Click here to Download MyLang App

ಅಮರ ಪ್ರೇಮಿ - ಬರೆದವರು : ರಕ್ಷಿತಾ ಹೊಳ್ಳ

ಫೋಟೋದ ಮುಂದೆ ಅಳುತ್ತಾ ಕುಳಿತಿದ್ದ ಜಾನಕಿ

ಸಾವಿತ್ರಮ್ಮ : ನಾನು ನಿನ್ಗೆ ಮೊದಲೇ ಹೇಳಿದ್ದೆ ಅವನನ್ನು ಮದುವೆ ಆಗಬೇಡ ಅಂತ ನನ್ನ ಮಾತನ್ನ ಕೇಳದೆ ಮದುವೆ ಆದೆ ಈಗ ನೋಡು ಎಂತಾ ಪರಿಸ್ಥಿತಿ ಬಂದಿದೆ ಅಂತ.

ಜಾನಕಿ : ಅಮ್ಮ ಪ್ಲೀಸ್ ಪದೇ ಪದೇ ಅದುನ್ನೇ ಹೇಳಿ ನನ್ನ ಮನಸ್ಸಿಗೆ ನೋವು ಮಾಡಬೇಡಿ.

ಸಾವಿತ್ರಮ್ಮ : ನೀನ್ ಹೀಗಿದ್ರೆ ನನಗೇನು ಖುಷಿ ಆಗುತ್ತೆ ಅಂದ್ಕೊಂಡಿದ್ಯಾ , ತುಂಬಿದ ಬಸುರಿ ನೀನು ಇನ್ನು ಎರಡು ದಿನಕ್ಕೆ ಎಂಟು ತಿಂಗಳು ತುಂಬಿಒಂಬತ್ತು ತಿಂಗಳು ಬರುತ್ತೆ ನಿಂಗೆ ,
ಸಂತೋಷವಾಗಿ ಇರಬೇಕಾದ ಸಮಯದಲ್ಲಿ ಹೀಗೆ ಗಂಡನನ್ನ ಕಳೆದುಕೊಂಡು ಅಳ್ತಾ ಕುತ್ಕೊಬೇಕಾಗಿದೆ.

ಜಾನಕಿ : ಅಮ್ಮ ನಾನು ಶ್ರೀ ನನ್ನ ತುಂಬಾ ಇಷ್ಟ ಪಡುತ್ತಿದ್ದೆ ಈಗ್ಲೂ ಅವನ ಮೇಲೆ ಅಷ್ಟೇ ಪ್ರೀತಿಯಿದೆ, ಅಷ್ಟೇ ಗೌರವ ಮತ್ತು ಹೆಮ್ಮೆನು ಇದೆ ,ಅವನ ಮೇಲೆ ನನಗೆ ಯಾವ ಬೇಜಾರು ಇಲ್ಲ .

