೂ ಇವರ ಸಂಗ ಮಾಡಿದರೆ, ಅವರೆಲ್ಲಾ ಇವರ ಶಿಷ್ಯರಾಗಿಬಿಡುತ್ತಿದ್ದರು. ಈ ಆಟದಲ್ಲಿ ಅಗ್ರ ಸೇನ ತುಂಬಾ ಸುಕಭದಲ್ಲಿ ಗೆದ್ದನು. ಆಗ ಆತನು ಆಟದ ನಿಯಮದಂತೆ, ತನಗೆ ಒಂದು ಪಟ್ಟಕ್ಕಾಗಿ ತನ್ನ ಹೆಸರಿಗಾಗಿ, ಆತ ಬಹಳಷ್ಟು ರಾಜರ ಬಳಿ ಕೆಲಸ ಮಾಡಿದನು. ಕೇಸರಿ ಧನ ಒಮ್ಮೆ ಅಗ್ರ ಸೇನ ರ ಶಿಶ್ಯನಾದನು. ಕೇಸರಿ ಧನನೋ ಬಹಳ ಶಕ್ತಿ ಶಾಲಿ, ಹಾಗೆಯೇ ಬಹಳ ಬುದ್ಧಿವಂತನೂ ಆಗಿದ್ದನು.

ಅಗ್ರ ಸೇನ ಒಮ್ಮೆ ಪುನರ್ಜನ್ಮದ ಬಗ್ಗೆ ಒಂದು ಪ್ರಯೋಗ ಮಾಡುತ್ತಿದ್ದನು. ಹಾಗೆ ಪ್ರಯೋಗ ಮಾಡಬೇಕಾದರೆ ಆತನಿಗೆ ತನ್ನ ಪೂರ್ವಜನ್ಮದ ಬಗ್ಗೆ ತಿಳಿಯಿತು. ಎಂಥಹ ವೀರ ಯೋಧ ಅವನು. ಅವನು ಶತ್ರುಗಳಿಗೆ ಸದ್ದಿಲ್ಲದೇ ಅವರ ಸೈನ್ಯದ ಒಳಗೆ ನುಗ್ಗಿ ಅವರನ್ನೆಲ್ಲಾ ಹೇಡೆಮುರಿ ಕಟ್ಟುವಂಥ ಸಮರ ಕಲಿ.ಆತ ಒಬ್ಬನೇ ಕೋಟಿ ಕೋಟಿ ಸೈನಿಕರಿಗೆ ಸಮ. ಒಮ್ಮೆ ಆ ರಾಜ್ಯಕ್ಕೆ ಒಬ್ಬ ವ್ಯಾಪಾರಿಯ ಕಣ್ಣು ಬಿತ್ತು. ಆ ವ್ಯಾಪಾರಿಯೋ ತುಂಬಾ ಸ್ವಾರ್ಥಿ. ಆತ ಒಂಚೂರೂ ದಯಾಳತ್ವ, ಕರುಣೆ ಇಲ್ಲದವನು. ಹೀಗಾಗಿ ಅವನನ್ನು ಕಂಡರೆ ಜನ ಹೆದರುತ್ತಿದ್ದರು.ಅವನು ಒಮ್ಮೆ ವ್ಯಾಪಾರಕ್ಕಾಗಿ ಒಂದು ಸುಂದರ ಪಟ್ಟಣಕ್ಕೆ ಬಂದಾಗ, ಅಲ್ಲಿ ಆ ಪಟ್ಟಣಕ್ಕೆ ಮನಸೋತು, ಆ ಪಟ್ಟಣದ ರಜನನ್ನು ಮೋಹದಿಂದ ಸೋಲಿಸಿದನು. ಆಗ ಅಗ್ರಸೇನನು ಅಲ್ಲಿಯ ಜನರ ನೆರವನ್ನು ಪಡೆದು ಒಂದು ಸಪ್ತ ಸಾಗರದಷ್ಟು ಒಂದು ಸೈನ್ಯವನ್ನು ಕಟ್ಟಿ, ಈ ವ್ಯಾಪಾರಿಯ ಮೇಲೇರಿ ಬಂದನು.