Click here to Download MyLang App

ಅಂ ಆ: - ಬರೆದವರು : ಪುಷ್ಪ ಮೂರ್ತಿ ಅರಸ್ | ಮಕ್ಕಳ ಕತೆ


ನನಗೆ ನನ್ನ ಶಾಲೆಯ PLK ಸರ್ ಕ್ಲಾಸ್ ಅನುಸ್ವಾರ.. ವಿಸರ್ಗ...ನೆನಪಾಯಿತು. ಅದನ್ನು ನಿಮ್ ಜೊತೆ ಹಂಚಿಕೊಳ್ಳಬೇಕು ಅನ್ನಿಸ್ತು.. ಬರ್ತೀರಲ್ವಾ ನನ್ನ ಸ್ಕೂಲಿಗೆ... ನಮಗೆ..BMS.KT.MLK.PKG.... ಅಂತೆಲ್ಲಾ ಸರ್ ಗಳಿದ್ರೂ ನಮ್ಮ ಶಾಲೆ ಈಗಿನ ಮಕ್ಕಳ ಶಾಲೆಗಳಂತೆ ಅಲ್ಲ. ಮಾತೆತ್ತಿದರೆ ಬಾರಿಸು. ತಪ್ಪು ಮಾಡಿದರೆ ದಂಡಿಸು. ಹೇಳಿದ ಮಾತು ಕೇಳದಿದ್ದರೆ ಬಾಗಿಸು.. ಅನ್ನುವ ರೂಲ್ಸ್. ಮಕ್ಕಳನ್ನು ಹೊಡೆದು ಸಾಕು ನುಗ್ಗೆ ಮುರಿದು ಸಾಕುವ ಅನ್ನೋ ಗಾದೆ. ನಮ್ಮ ಟೀಚರ್ ಗಳಿಗೆ ಚೆನ್ನಾಗಿ ಕಂಠಪಾಠ... ಮನೆಪಾಠ... ಗಿಳಿಪಾಠ...ಆಗಿತ್ತು ಅನ್ನಿಸುತ್ತೆ. ಅದಕ್ಕೆ ಯಾವಾಗಲೂ ಸರ್ಗಳು ಕೈಯಲ್ಲಿ ಬುಕ್ಸ್ ಗಳಿಗಿಂತ ಹೆಚ್ಚಾಗಿ ಬೆತ್ತಗಳನ್ನು ಹಿಡಿದು ಓಡಾಡುತ್ತಿದ್ದರು. ಕ್ಲಾಸ್ ರೂಂಗೆ ಟೀಚರ್ಸ್ ಗಳು ಎಂಟ್ರಿ ಆಗಬೇಕಾದರೆ... ಕೈಯಲ್ಲಿ ಪುಸ್ತಕ ಇಲ್ಲದಿದ್ದರೂ ಪರವಾಗಿಲ್ಲ ದಪ್ಪ ದಪ್ಪ ಉದ್ದ ಉದ್ದ ರೂಲ್ಸ್ ದೊಣ್ಣೆ ಮಾತ್ರ ನಮ್ಮನ್ನ ಯಾವಾಗಲೂ ಸ್ವಾಗತ ಮಾಡ್ತಾ ಇತ್ತು ನಾವು ಅದನ್ನೇ ನೋಡ್ತಾ ಇರ್ತಿದ್ವಿ...