ಜಾನಕಿ : ಶ್ರೀ , ಶ್ರೀ ಹರಿ ನನ್ನ ಬಾಲ್ಯದ ಗೆಳೆಯ
ನನ್ನ ಜೀವನದ ಬಹುಪಾಲು ಸಮಯವನ್ನು ನಾನು ಅವನೊಂದಿಗೆ ಕಳೆದಿದ್ದು , ಶ್ರೀ ಗೆ ಅಪ್ಪ ಅಮ್ಮ ಇರ್ಲಿಲ್ಲ
ಅವನ ತಾಯಿ ಅವನು ಹುಟ್ಟುವಾಗಲೇ ತಿರಿಕೊಂಡರಂತೆ , ಅವನ ತಾಯಿ ತೀರಿಕೊಂಡ ದುಃಖದಲ್ಲೇ ಅವನ ತಂದೆಯೂ ತೀರಿಕೊಂಡರಂತೆ ಅವನನ್ನು ಸಾಕಿ ಸಲಹಿದ್ದೆಲ್ಲ ಅವನ‌ ಅಜ್ಜಿಯೇ ಕಳೆದ ಮೂರು ವರ್ಷಗಳ ಹಿಂದೆ ಅವರು ತೀರಿಕೊಂಡರು.
primary ಇಂದ graduation ಕಂಪ್ಲೀಟ್ ಆಗೋವರೆಗೂ ನಾನು ಅವನು ಒಟ್ಟಿಗೆ ಓದಿದ್ದು , ಒಮ್ಮೆ ನಾವು ಎರಡನೇ ಕ್ಲಾಸ್ ಇರೋವಾಗ ಸ್ಕೂಲ್ ಗೆ ಹೋಗೊ ದಾರಿಯಲ್ಲಿ ಇದ್ದ ಮೆಟ್ಟಿಲಿನಿಂದ ಜಾರಿಬಿದ್ದು ಕೈಗೆ ಸ್ವಲ್ಪ ಗಾಯವಾಗಿತ್ತು ,
ಅವನು ಅವತ್ತಿನಿಂದ ಇತ್ತೀಚಿನ ವರೆಗೂ ಆ ಮೆಟ್ಟಿಲಿಗೆ ಜೋರಾಗಿ ಕಾಲಿನಿಂದ ಒದ್ದು ಬರುತ್ತಿದ್ದ , ಯಾಕೆ ಹೀಗೆ ಮಾಡ್ತಾಇದ್ಯಾ ಅಂತ ಕೇಳಿದ್ರೆ ಆ ಮೆಟ್ಟಿಲುನಿನ್ನನ್ನೇ ಬೀಳಿಸುವ ಧೈರ್ಯ ಮಾಡಿದೆ ಅದಕ್ಕೆ ಎಂದು ಆಕ್ರೋಶದಿಂದ ಹೇಳುತ್ತಿದ್ದ.

ಓದಿನಲ್ಲಿ ಅವನು ನನಗಿಂತಲೂ ಫಾಸ್ಟ್ ಇದ್ದ , ಇನ್ನೂ ಸ್ಪೋರ್ಟ್ಸ್ ನಲ್ಲಿ ಅಂತೂ ಅವನು ಯಾವಾಗಲೂ ಮುಂದೆ ಇರ್ತಿದ್ದ.
ಇನ್ನು ಸ್ಕೂಲ್ ನಲ್ಲಿ ಯಾರಾದ್ರೂ ನೀವು ದೊಡ್ಡರಾದ ಮೇಲೆ ಏನು ಅಗುಬೇಕು ಅಂತ ಇದಿರ ಅಂತ ಕೇಳಿದ್ರೆ ಎಲ್ಲರೂ ಡಾಕ್ಟರ್ ಆಗಬೇಕು ಟೀಚರ್ ಆಗಬೇಕು ಅಂದ್ರೆ ಇವನು ಮಾತ್ರ ನಾನು ದೇಶ ಕಾಯೋ ಸೈನಿಕ ಆಗಬೇಕು ಅಂತಿದ್ದ ,

ಅಂದು 16 ಸೆಪ್ಟೆಂಬರ್ 2018 ನಮ್ಮ ಡಿಗ್ರಿ ಆಗತಾನೆ ಮುಗಿದಿತ್ತು ಅವನು ಫೋನ್ ಮಾಡಿ ನಿನಗೆ ಒಂದು ಹ್ಯಾಪಿ ನ್ಯೂಸ್ ಹೇಳಬೇಕು ಫೋನ್ ಅಲ್ಲಿ ಎಲ್ಲಾ
ಹೇಳಕ್ಕಾಗಲ್ಲ ನಮ್ಮ ಮಾಮೂಲಿ ಜಾಗಕ್ಕೆ ಬರುತ್ತೀಯಾ ಎಂದು ಕೇಳಿದ ನಾನು ಹಾ ಬರುತ್ತೇನೆ ಎಂದು ಹೊರಟೆ
ನಮ್ಮ ಮಾಮೂಲಿ ಜಾಗ ಅಂದ್ರೆ ನಮ್ಮ ಊರಿನಲ್ಲೇ ಇದ್ದ ಆಂಜನೇಯನ ಸ್ವಾಮಿ ದೇವಸ್ಥಾನ ಅವನು ಆಂಜನೇಯನ ಪರಮ ಭಕ್ತ . ನಾನು ದೇವಸ್ಥಾನಕ್ಕೆ ಹೋದೆ ಅವನು ಅಲ್ಲಿದ್ದ ಅವನ ಮುಖದಲ್ಲಿ ನಾನು
ಇಲ್ಲಿಯ ವರೆಗೆ ಕಂಡಿರದ ಸಂತೋಷವಿತ್ತು ,
ನಾನು ಏನೋ ಶ್ರೀ ತುಂಬಾ ಖುಷಿಯಲ್ಲಿ ಇದ್ಯಾ ಏನ್ ವಿಷ್ಯಾ ಎಂದೆ ಅವನು ಕೈಯಲ್ಲಿ ಹಿಡಿದಿದ್ದ ಸ್ವೀಟ್ ಬಾಕ್ಸ್ ಇಂದ ಸ್ವೀಟ್ ತೆಗೆದು ನನಗೆ ತಿನ್ನಿಸಿದ , ನಾನು ಸ್ವೀಟಿನ ರುಚಿಯನ್ನು ಸವಿಯುತ್ತಲೆ ವಿಷಯ ಏನು ಅನ್ನುವುದನ್ನು ಹೇಳೋದಕ್ಕಿಂತ ಮುಂಚೆಯೇ ಸ್ವೀಟ್ ಕೊಡ್ತಿದ್ಯಾ ಅಂದ್ರೆ ಏನೋ ತುಂಬಾ ಒಳ್ಳೆ ವಿಷಯ ಅಂತ ಆಯ್ತು ಅಂದೆ .
ಅದಕ್ಕವನು ಎಸ್ ಜಾನು ತುಂಬಾ ಒಳ್ಳೆ ವಿಷ್ಯಾ ನೀನೇ ಗೆಸ್ ಮಾಡು ನೋಡೋಣ ಎಂದ
ನಾನು ಏನೋ ನಿನಗೆ ಜೊಬ್ ಸಿಕ್ತಾ ಎಂದೆ ,
ಅವನು ಎಸ್ ಯು ಆರ್ ರೈಟ್ ನಾನು ಇಂಡಿಯನ್ ಆರ್ಮಿಗೆ ಸೆಲೆಕ್ಟ್ ಆಗಿದಿನಿ ನಾಳೆನೆ ಹೋಗಬೇಕು ಅಂದ
ಯಾವ ಪ್ಲೇಸ್ ಎಂದು ಸಣ್ಣ ಧ್ವನಿಯಲ್ಲಿ ಕೇಳಿದೆ ಅವನು ಇಂಡಿಯಾ ಪಾಕ್ ಬಾರ್ಡರ್ ಎಂದ ನನಗೆ ಅದೇಕೋ ಆ ಕ್ಷಣ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಅನಿಸಿತು are you mad , ತಲೆ ಕೆಟ್ಟಿದ್ಯಾ ನಿಂಗೆ , ಇದೆಲ್ಲಾ ತಮಾಷೆ ಅಂದು ಕೊಂಡಿದ್ಯಾ ,ನೀನು ಹೇಳೊದನ್ನು ಕೇಳ್ತಿದ್ರೆ ಭಯ ಆಗ್ತಿದೆ , ಆ ಗುಂಡುಗಳ ಸದ್ದು , ಎದುರಾಳಿಗಳ ದಾಳಿ, ಯುದ್ಧ ,ಹತ್ಯೆ ಅಬ್ಬಬ್ಬಾ ಇದನ್ನೆಲ್ಲಾ ನೆನಸಿಕೊಂಡ್ರೆ ಮೈ ಜುಂ ಎನ್ನುತ್ತದೆ.
ಅದು ಸಾವು ಬದುಕಿನ ನಡುವೆ ನಡೆಯುವ ಯುದ್ಧ ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದು,
ಪ್ರಪಂಚದಲಲ್ಲಿ ಅನೇಕ ಜಾಬ್ ಗಳಿದಾವೆ ಬೇರೆ ಯಾವುದಾದ್ರೂ ಜಾಬ್ ಹುಡುಕಿದ್ರೆ ಆಯ್ತು ಆದ್ರೆ ಇದೇ ಯಾಕೆ ,ನನ್ನ ಕಣ್ಣಿನಲ್ಲಿ ನೀರು ತುಂಬಿ ಕೊಂಡಿತ್ತು ನನ್ನ ಅನುಮತಿಯನ್ನು ಕೇಳಿದ ಕಣ್ಣಿರ ಹನಿಗಳು ಭೂಮಿಯನ್ನು ಸ್ಪರ್ಶಿಸಿತ್ತು.ಅವನು ಸೋಲ್ಜರ್ ಆಗಬೇಕು ಅನ್ನೋದು ಅವನ ಕನಸು ಅಂತ ತುಂಬಾ ಸಾರಿ ಹೇಳಿದ್ದ ಆದರೆ ಆ ಕನಸು ಇಷ್ಟು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದ್ದು ನನಗೆ ಗೊತ್ತೇ ಇರಲಿಲ್ಲ ,
ಅವನು ನಮ್ಮ ದೇಶ ವನ್ನು ಕಾಯುವ ಸೈನಿಕ ಆದ್ರೆ ನನಗೂ ಖುಷಿನೆ , ಆದ್ರೆ ಅವನಿಗೆ ಏನಾದ್ರೂ ಆದ್ರೆ ಅನ್ನೊ ಭಯ ನನ್ನದಾಗಿತ್ತು .

ಜಾನು ಪ್ಲೀಸ್ ಅಳಬೇಡ, it was my dream ,
ಅದು ಅಲ್ಲದೆ ಆರ್ಮಿಯಲ್ಲಿ ಸೆಲೆಕ್ಟ್ ಆಗೋದು ಅಷ್ಟು ಸುಲಭವಲ್ಲ ಅಂತದ್ರಲ್ಲಿ ನಾನು ಸೆಲೆಕ್ಟ್ ಆಗಿದಿನಿ , ನನಗೆ ಗೊತ್ತಿತ್ತು ನೀನು ಹೀಗೆ ಹೇಳ್ತ್ಯಾ ಅಂತ ಅದ್ಕೆ ನಿಂಗೆ ಈ ವಿಷ್ಯಾ ಇಷ್ಟು ತಡವಾಗಿ ಹೇಳ್ತಾ ಇದೀನಿ,


ಪ್ರಪಂಚದಲ್ಲಿ ಬೇರೆ ಕೆಲಸ ಬೇಕಾದಷ್ಟು ಇದೆ ಆದರೆ ನಾನು ಹೋಗ್ತಾ ಇರೋದು ಕೆಲಸಕ್ಕಾಗಿ ಅಲ್ಲ
ನನ್ನ ತಾಯಿಯ‌ ಸೇವೆಗಾಗಿ , ಇದು ನನ್ನ ಕೆಲಸ ಅಲ್ಲ ಭಾರತೀಯನಾಗಿ ನನ್ನ ಕರ್ತವ್ಯ . ಇನ್ನು ಸಾಯಬೇಕು ಅಂತ ಇದ್ರೆ ಹೇಗಾದ್ರೂ ಸತ್ತೇ ಸಾಯಿತೀವಿ ಅದೇ ದೇಶಕ್ಕಾಗಿ ಹೋರಾಡಿ ಸತ್ರೆ ವೀರಮರಣ ಸಿಗುತ್ತೆ.
ದಯವಿಟ್ಟು ನನ್ನನ್ನು ತಡಿಬೇಡ , it was my final decision .ಎಂದು ಕಡ್ಡಿ ತುಂಡರಸಿದಂತೆ ಹೇಳಿಬಿಟ್ಟ.
ನನಗೆ ಒಂದುಕ್ಷಣ ಭಗತ್ ಸಿಂಗ್ , ಚಂದ್ರಶೇಖರ ಅಜಾದ್ , ವೀರ ಸಾವರ್ಕರ್ , ಹೀಗೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಅವನೊಬ್ಬನಲ್ಲೇ ಕಾಣಿಸಿದರು ‌. ನಾನು ಮೂಕಸ್ತಬ್ಧ ಳಾಗಿ ನಿಂತುಬಿಟ್ಟೆ,
ಅವನಿಗಿದ್ದ ಅಗಾಧವಾದ ದೇಶ ಪ್ರೇಮ , ದೇಶ ಭಕ್ತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ,ಆಯ್ತು ಸರ್ ಹೋಗಲೇ ಬೇಕು ಅಂತ ನಿರ್ಧಾರ ಮಾಡಿದಿರ ಸರಿ ಹೋಗಿ ಆದ್ರೆ ಇಲ್ಲಿ ನಿನಗೋಸ್ಕರ ಒಬ್ಬಳು ಕಾಯುತ್ತಾ ಇದ್ದಾಳೆ ಅನ್ನೋದನ್ನು ಮರಿಯಬೇಡಿ ಎಂದೆ ಅದಕ್ಕವನು ನೀನು ನನ್ನ ಬೆಸ್ಟ್ ಫ್ರೆಂಡ್ ನಿನ್ನ ಮರೆಯೋಕಾಗುತ್ತ
ಎಂದು ಮುಗುಳ್ನಕ್ಕು
ಸರಿ ನಾಳೆ ಏಳು ಘಂಟೆಗೆ ಇಲ್ಲಿಂದ ಹೊರಡಬೇಕು ಪ್ಯಾಕಿಂಗ್ ಒಂದಷ್ಟು ಬಾಕಿ ಉಳಿದಿದೆ ನಾನು ಇನ್ನೂ ನಿನ್ಗೆ ಸಿಗೋದು ಎಷ್ಟು ಟೈಮ್ ಬೇಕಾದ್ರೂ ಆಗಬಹುದು ಅಥವಾ ಇದೇ ನಮ್ಮ ಕೊನೆಯ ಭೇಟಿಯು ಇರಬಹುದು ಎಂದ ನಾನು ಥೂ
ಬಿಡ್ತು ಅನ್ನು ಹೀಗೆಲ್ಲ ಯಾಕೆ ಮಾತಾಡ್ತ್ಯ ಎಂದು ಅವನನ್ನು ಬಿಗಿಯಾಗಿ ಅಪ್ಪಿಕೊಂಡೆ ನನ್ನ ಕಿವಿಗಳು ಅವನ ಎದೆಯ ಮೇಲಿತ್ತು ಅಂದು ಅವನ ಎದೆಯ ಬಡಿತ ಭಾರತ್ ಮಾತಾ ಕೀ ಜೈ ಎಂದಂತೆ ಕೇಳುತ್ತಿತ್ತು.