ಈ ವ್ಯಾಪಾರಿಯು ಆ ರಾಜನನ್ನು ತನ್ನ ಗುಲಾಮನನ್ನಾಗಿಸಿಕೊಂಡಿದ್ದನು. ಈ ವಿಷಯ ಅಗ್ರಸೇನನಿಗೆ ಹೇಗೋ ತಿಳಿದು ಹೋಯಿತು. ಮತ್ತಷ್ಟು ಮೈ ಬಿಸಿಯಾಯಿತು ಅಗ್ರ ಸೇನನಿಗೆ.ಆತ ಒಂದು ಉಪಾಯ ಮಾಡುತ್ತಾನೆ. ಅದೆಂದರೆ, ತನ್ನ ಸೈನ್ಯದಲ್ಲಿರುವ ಒಬ್ಬ ಸೈನಿಕನಿಗೆ “ರಾಜನಿಗೆ ಬ್ರೈನ್ ವಾಷ್” ಮಾಡಲು ಹೇಳುತ್ತಾನೆ. ಹೀಗೆ ಆತ ರಾಜನನ್ನು ಗುಲಾಮಗಿರಿಯಿಂದ ಮುಕ್ತಿ ಸಿಗುವಂತೆ ಮಾಡುತ್ತಾನೆ.ಆದರೆ, ಒಮ್ಮೆ ಒಂದು ಯುದ್ಧದಲ್ಲಿ ಅಗ್ರ ಸೇನ ಒಂದು ಗಂಭೀರವಾದ ಗಾಯಕ್ಕೆ ತುತ್ತಾಗುತ್ತಾನೆ. ಹೀಗೆ ತುತ್ತಾದವನು ತನಗೇ ಗೊತ್ತಿಲ್ಲದ ಹಾಗೆ ಸರಿಯಾಗುತ್ತಾನೆ ಮತ್ತೇ ಗಾಯವಾಗುತ್ತದೆ. ಹೀಗೇ ಆಗುತ್ತಿರಲು ಒಮ್ಮೆ ಕಣ್ಣು ಮುಚ್ಚಿ ದೇವರಧ್ಯಾನ ಮಾಡುವಾಗ ಅದೇ ಭಂಗಿಯಲ್ಲಿ ಸತ್ತು ಹೋಗುತ್ತಾನೆ.ಹೀಗೆ ಈತನ ಸಾವು ತುಂಬಾ ನಿಗೂಢವಾಗಿ ಅಷ್ಟೇ ಕುತೂಹಲಕಾರಿಯಾಗುತ್ತದೆ.ಹೀಗೆ ಆತ ಪುನರ್ಜನ್ಮ ಪಡೆದಿರುತ್ತಾನೆ. ಕಾರಣ, ಆತ ಒಂದು ತಪ್ಪು ಮಾಡಿರುತ್ತಾನೆ. ಅದೆಂದರೆ, ಆತ ಯುದ್ಧಕ್ಕೆ ಹೋಗುವ ಸ್ವಲ್ಪ ದಿನಗಳ ಮೊದಲು ಒಬ್ಬ ಸನ್ಯಾಸಿಯ ಹತ್ತಿರ ಅವರ ಶಿಷ್ಯನಾಗಿರುತ್ತಾನೆ. ಆಗ, ಹಾಗೆ ಶಿಷ್ಯನಾಗಿರಬೇಕಾದರೆ, ಆತ ಯಾವತ್ತೂ, ಯಾರಿಗೂ, ಯಾವುದೇ ತರಹದ ಹಾನಿಯನ್ನು ಮಾಡುವುದಿಲ್ಲವೆಂಬ ದೀಕ್ಷೆಯನ್ನು ಪಡೆದಿರುತ್ತಾನೆ.