ಅದರಲ್ಲಿ ನಮಗೆ ಅಂದ್ರೆ ನನಗೆ ಹೊಡೆಯದೇ ಇದ್ದ ಏಕೈಕ ವ್ಯಕ್ತಿ....ನನ್ನ ಪ್ರೀತಿಯ ಮಾಸ್ಟರ್ BMS ಚಿಗುರು ಮೀಸೆ ಹುಡುಗ ತುಂಬಾ ಹೆಂಗ್ ಅಂಡ್ ಎನರ್ಜಿಟಿಕ್ ಆಗಿದ್ರೂ... ಅವರ ಮಾತು... ನಗು... ಅವರ ಪಾಠದ ಶೈಲಿ... ನನ್ನನ್ನ ಏನೋ ಒಂದು ರೀತಿ ಮೋಡಿ ಮಾಡುತ್ತಿತ್ತು ಅಬ್ಬಬ್ಬಾ ಎಷ್ಟೊಂದು ಸುಂದರಾಂಗ ಎನ್ನುವಂತಿತ್ತು... ನನಗೆ ಅವರು ಅಂದ್ರೆ ತುಂಬಾ ತುಂಬಾ ಇಷ್ಟ... ಒಂದು ರೀತಿ ಕ್ರಶ್ ಆಗಿಬಿಟ್ಟಿತ್ತು... ನನಗಷ್ಟೇ ಅಲ್ಲ ತುಂಬಾ ಹುಡುಗಿಯರಿಗೆ ಅವರ ಮೇಲೆ ಇದೇ ಭಾವನೆ ಇತ್ತು... ಅದರಲ್ಲೂ ಗೀತಾ ಅಂತೂ ಸರ್ ಹೆಸರನ್ನ ಅವಳ ಎರಡೂ ಕೈ ಮೇಲೆ..ಒಡೆದ ಬಳೆ ಚುರನ್ನ ತೆಗೆದುಕೊಂಡು ರಕ್ತ ಬರುವ ರೀತಿ ಗಿಚಿ ಗಿಚಿ ಬರೆದುಕೊಂಡಿದ್ಲು... ಅದನ್ನು ನೋಡಿ ನನಗೆ ತಲೆನೇ ತಿರುಗಿ ಹೋಗಿತ್ತು...

ನಾನು ಸರ್ ಹತ್ರ ಹೋಗಿ...ಸರ್ ನನಗೆ ನೀವಂದ್ರೆ ತುಂಬಾ ಇಷ್ಟ ಸರ್... ತುಂಬಾ ಪ್ರೀತಿ ಸರ್... ಅಂತ ಎಷ್ಟೂ ಸರಿ ಹೇಳಿ ಬಿಡಬೇಕು ಅಂತ ಅನ್ನಿಸುತ್ತಿತ್ತು. ಆದ್ರೆ... ಅವರತ್ರ ಹೋಗಿ ಹೇಳೋಣ ಅಂದ್ರೆ... ಲ್ಯಾಂಗ್ವೇಜ್ ಪ್ರಾಬ್ಲಮ್ ಅರ್ಥ ಆಗ್ಲಿಲ್ವಾ ನನಗೆ ಹಿಂದಿ ಬರುತ್ತಿರಲಿಲ್ಲ ಅವರು ಹಿಂದಿ ಟೀಚರ್...ಅವರಿಗೆ ಕನ್ನಡ ಮಾತನಾಡುವುದಕ್ಕೆ ಬರುತ್ತಿದ್ರೂ ಯಾವಾಗಲೂ ಮಕ್ಕಳನ್ನು ಹಿಂದಿಯಲ್ಲಿ ಮಾತನಾಡಿಸುತ್ತಿದ್ರೂ... ಅದಕ್ಕೆ ನನಗೆ ಅವರತ್ರ ಹೋಗೋದಕ್ಕೆ ಭಯ ಆಗ್ತಿತ್ತು... ಹಿಂದಿ ಬಂದಿದ್ರು ಹೋಗ್ತಿರಲಿಲ್ಲ ಬಿಡಿ... ಅಷ್ಟೊಂದು ಧೈರ್ಯ ನನಗಿಲ್ಲ...

ಆದ್ರೂ ನಾನು ಅವರ ಪ್ರತೀ ಕ್ಲಾಸಿನಲ್ಲೂ ನಾನೇ ಅವರ ಎಲ್ಲಾ ಪ್ರಶ್ನೆಗಳಿಗೂ... ಪಾಠಗಳಿಗೂ ಅನ್ಸರ್ ಮಾಡುತ್ತಿದ್ದೆ.. ಹೆಂಗೆ ಅಂತೀರಾ.. ಹಿಂದಿಯನ್ನು ಕನ್ನಡದಲ್ಲಿ ಬರೆದುಕೊಂಡು ಅವರಿಗೋಸ್ಕರ ಬಾಯಿಪಾಠ ಮಾಡಿಕೊಂಡು ಸ್ಕೂಲಿಗೆ ಹೋಗುತ್ತಿದ್ದೆ ಡೈಲಿ... ಅಗಂದು ಬಿಟ್ಟು ಟೆಸ್ಟು... ಎಕ್ಸಾಮ್ನಲ್ಲಿ ಹೇಗೆ ಮಾರ್ಕ್ಸ್ ಬಂತು ಅಂತ ಮಾತ್ರ ಕೇಳಬೇಡಿ... ಸರಿನಾ... ಹೇಳುವುದಕ್ಕೆ ಆಗಲ್ಲ...ನಾನು ಉತ್ತರ ಹೇಳಿದ ತಕ್ಷಣ ಅವರು ಶಭಾಷ್ ಅಂತ ಹೇಳಿ ನನ್ನ ಭುಜ ತಟ್ಟಿದರೆ ಅಷ್ಟೇ ಸಾಕು... ಸ್ವರ್ಗ ಲೋಕವೇ ನಮ್ಮ ಕ್ಲಾಸ್ನಲ್ಲೇ ಇದೇ ಅಂತ ಫೀಲ್ ಆಗ್ತಿದ್ದೆ...
ಈಗ ಅದೆಲ್ಲಾ ನೆನೆಸಿಕೊಂಡರೆ ನನಗೆ ನಾಚಿಕೆ ಆಗುತ್ತೆ... ಜೋರಾಗಿ ನಗು ಬರುತ್ತೆ...

ಅಯ್ಯೋ ನೋಡಿ ನಾನು ಕನ್ನಡ ಸರ್ ಪಾಠ ಹೇಳೋದಕ್ಕೆ ಬಂದು... ಹಿಂದಿ ಮೇಷ್ಟ್ರು ಪಾಠ ಹೇಳ್ತಾ ಇದ್ದೀನಿ.ಅದು ಆ ಕಡೆ ಇರಲಿ ಬಿಡಿ...
ಈಗ ಕನ್ನಡ ವ್ಯಾಕರಣ ಪಾಠ ಶರುವಾಗಿದೆ ಬನ್ನಿ ಹೋಗೋಣ... ನಮ್ಮ ಕನ್ನಡ PLK ಸರ್ದು ಒಂದು ರೀತಿಯ ಸ್ಪೆಷಲ್ ಏನಪ್ಪಾ ಅಂದ್ರೆ... ಅವರು ಪಾಠ ಮಾಡಿದ್ದನ್ನು ಮೂರು ದಿನ ಅಥವಾ ಒಂದು ವಾರಬಿಟ್ಟು ಪಾಠಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಡನ್ ಸಡನ್ನಾಗಿ ಕ್ಲಾಸ್ ರೂಮಿನಲ್ಲಿ ಸ್ಟೂಡೆಂಟ್ ಗಳನ್ನ ಕೇಳುತ್ತಿದ್ರೂ...ಹೇಳಲಿಲ್ಲ ಅಂದರೆ ಕೋಲು ಮುರಿಯುವವರೆಗೆ ಹೊಡೆಯುತ್ತಿದ್ರೂ ಇಲ್ಲದಿದ್ದರೆ ಅವರಿಗೆ ಸಮಾಧಾನ ಇಲ್ಲ... ಪೋಲಿಸಿನವರಿಗಿಂತಲೂ ಲಾಟಿ ಚಾರ್ಜ ಜಾಸ್ತಿ ಜೋರು ಆ ಸರ್ದು... ಅದಕ್ಕೆ ನಾವುಗಳು ಉತ್ತರ ಹೇಳಬೇಕು ಇಲ್ಲದಿದ್ದರೆ ಒದೆ ತಿನ್ನಬೇಕು ಎರಡೇ ಆಪ್ಷನ್ ಇದ್ದಿದ್ದು ಅದಕ್ಕೆ ನಾವು ಪ್ರಿಪೇರ್ ಹಾಕ್ತಿದ್ವಿ... ಯಾವುದಾದರೂ ಒಂದು ಗ್ಯಾರೆಂಟಿ ಅಂತ ಗೊತ್ತಿರುತ್ತಿತ್ತು ನಮಗೆ...

