Click here to Download MyLang App

'ಅವನಿ' ಗಾಗಿ ಕಾಯುತ್ತಾ.. - ಬರೆದವರು : ಸಂಭ್ರಮ ಕುಲಕರ್ಣಿ | ಹಾರರ್1.

‘ಅವನಿ’ಗಾಗಿ ಕಾಯುತ್ತಾ.....

ಭಾಗ – 01.

ಅವತ್ತು ರಾತ್ರಿ ಒಂದೇ ಸಮನೆ ಮಳೆ ಬರ್ತಿತ್ತು ಹಾಗೇ ಸಿಡಿಲೂ ಬೀಳ್ತಿತ್ತು ‘ಅವನಿ’ಗೆ ತುಂಬಾ ಭಯ ಶುರುವಾಯಿತು. ತನ್ನ ಸ್ನೇಹಿತರೊಡಗೂಡಿ ಯಾವುದಾರೂ ಒಂದು ಮನೆ ಖಾಲಿ ಇದೆಯಾ ಎಂದು ಹುಡುಕುತ್ತಿದ್ದರು ಅಷ್ಟೇ..ದೂರದಲ್ಲಿ ಯಾವುದೋ ಒಂದು ವಿಚಿತ್ರ ಆಕೃತಿ ಇವರನ್ನೇ ದಿಟ್ಟಿಸಿ ನೋಡುತ್ತಿದೆ ಎಂದು ಅನ್ನಿಸಿತು ‘ಅವನಿ’ ಗೆ. ಆಕೆ ತುಂಬ ಭಯ ಪಟ್ಟಳು. ಆಕೆ ಎಲ್ಲರಿಗು ಹೇಳಿದರೂ ಅವರೆಲ್ಲ ನಂಬಲಿಲ್ಲ. ‘ಅವನಿ’ಗೆ ನಡೆದದ್ದನ್ನು ತೋರಿಸಬೇಕೆಂದುಕೊಳ್ಳುವಷ್ಟರಲ್ಲೇ ಆ ಆಕೃತಿ ಮಾಯವಾಗಿಬಿಟ್ಟಿತ್ತು. ಇವಳಿಗೋ ಒಂದು ಕಡೆ ಭಯ ಮತ್ತು ಕುತೂಹಲ ಎರಡೂ ಒಟ್ಟಿಗೇ ಆಯಿತು! ಆಗ ಅವಳು ಸುತ್ತಲೂ ನೋಡಿದಳು ಆದರೆ ಯಾರೂ ಇರಲಿಲ್ಲ ತನ್ನ ಸ್ನೇಹಿತರನ್ನು ಬಿಟ್ಟು.‘ಅವನಿ’ ಈಗ ‘Full Relaxed’ ಮತ್ತೇ ಕೆಲವು ಗಂಟೆಗಳು ಕಳೆದವು. ಆದ್ರೆ ಅವರಿಗೆ ಯಾವ ಮನೆಯೂ ಕಾಣಲಿಲ್ಲ. ಅವತ್ತು ಆಗಿದ್ದಿಷ್ಟೇ. ‘ಅವನಿ’ ಹಾಗೂ ಆಕೆಯ ಸ್ನೇಹಿತರು ಸೇರಿ ಒಂದಾಗಿದ್ದಾರೆ.. ಹೀಗೆ ಅವರು ಎಲ್ಲಿಯಾದರೂ ಒಂದು ಒಳ್ಳೆಯ ಸ್ಥಳಕ್ಕೆ ಹೋಗಬೇಕೆಂದುಕೊಳ್ಳುತ್ತಾರೆ ಮತ್ತು ಹೋಗುತ್ತಾರೆ ಆದ್ರೆ ಅಲ್ಲಿಗೆ ಹೋಗುವಾಗಲೇ ರಾತ್ರಿಯಾಗಿಬಿಟ್ಟಿತ್ತು. ಮತ್ತು ಅವತ್ತು ತುಂಬಾ ಮಳೆ ಇದ್ದ ಕಾರಣ ಅವ್ರೆಲ್ಲಾ ಒಂದು ಸಮೀಪದಲ್ಲಿರುವ ಯಾವುದಾದರೂ ಮನೆ ಹುಡುಕುತ್ತಿದ್ದರು. ಅವತ್ತು ಭಾರಿ ಮಳೆ, ಅದರಲ್ಲೂ ಅವರು ಮಳೆಯಿಂದ ತಪ್ಪಿಸಿಕೊಂಡರೆ ಸಾಕೆನ್ನಿಸಿತ್ತು ‘ಅವನಿ’ಯ ಸ್ನೇಹಿತರಿಗೆ.2.

ಆಗ ತಾನೆ ‘ಅವನಿ’ ಯೂ ಸಹ ತನ್ನ ಸ್ನೇಹಿತರೊಂದಿಗೆ ಮನೆಯನ್ನು ಹುಡುಕಲು ಸಹಾಯ ಮಾಡಲು ‘Start’ ಮಾಡಿದಳು. ಆಗ ನಡೆದಿದದ್ದೇ ಈ ಘಟನೆ. ಆಕೆಗೆ ದೂರದಲ್ಲಿ ಯಾರೋ ಬಿಳಿ ಸೀರೆ ಉಟ್ಕೊಂಡು, ಕೂದಲನ್ನು ಹಾಗೇ ಬಿಟ್ಟ್ಕೊಂಡು ಕೆಂಪುಗಣ್ಣಿನಿಂದ ನೋಡುತ್ತಿದ್ದಾರೆಂದು ಅನ್ನಿಸಿತು ಅಷ್ಟೇ, ಅವನಿ ಗೆ ಮಾತೇ ಹೊರಡಲಿಲ್ಲ. ಅವಳು ತುಂಬಾ ಭಯದಿಂದ ಹಾಗೇ ಕಲ್ಲಿನ ಶಿಲೆಯಂತಾಗಿಬಿಟ್ಟಳು!!! ಆಕೆಯ ಸ್ನೇಹಿತರು ಅವನಿ ಯನ್ನು ಏನೋ ಮಾತನಾಡಿಸಿದರು. ಅವಳ ಬಾಯಿಯಿಂದ ಒಂದು ಮಾತೂ ಬರಲೊಲ್ಲವು!!... ಆಗ ಆಕೆಯ ಸ್ನೇಹಿತರೆಲ್ಲ ಅವನಿಯನ್ನು ನೋಡಿ ಅವಳನ್ನು ಎಚ್ಚರಪಡಿಸಿದರು ಮತ್ತು ಅವಳು ತಾನು ನೋಡುತ್ತಿದ್ದ ದಿಕ್ಕನ್ನು ತೋರಿಸಿದಳು. ಆದ್ರೆ ಅಲ್ಲಿ ಯಾರೂ ಇಲ್ಲ.ಅವನಿ ಕಂಗಾಲಾಗಿಬಿಟ್ಟಳು. ಹಾಗೇ ಅವನಿ ತೋರಿಸುವ ಜಾಗದಲ್ಲಿ(ದಿಕ್ಕಿನಲ್ಲಿ) ಒಂದು ದೊಡ್ಡ ಬಂಗಲೆ!!! ಆ ಬಂಗಲೆ ನೋಡೋಕೆ ‘Same’ ಭೂತದ ಮನೆಯಂತಿತ್ತು. ಅವನಿ ಗೆ ಇನ್ನೂ ಹೆದರಿಕೆಯಾಯಿತು. ಆದ್ರೆ ಅವ್ಳಿಗೆ ಆ ಬಂಗಲೆ ಹೋಗೋದು ಅನಿವಾರ್ಯ.ಅವಳು ಆ ಬಂಗಲೆಯ ಹತ್ತಿರ ಬಂದಾಗ ಆ ಬಂಗಲೆಯ ಬಾಗಿಲು ತಂತಾನೇ ‘Open’ ಆಯಿತು! ಅವನಿಗೆ ಏನೋ ಒಂದು ಹೊಸ ತರಹದ ಅನುಭವ. ಆಕೆ ಆ ಬಂಗಲೆಯನ್ನ ನೋಡ್ತಾ ತಲೆ ಸುತ್ತಿ ಅವಳು ಇನ್ನೇನು ಕೆಳಗೆ ಬೀಳಬೇಕು ಅಷ್ಟರಲ್ಲೇ ಆಕೆ ತನ್ನ ಪೂರ್ವ ಜನ್ಮದ ನೆನಪಾಗಿಬಿಟ್ಟಿತ್ತು. ಎಂಥಾ ರಾಜ ಮನೆತನದ ಹೆಣ್ಣು ಅವಳು!!!....

3.