ಆದರೆ, ಆತ ಒಬ್ಬ ಯೋಧ. ಒಬ್ಬ ಯೋಧನಿಗೆ ತನ್ನ ಶತ್ರುವನ್ನು ಹೆಡೆಮುರಿ ಕಟ್ಟುವುದೇ ಮುಖ್ಯ ಉದ್ದೇಶ. ಹೀಗಿರಬೇಕಾದರೆ, ಒಮ್ಮೆ ಆತ ಯುದ್ಧಕ್ಕೆ ಹೋಗಲೇಬೇಕಾದ ಪರಿಸ್ಥಿತಿ. ಹಾಗೇ ಆತನಿಗೆ ತಕ್ಷಣ ತನ್ನ ದೀಕ್ಷೆಯ ನೆನಪಾಗಿ, ಆತ ಒಂದು ದಿನ ದೇವರ ಧ್ಯಾನಕ್ಕೆ ಕುಳಿತುಕೊಳ್ಳುತ್ತಾನೆ.ಹೀಗೇ, ವಾರಗಳು ಉರುಳುತ್ತವೆ, ವಾರಗಳು, ತಿಂಗಳುಗಳಾಗುತ್ತವೆ, ತಿಂಗಳುಗಳು ವರ್ಷಗಳಾಗುತ್ತವೆ. ಒಂದು ದಿನ ದೇವರು ಪ್ರತ್ಯಕ್ಷನಾಗಿ ನನ್ನಿಂದೇನಾಗಬೇಕು ಎಂದು ಕೇಳಿದಾಗ, ಅಗ್ರಸೇನನು ತನ್ನ ಸಮಸ್ಯೆಯನ್ನು ದೇವರ ಮುಂದೆ ವಿವರಿಸುತ್ತಾನೆ. ಆಗ ದೇವರು, ಚಿಂತಿಸಬೇಡ, ನಿನ್ನ ಹಾಗೇ ಇರುವ ಇನ್ನೊಬ್ಬ ವ್ಯಕ್ತಿಯನ್ನು ನಾನು ಸೃಸ್ಠಿಸುತ್ತೇನೆ ಎಂದು ಹೇಳಿ ಅದೃಶ್ಯ ಆಗುತ್ತಾನೆ.ದೇವರು ಅದೃಶ್ಯನಾಗಿ ಕೆಲವೇ ಗಂಟೆಗಳ ಬಳಿಕ ತನ್ನದೇ ಇನ್ನೊಂದು ರೂಪ ಹೊಂದಿರುವ ವ್ಯಕ್ತಿ ತನ್ನನ್ನು ಹುಡುಕಿಕೊಂಡು ಬರುತ್ತಾನೆ. ಆಗ ತನಗೇ ಒಂದು ಕ್ಷಣ ನಂಬುವುದಕ್ಕೆ ಸಾಧ್ಯವಾಗುವುದಿಲ್ಲ. ಯಾಕೆಂದರೆ, ಆ ವ್ಯಕ್ತಿ ಪೂರ್ಥಿಯಾಗಿ ನಿಜವಾದ ಅಗ್ರಸೇನನ ತರಹವೇ ಇದ್ದಾನೆ!!...