ಅವತ್ತು ಅವರು ಹಾಗೆ ಕ್ಲಾಸಿಗೆ ಬಂದು ಪಾಠ ಶುರು ಮಾಡದೆ...ಅನುಸ್ವಾರ...ವಿಸರ್ಗ ಅಂದ್ರೆ ಏನು ಅಂತ.. ಕ್ಲಾಸ್ ರೂಂಗೆ ಬಂದ್ಬಂದಂಗೆ ಕೇಳಿದ್ರು... ಯಾರಿಗೆಲ್ಲ ಗೊತ್ತು ಕೈಯೆತ್ತಿ ಅಂತ ಹೇಳುದ್ರು... ಕೈ ಎತ್ತಿದವರನ್ನು ಬಿಟ್ಟು ಕೈ ಎತ್ತದೆ ಇರುವವರನ್ನ ಪ್ರಶ್ನೆ ಕೇಳುವುದು ಅವರ ರೂಢಿ... ಮುಂಚಿತವಾಗಿ ಕೈಯೆತ್ತಿ ಬಿಟ್ರೆ ನನ್ನನ್ನ ಕೇಳಲ್ಲ ಅಂತ ನಾನು ಮೊದಲೇ ಕೈಯೆತ್ತಿ ಬಿಟ್ಟೆ... ನೋಡಿದರೆ ಅವತ್ತು ನಾನೊಬ್ಬಳೇ ಎತ್ತಿರೊದು.... ನೋಡಿದರೆ ಇನ್ಯಾರೋ ಕೈಯೆತ್ತಿಲ್ಲ.... ಅದಕ್ಕೋ ಏನೋ... ಸರ್. ಎದ್ದೇಳು ಹೇಳು ಉತ್ತ್ರ ಅಂದ್ರು.. ನಾನು ಭಯದಲ್ಲಿ ತೊದಲುತ್ತ ನೆನಪಿಸಿಕೊಳ್ಳುತ್ತಾ... ಅಂ ಅಃ ಅಂತ ಬರುತ್ತಲ್ಲ ಸರ್... ಅದರಲ್ಲಿ ಅ... ಪಕ್ಕ... ಇರುವ ಒಂದು 0 ಅನುಸ್ವಾರ ಎಂದು ಕರೆಯುತ್ತಾರೆ ಸರ್ ಅಂದೆ. ಸರಿ ಗುಡ್ ಕುಳಿತುಕೋ ಅಂದ್ರು. ನಾನು ಉಸಿರುಬಿಟ್ಟು ಸಮಾಧಾನ ತಂದುಕೊಂಡೆ.. ನನ್ನ ಪಕ್ಕ ಸುಮಿತ್ರ ಕುಳಿತಿದ್ಲು... ಅವಳನ್ನು ಎದ್ದೇಳಿಸಿ ವಿಸರ್ಗ ಅಂದ್ರೆ ಏನು ಅಂದ್ರು... ಅವಳಿಗೆ ಏನು ಗೊತ್ತಿಲ್ಲ ಅದ್ರೂ ಸ್ವಲ್ಪ ಜಾಣೆ... ನಾನು ಒಂದು 0 ಅಂದಿದ್ದಕ್ಕೆ ಅವಳು ನನ್ನನ್ನೇ ನೋಡುತ್ತಾ ಎರಡು 0 ಅಂದ್ಲು ಬಿಟ್ಳು...ಅದಕ್ಕೆ ಸರ್ ನಮ್ಮಿಬ್ಬರನ್ನು ಕುಳಿಸಿ ಇನ್ನು ಎಲ್ಲರಿಗೂ ಬಾರಿಸೋ ಕೆಲಸ ಶುರುವಿಟ್ಟುಕೊಂಡರು... ಸುಮಿತ್ರಾ ಥ್ಯಾಂಕ್ಯೂ ಕಣೆ ನೀನು ಹೇಳಿದ್ದಕ್ಕೆ ನಾನು ಅದನ್ನೇ ಹೇಳಿಬಿಟ್ಟೆ ಉತ್ತರ ಸರಿಯಾಗಿತ್ತು ನಾನು ಬಚಾವಾದೆ ಅಂದ್ಲು....ಆದರೂ ಪಾಪ ಎಲ್ಲರಿಗೂ ಏಟು ಬೀಳುತ್ತೇ ಅಲ್ವೇನೆ ಅಂತ ನಾವು ಫೀಲ್ ಮಾಡ್ತಾ ಕುಳಿತಿದ್ವೀ...

ನಮ್ಮ PLK ಸರ್... ಗಂಡ ಐಕ್ಳು ಗಳನ್ನ ನಿಲ್ಲಿಸಿ... ಕುಂಡಿ ಉದೋಗೋ ಮಟ್ಟಿಗೆ.. ರಪ...ರಪ ಅಂತ ಬಾರಿಸಿದ್ರೆ... ಹೆಣ್ಮಕ್ಳಿಗೆ.... ಬೆನ್ನು ಬಗ್ಗಿಸಿ ದಬ..ದಬ ಅಂತ ಬೆತ್ತದೇಟು ಕೊಡ್ತಾರೆ... ಅವರು ಹೊಡೆಯುವಾಗ ಏಟು ತಪ್ಪಿಸಿಕೊಂಡರೆ... ಇನ್ನು ಜಾಸ್ತಿ ಏಟು ಬೀಳುತ್ತೇ...ಎಷ್ಟು ಸ್ಟೂಡೆಂಟುಗಳು ಸರ್ಗಳು ಕೊಡುವ ಏಟುಗಳಿಗೆ ಹೆದರಿ ಶಾಲೆಯನ್ನೇ ಬಿಟ್ಟು ಬಿಟ್ಟಿದ್ದಾರೆ ....ಈಗೇ...ಎಲ್ಲರಿಗೂ ಸಾಲು ಸಾಲಾಗಿ ವಡೆ... ಕರ್ಜೀಕಾಯಿ.. ಕಜ್ಜಾಯ ಕೊಟ್ಟಿ... ನನ್ನತ್ರ ಬಂದ್ರು....

ನಾವು ಎಲ್ಲಾ ಮುಗೀತು ಅಂತ ಅಂದ್ರೆ... ಪಿಚ್ಚರ್ ಅಭಿ ಬಾಕಿ ಹೇ ಅಂತ ಕನ್ನಡ ಸರ್.... ಎದ್ದೇಳು ಮೇಲೆ ಅಂತ ಗದರಿದ್ರೂ... ನನ್ನ ಇನ್ನೇನಪ್ಪಾ ಪ್ರಶ್ನೆ ಕೇಳ್ತಾರೆ ಅಂತ...ಕೋಳಿ ಪುಕ್ಕದ ಗುಂಡಿಗೆ ರೀತಿಯ ಹಾಗೆ ಪುಕ...ಪುಕ ಅಂತ ಭಯ ಆಗ್ತಿತ್ತು... ಒಳಗೊಳಗೆ ಹೆದರಿ ಕೊಂಡಿದ್ದೆ... ಯಾಕೆಂದರೆ ಬೇರೆ ಪ್ರಶ್ನೆಗಳಿಗೆ ಉತ್ತರ ನನಗೂ ಗೊತ್ತಿರಲಿಲ್ಲ..... ತಲೆ ಹಿಡಿದು ಬಗ್ಗಿಸಿ ಬೆನ್ನಿಗೆ ಬಾರಿಸುತ್ತಿದ್ದರು... ಕೈಹಿಡಿ ಅಂತ ಹೇಳಿದ್ರು... ನಾನು ಮರುಮಾತನಾಡದೆ ಕೈಹಿಡಿದೆ ಅವರು ಬರಿ ನನ್ನ ಎಡಗಡೆಗೆ ಬಾರಿಸಿದ್ರು.... ಅವರು ಬಾರಿಸಿದ ಮೇಲೆ ಗೊತ್ತಾಯ್ತು ಅವರು ಯಾಕೆ ನನಗೆ ಒಡೆದ್ರು ಅಂತ... ಅವರು ಪದೇ...ಪದೇ ಎಷ್ಟು ಸಾರಿ ಹೇಳಿದ್ರು... ನಾನು ಮತ್ತೆ ಮತ್ತೆ ಅದನ್ನೇ ಮಾಡ್ತಾ ಇದ್ದೆ... ಏಕೆಂದರೆ... ಅಭ್ಯಾಸ ಬಲ.. ನಾನು ಎಡಚಿ.... ಅದಕ್ಕೆ ಯಾರೂ ಏನನ್ನೂ ಕೇಳ್ಲಿ.. ಯಾವ ಸರ್ ಬಂದು ಏನೇ ಹೇಳಿದ್ರು... ಹ್ಯಾಂಡ್ ರೈಸ್ ಮಾಡಿ ಅಂತ ಹೇಳಿದ ತಕ್ಷಣ.... ನಾನು ಎಡಗೈಯನ್ನೇ..ಎತ್ತುತ್ತಿದೆ... ಅದರಲ್ಲೂ PLK ಸರ್ ತುಂಬಾ ಸಂಪ್ರದಾಯಸ್ಥರು... ಅವರಿಗೆ ಎಡಗೈ ಎಂದರೆ ಅದೇನೋ ಕೋಪನೂ ಗೊತ್ತಿಲ್ಲ... ನಾನೆಷ್ಟೇ ಅವರ ಕ್ಲಾಸ್ನಲ್ಲಿ ಅವಾಯ್ಡ್ ಮಾಡಿದ್ರು.. ನನ್ನ ಎಡಗೈ ಯಾವಾಗಲೂ ರೈಸ್ ಆಗ್ತಿತ್ತು... ಚೆನ್ನಾಗಿ ಗಿಫ್ಟು ಕೂಡ ಸಿಗ್ತಿತ್ತು...

ಕೊನೆಗೆ ಇಡೀ ಕ್ಲಾಸೆ ಆನ್ಸರ್ ಮಾಡದೇ ಏಟು ತಿಂದ್ರೆ... ನಾನು ಆನ್ಸರ್ ಮಾಡಿಯು ಏಟು ತಿಂದೆ... ಕೊನೆಗೆ ಕಡಬು ತಿನ್ನದೆ ಉಳಿದವಳು ಒಬ್ಬಳೇ.... ಅದೇ ನನ್ನ ಪಕ್ಕದ ಕಾಪಿಡ್ ಸುಮಿತ್ರ ರಾಣಿ.... ಲಕ್ಕಿ ಗರ್ಲ್ ಅವಳು ಅವತ್ತು...

ಮತ್ತೆ ಈ ಎಡಗೈಯ ವಿಚಾರ ಯಾರು ಮತ್ತೆ ಕೇಳ ಬೇಡಿ...ಅದ್ರಲ್ಲೂ ನಾನು ಹೆಣ್ಣು ಮನೆಯಲ್ಲಿ ಪ್ರತಿ ಸಣ್ಣ ಪುಟ್ಟ ವಿಚಾರಕ್ಕೂ ನನ್ನ ಎಡ ಗೈಯನ್ನೆ ಬಳಸಿ..ಬಳಸಿ... ಉಗಿಸಿಕೊಳ್ಳುವುದು ಜಾಸ್ತಿ....

ಧನ್ಯವಾದಗಳು 🤩🤩
ನನ್ನ ಶಾಲಾ ತರಗತಿಯನ್ನು ಅಟೆಂಡ್ ಮಾಡಿದ್ದಕ್ಕೆ...🙏🙏😅😅😅 ತರಗತಿಗೆ ಬಂದ ಪ್ರತಿ ವಿದ್ಯಾರ್ಥಿಗೂ ಒಂದೊಂದು ಚಾಕ್ಲೇಟ್🍬🍬🍬🍬🍬🍬🤗😊

✍️ ಪುಷ್ಪ ಮೂರ್ತಿ ಅರಸ್