ಅದೆಷ್ಟು ವರ್ಷಗಳವರೆಗೆ ಕಾದಿತ್ತೋ ಅವಳಿಗಾಗಿ ಆ ಬಂಗಲೆ (ಅರಮನೆ). ಅವಳು ಬಂದ ತಕ್ಷಣ ಆ ಬಂಗಕೆಗೆ ತುಂಬಾ ಸಂತೋಷ ಯಾಕಂದ್ರೆ ಆ ಬಂಗಲೆಯ ವ್ಯಥೆನೇ ಹಾಗೆ. ಆ ಮನೆಯ ಕಥೆಯನ್ನು ನಿಮ್ಗೆ ಹೇಳ್ಬೇಕಂದ್ರೆ ಮೊದಲು ಅವನಿ ಯ ಬಗ್ಗೆ ಹಾಗೇ ಅವಳ ರಾಜ ವರ್ಚಸ್ಸಿನ ಬಗ್ಗೆ ನಿಂಗೆ ಒಂಚೂರು ಮನದಟ್ಟು ಮಾಡಿಕೊಟ್ಟ್ಬಿಟ್ರೆ ನಿಮ್ಗೆ ತುಂಬಾ ಅನುಕೂಲ ವಾಗಬಹುದು ಈ ಕಥೆಯನ್ನ ಓದುವವರಿಗೆ.ಅದೊಂದು ಸುಂದರವಾದ ಸಾಮ್ರಾಜ್ಯ. ಆ ಸಾಮ್ರಾಜ್ಯದ ಹೆಸರು ‘ಕುಜ ಕೇಸರಿ ಪತಾಕೆ’ ಎಂದು. ಆ ಸಾಮ್ರಾಜ್ಯ ಕೇಸರಿಯ ಹಾಗೆ ಯಾವಗಲೂ ತುಂಬಾ ಗತ್ತಿನಿಂದ ಘರ್ಜಿಸುತ್ತಾ ಇತ್ತು. ಆ ಸಾಮ್ರಾಜ್ಯದ ಶತ್ರುಗಳಿಗಂತೂ ‘ಸಿಂಹ ಸ್ವಪ್ನ’ ವೇ ಆಗಿಬಿಟ್ಟಿತ್ತು. ಅಲ್ಲಿ ಚಿನ್ನ, ರತ್ನ, ಹಾಗೇ ವಜ್ರಗಳಿಗೇನು ಕಡಿಮೆ ಇರ್ಲಿಲ್ಲ. ಪ್ರಿಯ ಓದುಗರೆ ನಂಗೆ ಈ ಕಥೆಯನ್ನು ಪ್ರಾರಂಭಿಸುವ ಮೊದಲೆ ನಿಮ್ಗೆ ಈ ಒಂದು ಶ್ಲೋಕವನ್ನ ಹೇಳ್ಬೇಕು ಅಂತಾ ಇದ್ದೆ ಆದ್ರೆ ಆಗ ನಾನು ತುಂಬಾ ಕೆಲಸದಿಂದ ಇದ್ದೆ ಮತ್ತೆ ನಾನು ಈ ಕಥೆ ಇಷ್ಟೇ ಇರಬೇಕು ಅಂತಾನೂ ಅಂದುಕೊಂಡಿದ್ದೆ ಆದ್ರೆ ಈ ಕಥೆಯನ್ನು ಬರೆಯುತ್ತಾ ಬರೆಯುತ್ತಾ ಹೋದ ಹಾಗೆ ನಂಗೊಂದು ಮಹಾಭಾರತದ ಒಂದು ಶ್ಲೋಕ ನೆನಪಾಗುತ್ತಿದೆ. ಉಧರೆತತ್ಮಾ ಆತ್ಮಾನಾಂ ನ ಕಾ ಆತ್ಮಾನೋ ಅಅವ್ಸಾದ್ಯೇತ್:

ಅತ್ಮಾ ಎವ್ ಹಿ ಆತ್ಮ್ನೋರ್ಬಂಧ್:

ಉ ಆತ್ಮಾಎ ರಿಪುರತ್ಮಾನಾ:4.

ಅರ್ಥ: ನಿಮ್ಮ ಸ್ವಂತಿಕೆಯಿಂದ ನಿಮ್ಮನ್ನು ಮೇಲಕ್ಕೆತ್ತಲು ಮತ್ತು ಪರರನ್ನು ಬೆಳೆಸಲು ಪ್ರಯತ್ನಿಸಿ.

ನೀವು ನಿಮ್ಮ ಸ್ನೇಹಿತರು ದುಖ: ದಲ್ಲಿದಾಗ ನಿಮ್ಮ ಆತ್ಮವನ್ನು ದುಃಖಿಸಿ, ನಿರ್ಲಕ್ಷಿಸಿ, ಟೀಕಿಸಿ, ನಿಂದಿಸಿ

ನಿಮ್ಮನ್ನು ಪ್ರತಿಪಾದಿಸಿ, ಪ್ರೀತಿಸಿ .ಆದರೆ ನೀವು ಶಪಿಸಿದಾಗ ಮತ್ತು ಅವನತಿಗೊಳಿಸಿದಾಗ ನೀವು ನಿಮ್ಮ ದೊಡ್ಡ ಶತ್ರುಗಳಾಗುತ್ತೀರಿ

ನೀವೇ ಖಿನ್ನತೆಗೆ ಒಳಗಾಗುತ್ತೀರಿ. ಆದ್ದರಿಂದ ನಿಮ್ಮ ಸಾಮರ್ಥ್ಯ ಮತ್ತು ಬೇರೆಯವರ ಸಾಮರ್ಥ್ಯಗಳನ್ನು ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ.

ನೀವು ನಿಮ್ಮನ್ನು ಮೇಲೆ ಎತ್ತಲು ಬಯಸದಿದ್ದರೆ ಯಾರೂ ನಿಮ್ಮನ್ನು ಮೇಲಕ್ಕೆತ್ತಲು ಸಾಧ್ಯವಿಲ್ಲ, ಏಕೆಂದರೆ ಮಲಗುವ ವ್ಯಕ್ತಿಯನ್ನು ಜಾಗೃತಗೊಳಿಸಬಹುದು, ಆದರೆ ನಟಿಸುವವನನ್ನಲ್ಲ. ನೀವು ಶ್ರಮಿಸಬೇಕು. ನೀವು ಈ ಗ್ರಹದಲ್ಲಿ ದೇವರ ಅನುಗ್ರಹದಿಂದ ಅಪರಿಮಿತ ಶಕ್ತಿ ಮತ್ತು ಸುಪ್ತ ರೂಪದಲ್ಲಿ ಶಕ್ತಿಗಳನ್ನು ಹೊಂದಿದ್ದೀರಿ. ನೀವು ನಿಮ್ಮಲ್ಲಿರುವ ಶಕ್ತಿಯನ್ನು ತಿಳಿದುಕೊಳ್ಳಬೇಕು , ಶಕ್ತಿಯನ್ನು ಅರಿತುಕೊಳ್ಳಬೇಕು ಮತ್ತು ಸಾಧಿಸಬೇಕು.ಈ ಒಂದು ಶ್ಲೋಕವನ್ನು ಸಾಕ್ಷಾತ್ ಶ್ರೀ ಕೃಷ್ಣನೇ ಅರ್ಜುನನನ್ನು ಯುದ್ಧದಲ್ಲಿ ಹುರಿದುಂಬಿಸಲು ಶ್ರೀಮದ್ಭವದ್ಗೀತೆ ಯಲ್ಲಿ ಹೇಳಿದ್ದು. ಯಾಕಂದ್ರೆ ಆಗ ಅರ್ಜುನ ತನ್ನ ಎದುರಿನಲ್ಲಿ ತನ್ನ ಯದುರಾಳಿಗಳನ್ನು ನೋಡಿದಾಗ ಅವನಿಗೆ ಒಂದು ತರಹ ನೋವುಂಟಾಯಿತು.5.ಇದನ್ನು ಗಮನಿಸಿದ ಶ್ರೀ ಕೃಷ್ಣ ಸೂಕ್ಷ್ಮ ದಿಂದ ಗಮನಿಸಿದ್ದ ಮತ್ತು ಅವನಿಗೆ ಅರ್ಜುನ ನೀನು ಈಗ ಮಾಡಬೇಕಾಗಿರೋದು ಸಾಮಾನ್ಯ ಯುದ್ಧವಲ್ಲ ನೀನು ಮಾಡಬೇಕಾದವನು ಈ ಯುದ್ಧ ಇಡೀ ಭೂಮಂಡಲವನ್ನೇ ಅಧರ್ಮದಿಂದ ಕಾಪಾಡಬೇಕಾದವನು ಎಂದುಕೊಂಡ ತನ್ನ ಮನದಲ್ಲೇ ಮತ್ತು ಅರ್ಜುನ ತನ್ನ ಪರಮ ಮಿತ್ರನೂ ಹೌದು ಹಾಗೇ ತನ್ನ ಶಿಷ್ಯನೂ ಹೌದು. ಆದ್ರೆ ಅರ್ಜುನನೇ ಈ ಪ್ರಷ್ನಿಸಲಿ ಎಂದು ಸುಮ್ಮನೇ ಇದ್ದ. ಆಗ ಅರ್ಜುನ ‘ನನಗೇಕೆ ಹೀಗಾಗುತ್ತಿದೆ ನಾನು ಹಿಂದಿನಿಂದಲೂ ಕೌರವರನ್ನು ದ್ವೇಶಿಸುತ್ತಲೇ ಬೆಳೆದವನು ಆದ್ರೂ ಹೀಗಾಗಲಿಕ್ಕೆ ಕಾರಣವಾದ್ರೂ ಏನು’ ಎಂದು ಮನಸಿನಲ್ಲಿ ಅಂದುಕೊಂಡ. ಆದ್ರೂ ಕೌರವ ಹಾಗೂ ಪಾಂಡವರು ಒಟ್ಟಿಗೇ ಬೆಳೆದವರು. ಅದಕ್ಕೇ ಇರಬಹುದೇನೋ ಒಡಹುಟ್ಟಿದವರ ವಾತ್ಸಲ್ಯ ಇರಬಹುದು ಏಂದುಕೊಂಡು ಮತ್ತೇ ತನ್ನ ಗಾಂಢೀವ ಧನಸ್ಸನ್ನು ಒಂದು ಸಲ ಝೇಂಕರಿಸಿದ ಆದ್ರೂ ತನಗೆ ತನ್ನ ಮನದಲ್ಲಿ ಕಾಡುತ್ತಿದ್ದ ಪ್ರಶ್ನೆಗೆ ತಾನೇ ಉತ್ತರಿಸಿಕೊಂಡ ತನ್ನ ಮನದೊಳಗೆ ಆದ್ರೆ ಅವನಿಗೆ ಇನ್ನೂ ಕಾಡುತ್ತಿದ್ದ ಪ್ರಶ್ನೆ ನಾನೇನಾದರು ತಪ್ಪು ಮಾಡುತ್ತಿದ್ದೇನಾ? ಎಂದು,. ಹಾಗೇ ಆತ ಸುತ್ತಲೂ ನೋಡಿದ ಅವತ್ತು 17 ನೇ ದಿನ ಆಗ ಗುರು ದ್ರೋಣಾಚಾರ್ಯರು ಸೇಸಾಧಿಪಥ್ಯ ವಹಿಸಿಕೊಂಡಿದ್ದರು ಇದನ್ನು ನೋಡಿ ಅರ್ಜುನನಿಗೆ ಒಂಥರಾ ಸಂಕಟ ವಾಗುತ್ತೆ ಯಾಕಂದ್ರೆ ಒಬ್ಬ ಶಿಷ್ಯ ತನ್ನ ಕೈಯಿಂದಲೇ ತನ್ನ ಗುರುವನ್ನು ಕೊಲ್ಲೋದಂದ್ರೆನು? ಇದು ಅಧರ್ಮವಲ್ಲವೇ ಎಂಬುದಾಗಿತ್ತು ಅರ್ಜುನನ ಚಿಂತೆ!!... ಆಗಲೇ ಶ್ರೀ ಕೃಷ್ಣ ಅರ್ಜುನನಿಗೆ ಗೀತೆಯನ್ನು ಭೋಧಿಸಿದ್ದು....6.ಈ ಕಥೆಯಲ್ಲಿ ಮಹಾಭಾರತದ ಅಂಶ ಏಕೆ ಎಂದು ನಿಮ್ಮೆಲ್ಲರಿಗೂ ಕಾಡುತ್ತಿರಬಹುದು ಅದಕ್ಕೆ ಉತ್ತರ ನೀವೇ ಮುಂದೆ ಓದ್ತಾ ಓದ್ತಾ ಹೋದಹಾಗೆ ನಿಮ್ಗೆ ಗೊತಾಗುತ್ತೆ.ಶತ್ರುಗಳು ಆ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೋದಾಗ ಅಲ್ಲಿಯ ಜನಗಳೇ ಆ ಶತ್ರುಗಳನ್ನು ಸದೆ ಬಡಿದು ಆ ಶತ್ರುಗಳ ಅಹಂ ಗೆ ಮಣ್ಣು ಮುಕ್ಕಿಸುತ್ತಿದ್ರು. ಅಲ್ಲಿ ಎಲ್ಲ ತರಹದ ವಿದ್ಯೆಗಳು ಅಲ್ಲಿಯ ಜನಗಳಿಗೆ ಲಭ್ಯವಿದ್ವು. ‘Especially’ ಬಿಲ್ವಿದ್ಯೆ. ಆ ಸಾಮಾರ್ಜ್ಯದಲ್ಲಿ ಬಿಲ್ವಿದ್ಯೆಗೆ ತುಂಬಾನೇ ಮಹತ್ವ ಕೊಡ್ತಿದ್ರು. ಹೀಗಾಗಿ ‘ಕುಜ ಕೇಸರಿ ಪತಾಕೆ’ ಸಾಮ್ರಾಜ್ಯದ ಹೆಸರು ಕೇಳಿನೇ ಶತ್ರುಗಳು ಗಡ ಗಡ ನಡುಗಿಬಿಡುತ್ತಿದ್ರು. ಶತ್ರುಗಳು ತಮ್ಮ ದೇಶಕ್ಕೆ ಕಾಲಿಟ್ಟಿದ್ದು ಅಲ್ಲಿಯ ರಾಜನಿಗೇ ಗೊತಾಗುತ್ತಿರಲಿಲ್ಲ. ಪ್ರತಿಯೊಂದು ದೇಶಕ್ಕೆ ತನ್ನದೇ ಆದ ಒಂದು ‘Identity’ ಬೇಕಲ್ವಾ, ಸೋ ಈ ಸಾಮ್ರಾಜ್ಯದ ‘Identity’ ಆ ಸಾಮ್ರಾಜ್ಯದ ಹೆಸರೇ ಆಗಿತ್ತು. ‘ಕುಜ ಕೇಸರಿ ಪತಾಕೆ’. ಅಲ್ಲಿರೋ ಜನರಂತೂ ಬಿಲ್ವಿದ್ಯಾ ಪ್ರವೀಣರು.ಹಾಂ.. ಅವತ್ತೊಂದು ದಿನ ಆ ಊರಿನಲ್ಲಿ/ಸಾಮ್ರಾಜ್ಯದಲ್ಲಿ ಎಲ್ಲೆಲ್ಲೂ ಹಬ್ಬದ ಸಂಭ್ರಮ. ಆಗ ರಾಜ ‘ಕುಜ ಸೇನ’ ಮತ್ತು ರಾಣಿ ‘ಅವನಿ ಸೇನಾ’ ಇಬ್ಬರಿಗೂ ಹುಟ್ಟಿದ ಮಗುವೇ ಈ ಕಥೆಯ ನಾಯಕಿ ‘ಅವನಿ’. ಆಗ ತಾನೇ ಹುಟ್ಟಿದ ‘ಅವನಿ’ ಗೆ ಎಲ್ಲ ವಿದ್ಯೆಗಳೂ ಕರಗತವಾಗಿದ್ವು. ಅಂದ್ರೆ ಬಿಲ್ವಿದ್ಯೆ, ಗಧಾ ಯುದ್ಧ, ಮುಷ್ಠಿ ಯುದ್ಧ, ಚಕ್ರವ್ಯೂಹ ವನ್ನು ಭೇಧಿಸುವ ಎಲ್ಲ ತಂತ್ರ ಮಂತ್ರಗಳೂ ಮತ್ತು ಯುದ್ಧದ ಸಮಯದಲ್ಲಿ ಯಾವ ಮಂತ್ರವನ್ನು ಜಪಿಸಿ ಯಾವ ಬಾಣಗಳನ್ನು ಬಿಡಬೇಕು ಹೀಗೆ ಒಟ್ಟಿನಲ್ಲಿ ರಾಜರಿಗೆ ಯಾವ ವಿದ್ಯೆಗಳು ಅವಶ್ಯಕಗಳೋ ಆ ಎಲ್ಲ ವಿದ್ಯೆಗಳು ಕರಗತವಾಗಿದ್ವು ಅವನಿ ಗೆ.

7.

ಅವತ್ತು ಆ ಕುಜ ಕೇಸರಿ ಪತಾಕೆಯ ಯುವ ಜನತೆಗೆ ತಾವು ಕಲಿತಿರುವ ಎಲ್ಲ ವಿದ್ಯೆಗಳನ್ನು ಜನರ ಎದುರಿಗೆ ಪ್ರದರ್ಶಿಸುವ ಒಂದು ಸಭೆ ಏರ್ಪಡಿಸಲಾಗಿತ್ತು. ಎಲ್ಲ ಜನರೂ ತಾವು ಯಾವ ಜನಗಳಿಗೆ ಹೇಳಬೇಕು. ಯಾಕಂದ್ರೆ ಇದೊಂದು ವಾಡಿಕೆ. ಆಗ ರಾಜ ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ಈ ಸ್ಪರ್ಧೆಯನ್ನು ನೋಡುತ್ತಿದ್ದನು. ತತ್ ತಕ್ಷಣ ಆತನಿಗೇ ಒಂದು ಆಶ್ಚರ್ಯ!!!!... ಯಾಕಂದ್ರೆ ಅಲ್ಲಿಗಾಗಲೇ ತನ್ನ ಪುಟ್ಟ ಮಗು ಅವನಿ ಯೂ ಸಹ ಭಾಗವಸಿದ್ದಳು. ಇನ್ನು ಆಕೆಯ ಸರದಿ ಬಂದಾಗಂತೂ ಎಲ್ಲರಿಗೂ ಒಂದು ನಿಮಿಷ ಶಾಕ್ ಆಯಿತು!!! ಯಾಕಂದ್ರೆ ಆ ಸ್ಪರ್ಧೆಯಲ್ಲಿನ ಯುವಜನತೆ ಮತ್ತು ಆ ಯುವಜನತೆಗೆ ವಿದ್ಯೆಯನ್ನು ಕಲಿಸಿದ ಗುರುಗಳಿಗೂ ಸಹ ಅಂತಹ ವಿದ್ಯೆಗಳು ತಿಳಿದಿರಲಿಲ್ಲ. ಅಂತಹ ವಿದ್ಯೆಗಳನ್ನೂ ಸಹ ಆ ಮಗು ಆ ಸ್ಪರ್ಧೆಯಲ್ಲಿ ಪ್ರದರ್ಶಿಸಿತ್ತೆಂದರೆ ನೀವೇ ಊಹಿಸಿ. ಹಾಗೆ ಅಲ್ಲಿಯ ಗುರುಗಳೂ ಸಹ ಈ ಮಗುವನ್ನು ಒಬ್ಬ ದೇವತೆಯ ಅವತಾರ ಎಂದು ತಿಳಿದರು ತಕ್ಷಣವೇ ರಾಜನ ಬಳಿ ತೆರಳಿ ಈ ಮಗು ಮುಂದೆ ನಮ್ಮ ಸಾಮ್ರಾಜ್ಯದ ಕೀರ್ತಿಯನ್ನು ಹೆಚ್ಚಿಸುತದೆ ಮತ್ತು ಇವಳು ಇರೋವರ್ಗೂ ಯಾವ ಮಾಂತ್ರಿಕನೂ, ದೆವ್ವ ಭೂತಗಳೂ, ಮತ್ತು ಇತರೆ ದುಷ್ಟ ಶಕ್ತಿಗಳೂ ಸಹ ಹೆದರುತ್ತಾರೆ. ಇನ್ನು ಶತ್ರುಗಳ ವಿನಾಶವಂತೂ ಖಚಿತವಾದದ್ದು ಎಂದು ಹೇಳುತ್ತಾರೆ. ಹಾಗೇ ತಮಗಾಗಿರುವ ಆಶ್ಚರ್ಯವನ್ನೂ ವ್ಯಕ್ತ ಪಡಿಸುತ್ತಾರೆ ಅದೆಂದರೆ,ಅಲ್ಲಾ, ಆಗ ತಾನೇ ಹುಟ್ಟಿದ ಮಗು, ತಾನು ಬಿಲ್ವಿದ್ಯೆಯ ಪರೀಕ್ಷೆಯಲ್ಲಿ ಭಾಗವಹಿಸಿ ಅತೀ ಭಾರವಾದ ಬಿಲ್ಲು ಬಾಣಗಳನ್ನು ಮಂತ್ರದಿಂದ ಜಪಿಸಿ ಎತ್ತಿ ನಿಗದಿತ ಸಮಯದಲ್ಲೇ ತನಗೆ ಗೊತ್ತಿರುವ ಎಲ್ಲ ಮಂತ್ರಗಳನ್ನು ವೇಗದಲ್ಲಿ ಪಠಿಸಿ ಅದನ್ನು ಪ್ರಯೋಗಿಸೋದಂದ್ರೇನು? ಆ ಬಾಣ ನಿಗದಿತ ವೇಗದಲ್ಲಿ ಹೋಗಿ ಗುರಿಯನ್ನು ಮುಟ್ಟುವದೇನು ಸಾಮಾನ್ಯ ನಾ?ಈ ಪರೀಕ್ಷೆಯಲ್ಲಿ ನೆರೆದಿರುವ ಎಲ್ಲರಿಗೂ ಒಮ್ಮೆ ಆಶ್ಚರ್ಯವಾಯಿತು. ನಂತ್ರ ಅವ್ರೆಲ್ಲಾ ಈ ಮಗು ಸಾಮಾನ್ಯವಾದುದಲ್ಲ. ಈ ಮಗು ‘ದೈವಾಂಶ ಸಂಭೂತೆ’ ಎಂದೂ ಭವಿಷ್ಯದಲ್ಲಿ ಇವಳು ನಮ್ಮ ಸಾಮ್ರಾಜ್ಯವನ್ನು ಶತ್ರುಗಳಿಂದ ರಕ್ಷಿಸುತ್ತಾಳೆಂದು ನಂಬಿದರು.8.

ಆಗ ಆ ರಾಜನ ಸಮ್ಮುಖದಲ್ಲಿ ನೆರೆದಿರುವ ಬಿಲ್ವಿದ್ಯಾ ಗುರುಗಳು ರಾಜನ ಬಳಿ ಬಂದು ಇವಳ ಪರಾಕ್ರಮವನ್ನು ಹೊಗಳತೊಡಗಿದರು. ಹಾಗೇ ಅವಳು ದುಷ್ಟ ಶಕ್ತಿ ಸಂಹಾರಕ್ಕೆಂದೇ ಹುಟ್ಟಿದಂಥಾ ಹೆಣ್ಣು ಅವಳು. ಹೀಗೆ ಅವಳು ಯೌವನಕ್ಕೆ ಕಾಲಿಡುವಾಗಲೇ ಎಂಥ ರೂಪ ಲಾವಣ್ಯಗಳನ್ನು ಪಡೆದಿದ್ದಳು!! ಆಗ ‘ಕುಜ ಕೇಸರನ’ ಎಂಬ ಅಗರ್ಭ ಶ್ರೀಮಂತನ ಮಗ ‘ಕೇಸರಿ ಧನ’ ಎಂಬುವನನ್ನು ವರಿಸಿದಳು. ಆತ ಕೂಡ ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದ. ಅವನೂ ಇವಳಿಗೆ ಮನಸೋತ. ಹೀಗೆ ಅವರಿಬ್ಬರೂ ಪ್ರಣಯಿಸುತ್ತಿದ್ದರು.ಅವತ್ತೂ ಕೂಡ ಹಾಗೇ ಆದ್ರೆ ಅವತ್ಯಾಕೋ ಗೊತ್ತಿಲ್ಲ ಮಳೆಯಂತೂ ಜೋರಾಗಿಯೇ ಬರ್ತಿತ್ತು. ಆ ಮಳೆಯೋ ಒಂದು ವಾರ ಸತತ ವಾಗಿ ಹಾಗೇ ಬರ್ತಿತ್ತು. ಆಗ ಅವನಿ ಯು ಆಕೆಯ ಭಾವಿ ಪತಿ ಕೇಸರಿಧನ ನೆಡೆ ಇದ್ದಳು. ಆದ್ರೆ ಅದಾಗಲೇ ರಾತ್ರಿಯಾಗಿಬಿಟ್ಟಿತ್ತು. ಹೀಗಾಗಿ ಅವಳು ತನ್ನ ಅರಮನೆಗೆ ಹೋಗಲಿಲ್ಲ. ಮಾರನೇ ದಿನ ಬೇಗನೆ ಎದ್ದು ಅವಳು ತನ್ನ ಅರಮನೆಗೆ ಧಾವಿಸಿದ್ದಾಯಿತು. ಅವಳ ಪುಣ್ಯ ರಾಜ ರಾಣಿಯರು ಇನ್ನೂ ಎದ್ದಿರಲಿಲ್ಲ. ಹಾಗಂತ ಅವನಿ ತಿಳಿದಿದ್ದಳು ಆದ್ರೆ ಇದನ್ನೆಲ್ಲ ಅವರ ತಂದೆ ತಾಯಿ ಅಂದ್ರೆ ರಾಜ ರಾಣಿಯರಿಬ್ಬರೂ ಸೂಕ್ಷ್ಮವಾಗಿ ಗಮನಿಸಿ ಬೆಳಗಾದೊಡನೆ ಅವನಿ ಗೆ ಗೊತ್ತಾಗದ ಹಾಗೆ ಆಕೆ ಪ್ರೀತಿಸಿದ ಹುಡುಗ ಕೇಸರಿ ಧನ ನ ಬಗ್ಗೆ ವಿಚಾರಿಸಿ ಅವಳಿಗೆ ಗೊತ್ತಾಗದ ಹಾಗೆ ಮದುವೆಯನ್ನು ನಿಶ್ಚಯಿಸಿ ಬಿಟ್ಟ. ಈ ವಿಷ್ಯ ಅವನಿ ಗೆ ತಿಳಿಯೋದ್ರೊಳಗೆ ಅವನಿ ಗೆ ಮತ್ತು ಕೇಸರಿ ಧನ ನಿಗೆ ಮದುವೆಯನ್ನು ಮಾಡಿಸಿಬಿಟ್ಟ. ಅದೂ ಕೇಸರಿ ಧನ ಇರುವ ಒಂದು ಭವ್ಯ ಬಂಗಲೆಯಲ್ಲಿ. ಆಗ ಆ ರಾಜ ಪಂಡಿತರಿಗೆ ಈ ಬಂಗಲೆಯ ಬಗ್ಗೆ ಕೇಳಿದ ಅವರು ಈ ಬಂಗಲೆಯಲ್ಲಿ ಮೊದಲು ಒಬ್ಬ ರಾಕ್ಷಸ ವಾಸವಿದ್ದ. ಆದ್ರೆ ಈಗ ಸಾಕ್ಷಾತ್ ದೇವಿ ಸ್ವರೂಪಿ ಆದ ಅವನಿ ಬಂದಾಕ್ಷಣ ಆ ಮನೆಯು ದೇವರ ಮನೆಯಂತೆ ಬೆಳಗುತ್ತಿದೆ” ಎಂದು ಹೇಳಿದರು. ಆದರೂ ರಾಜ ಈ ವಿಷಯವನ್ನು ತನ್ನ ಮಗಳಿಗೆ ತಿಳಿಸುತ್ತಾನೆ ಮತ್ತು ಹೀಗೆ ಹೇಳುತ್ತಾನೆ. ಮಗಳೇ ನೀನು ಇನ್ನು ಈ ಬಂಗಲೆಯಲ್ಲಿರುವುದು ಸೂಕ್ತವಲ್ಲ. ಒಂದು ವೇಳೆ ನೀನು ಹಠ ಮಾಡಿದ್ರೆ ನೀನು ಇಲ್ಲೇ ಇರಬಹುದು. ನನಗೇನು ಅಭ್ಯಂತರವಿಲ್ಲ ಎಂದು ಹೇಳಿ ಅಲ್ಲಿಂದ ಹೊರಟೇಬಿಟ್ಟ.
9.

ಆಗ ಅವನಿ ತುಂಬಾ ದಿಗಿಲಾದಳು. ಮತ್ತು ತನ್ನ ಪತಿ ಕೇಸರಿ ಧನ ನಿಗೆ ಒಂದು ಮಾತು ಕೇಳಿ ಹೇಳುತ್ತೇನೆಂದು ತಂದೆಗೆ ಹೇಳಿದಳು. ಆದರೆ ತಂದೆ ಕೇಳಿಸಿಕೊಳ್ಳುವ ಕಾತುರದಲ್ಲಿರಲಿಲ್ಲ. ಹಾಗೇ ತನ್ನ ಬಗ್ಗೆ ತನ್ನ ಮಗಳು ಏನೆಂದುಕೊಳ್ಳುತ್ತಾಳೋ ಎಂಬುದನ್ನೂ ಸಹ ಅರ್ಥ ಮಾಡಿಕೊಳ್ಳುವ ಪ್ರಯತ್ನ ಕೂಡ ಮಾಡಲಿಲ್ಲ.ಅಷ್ಟರಲ್ಲೇ ಕೇಸರಿ ಧನ ಕೂಡ ಅಲ್ಲಿಗೆ ಬಂದ. ಆಗ ಅವನಿ ‘ಇವತ್ತು ನನ್ನ ತಂದೆ ಇಲ್ಲಿಗೆ ಬಂದಿದ್ದರು ಮತ್ತು ಅವರಿಗೆ ಪಂಡಿತರು ‘ನಾವು ಇಲ್ಲಿರುವುದು ಸೂಕ್ತವಲ್ಲ’ ಎಂದು ಹೇಳಿದರು ಕೇಳಿದ್ದಕ್ಕೆ ಈ ಬಂಗಲೆ ದಕ್ಷಿಣ ದಿಕ್ಕಿನಲ್ಲಿದೆ ಹಾಗೂ ನಮಗೆ ಮುಂದೆ ಏನಾದರೂ ಅಪಾಯವಾಗುವ ಸಾಧ್ಯತೆ ತುಂಬಾನೇ ಇದೆ, ಎಂದು ಹೇಳಿದರು. ಅದಕ್ಕೆ ತಂದೆ ‘ಮಗಳೇ ಅವನಿ, ನೀನು ಈ ಭವ್ಯ ಭಂಗಲೆಯನ್ನು ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಬಿಟ್ಟರೆ ನಿಮಗೇ ಒಳ್ಳೆಯದು’ ಎಂದು ಹೇಳುತ್ತಿದ್ದ ಅವನಿಯನ್ನು ನೋಡಿ ಕೇಸರಿಧನ ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳುತ್ತಾನೆ. ಆದ್ರೆ ಅವನಿ ಕೇಸರಿಧನ ನ ಮುಖವನ್ನೊಮ್ಮೆ ನೋಡಿ “ನೀವು ಹೇಗೆ ಹೇಳ್ತಿರೋ ಹಾಗೇ ಮಾಡೋಣ” ಎನ್ನುತ್ತಾಳೆ. ಅದಕ್ಕೆ ಕೇಸರಿಧನ “ಅಲ್ಲ ದೇವಿ, ನಾನು ಇಷ್ಟು ವರ್ಷದಿಂದ ಆಡಿ ಬೆಳೆದ ಬಂಗಲೆ ಇದು. ಅದೂ ಅಲ್ಲದೇ ನಮ್ಮ ತಾತ ನಮ್ಮ ತಂದೆಗಾಗಿ ಕಟ್ಟಿಸಿದ ಭವ್ಯ ಬಂಗಲೆ ಇದು. ಇದನ್ನು” ಎಂದು ಏನೋ ಹೇಳಹೊರಟಾಗ ಅವನಿ ಎಲ್ಲ ವಿಷಯವನ್ನು ತಿಳಿದು “ಬೇಡ ಬಿಡಿ, ಇಲ್ಲೇ ಇರೋಣ ಏನಾಗುತ್ತೋ ಅದು ಆಗಲಿ” ಎಂದು ಸಲಹೆ ಇತ್ತಳು. ಮತ್ತೆ ತಂದೆಗೆ ಪತ್ರದ ಮೂಲಕ ಸಂದೇಶವನ್ನು ರವಾನಿಸಿದಳು. ಆಗ ರಾಜ ‘ಕುಜಸೇನ’ ಆಯಿತಮ್ಮ ನಿನಗೆ ಹೇಗೆ ತೋಚುತ್ತೋ ಹಾಗೇ ಮಾಡು ಆದರೆ ಸ್ವಲ್ಪ ಹುಷಾರಾಗಿರು ಆ ಮನೆಯಲ್ಲಿ. ಅಳಿಯ ಕೇಸರಿ ಧನ ಮತ್ತು ಮಾವ ಕುಜ ಕೇಸರನ ನವರು ಹೇಗಿದ್ದಾರೆ? ಎಲ್ಲರೂ ಕ್ಷೇಮವೆಂದು ಭಾವಿಸುತ್ತೇನೆ” ಎಂದು ಮರು ಉತ್ತರ ಬಂದಿತು.10.

ಅವನಿ ಹೇಗೂ ದೇವಾಂಶ ಸಂಭೂತೆ, ದುಷ್ಟ ಶಕ್ತಿ ಸಂಹಾರಕೆಂದೇ ಜನ್ಮ ಎತ್ತಿದವಳು. ಹೀಗಾಗಿ ಅವಳು ಚಿಕ್ಕ ಮಗುವಿದ್ದಾಗಲೇ ಅವಳಿಗೆ ಎಲ್ಲ ತರಹದ ವಿದ್ಯೆಗಳು ಕರಗತವಾಗಿದ್ವು. ಹೀಗಾಗೇ ಅವನಿ ತನ್ನ ತಂದೆಗೆ ಅದೇ ಬಂಗಲೆಯಲ್ಲಿ ಇರುತ್ತೇನೆಂದು ಹೇಳಿದಾಗಲೂ ಸಹ ತನ್ನ ತಂದೆ ಹಾಗೂ ತಾಯಿ ಇಬ್ಬರೂ ಒಪ್ಪಿದರು. ಅವರು ಮಾಡಿದ ಮೊದಲ ತಪ್ಪು ಅಲ್ಲೇ.. ಯಾಕಂದ್ರೆ ಆ ಬಂಗಲೆಗೆ ಸೊಸೆ ಬಂದ ಕೇವಲ 3 ರೇ ದಿನವಾಗಿದ್ವು ಅಷ್ಟೇ.. ಆಗಲೇ ಆ ಬಂಗಲೆ ತನ್ನ ನಿಜ ಸ್ವರೂಪವನ್ನು ತೋರಿಸಿಬಿಟ್ಟಿತ್ತು. ಇದನ್ನರಿತ ಕೇಸರಿಧನ ತನ್ನ ತಂದೆ ಕುಜ ಕೇಸರನ ನ ಹಾಗೂ ಆತನ ಪತ್ನಿ ಹಾಗೂ ರಾಜ ಕುಜ ಸೇನ ನ ತಂದೆಯ ಗೆಳೆಯನ ಮಗಳು ‘ಕುಜತಿ’ ಯನ್ನು ಕರೆದುಕೊಂಡು ಅವನಿ ಹಾಗೂ ಕೇಸರಿಧನ ಇಬ್ಬರೂ ತಮ್ಮ ರಥ ಓಡಿಸುಅವವನಿಗೆ ( ಅಂದ್ರೆ ಈತ ಮಿತ್ರತ್ವದಲ್ಲಿ ತಮ್ಮನಾಗಬೇಕು) ಹೇಳಿಯೇ ಬಿಟ್ಟರು. ಆ ರಥ ಆ ಬಂಗಲೆಯನ್ನು ಬಿಟ್ಟು ರಾಜ ‘ಕುಜಸೇನ’ ಕಟ್ಟಿಸಿದ ಹೊಸ ಬಂಗಲೆಯತ್ತ ಹೊರಟೇಬಿಟ್ಟಿತು.ಆಗ ನೋಡಿ ಶುರುವಾಗಿದ್ದು. ಅದ್ಯಾಕೋ ಗೊತ್ತಿಲ್ಲ ರಾಜ ‘ಕುಜಸೇನ’ ನಿಗೆ ಆ ರಾತ್ರಿಯಂತಿದ್ದಿತು. ಏನೇನೋ ವಿಚಿತ್ರ ವಿಚಿತ್ರ ಕನಸುಗಳು ಬೀಳತೊಡಗಿದವು. ರಾಜನಿಗೆ ಸರಿಯಾಗಿ ನಿದ್ದೇನೇ ಬರಲಿಲ್ಲ. ಇತ್ತ ಕೇಸರಿ ಧನ ನ ಕಣ್ಣುಗಳಲ್ಲಿ ಅದ್ಯಾಕೋ ಗೊತ್ತಿಲ್ಲ ಒಂದೇ ಸಮನೆ ನೀರು ಬರತೊಡಗಿತ್ತು. ಯಾಕೆ ಗೊತ್ತಿಲ್ಲ!!!!... ಸ್ವತಃ

ಕೇಸರಿಧನ ನಿಗೇ ಕಾರಣ ತಿಳಿಯಲೊಲ್ಲದು ಇನ್ನು ತನ್ನ ಪತ್ನಿ ಅವನಿ ಗೆ ತಂದೆ ಕುಜ ಕೇಸರನ ನಿಗೆ ಹಾಗೂ ತಾಯಿ ಕುಜತಿಗೆ ತಾನೆ ಏನು ಹೇಳಿಯಾನು? ಆ ರಥ ಮುಂದೆ ಮುಂದೆ ಸಾಗುತ್ತಿದ್ದಂತೆ ಜೋರಾಗಿ ಮಳೆ, ಸಿಡಿಲು, ಗುಡುಗು, ಇನ್ನೇನು ಚಂಡ ಮಾರುತ ಧರೆಗೇ ಅಪ್ಪಳಿಸಿ ತಮ್ಮ ರಥವನ್ನೇ ಬೇರೆಡೆಗೆ ಹೊತ್ತೊಯ್ಯುತ್ತಾನೋ ಎಂಬಂತೆ ವಾಯುದೇವ ಬೀಸುತ್ತಿದ್ದ.11.

ಎಷ್ಟೆಂದರೂ ವಾಯು ಮತ್ತೆ ವರುಣ ಇಬ್ಬರೂ ಮಿತ್ರರೇ ಅಲ್ವಾ... ಸೋ ವರುಣನೂ ಸಹ ಅಷ್ಟೇ ಅತಿಯಾಗಿ ಧರೆಗೆ ಬಂದು ಅಪ್ಪಳಿಸತೊಡಗಿದ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕೇಸರಿಧನ ನ ತಂದೆ ತಾಯಿ ಅಂದರೆ ಕುಜ ಕೇಸರನ ಮತ್ತು ಆತನ ಪತ್ನಿ ಕುಜತಿ ಇಬ್ಬರಿಗೂ ಏನೋ ಕಳೆದುಹೋದ ಹಾಗೆ ಅನ್ನಿಸತೊಡಗಿತು ಅಷ್ಟೇ.

ವರುಣನ ಆರ್ಭಟ ಹಾಗೂ ವಾಯುದೇವನ ಆರ್ಭಟಗಳೂ ಹೆಚ್ಚಾಗತೊಡಗಿದರು. ಒಂಥರಾ ವರುಣ ಮತ್ತು ವಾಯುದೇವ ಇಬ್ಬರೂ ಅವನಿ ಮತ್ತು ಕೆಸರಿಧನ ರಿಗೆ ಏನೋ ಸಮಸ್ಯೆ ಇದೆ ಎಂದು ಸಾರಿ ಸಾರಿ ಹೇಳಿದ ಹಾಗಿತ್ತು ಅವರಿಬ್ಬರ ಆರ್ಭಟ ಮತ್ತು ಅವರು ಬಂದ ದಾರಿಗೆ ಹಾಗೇ ಹಿಂದೆ ಹೋದರೆ ಅವರೆಲ್ಲರಿಗೂ ಏನೋ ಆಪತ್ತು ಕಾದಿದೆ ಏನೋ ಎಂಬಂತೆ ಮಳೆ ಮತ್ತು ಗಾಳಿಗಳು ಭೀಕರ ವಾಗಿದ್ದೆವು.

ಆದರೆ ಮನಸ್ಸು ಕೇಳಬೇಕಲ್ವಾ.. ಹೀಗಾಗಿ ಮತ್ತೇ ತಮ್ಮ ರಥ ಚಾಲಕನಿಗೆ ರಥವನ್ನು ಹಿಂದೆ ತಿರುಗಿಸಲು ಹೇಳಿದ ಕುಜಕೇಸರನ. ಆ ರಥಚಾಲಕ ರಥವನ್ನು ತಿರುಗಿಸಿ ಬಿಟ್ಟ. ಆದ್ರೆ ಅಲ್ಲಿರುವ ಕುದುರೆಗಳು ಮಾತ್ರ ಮುಂದೆ ಹೊಗಲೊಲ್ಲವು. ಯಾಕಂದ್ರೆ ಅವುಗಳಿಗೆ ‘ನಾವು ಮತ್ತೇ ಅದೇ ಮನೆಗೆ ಹೋದರೆ ಏನಾದರೊಂದು ಆಪತ್ತು ಬರಬಹುದು’ ಎಂಬ ಆಲೋಚನೆ ಅವುಗಳದ್ದು.

ಮನುಷ್ಯ ಈಗ ತಂತ್ರಜ್ಞಾನದಲ್ಲಿ ಎಷ್ಟೇ ಬೆಳವಣಿಗೆ ಕಾಣುತ್ತಿದ್ದರೂ ಮನುಷ್ಯನಿಗೆ ಪ್ರಾಣಿಗಳ ಮೇಲೆ ಅವನಿಗಿರುವ ಪ್ರೀತಿ ಕಿಂಚಿತ್ತೂ ಕಡಿಮೆ ಆಗಿಲ್ಲ!! ಯಾಕಂದ್ರೆ ಪ್ರಾಣಿಗಳಿಗೆ ತಮ್ಮ ಮಾಲಿಕ ಆಪತ್ತಿಗೆ ಸಿಲುಕುತ್ತಾನೆಂದು ಮೊದಲೇ ಗ್ರಹಿಸುತ್ತವೆ ಮತ್ತು ನಮ್ಮನ್ನು ಅಂದರೆ ಮನುಷ್ಯನನ್ನು ರಕ್ಷಿಸೋಕೆ ಓಡೋಡಿ ಬರುತ್ತವೆ. ಆದರೆ ಮನುಷ್ಯ ಹಾಗಲ್ಲ ‘Even’ ತನ್ನ ಹತ್ತಿರದ ಸಂಬಂಧಿಕರೇ ಸಮಸ್ಯೆಯಲ್ಲಿ ಸಿಲುಕಿದ್ದರೂ ಸಹ ಅವರ ಬಗ್ಗೆ ಕಿಂಚಿತ್ತೂ ವಿಚಾರ ಮಾಡುವುದಿಲ್ಲ ಮತ್ತು ತಾನು ಅದರಿಂದ ಮಜ ನೋಡುತ್ತಿರುತ್ತಾನೆ. ಅದದಿರ್ಲಿ, ನಾನು ಮತ್ತೇ ಮುಂದೆ ನಿಮ್ಗೆ ಪ್ರಾಣಿಗಳ ಬಗ್ಗೆ ಬರೆದಾಗ ಹೇಳ್ತೆನೆ ಈಗ ವಿಷ್ಯ ಅದಲ್ಲ.

12.

ಆ ಕುದುರೆಗಳು ಕಿಂಚಿತ್ತೂ ಅಲುಗಾದಲೊಲ್ಲವು. ಅವುಗಳಿಗೆ ಮುಂದೆ ಹೋಗು ಎಂದರೆ ಅವು ಮತ್ತೇ ಹಿಂದೆ ತಿರುಗುತ್ತಿದ್ದವು. ಅಂಥದ್ದರಲ್ಲಿ ಈ ಮಳೆ ಬೇರೆ. ಆಗಲೇ ಕುಜತಿ ತನ್ನ ಮನೆಯ ಮಹಾಲಕ್ಷ್ಮಿಯನ್ನೊಮ್ಮೆ ನೋಡಿದ್ದು. ಆಗ ಕುಜತಿಗೆ ತನ್ನ ಬಾಲ್ಯ ಒಂದು ಸಾರಿ ನೆನಪಾಗಿಬಿಟ್ಟಿತು!!!!..... ತಾನು ಈ ಸಾಮ್ರಾಜ್ಯ/ಊರಿಗೆ ಕಾಲಿಡುವ ಮೊದಲೇ ಅವಳು ತನ್ನದೇ ಆದ ಒಂದು ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದಳು. ಅಂದರೆ ಕುಜತಿ ಮೂಲತಃ ‘ಕುಜ ಕೇಸರಿ ಪತಾಕೆ’ ಸಾಮ್ರಾಜ್ಯದವಳೇ ಅಲ್ಲ. ಅವಳು ಆ ಸಾಮ್ರಾಜ್ಯದ ಪಕ್ಕದಲ್ಲೇ ಇರುವ ಒಂದು ಊರಿನವಳು. ಅದುವೇ ಕುಜತಿ ಗ್ರಾಮ ಎಂದೇ ಖ್ಯಾತಿಯನ್ನು ಪಡೆದಿತ್ತು. ಆಕೆ ತಾನು ಯೌವನಕ್ಕೆ ಕಾಲಿಟ್ಟ ತಕ್ಷಣ ಆಕೆಗೆ ಈ ಕುಜ ಕೇಸರನ ನ ಬಗ್ಗೆ ಗೊತ್ತಾಗಿದ್ದು!!!!.... ನಂತರ ಅಕ್ಕೆಯೇ ಮನಸ್ಸು ಮಾಡಿ ಈ ಶ್ರೀಮಂತನನ್ನು ವರಿಸಿ ಮಾಂಗಲ್ಯಂ ತಂತು ನಾನೇನಾ ಎಲ್ಲ ಆಗಿ ಅದಾಗಲೇ ಅವರು ಕುಜಕೇಸರನ ನೊಡಗೂಡಿ ಆ ಭವ್ಯ ಬಂಗಲೆಗೆ ಬಂದಿದ್ದಾಯಿತು.

ಹಾಗೇ ರಾಜ ಕುಜ ಸೇನ ನ ತಂದೆ ಕುಜಕೇಸರಿ ತಮ್ಮ ಭವ್ಯ ಬಂಗಲೆಗೆ ಬಂದಿದ್ದು ನಂತರ ಅವರು ತಮ್ಮ ಪಂಡಿತರ ಬಳಿ ಬಂದು ಈ ಬಂಗಲೆಯ ಬಗ್ಗೆ ಕೇಳಿದಾಗ ಅವರು ಈ ಬಂಗಲೆ ದಕ್ಷಿಣ ದಿಕ್ಕಿನಲ್ಲಿದೆ ಎಂದು ಹೇಳಿದ್ದು ನಂತರ ಅವರು ಇವರಿಗಾಗಿ ಒಂದು ದೊಡ್ಡ ಅರಮನೆಯನ್ನೇ ಕಟ್ಟಿಸಿ ತಮ್ಮನ್ನು ಆ ಅರಮನೆಗೆ ಆವ್ಹಾನಿಸಿದ್ದು ಮತ್ತು ಕುಜತಿ ಹಾಗೂ ಕುಜಕೇಸರನ ಇಬ್ಬರೂ ಅದಕ್ಕೊಪ್ಪದಿದ್ದದ್ದು ಹೀಗೆ ಎಲ್ಲವೂ ಎಳೆ ಎಳೆಯಾಗಿ ನೆನಪಾಗತೊಡಗಿತು ಕುಜತಿ ಗೆ ಹಾಗೇ ಕುಜತಿಗೆ ದುಖಃ ವನ್ನು ತಡೆಯಲಾಗಲಿಲ್ಲ. ಅವಳ ದುಖಃ ಒಮ್ಮೆ ಉಮ್ಮಳಿಸಿತ್ತು. ಆದ್ರೆ ಕುಜತಿಗೆ ಈ ರೀತಿ ನಮಗೇ ಏಕೆ ಹೀಗಾಗುತ್ತಿದೆ ಎಂಬ ಒಂದು ಕಡೆ ಕೊರಗಾದರೆ ಮತ್ತೊಂದು ಕಡೆ ಕುತೂಹಲವೂ ಆಯಿತು!!!!..... ಇದನ್ನು ತಿಳಿಯಲು ಓದುಗರೇ ನಾವೆಲ್ಲರೂ ‘Time Travel’ ಮಾಡಬೇಕು.

ಕುಜತಿ ತನ್ನ ಪೂರ್ವ ಜನ್ಮದಲ್ಲಿ ಋಷಿ ಮತ್ತು ಮಹಾನ್ ತಪಸ್ವಿಗಳಿಗೆ ಹುಟ್ಟಿದಳು. ಅವಳು ಮಗುವಿದ್ದಾಗಲೇ ತಂದೆ ಹೇಳುತ್ತಿದ್ದ ಪ್ರತಿಯೊಂದು ಮಂತ್ರವನ್ನು ಪಟ ಪಟನೇ ಜಪಿಸುತ್ತಿದ್ದಳು. ಅವತ್ತು ಆ ಊರಿನಲ್ಲಿ ಒಬ್ಬ ರಾಜ ಅಶ್ವಮೇಧ ಯಾಗವನ್ನು ಆಚರಿಸಲು ಕುಜತಿಯ ತಂದೆ ಅಂದ್ರೆ ಆ ಮಹಾ ತಪಸ್ವಿಎನ್ನು ಆವ್ಹಾನಿಸಿದ್ದರು. ಆಗ ನಡೆದಿತ್ತು ಈ ಒಂದು ಆಶ್ಚರ್ಯವಾದ ಒಂದು ಪ್ರಸಂಗ. ಅಲ್ಲಿ ನೆರೆದ ಎಲ್ಲ ಮಹಾನ್ ತಪಸ್ವಿಗಳೇ ಒಮ್ಮೆ ಈಕೆಯ ಚಾತುರ್ಯಕ್ಕೆ ಆಶ್ಚರ್ಯಚಕಿತರಾಗಿದ್ದರು.13

ಸ್ವತಃ ಮಹಾರಾಜರೇ ಒಮ್ಮೆ ಆಶ್ಚರ್ಯಚಕಿತರಾಗಿದ್ದರು. ಯಾಕಂದ್ರೆ ಸಣ್ಣ ಮಕ್ಕಳಿಗೆ ಮಾತನಾಡೋಕೇ ಬರಲ್ಲ ಅಂಥದ್ದರಲ್ಲಿ ಈ ಮಗು ಇಂತಹ ಮಹಾ ಯಜ್ಞಕ್ಕೆ ಬೇಕಾದ ಎಲ್ಲ ಮಂತ್ರಗಳನ್ನು ಉಚ್ಚರಿಸಿತ್ತು.!!!...

ಒಮ್ಮೆ ಆ ಹುಡುಗಿ ಯೌವನಕ್ಕೆ ಕಾಲಿಟ್ಟಳು. ಯೌವನ ಅಂದ್ರೆ ಕೇಳ್ಬೇಕಾ ಅಪ್ಪ ಅಮ್ಮನ ಮಾತು ಆಗ ಜಾಸ್ತಿ ‘Heart’ ಆಗ್ತಾವೆ. ಅಪ್ಪ ಅಮ್ಮ ಏನೇ ಹೇಳಿದರೂ ಅದು ನಮ್ಮ ಒಳ್ಳೆಯದಕ್ಕೆಂದು ತಿಳಿಯುವುದೇ ಇಲ್ಲ. ಅಂಥ ಒಂದು ಕೆಟ್ಟ ಪ್ರಸಂಗವೊಂದು ನಡೆದೇಬಿಟ್ಟಿತು. ಒಮ್ಮೆ ಒಬ್ಬ ರಾಕ್ಷಸ ಒಂದು ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಅಚಾನಕ್ಕಾಗಿ ಇವಳನ್ನು ನೋಡಿದ. ಆದರೆ ಆತ ಇವಳಿರುವಲ್ಲಿಗೆ ಬರೋಕ್ಕೆ ಆಗೋದಿಲ್ಲ ಕಾರಣ ಇವಳು ಋಷಿಯ ಮನೆಯಲ್ಲಿದ್ದಳು. ಆಗ ರಾಕ್ಷಸ ಇವಳಿಗೆ ಮನಸೋತ. ಮತ್ತು ಒಬ್ಬ ಸುಂದರ ಸ್ಫೂರದ್ರೂಪಿ ಯುವಕನಾಗಿ ತನ್ನ ವೇಶ ಮರೆಸಿಕೊಂಡ. ಮತ್ತು ಇವಳ ಬಳಿ ಬಂದ. ಇವಳೂ ಸಹ ಆತ ಯಾರೆಂಬುದನ್ನೂ ನೋಡಲಿಲ್ಲ ಮತ್ತು ಆತನಿಗೆ ಮನಸೋತಳು. ಹೀಗೆ ಅವರಿಬ್ಬರಲ್ಲೂ ಪ್ರೀತಿ ಮೊಳಕೆಯೊಡೆಯಿತು. ಈ ವಿಷ್ಯವನ್ನು ತಿಳಿದ ಆಕೆಯ ತಂದೆ ಮಹಾನ್ ತಪಸ್ವಿ ಇವಳಿಗೆ ಶಾಪವನ್ನು ಕೊಟ್ಟೇಬಿಟ್ಟ. ಮತ್ತು ಆ ಶಾಪಕ್ಕೆ ಒಂದು ಪರಿಹಾರವನ್ನೂ ಸೂಚಿಸಿದ ಅದೇನೆಂದರೆ ಇವಳ ಶಾಪ ಇವಳ ಮುಂದಿನ ಜನ್ಮದಲ್ಲಿ ಇವಳ ಮನೆಗೆ ಸೊಸೆಯಾಗಿ ಬರುವ ಒಬ್ಬ ದೇವಂಶ ಸಂಭೂತೆಯಿಂದ ವಿಮೋಚನೆಯಾಗುತ್ತದೆಂದು!!... ಮತ್ತು ಆಕೆಯ ನಂತರದ ಜನ್ಮದಲ್ಲಿ ಅವನಿ ಇವಳ ಸೊಸೆಯಾಗಿ ಬಂದಾಗಲೇ ಇವಳ ಶಾಪ ವಿಮೋಚನೆಯಾಗಿತ್ತು.

ಪಾಪ ಅದೆಷ್ಟು ನೊಂದುಕೊಂಡಿದ್ದಳು ಕುಜತಿ. ಒಮ್ಮೇ ಅವಳಿಗೆ ದುಃಖ ಉಮ್ಮಳಿಸಿದಂತಾಗಿ ಆಕೆ ಮಾತೇ ಆಡಲಿಲ್ಲ. ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತಿರುವ ಅವನಿಗೋ ಈ ಎಲ್ಲ ಅವಾಂತರಗಳು ತನ್ನಿಂದಲೇ ಶುರುವಾಗಿದ್ದೆಂದು ತಿಳಿದ ಅವನಿ ಗೆ ಮತ್ತೇ ದುಃಖ ಉಮ್ಮಳಿಸಿಬಿಟ್ಟಿತು ಅಷ್ಟೇ!!....14.

ಇತ್ತ ಕುಜರಥ ತನ್ನ ರಥವನ್ನು ತನ್ನ ಮಾಲೀಕನ ಮಾತಿನಂತೆ ಕುದುರೆಗಳನ್ನು ತಿರುಗಿಸಲು ಪ್ರಯತ್ನ ಪಡುತ್ತಲೇ ಇದ್ದ. ಕೊನೆಗೂ ವರುಣ ಮತ್ತು ವಾಯುದೇವ ತಮ್ಮ ಆರ್ಭಟವನ್ನು ಹೇಚ್ಚಿಸಿಯೇಬಿಟ್ಟರು. ಆಗ ಕುಜರಥ ಕುಜಕೇಸರನ ನಿಗೆ ‘ಪ್ರಭು, ನಾನು ಆವಾಗಿನಿಂದ ರಥವನ್ನು ತಿರುಗಿಸಲು ಪ್ರಯತ್ನಿಸುತ್ತಲೇ ಇದ್ದೇನೆ ಆದರೆ ಈ ಕುದುರೆಗಳೋ ಹಿಂದೆ ತಿರುತ್ತವೆ ಆದರೆ ಹಿಂದೆ ಓಡೋದೆ ಇಲ್ಲ ಈಗ ಏನು ಮಾಡಲಿ’ ಎಂದು ಚಿಂತಾಕ್ರಾಂತನಾಗಿ ಕುಳಿತಿದ್ದ. ಕುಜಕೇಸರನ ನೋ ಕುಜರಥನಿಗೆ ಏನೋ ಹೇಳಬೇಕೆಂದಿದ್ದ, ಅಷ್ಟರಲ್ಲಿ ಎರಡೂ ಕುದುರೆಗಳಿಗೇನಾಯಿತೋ ಗೊತ್ತಿಲ್ಲ ಅವು ತಮಗೆ ತೋಚಿದ ಹಾಗೆ ತಮಗೆ ಇಷ್ಟ ಬಂದ ಕಡೆ ಓಡತೊಡಗಿದವು. ಅವರೆಲ್ಲ ತಾವು ತಲುಪಬೇಕಾದ ಸ್ಥಳವನ್ನು ಅದಾಗಲೇ ತಲುಪಿದ್ದರು. ಅಷ್ಟರಲ್ಲೇ ಆಗಸದಲ್ಲಿ ಭಾಸ್ಕರನ ಆಗಮನವಾಯಿತು!!.. ಹಕ್ಕಿಗಳ ಕಲರವ, ಪ್ರಾಣಿಗಳ ಓಡಾಟ ಎಲ್ಲವೂ ಇವರಿಗೆ ತುಂಬಾ ಆಲ್ಹಾದಕರ ಎನಿಸಿತು. ಆದ್ರೆ ವಿಧಿಯ ಲೀಲೆಯೇ ಬೇರೆಯಾಗಿದ್ದಿತು!!!!..ಕೇಸರಿಧ ಹಾಗೂ ಅವನಿಯನ್ನ ಮತ್ತೇ ಆ ಬಂಗಲೆ ಕರೆಸಿಕೊಳ್ತು. ಆ ಬಂಗಲೆಗೆ ಅವನಿ ಅಂದರೆ ಅದೆಷ್ಟು ಪ್ರೀತಿ, ವಾತ್ಸಲ್ಯ. ಅವನಿಯಿಂದಾಗಿ ಕೇಸರಿಧನನೂ ತುಂಬಾ ಆರೋಗ್ಯವಂತನಾಗಿದ್ದ. ಆ ಮನೆಯಲ್ಲಿ ಅವನಿ ಇರೋವರ್ಗೂ ಅಲ್ಲಿರುವ ಅಪಾಯಗಳು ಯಾರಿಗೂ ಏನೂ ಮಾಡಲಾರವು ಯಾಕಂದ್ರೆ ಅವನಿ ದುಷ್ಟ ಸಂಹಾರಕ್ಕೆಂದೇ ಹುಟ್ಟಿದವಳು.!!.. ಆದ್ರೆ ಕೇಸರಿಧನ ಮಾಡಿದ ಮೊದಲನೇ ತಪ್ಪು: ತನ್ನ ತಂದೆ ತಾಯಿಯ ಮಾತನ್ನು ಕೇಳದಿದ್ದದ್ದು. ಎರಡನೇ ತಪ್ಪು : ತನ್ನ ತಂದೆ – ತಾಯಿ ಯಿಂದ ದೂರ ಬಂದಿದ್ದು.

15

ಅವನಿಯ ತಂದೆ ತಾಯಿಯ ಮತ್ತು ಆಕೆಯ ಅತ್ತೆ ಮಾವರ ಸಾವು ಆಕೆ ತಮ್ಮನ್ನು ಬಿಟ್ಟು ಮತ್ತೇ ಆ ಮನೆಗೆ ಹೋದ ಮರುಕ್ಷಣವೇ ಸಂಭವಿಸಿಬಿಟ್ಟಿತು. ಆಗ ಕೇಸರಿಧನ ಅವನಿ ಯನ್ನು ಹೀಯಾಳಿಸತೊಡಗಿದ. ಇಂತಹ ಅನೀರೀಕ್ಷಿತ ವಿಧಿಯ ಆಟದಿಂದ ಪಾಪ ಆ ಹುಡುಗಿ ಏನು ತಾನೆ ಮಾಡಿಯಾಳು?..

ರಾಜ ಕುಜ ಸೇನ ಹಾಗೂ ಆತನ ಪತ್ನಿ ಅವನಿಸೇನಾ ಇಬ್ಬರೂ ಆ ಪರಶಿವನಲ್ಲಿ ಲೀನವಾದದ್ದು ತಿಳಿದ ಆ ಊರಿನ ಮಹಾನ್ ಮಹರ್ಷಿಗಳಲ್ಲಿ ಕೆಲವರು ಕೇಸರಿಧನನಿಗೆ ಶಾಪ ಹಾಕಿದರು. ಮತ್ತೇ ಕೆಲವರು ಮರುಗಿದರು. ಇತ್ತ ಕೇಸರಿಧನನೋ ಅವನೇನು ಮಂತ್ರ ಶಕ್ತಿಗೇನೂ ಕಡಿಮೆಯೇನಲ್ಲ. ಅವನೂ ಅವನಿಗೆ ಶಾಪಕೊಟ್ಟೇಬಿಟ್ಟ. ಹಾಗೇ ಅವನಿಯೇನು ಕಡಿಮೆಯೇನಲ್ಲ ಆಕೆ ದೆವರ ಅವತಾರಾನೇ ಆಕೆಯೂ ಸಹ ಕೇಸರಿಧನನಿಗೆ ಶಾಪಕೊಟ್ಟೇಬಿಟ್ಟಳು. ಕೇಸರಿಧನ ಅವನಿ ಗೆ ಶಾಪಕೊಟ್ಟ ನಂತರ ಅವರಿಬ್ಬರಿಗೂ ಪ್ರಾಯಶ್ಚಿತವಾಗಿರಬೇಕು ಆಗ ಅವರಿಬ್ಬರೂ ತಮಗಿಬ್ಬರಿಗೂ ಒದಗಿರುವ ಶಾಪಗಳಿಗೆ ವಿಮೋಚನೆಗಳನ್ನು ಕೊಟ್ಟುಕೊಂಡರು. ಆಗಲೇ ಒಂದು ಅಚಾತುರ್ಯ ನಡೆದುಬಿಡ್ತು. ಒಮ್ಮೆ ಒಂದು ಸಂಧರ್ಭದಲ್ಲಿ ಆ ಊರಿನಲ್ಲಿ ಒಬ್ಬ ಮಾಂತ್ರಿಕನ ಆಗಮವಾಗಿಯೇಬಿಟ್ತು. ಆಗಿನಿಂದಲೇ ಅವ ನಿಗೆ ತೊಂದರೆಗಳು ಕಾಣ್ಸಿಕೊಳ್ಳತೊಡಗಿದವು. ಆಗಲೇ ಶತ್ರುಗಳು ಕುಜಕೇಸರಿ ಪತಾಕೆ ಸಾಮ್ರಾಜ್ಯಕ್ಕೆ ದಂಡೆತ್ತಿ ಬಂದುಬಿಟ್ಟರು. ಆಗ ಶತ್ರುಗಳು ಈ ಬಂಗಲೆಯನ್ನು ಗಮನಿಸಿ ಅವರೂ ಸಹ ಹೆದರಿಬಿಟ್ಟರು. ಅಷ್ಟರಲ್ಲೇ ಅವನಿ ಹಾಗೂ ಕೇಸರಿಧನ ರಿಗೆ ಹೃದಯಾಘಾತವಾಯಿತು ಅವರಿಬ್ಬರೂ ಅಲ್ಲಿಯೇ ಸತ್ತರು.ಈಗ ವಾಸ್ತವದಲ್ಲಿ ಅವನಿ ಗೆ ಎಲ್ಲ ವಿಷಯಗಳೂ ನೆನಪಾಗತೊಡಗಿದವು. ಅವಳು ಮತ್ತು ಆಕೆಯ ಗೆಳತಿ ಸುತ್ತಲೂ ಹುಡುಕತೊಡಗಿದರು. ಆಗ ಅವನಿಯ ಗೆಳತಿಗೆ ಆ ಮನೆಯ ಇತಿಹಾಸ ದ ಪುಸ್ತಕದ ಮೇಲೆ ದೃಷ್ಟಿ ಹೋಯಿತು. ಆ ಪುಸ್ತಕದ ಪುಟಗಳು ತನ್ನಷ್ಟಕ್ಕೆ ತಾವೇ ಸರಿಯತೊಡಗಿದವು. ಆ ಗೆಳತಿಗೆ ಷಾಕ್ ಆಯಿತು!!.. ಯಾಕಂದ್ರೆ ಆಕೆಗೆ ತನ್ನ ಗೆಳತಿ ಅವನಿ ಪೂರ್ವ ಜನ್ಮದಲ್ಲಿ ರಾಜಕುಮಾರಿ ಎಂದು ಗೊತ್ತಾಗಿ!!... ಮತ್ತು ಆ ಮನೆಯೇ ಮಾತನಾಡತೊಡಗಿತು.. ಅದೆಂದರೆ ಪೂರ್ವಜನ್ಮದಲ್ಲಿ ಕೇಸರಿಧನ ನಾದ ಅವನಿಯ ಪತಿ ಈ ಜನ್ಮದಲ್ಲಿ ರಾಖಿ ಯಾಗಿದ್ದಾನೆಂದು ಹೇಳಿತು.16.

ನಂತರ ಅವನಿ ಯ ಗೆಳತಿ ‘ಓ ದೇವರೇ, ಯಾಕೆ ನೀನು ನನ್ನನ್ನು ಈ ರೀತಿ ಪರೀಕ್ಷೆ ಮಾಡುತ್ತಿದ್ದಿ?’ ಎಂದುಕೊಳ್ಳುತ್ತಾ ರಾಖಿ ಯನ್ನು ಹುಡುಕುತ್ತಾಳೆ, ಯಾಕಂದ್ರೆ ಇವಳು ರಾಖಿಯನ್ನು ತುಂಬಾ ಪ್ರೀತಿಸುತ್ತಿದ್ದಳು. ಅವನಿಯ ಗೆಳತಿ ಅವನಿಗಾಗಿ ತನ್ನ ಪ್ರಿಯತಮನನ್ನು ಬಿಟ್ಟು ಕೊಡುತ್ತಾಳೆ. ನಂತರ ಅವನಿ ಮತ್ತು ಹಿಂದಿನ ಜನ್ಮದ ಕೇಸರಿಧನ ಮತ್ತು ಈ ಜನ್ಮದ ರಾಖಿಯ ಮದುವೆ ಅದೇ ದೊಡ್ಡ ಬಂಗಲೆಯಲ್ಲಿ ಮದುವೆಯಾಗುತ್ತಾರೆ ಮತ್ತು ಅವರಿಬರಿಗೂ ತಮ್ಮ ಪೂರ್ವಜನ್ಮದ ಶಾಪ ವಿಮೋಚನೆ ಯಾಗುತ್ತದೆ. ಈಗ ಪೂರ್ವ ಜನ್ಮದ ಕೇಸರಿಧನ ಮತ್ತು ಅವನಿ ಇಬ್ಬರೂ ಮತ್ತೇ ಒಂದಾದರು. ಹೀಗೆ ಈ ಕಥೆಯ ಮುಕ್ತಾಯ....ಪ್ರಿಯ ಓದುಗರೇ ನೀವೆಲ್ಲ ಈ ಕಥೆಯನ್ನು ತಾಳ್ಮೆಯಿಂದ ಓದಿದ್ದಕ್ಕೆ ತುಂಬಾ ಧನ್ಯವಾದಗಳು..