ಆಗ ಆ ವ್ಯಕ್ತಿಗೆ ತನ್ನ ಉದ್ದೇಶವನ್ನು ತಿಳಿಸಿ, ತಾನು ಪುನಃ ತನ್ನ ಕೆಲಸಕ್ಕೆ ಅಣಿಯಾಗುತ್ತಾನೆ. ಇಲ್ಲಿ ನಾವು ಗಮನಿಸಬೇಕಾದ ಒಂದು ಉದ್ದೇಶವಿದೆ. ಅದು, ನಿಜವಾದ ಅಗ್ರ ಸೇನ ತಾನು ಎಷ್ಟು ಹೊತ್ತು ಧ್ಯಾನಗ್ರಸ್ಥನಾಗಿರುತ್ತಾನೋ, ಅದಕ್ಕಿಂತಲೂ ದುಪ್ಪಟ್ಟು ಶಕ್ತಿ, ಇವನ ಹಾಗೇ ಇರುವ ಇನ್ನೊಬ್ಬ ವ್ಯಕ್ತಿಗೆ ದೊರಕುತ್ತದೆ.ಆದ್ರೆ, ಒಮ್ಮೆ ನಿಜವಾದ ಅಗ್ರಸೇನ ತನ್ನ ಧ್ಯಾನವನ್ನು ಅರ್ಧಕ್ಕೇ ಬಿಟ್ಟ ಎಂದರೆ, ಆಗ ನಿಜವಾದ ಅಗ್ರಸೇನನಿಗೂ ತೊಂದರೆ ಉಂಟಾಗುತ್ತದೆ ಹಾಗೇ ಯುದ್ಧದಲ್ಲಿರುವ ವ್ಯಕ್ತಿಗೂ ತೊಂದರೆಯಾಗುತ್ತದೆ, ಹೀಗಿರಲು ಒಮ್ಮೆ ಆ ಗುರುಗಳ ಒಬ್ಬ ಶಿಷ್ಯ ನಿಜವಾದ ಅಗ್ರಸೇನನಿಗೆ ‘Disturb’ ಮಾಡುತ್ತಾನೆ.ಹೀಗೆ ಆತ ನಿಗೂಢವಾಗಿ ಸಾವನ್ನಪ್ಪುತ್ತಾನೆ. ಧ್ಯಾನಸ್ಥನಾದ ಭಂಗಿಯಲ್ಲೇ, ಆತ ಸಾವನ್ನಪ್ಪುತ್ತಾನೆ.ಹೀಗೆ ಸತ್ತ ಆತ ಪುನರ್ಜನ್ಮ್ದ ಪಡೆದು ಒಬ್ಬ ಶ್ರೇಷ್ಠ ಜ್ಞಾನಿಯಾಗಿ, ಒಬ್ಬ ರಾಜಗುರುವಾಗಿ ಜನ್ಮ ಪಡೆಯುತ್ತಾನೆ.

ಹೀಗಿರಲು, ಆತ ರಾಜ ಕೇಸರಿಧನನಿಗೆ ಒಬ್ಬ ಒಳ್ಳೆಯ ಮಾರ್ಗದರ್ಶಕನಾಗಿರುತ್ತಾನೆ.ಒಮ್ಮೆ ಕೇಸರಿಧನ ಸಹ ಒಂದು ತಪ್ಪು ಮಾಡಿ ಪುನರ್ಜನ್ಮ ಪಡೆಯುತ್ತಾನೆ. ಅದು ಒಮ್ಮೆ ಮಾರುವೇಷದಲ್ಲಿ ಊರು ಊರು ಅಲಿಯುತ್ತಿರುವಾಗ, ಆತನಿಗೆ ಒಬ್ಬ ತಪಸ್ವಿ ಸಿಗುತ್ತಾರೆ, ಆಗ ರಾಜ ತನ್ನ ಪರಿಚಯವನ್ನು ಮಾಡಿಕೊಳ್ಳುತ್ತಾನೆ, ಹಾಗೆ ಪರಿಚಯ ಮಾಡಿಕೊಳ್ಳುವಾಗ ಒಮ್ಮೆ ಆತ ಒಂದು ಸುಳ್ಳು ಹೇಳುತ್ತಾನೆ. ಆಗ ಆ ತಪಸ್ವಿಗೆ ಈ ವಿಷಯ ಸುಳ್ಳು ಎಂದು ತಿಳಿದಿದ್ದೇ ತಡ ಅವರಿಗೆ ತುಂಬಾ ಕೋಪ ಬಂದು, ಅವರು ಒಂದು ಪುನರ್ಜನ್ಮ ಆಗಲಿ ಎಂದು ಶಾಪ ಕೊಡುತ್ತಾರೆ. ಇದಕ್ಕೆ ಪರಿಹಾರ, ಮುಂದಿನ ಜನ್ಮದಲ್ಲಿ ಅವನಿ ನಿನ್ನ ತಾಯಿಯಾದಾಗ ನಿನಗೆ ಶಾಪ ವಿಮೋಚನೆಯಾಗುತ್ತದೆಂದೂ ಮತ್ತು ನೀನು ಮುಂದೆ ಒಬ್ಬ ಅಪ್ಸರೆಯನ್ನು ಮದುವೆಯಾದಾಗ ನಿನಗೆ ಸ್ವರ್ಗ ಪ್ರಾಪ್ತಿಯಾಗುವುದೆಂದೂ ಹೇಳಿ ಅಲ್ಲಿಂದ ಹೊರಟು ಹೋಗುತ್ತಾರೆ.ಇತ್ತ ಶಾಪಗೃಸ್ಥನಾದ ಕೇಸರಿಧನ, ತನಗೆ ಬಂದಿರುವ ಶಾಪದ ಬಗ್ಗೆ ತನ್ನ ಗುರುಗಳಿಗೆ ಹೇಳುತ್ತಾನೆ. ಆಗ ಗುರುಗಳು ತನ್ನ ಶಿಷ್ಯನಿಗೆ ಶಾಪ ಕೊಟ್ಟ ಆ ತಪಸ್ವಿ ತುಂಬಾ ದೊಡ್ಡ ತಪಸ್ವಿ, ಹಾಗೂ ಆತನಿಗೆ ತುಂಬಾ ಸಿಟ್ಟಿರುವುದು ತಿಲಿಯುತ್ತದೆ.