17 ಸೆಪ್ಟೆಂಬರ್ ಅಂದು ನನ್ನ ಹುಟ್ಟುಹಬ್ಬ ಬೆಳಿಗ್ಗೆ ಐದು ಗಂಟೆಗೆ ಅವನು ನಮ್ಮ ಮನೆಗೆ ಬಂದು ಹ್ಯಾಪಿ ಬರ್ತ್ ಡೇ ಜಾನು ಎಂದು ಅವನು ಮಾಡಿದ್ದ ಶಾವಿಗೆ ಪಾಯಸ ತಂದು ಕೊಟ್ಟ ನನಗೆ ಶಾವಿಗೆ ಪಾಯಸ ಅಂದ್ರೆ ಇಷ್ಟ ಅದರಲ್ಲೂ ಶ್ರೀ ಮಾಡಿದ ಪಾಯಸ ಅಂದ್ರೆ ತುಂಬಾನೆ ಇಷ್ಟ , ಪ್ರತಿ ಸಾರಿ ನಾನು ಸಿಟ್ಟು ಮಾಡಿಕೊಂಡಾಗ , ನಾನೇನಾದ್ರು ಬೇಜಾರು ಮಾಡಿಕೊಂಡಗ ಅವನು ನನಗೆ ಪಾಯಸ ಮಾಡಿ ಕೊಡುತ್ತಿದ್ದ ಅವನು ಮಾಡಿಕೊಡುತ್ತಿದ್ದ ಪಾಯಸ ತಿನ್ನುತ್ತಿದ್ದರೆ ನನ್ನ ಕೋಪವೆಲ್ಲ ತಣ್ಣಗಾಗುತ್ತಿತ್ತು , ಏನ್ ಸಾರ್ ಬೇರೆ ಏನಾದ್ರೂ ಗಿಫ್ಟ್ ಕೊಡ್ತೀರೋ ಅಥವಾ ಪಾಯಸದಲ್ಲೇ ಮುಗಿಸಿ ಬಿಡ್ತಿರೋ ಎಂದೆ ಅದಕ್ಕವನು ನಗುತ್ತಾ ನಿನ್ಗೆ ಏನು ಬೇಕು ಕೇಳು ಅಂದ ನಾನು ಏನು ಕೇಳಿದರೂ ಕೊಡ್ತೀಯಾ ಪ್ರಾಮಿಸ್ ಎಂದೆ ಪ್ರಾಮಿಸ್ ಏನ್ ಬೇಕೊ ಕೇಳು ಅಂದ ನಾನು ಏನು ಕೇಳ್ತೀನಿ ಅಂತ ಅವನು ಊಹಿಸಿಯೂ ಇರಲಿಕ್ಕಿಲ್ಲ , will you marry me ಎಂದೆ ಏನ್ ಹೇಳ್ತಾಇದ್ಯಾ ನೀನು , it's not possible ಎಂದ.
ಯಾಕೆ ಹಾಗೆ ಹೇಳ್ತಾ ಇದ್ಯಾ ನನಗೆ ನೀನಂದ್ರೆ ಇಷ್ಟ ನಿನಗು ನಾನಂದ್ರೆ ಇಷ್ಟ ಆದ್ರು ಯಾಕೆ ಹೀಗೆ ಹೇಳ್ತಾ ಇದ್ದಿಯಾ ,
ಜಾನು ಪ್ಲೀಸ್ ನಾನು ಇಷ್ಟು ದಿನ ಇದ್ದಿದ್ದಕ್ಕು ಇನ್ನು ಮುಂದೆ ಇರೋದಕ್ಕು ತುಂಬಾ defrenceಇದೆ ನನ್ನ ಜೀವದ ಮೇಲೆ ನನಗೆ ನಂಬಿಕೆ ಇಲ್ಲ ಯಾವಾಗ ಏನು ಬೇಕಾದ್ರೂ ಆಗಬಹುದು ,
ಅಂಥದ್ದರಲ್ಲಿ ನೀನು ನನ್ನ ಮದ್ವೆ ಆಗಿ ಕಷ್ಟಾ ಪಡೋದು ಬೇಡ , ಬೇರೆ ಯಾರನ್ನಾದರೂ ಮದುವೆ ಆಗಿ ಚೆನ್ನಾಗಿರು ಅಂದ ನಾನು ಬೇರೆ ಯಾರನ್ನೂ ಬೇಕಾದ್ರೂ ಮದುವೆ ಆಗಬಹುದು ಆದ್ರೆ ಅವರ ಜೋತೆ ಕಳೆಯುವ ಅನೇಕ ವರ್ಷಗಳು ನಿನ್ನ ಜೊತೆ ನಿನ್ನ ಹೆಂಡತಿ ಯಾಗಿ ಕಳೆಯುವ
ಒಂದು ಕ್ಷಣಕ್ಕು ಸಮವಲ್ಲ ,
ಎಂದೆ ಅದಾದ ಆರು ತಿಂಗಳಿಗೆ ನಮ್ಮ ಮದುವೆ ಆಯಿತು , ಇದೆಲ್ಲಾ ನಡೆದು ಎರಡು ವರ್ಷಗಳೇ ಕಳೆದಿದೆ , ಅಮ್ಮ ನಮ್ಮ ಮದುವೆಗೆ ಒಪ್ಪಿರಲಿಲ್ಲ ಹಾಗೋ ಹೀಗೋ ಅವಳನ್ನು ಒಪ್ಪಿಸಿದ್ವಿ , ಅವನಿಗೆ ಏನಾದ್ರು ಆದ್ರೆ ಮುಂದೆ ನಿನ್ನ ಜೀವನ ಹಾಳಾಗುತ್ತದೆ ಎಂದು ಅಮ್ಮನ ಭಯವಾಗಿತ್ತು.
ಒಂದು ವಾರದ ಹಿಂದೆ ಮನೆಗೆ ಬಂದವನು ಹಿಂದಿರುಗಿ ಹೊರಟಿದ್ದ ನಮ್ಮ ಮಗುವನ್ನು ನೋಡಲು ಅವನು ಕಾತುರನಾಗಿದ್ದ , ಅಂದು ಅದೇಕೋ ನನಗೆ ಏನಾದ್ರೂ ಆದ್ರೆ ಮಗುವನ್ನು ಚೆನ್ನಾಗಿ ನೋಡ್ಕೋ , ಮಗುವಿಗೆ ಅಪ್ಪ ಇಲ್ಲ ಅನ್ನೋ ಕೊರತೆ ಬಾರದ ಹಾಗೆ ನೀನೇ ನೋಡ್ಕೋ ಬೇಕು ಅಂದಿದ್ದ ,
ಅವನು ಮನೆಯಿಂದ ಹೊರಟ ಮುಂದಿನ ದಿನವೇ
ಹುತಾತ್ಮ ನಾಗಿದ್ದ , ಅವನು ಇಲ್ಲದೆ ಇರುವ ಈ ಬದುಕು ಸೂರ್ಯನೇ ಇಲ್ಲದ ಹಗಲಿನಂತಾಗಿದೆ‌ .
ಅವನಿಗಿದ್ದ ದೇಶ ಭಕ್ತಿಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ , ಅವನು ಕೇವಲ ನನಗೆ ಮಾತ್ರ ಹೀರೋ ಆಗಿರದೆ ನನ್ನ ದೇಶಕ್ಕೆ ಹೀರೋ ಆಗಿದ್ದಾನೆ ,
ಅವನು ಇಲ್ಲ ಅನ್ನೋ ಸತ್ಯ ಒಪ್ಪಿಕೊಳ್ಳೊಕೆ ಇಂದಿಗೂ ಕಷ್ಟಾ , ಆದ್ರೆ ಅವನಿಗಿದ್ದ ದೇಶ ಪ್ರೇಮ ಎಂದೆಂದಿಗೂ ಅಜರಾಮರ.

ಸಾವಿತ್ರಮ್ಮ : ಹೀಗೆ ಫೋಟೋ ಮುಂದೆ ಎಷ್ಟು ದಿನಾ ಅಂತ ಅಳ್ತ್ಯಾ , ಚಿಂತೆ ಮಾಡಬೇಡಿ ನಿನ್ನ ಶ್ರೀ ನಿನ್ನ ಮಗನಾಗಿ ಹುಟ್ಟಿಬರ್ತಾನೆ.

ಜಾನಕಿ : ಅದೇ ಬರವಸೆ ಯಲ್ಲಿ ನಾನಿನ್ನೂ ಬದುಕಿದ್ದೇನೆ.


ಸೈನಿಕ ಆ ಪದದಲ್ಲೆ ಅದೆಷ್ಟು ಶಕ್ತಿ ಇದೆ , ಸೈನಿಕ ಎಂಬ ತ್ಯಾಗಮಯಿ ಇರೋದಕ್ಕೆ ನಾವಿವತ್ತು ಇಷ್ಟು ನೆಮ್ಮದಿ ಯಿಂದ ಯಾವುದೇ ಭಯ ಇಲ್ಲದೆ ಬದುಕ್ತಾ ಇದ್ದಿವಿ, ಸೈನಿಕರ ಬಗ್ಗೆ ಅವರ ತ್ಯಾಗದ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನೆ , ದೇಶಕ್ಕಾಗಿ , ದೇಶಸೇವೆ ಗಾಗಿ ತನ್ನ ಕುಟುಂಬ ತನ್ನ ಆಸೆ ಎಲ್ಲವನ್ನೂ ತೊರೆದು ಬರುವ ಸೈನಿಕರೆ ನಿಜಾವಾದ ಹೀರೋಗಳು . ಪ್ರಾಣದ ಹಂಗು ತೊರೆದು ದೇಶ ಸೇವೆ ಮಾಡುತ್ತಿರುವ ಪ್ರತಿಯೋಬ್ಬ ಸೈನಿಕನಿಗೆ ನನ್ನದೊಂದು ಸಲಾಂ.
Rakshitha Holla