ಆಗ ಗುರುಗಳು ಇದಕ್ಕೆ ಪರಿಹಾರವಂತೂ ನಾನು ಕೊಡಲಾರೆ, ಯಾಕೆಂದರೆ, ನೀನು ಸುಳ್ಳು ಹೇಳಿರುವುದು ಒಬ್ಬ ಮಹಾನ್ ತಪಸ್ವಿಗೆ. ಆದುದರಿಂದ ನೀನು ಶಾಪವನ್ನು ಅನುಭವಿಸಲೇಬೇಕು ಎಂದು ಹೇಳುತ್ತಾರೆ.ಹೀಗೆ ಕೇಸರಿಧನ ಪುನರ್ಜನ್ಮ ಪಡೆದು, ತನ್ನ ಮಗಳಾದ, ‘ಅವನಿ’ ಗೆ ಪುನರ್ಜನ್ಮದಲ್ಲಿ ಮಗನಾಗಿ ಹುಟ್ಟುತ್ತಾನೆ.ಇಲ್ಲಿಗೆ ಅಖೀರ ನ ಶಾಪ ವಿಮೋಚನೆಯಾಯ್ತು. ಈಗ ಅವನಿಗೆ ಸ್ವರ್ಗ ಸಿಗಬೇಕಾದರೆ, ಆತ ಒಬ್ಬ ಅಪ್ಸರೆಯನ್ನು ಮದುವೆಯಾಗಬೇಕು.ಆ ಅಪ್ಸರೆಯೇ, ತನ್ನನ್ನು ಪ್ರೀತಿಸುತ್ತಿರುವ ಹುಡುಗಿ ಎಂದು ಆ ಬಂಗಲೆ ಹೇಳುತ್ತದೆ. ಹೀಗೆ ಇವರಿಬ್ಬರ ಮದುವೆಯಾಗಿ ಅವರಿಬ್ಬರೂ ತುಂಬಾ ಖುಶಿಯಾಗಿರುತ್ತಾರೆ, ಹಾಗೂ ಇದ್ದಾರೆ, ಈಗ ಅಖೀರನಿಗೆ ಸ್ವರ್ಗವೂ ಪ್ರಾಪ್ತಿಯಾಗುವ ‘Chance’ ತುಂಬಾನೆ ಇದೆ.ಇಲ್ಲಿಗೆ ‘ಅವನಿ’ಗಾಗಿ ಕಾಯುತ್ತಾ ಭಾಗ 01 ಹಾಗೂ ಭಾಗ 02 ಮುಕ್ತಾಯವಾದವು. ‘ಅವನಿ’ಗಾಗಿ ಕಾಯುತ್ತಾ ಭಾಗ 01 ಮುಗಿದ ನಂತರ ಭಾಗ 02ಕ್ಕಾಗಿ ತಾಳ್ಮೆಯಿಂದ ಕಾಯ್ದ ಪ್ರೀತಿಯ ಓದುಗರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು...